AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Koppal: ಮಹಿಳಾ ದಿನಾಚರಣೆ ಪ್ರಯುಕ್ತ ಒಂದು ದಿನದ ಮಟ್ಟಿಗೆ ಸಿಇಓ ಆಗಿ ಕಾರ್ಯನಿರ್ವಹಿಸಿದ ವಿದ್ಯಾರ್ಥಿನಿಯರು

ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಸಹ ಉನ್ನತ ಹುದ್ದೆಗಳನ್ನು ಹೊಂದಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಪದವಿ ವಿದ್ಯಾರ್ಥಿನಿಯರಿಬ್ಬರು ಒಂದು ದಿನದ ಮಟ್ಟಿಗೆ ಕೊಪ್ಪಳ ಜಿಲ್ಲಾ ಪಂಚಾಯ್ತಿ ಅಧಿಕಾರೇತರ ಸಿಇಓ ಆಗಿ ಕರ್ತವ್ಯ ನಿರ್ವಹಿಸಿದರು.

Koppal: ಮಹಿಳಾ ದಿನಾಚರಣೆ ಪ್ರಯುಕ್ತ ಒಂದು ದಿನದ ಮಟ್ಟಿಗೆ ಸಿಇಓ ಆಗಿ ಕಾರ್ಯನಿರ್ವಹಿಸಿದ ವಿದ್ಯಾರ್ಥಿನಿಯರು
ಮಹಿಳಾವ ದಿನದ ಪ್ರಯುಕ್ತ ಒಂದು ದಿನದ ಮಟ್ಟಿಗೆ ಜಿಲ್ಲಾಪಂಚಾಯತಿ ಸಿಇಒ ಆದ ವಿದ್ಯಾರ್ಥಿಗಳು
ಕಿರಣ್ ಹನುಮಂತ್​ ಮಾದಾರ್
|

Updated on:Mar 10, 2023 | 10:16 AM

Share

ಕೊಪ್ಪಳ: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ತೆಗೆದುಕೊಳ್ಳುತ್ತಿರುವ ವಿಧ್ಯಾರ್ಥಿನಿಯರು, ಜೊತೆಗೆ ಸಿಇಓ ಚೇರ್​ ಮೇಲೆ‌ ಕುಳಿತು ಅಧಿಕಾರ ಚಲಾಯಿಸುತ್ತಿರುವ ಯುವತಿಯರು. ಹೌದು ಹೀಗೆ ಕೊಪ್ಪಳ ಜಿಲ್ಲಾ ಪಂಚಾಯತಿ ಸಿಇಓ ರಾಹುಲ್‌ ರತ್ನಂ ಪಾಂಡೆ(Rahul Ratnam Pandey) ಅವರ ಜೊತೆಗೆ ಇರುವ ಈ ಯುವತಿಯರಿಬ್ಬರು ಯಾವುದೇ ಇಲಾಖೆಯ ಸಿಬ್ಬಂದಿಗಳಲ್ಲ. ಇವರು ಕೊಪ್ಪಳ ನಗರದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ ಐದನೇ ಸೆಮಿಸ್ಟರ್‌ ಓದುತ್ತಿರುವ ಪದವಿಯ ವಿದ್ಯಾರ್ಥಿಗಳು. ಅಷ್ಟಕ್ಕೂ ಈ ಇಬ್ಬರು ವಿದ್ಯಾರ್ಥಿನಿಯರು ನಿನ್ನೆ(ಮಾ.9) ಕೊಪ್ಪಳ ಜಿಲ್ಲಾ ಪಂಚಾಯತಿಯ ಸಿಇಓ ಆಗಿ ಕೆಲಸ ಮಾಡಿದರು. ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಓ ರಾಹುಲ್‌ ರತ್ನಂ ಪಾಂಡೆ ಅವರು ವಿಶೇಷವಾಗಿ ಆಚರಣೆ ಮಾಡಬೇಕು ಎಂಬ ಸದಾಶಯವೇ ಈ ಇಬ್ಬರು ವಿದ್ಯಾರ್ಥಿನಿಯರು ಇಂದು ಜಿಲ್ಲಾ ಪಂಚಾಯತಿಯ ಒಂದು ದಿನದ ಅಧಿಕಾರೇತರ ಸಿಇಓ ಆಗಿ ಖುರ್ಚಿಯಲ್ಲಿ ಕೂರುವಂತೆ ಮಾಡಿತು.

