ಕೊಪ್ಪಳ ಗವಿಸಿದ್ದೇಶ್ವರ ಅಜ್ಜನ ಜಾತ್ರೆಗೆ ಜನ ಸುನಾಮಿ: ಲಕ್ಷ ಲಕ್ಷ ಭಕ್ತಗಣಕ್ಕೆ ಬಿಸಿ ಬಿಸಿ ಮಿರ್ಚಿ ಬಜ್ಜಿ ಪ್ರಸಾದ! ಅದು ಹೇಗೆ ಸಾಧ್ಯವಾಯಿತು? ವಿಡಿಯೋ ನೋಡಿ
Koppal Mirchi Bajji Festival: ಸಾಮಾನ್ಯವಾಗಿ ಮದುವೆಗೆ ಸ್ವಲ್ಪ ತಡವಾಗಿ ಹೋದ್ರು ಊಟದಲ್ಲಿ ಮಿರ್ಚಿ ಸಿಗೋದಿಲ್ಲ. ಯಾಕಂದ್ರೆ ಐದಾರು ಸಾವಿರ ಜನರಿಗೆ ಮಿರ್ಚಿ ಮಾಡುವುದೂ ಕೂಡ ಕಷ್ಟ ಸಾಧ್ಯ. ಆದ್ರೆ, ಗವಿಸಿದ್ದೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಜನರಿಗೆ ಮಿರ್ಚಿ ತಯಾರಿಸುವುದೆಂದ್ರೆ ಸಾಮಾನ್ಯ ಮಾತಲ್ಲ.
ಮಿರ್ಚಿ- ಮಂಡಕ್ಕಿ, ಇದು ಉತ್ತರ ಕರ್ನಾಟಕ ಮಂದಿಯ ನೆಚ್ಚಿನ ತಿನಿಸು. ಆದ್ರೆ ಹತ್ತಾರು ಜನ್ರಿಗೆ ಮಿರ್ಚಿ ಮಾಡಬೇಕು ಅಂದ್ರೂ ಹೆಣ್ಮಕ್ಕಳು ಅಯ್ಯೋ ಕಷ್ಟ ಹೋಟೆಲ್ ನಿಂದ ತರಸೋಣ ಅಂತಾರೆ. ಆದ್ರೆ ಅಜ್ಜನ ಜಾತ್ರೆಗೆ ಬರೋ ಜನಸುನಾಮಿಗೂ ಇಂದು ಬಿಸಿ ಬಿಸಿ ಮಿರ್ಚಿ ಬಜ್ಜಿಯನ್ನ ಪ್ರಸಾದ ಜೊತೆಗೆ ನೀಡಲಾಯಿತು. ಹಾಗಾದ್ರೆ ಗವಿಮಠದ ಮಿರ್ಚಿ ಜಾತ್ರೆಯ (Mirchi Bajji Festival) ಝಲಕ್ ನೊಮ್ಮೆ ನೋಡಿಕೊಂಡು ಬರೋಣ.
ಭಕ್ತರ ಊಟಕ್ಕಾಗಿ ಸಿದ್ದಗೊಳ್ಳುತ್ತಿರೋ ಗರಂ.. ಗರಂ ಮಿರ್ಚಿ ಬಜ್ಜಿ.. ಲಕ್ಷ ಲಕ್ಷ ಭಕ್ತಗಣಕ್ಕೆ ರೆಡಿಯಾಗ್ತಿದೆ ಗವಿಮಠದ ಸ್ಪೇಷಲ್ ಮಿರ್ಚಿ…ಮಿರ್ಚಿ ಪ್ರಸಾದಕ್ಕಾಗಿ ಸಾಗರೋಪಾದಿಯಾಗಿ ಕ್ಯೂ ನಿಂತಿರೋ ಭಕ್ತರು… ಮತ್ತೊಂದೆಡೆ ಬಿಸಿ ಬಿಸಿ ಮಿರ್ಚಿ ಸವಿಯುತ್ತಿರುವ ಭಕ್ತರು.. ಯಸ್ ಇಂತಹದೆಲ್ಲಾ ದೃಶ್ಯಗಳು ಕಂಡು ಬಂದಿದ್ದು, ದಕ್ಷಿಣ ಭಾರತದ ಕುಂಭ ಮೇಳವೆಂದೆ ಪ್ರಸಿದ್ದಿ ಪಡೆದರೋ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ (Koppal Gavisiddeshwara Fair).
