Commission: ಬೆಳಗಾವಿ ಆಯ್ತು, ಈಗ ಕೊಪ್ಪಳದಿಂದ ರಾಜ್ಯದ ಮತ್ತೊಬ್ಬ ಗುತ್ತಿಗೆದಾರನಿಂದ ಪ್ರಧಾನಿ ಮೋದಿಗೆ ಪತ್ರ ರವಾನೆ!
ಮುಸ್ಟೂರು ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಬಾಬತ್ತಿನಲ್ಲಿ ಬಿಲ್ ಮಾಡಲು ಅಧಿಕಾರಿಗಳು ಕಮಿಷನ್ ಕೇಳಿದ್ದಾರೆಂದು ಆರೋಪಿಸಿ ಪತ್ರ ಬರೆಯಲಾಗಿದೆ. ಮುಸ್ಟೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆದಿಲ್ ಪಾಷಾ, ಪಿಡಿಒ ಪ್ರಕಾಶ್ ಸಜ್ಜನರ, ಜೆ.ಇ. ವಿಷ್ಣು ವಿರುದ್ಧ ಜಿಲ್ಲಾ ಪಂಚಾಯತ್ ಸಿಇಒ ಫೌಜಿಯಾ ತರನ್ನುಮ್ ಅವರಿಗೆ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ದೂರು ಸಲ್ಲಿಸಲಾಗಿದೆ. ಆದರೆ ಭ್ರಷ್ಟರನ್ನು ರಕ್ಷಿಸಲು ಜಿಲ್ಲಾ ಪಂಚಾಯತ್ ಸಿಇಒ ಫೌಜಿಯಾ ತರನ್ನುಮ್ ಮುಂದಾಗಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಕೊಪ್ಪಳ: ಬೆಳಗಾವಿ ಆಯ್ತು, ಈಗ ಕೊಪ್ಪಳದಿಂದ ರಾಜ್ಯದ ಮತ್ತೊಬ್ಬ ಗುತ್ತಿಗೆದಾರ ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಪತ್ರ ಬರೆದಿದ್ದಾರೆ. ಕಾಮಗಾರಿ ಬಿಲ್ ಪಾವತಿಗೆ ಕಮಿಷನ್ ಬೇಡಿಕೆಗೆ (corruption) ಸಂಬಂಧಿಸಿದಂತೆ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳು ಕಾಮಗಾರಿ ಬಿಲ್ ಮಾಡಲು ಕಮಿಷನ್ ಕಿರುಕುಳ (commission) ನೀಡುತ್ತಿದ್ದಾರೆಂದು ಆರೋಪಿಸಿ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಬಾರಿ ಯಾವುದೇ ಸಚಿವರ ಹೆಸರನ್ನು ಹೇಳಿಲ್ಲವಾದರೂ ನೇರವಾಗಿ ಅಧಿಕಾರಿಗಳನ್ನು ಹೆಸರಿಸಲಾಗಿದೆ.
ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕು ಕುಂಟೋಜಿ ಗ್ರಾಮದ ಗುತ್ತಿಗೆದಾರ ಎರಿಸ್ವಾಮಿ (Koppal Contractor Yerriswamy) ಈ ಪತ್ರ ಬರೆದಿರುವ ಗುತ್ತಿಗೆದಾರ. ದಾಖಲಾರ್ಹ ಸಂಗತಿಯೆಂದರೆ ಈ ಹಿಂದೆಯೂ ಇದೇ ರೀತಿ ಲೋಕೋಪಯೋಗಿ ಸಚಿವಾಲಯದಲ್ಲಿ ಗುತ್ತಿಗೆ ಕಾಮಗಾರಿ ಬಾಬತ್ತಿನಲ್ಲಿ ಶೇ. 40 ರಷ್ಟು ಕಮೀಷನ್ ಕೇಳಲಾಗುತ್ತಿದೆ ಎಂದು ಆರೋಪಿಸಿ ಬೆಳಗಾವಿ ಜಿಲ್ಲೆಯ ಸಂತೋಷ್ ಪಾಟೀಲ್ ಎಂಬಾತ ಅಂದಿನ ಲೋಕೋಪಯೋಗಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಹೆಸರನ್ನು ಉಲ್ಲೇಖಿಸಿ, ಪ್ರಧಾನಿ ಮೋದಿಗೆ ಹೀಗೆಯೇ ಪತ್ರ ಬರೆದಿದ್ದರು. ಕೊನೆಗೆ ಅದೇ ಗುಂಗಿನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡರು.
ಈಗಿನ ಪತ್ರದ ಸಾರಾಂಶವೇನು? ಯಾವ ಅಧಿಕಾರಿಗಳ ವಿರುದ್ಧ? ಮುಸ್ಟೂರು ಗ್ರಾಮದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಬಾಬತ್ತಿನಲ್ಲಿ ಬಿಲ್ ಮಾಡಲು ಅಧಿಕಾರಿಗಳು ಕಮಿಷನ್ ಕೇಳಿದ್ದಾರೆಂದು ಆರೋಪಿಸಿ ಪತ್ರ ಬರೆಯಲಾಗಿದೆ. ಮುಸ್ಟೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆದಿಲ್ ಪಾಷಾ, ಪಿಡಿಒ ಪ್ರಕಾಶ್ ಸಜ್ಜನರ, ಜೆ.ಇ. ವಿಷ್ಣು ವಿರುದ್ಧ ಜಿಲ್ಲಾ ಪಂಚಾಯತ್ ಸಿಇಒ ಫೌಜಿಯಾ ತರನ್ನುಮ್ ಅವರಿಗೆ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ದೂರು ಸಲ್ಲಿಸಲಾಗಿದೆ. ಆದರೆ ಭ್ರಷ್ಟರನ್ನು ರಕ್ಷಿಸಲು ಜಿಲ್ಲಾ ಪಂಚಾಯತ್ ಸಿಇಒ ಫೌಜಿಯಾ ತರನ್ನುಮ್ ಮುಂದಾಗಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ಜಿಪಂ ಸಿಇಒ ಫೌಜಿಯಾ ತರನ್ನುಮ್, ಇ.ಒ. ಕೆ.ವಿ. ಕಾವ್ಯಾರಾಣಿ, ಗ್ರಾಪಂ ಅಧ್ಯಕ್ಷ ಆದಿಲ್ ಪಾಷಾ, ಪಿಡಿಒ ಪ್ರಕಾಶ್ ಸಜ್ಜನರ್, ಜೆ.ಇ. ವಿಷ್ಣು ವಿರುದ್ಧ ಶಿಸ್ತುಕ್ರಮಕ್ಕೆ ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ಗುತ್ತಿಗೆದಾರ ಎರಿಸ್ವಾಮಿ ಮನವಿ ಮಾಡಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Also Read: ಎಮ್ ಟಿ ಬಿ ನಾಗರಾಜರಿಗೆ ತಾವು ಮಾಡಿದ ಪಾಪದ ಅರಿವು ಈಗ ಆಗುತ್ತಿದೆ ಎಂದರು ಸಿದ್ದರಾಮಯ್ಯ
Also Read: TV9 Kannada Digital Live: ಪಿಎಸ್ಐ ಸ್ಕ್ಯಾಮ್-ಸರಕಾರದ ಮುಂದೆ ದಾರಿ ಯಾವುದು? ಟಿವಿ9 ಡಿಜಿಟಲ್ ಲೈವ್ ಚರ್ಚೆ
Published On - 4:18 pm, Mon, 2 May 22