ರಾಜ್ಯದಲ್ಲಿನ ಸಂಘರ್ಷಗಳ ನಡುವೆ ಮಾದರಿಯಾದ ಮುಸ್ಲಿಂ ವ್ಯಕ್ತಿ; 20 ವರ್ಷದಿಂದ ಹನುಮನ ಭಕ್ತನಾಗಿರುವ ವ್ಯಕ್ತಿ ವಿಡಿಯೋ ಮೂಲಕ ಮಾಡಿದ ಮನವಿ ಏನು?
ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತಳಕಲ್ ನಿವಾಸಿ, ಆಟೋ ಚಾಲಕ ಶಂಶುದ್ದೀನ್ ಮನೆಯಲ್ಲಿ ಆಂಜನೇಯ ಫೋಟೋ ಇದೆ. ಈ ಮುಸ್ಲಿಂ ವ್ಯಕ್ತಿ ತನ್ನ ಮನೆಯಲ್ಲಿ ಆಂಜನೇಯ ಸ್ವಾಮಿಯ ಫೋಟೋ, ಹಾಗೂ ಕೊಪ್ಪಳದ ಗವಿ ಸಿದ್ದೇಶ್ವರ ಫೋಟೋಗೆ ಪೂಜೆ ಸಲ್ಲಿಸುತ್ತಾರೆ.
ಕೊಪ್ಪಳ: ಹಿಂದೂ ಮುಸ್ಲಿಂ ಭಾಯ್ ಭಾಯ್ ಎಂದು ಭಾವೈಕ್ಯತೆಯಿಂದಿದ್ದ ರಾಜ್ಯದಲ್ಲಿ ವಿವಾದ, ಗಲಾಟೆ, ಸಂಘರ್ಷಗಳು ನಡೆಯುತ್ತಿವೆ. ಹಿಜಾಬ್ನಿಂದ ಶುರುವಾದ ಗಲಾಟೆ ಆಜಾನ್ ವರೆಗೂ ಬಂದಿದೆ. ಹಿಜಾಬ್, ಹಲಾಲ್-ಜಟ್ಕಾ, ಟಿಪ್ಪು ಸುಲ್ತಾನ್, ಭಗವದ್ಗೀತೆ, ಆಜಾನ್-ಹನುಮಾನ್ ಚಾಲೀಸ್ ಗಲಾಟೆಗಳು ರಾಜ್ಯದ ಜನರಿಗೆ ತಲೆ ನೋವಾಗಿದೆ. ಸದ್ಯ ಈ ಸಂಘರ್ಷದ ನಡುವೆ ಮುಸ್ಲಿಂ ವ್ಯಕ್ತಿಯೋರ್ವ ಹಿಂದೂ-ಮುಸ್ಲಿಂ ನಡುವಿನ ಸೌಹಾರ್ದತೆ ತಿಳಿಸುತ್ತ ವಿವಾದವನ್ನು ಬಗೆಹರಿಸುವಂತೆ ವಿಡಿಯೋ ಮೂಲಕ ಮನವಿ ಸಲ್ಲಿಸಿದ್ದಾರೆ.
ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸುವ ಶಂಶುದ್ದೀನ್ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ತಳಕಲ್ ನಿವಾಸಿ, ಆಟೋ ಚಾಲಕ ಶಂಶುದ್ದೀನ್ ಮನೆಯಲ್ಲಿ ಆಂಜನೇಯ ಫೋಟೋ ಇದೆ. ಈ ಮುಸ್ಲಿಂ ವ್ಯಕ್ತಿ ತನ್ನ ಮನೆಯಲ್ಲಿ ಆಂಜನೇಯ ಸ್ವಾಮಿಯ ಫೋಟೋ, ಹಾಗೂ ಕೊಪ್ಪಳದ ಗವಿ ಸಿದ್ದೇಶ್ವರ ಫೋಟೋಗೆ ಪೂಜೆ ಸಲ್ಲಿಸುತ್ತಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಮನನೊಂದಿರುವ ಶಂಶುದ್ದೀನ್, ವಿಡಿಯೋ ಮಾಡಿ ತಮ್ಮ ನೋವು ತೋಡಿಕೊಂಡಿದ್ದಾರೆ. ಹಿಂದೂಗಳು, ಮುಸ್ಲಿಮರು ಅಣ್ಣ-ತಮ್ಮಂದಿರಂತೆ ಇದ್ದೇವೆ. ಯಾರೋ ಮಾಡುವ ಕೆಲಸದಿಂದ ಇಡೀ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ನಾನು ಕಳೆದ 20 ವರ್ಷದಿಂದ ಆಂಜನೇಯ ಭಕ್ತ. ಹೀಗಾಗಿ ಮನೆಯಲ್ಲಿ ಆಂಜನೇಯನ ಫೋಟೋ ಹಾಕಿದ್ದೇವೆ.
ನಮ್ಮ ಮನೆಯ ಜಗಲಿಯಲ್ಲೂ ಹಿಂದೂ ದೇವರ ಫೊಟೋ ಇಟ್ಟು ಪೂಜೆ ಮಾಡ್ತೀನಿ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಿಮೆಂಟ್ ದೇಣಿಗೆ ನೀಡಿದ್ದೆ. ಧಾರ್ಮಿಕ ಮುಖಂಡರು ಈ ವಿವಾದವನ್ನು ಬಗೆಹರಿಸಿ ಎಂದು ವಿಡಿಯೋ ಮೂಲಕ ಮುಸ್ಲಿಂ ವ್ಯಕ್ತಿ ಶಂಶುದ್ದೀನ್ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಟ್ರಾಫಿಕ್ ಕ್ಲಿಯರ್ ಮಾಡುವ ವೇಳೆ ಅಪರಿಚಿತ ವಾಹನ ಡಿಕ್ಕಿ; ಪೊಲೀಸ್ ಕಾನ್ಸ್ಟೇಬಲ್ ಸಾವು
ಸ್ಟಾರ್ ಸುವರ್ಣದಲ್ಲಿ ‘ಲವ್ ಮಾಕ್ಟೇಲ್ 2’ ಸಿನಿಮಾ; ಪ್ರಸಾರ ಯಾವಾಗ?
Published On - 9:20 am, Wed, 6 April 22