ಗವಿಸಿದ್ದೇಶ್ವರ ಮಹಾವಿದ್ಯಾಲಯದ ಶಾಹಿನಾ ಹಾಗೂ ಹನುಮಕ್ಕ ಎಂಬ ಇಬ್ಬರು ವಿದ್ಯಾರ್ಥಿನಿಯರು ಜಿಲ್ಲಾ ಪಂಚಾಯತಿ ಅಧಿಕಾರೇತರ ಸಿಇಓ ಆಗಿ ಕೆಲಸ ಮಾಡಿದರು. ರಾಹುಲ್‌ ರತ್ನಂ ಪಾಂಡೆ ಅವರು ಈ ಇಬ್ಬರು ವಿದ್ಯಾರ್ಥಿನಿಯರನ್ನು ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಯೋಜನೆಗಳ ಪರಿಶೀಲನೆ, ಸಭೆ, ಸ್ವೀಪ್‌ ಮೀಟಿಂಗ್‌, ಗ್ರಾಮ ಪಂಚಾಯ್ತಿ ಭೇಟಿ ಹಾಗೂ ತಮ್ಮ ಕಚೇರಿಯಲ್ಲಿ ಜಲಜೀವನ ಮಿಷನ್‌, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ವಿವಿಧ ಯೋಜನೆಗಳ ಬಗ್ಗೆ ಸಿಇಓ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿದರು.

ಇದನ್ನೂ ಓದಿ:ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತನಾ? ಆಕೆಗೆ ಅವಳಿಗಿರುವ ಸಮಾನತೆ ನೀಡಿ

ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಬಗ್ಗೆ ಪ್ರೇರಣೆ ನೀಡುವ ದೃಷ್ಠಿಯಿಂದಾಗಿ ಈ ಇಬ್ಬರು ವಿದ್ಯಾರ್ಥಿನಿಯರನ್ನು ಒಂದು ದಿನದ ಅಧಿಕಾರೇತರ ಜಿಲ್ಲಾ ಪಂಚಾಯ್ತಿ ಸಿಇಓ ಆಗಿ ಕೆಲಸ ಮಾಡಲು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಸಿಇಓ ರಾಹುಲ್‌ ರತ್ನಂ ಪಾಂಡೆ ತಿಳಿಸಿದ್ದಾರೆ.

ಇನ್ನು ಜಿಲ್ಲಾ ಪಂಚಾಯತಿಯ ಒಂದು ದಿನದ ಅಧಿಕಾರೇತರ ಸಿಇಓ ಆಗಿ ಕೆಲಸ ಮಾಡಲು ತಮಗೆ ಸಿಕ್ಕ ಅವಕಾಶಕ್ಕೆ ಆ ಇಬ್ಬರು ವಿದ್ಯಾರ್ಥಿನಿಯರು ಸಖತ್‌ ಎಕ್ಸೈಟ್‌ ಆಗಿದ್ದರು. ‘ಅಲ್ಲದೆ ಜಿಲ್ಲಾ ಪಂಚಾಯ್ತಿ ಯೋಜನೆಗಳು, ಸಿಇಓ ಆವರೊಂದಿಗೆ ಕುಳಿತು ಅಧಿಕಾರಿಗಳಾಗಿ ಕೆಲಸ ಮಾಡಿರೋದು ಖುಷಿ ನೀಡಿದೆ. ಅಲ್ಲದೆ, ನಾವೂ ಸಹ ಉನ್ನತ ಹುದ್ದೆಯನ್ನು ಹೊಂದಬೇಕು ಎಂಬ ಗುರಿ ಮತ್ತಷ್ಟು ಗಟ್ಟಿಯಾಗಿದೆ ಎಂದು ವಿದ್ಯಾರ್ಥಿನಿಯರು ಹೇಳಿದರು.

ಇದನ್ನೂ ಓದಿ:Women’s Day 2023: ಮಹಿಳಾ ದಿನಾಚರಣೆ ಇತಿಹಾಸ, ಮಹತ್ವ ಹಾಗೂ ಭಾರತ ಸ್ವತಂತ್ರ ಸಂಗ್ರಾಮದ ಸುಪ್ತ ನಾಯಕಿ ನೀರಾ ಆರ್ಯ ಸಾಹಸದ ಕಥೆ

ಒಬ್ಬ ವಿದ್ಯಾರ್ಥಿನಿಯನ್ನು ಆಯ್ಕೆ ಮಾಡಿ ಕಳಿಸಿ ಎಂದು ಹೇಳಿದ್ದರೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇಬ್ಬರು ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿ ಕಳಿಸಿದ್ದು ಒಂದಿಷ್ಟು ಯಡವಟ್ಟಾದರೂ ಸಹ ಇಬ್ಬರು ವಿದ್ಯಾರ್ಥಿನಿಯರು ಒಂದು ದಿನದ ಮಟ್ಟಿಗೆ ಅಧಿಕಾರೇತರ ಜಿಲ್ಲಾ ಪಂಚಾಯ್ತಿ ಸಿಇಓಗಳಾಗಿ ಕೆಲಸ ಮಾಡಿದ್ದು ಮಾತ್ರ ಪ್ರೇರಣೆ ನೀಡಿದೆ. ಜಿಲ್ಲಾ ಪಂಚಾಯ್ತಿ ಸಿಇಓ ರಾಹುಲ್‌ ರತ್ನಂ ಪಾಂಡೆ ಈ ಕೆಲಸ ನಿಜಕ್ಕೂ ಮೆಚ್ಚುವಂತಹದ್ದು.

ವರದಿ: ದತ್ತಾತ್ರೇಯ ಪಾಟೀಲ್ ಟಿವಿ9 ಕೊಪ್ಪಳ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:14 am, Fri, 10 March 23