ಅಜ್ಜನ ಜಾತ್ರೆ ಎರಡನೇ ದಿನವಾದ ನಿನ್ನೆ ಸೋಮವಾರವೂ ಜಾತ್ರೆಗೆ ಸುಮಾರು 2-3 ಲಕ್ಷ ಭಕ್ತರು ಆಗಮಿಸಿದ್ರು. ಈ ಜಾತ್ರೆಯ ಸಾಕಷ್ಟು ವಿಶೇಷತೆಯಲ್ಲಿ ಲಕ್ಷಾಂತರ ಭಕ್ತರು ಪ್ರಸಾದ ಸವಿಯುವುದೂ ಒಂದು. ಕಳೆದ ಐದಾರು ವರ್ಷದಿಂದ ಮಹಾ ದಾಸೋಹದ ಎರಡನೇ ದಿನ ಊಟದಲ್ಲಿ ಮಿರ್ಚಿ ಬಜ್ಜಿಯನ್ನ ಭಕ್ತರಿಗೆ ನೀಡಲಾಗುತ್ತಿದೆ. ಈ ಬಾರಿ ಬರೋಬ್ಬರಿ 25 ಕ್ಷಿಂಟಾಲ್ ಕಡ್ಲೆ ಹಿಟ್ಟು, 9 ಬ್ಯಾರೆಲ್ ಅಡುಗೆ ಎಣ್ಣೆ, 15 ಕ್ವಿಂಟಾಲ್ ಹಸಿಮೆಣಸಿನಕಾಯಿಯ ಜೊತೆಗೆ ಬೆಳ್ಳಂಬೆಳಗ್ಗೆ ಬರೋಬ್ಬರಿ 200 ಕ್ಕೂ ಹೆಚ್ಚು ಬಾಣಸಿಗರು ಮಿರ್ಚಿಮಾಡೋದರಲ್ಲಿ ತೊಡಗಿಕೊಂಡಿದ್ದರು…
ಸಾಮಾನ್ಯವಾಗಿ ಮದುವೆಗೆ ಸ್ವಲ್ಪ ತಡವಾಗಿ ಹೋದ್ರು ಊಟದಲ್ಲಿ ಮಿರ್ಚಿ ಸಿಗೋದಿಲ್ಲ. ಯಾಕಂದ್ರೆ ಐದಾರು ಸಾವಿರ ಜನರಿಗೆ ಮಿರ್ಚಿ ಮಾಡುವುದೂ ಕೂಡ ಕಷ್ಟ ಸಾಧ್ಯ. ಆದ್ರೆ, ಗವಿಸಿದ್ದೇಶ್ವರ ಜಾತ್ರೆಯಲ್ಲಿ ಲಕ್ಷಾಂತರ ಜನರಿಗೆ ಮಿರ್ಚಿ ತಯಾರಿಸುವುದೆಂದ್ರೆ ಸಾಮಾನ್ಯ ಮಾತಲ್ಲ. ಅದಕ್ಕಾಗಿ ಶ್ರೀಮಠದ ಸ್ವಯಂ ಸೇವಕರು ಎರಡು ದಿನದ ಮೊದಲೇ ಸಾಕಷ್ಟು ಸಿದ್ದತೆ ಮಾಡಿಕೊಂಡಿರ್ತಾರೆ.
ಬರೊಬ್ಬರಿ 200 ಬಾಣಸಿಗರಿಂದ ಮಿರ್ಚಿ ರೆಡಿಯಾಗುತ್ತದೆ. ಬೆಳಿಗ್ಗೆಯಿಂದಲೇ ಭಕ್ತರ ದಂಡು ಮಠದತ್ತ ಹರಿದು ಬಂದಿತ್ತು. ಭಾನುವಾರ ರಥೋತ್ಸವ ಆದ್ದರಿಂದ ಜನಪ್ರವಾಹವೇ ಇತ್ತು. ದರ್ಶನಕ್ಕೆ ಬರದವರು ಕೂಡಾ ಲಕ್ಷ ಲಕ್ಷ ಸಂಖ್ಯೆಯಲ್ಲಿ ಆಗಮಿಸಿದ್ರು. ಜಾತ್ರೆಗೆ ಬಂದವರೆಲ್ಲಾ ದಾಸೋಹದ ಸ್ಪೇಷಲ್ ಮಿರ್ಚಿ ಸವಿದರು. ಭಕ್ತಾಧಿಗಳಂತೂ ಇದು ಯಾವುದಾದ್ರೂ ಮದುವೆನಾ ಅಥವಾ ದಾಸೋಹನಾ ಎನ್ನುತ್ತಿರುವುದು ಸಾಮಾನ್ಯವಾಗಿತ್ತು.
ಒಟ್ನಲ್ಲಿ ಅಜ್ಜನ ಜಾತ್ರೆಯ ಮಹಾ ದಾಸೋಹದಲ್ಲಿ ಪ್ರತಿ ದಿನವೂ ಭಕ್ತರು ವಿಶೇಷ ಖಾದ್ಯ ಸೇವಿಸುತ್ತಾರೆ. ಇಂದು ಮಿರ್ಚಿ ರುಚಿ ಸವಿದ ಭಕ್ತರು ಗವಿಸಿದ್ದೇಶ್ವರ ಜಾತ್ರೆ ಕೇವಲ ದಕ್ಷಿಣದ ಕುಂಭಮೇಳ ಅಂತಾ ಮಾತ್ರ ಪ್ರಸಿದ್ದವಲ್ಲ ದಾಸೋಹಕ್ಕೂ ಪ್ರಸಿದ್ದಿ ಅಂತಾ ಗವಿಸಿದ್ದೇಶ್ವರ ಅಜ್ಜನಿಗೆ ಜೈ ಅಂದ್ರು. ಇಂದು ಮಂಗಳವಾರವೂ ಜಾತ್ರೆ ಇದ್ದು, ವಿವಿಧ ಕಾರ್ಯಕ್ರಮಗಳ ಜೊತೆ ಲಕ್ಷಾಂತರ ಭಕ್ತರು ಆಗಮಮಿಸೋ ಸಾಧ್ಯತೆ ಇದೆ. ಅದೇನೆ ಇರಲಿ ಇವೆಲ್ಲಾ ದೃಶ್ಯಗಳನ್ನ ನೋಡಿದ್ರೆ ಇದನ್ನ ಗವಿವೈಭವ ಅನ್ನೋದು ಸುಳ್ಳಲ್ಲ.
ವರದಿ: ದತ್ತಾತ್ರೇಯ ಪಾಟೀಲ್, ಟಿವಿ9, ಕೊಪ್ಪಳ
Published On - 8:54 am, Tue, 10 January 23