AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಗುವಿನ ನಾಮಕರಣ: ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು

ಕೆಪಿಎಸ್​​ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದ ಕಿಂಗ್​​ಪಿನ್ ಬಸವರಾಜ ಕನ್ನಾಳೆಯನ್ನು ಇಡಿ ಬಂಧಿಸಿದ ತನಿಖೆ ನಡೆಸಿದ್ದು, ಈ ವೇಳೆ ಕೆಲ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಕೋಟ್ಯಂತರ ರೂಪಾಯಿ ಅಕ್ರಮ ಎಸಗಿರುವುದು ಇ.ಡಿ ತನಿಖೆಯಲ್ಲಿ ದೃಢಪಟ್ಟಿದ್ದು, ಅಭ್ಯರ್ಥಿಗಳಿಂದ ಹಣ ವಸೂಲಿ ಮಾಡಿರುವುದು ತನ್ನ ಡೈರಿಯಲ್ಲಿ ಬರೆದುಕೊಂಡಿದ್ದ. ಈ ಬಗ್ಗೆ ಎಲ್ಲಾ ತನಿಖೆ ನಡೆಯುತ್ತಿದ್ದು, ಇದರ ಮಧ್ಯೆ ಮಾನವೀಯತೆ ಆಧಾರದ ಮೇಲೆ ಕನ್ನಾಳೆಗೆ ಮಧ್ಯಂತರ ಜಾಮೀನು ದೊರೆತಿದೆ.

ಮಗುವಿನ ನಾಮಕರಣ: ಕೆಪಿಎಸ್‌ಸಿ ಹಗರಣದ ಕಿಂಗ್‌ಪಿನ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು
Basavaraj Kannale
ರಮೇಶ್​ ಎಮ್​.
| Edited By: |

Updated on: Oct 12, 2026 | 4:22 PM

Share

ಬೆಂಗಳೂರು, (ಅಕ್ಟೋಬರ್ 12): ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಕಿಂಗ್‌ಪಿನ್‌ ಬಸವರಾಜ್‌ ಕನ್ನಾಳೆಗೆ ಐದು ದಿನಗಳ ವರೆಗೆ ಜಾಮೀನು ನೀಡಿ ಕೋರ್ಟ್‌ ಆದೇಶ ಹೊರಡಿಸಿದೆ. ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕನ್ನಾಳೆಗೆ ಅಕ್ಟೋಬರ್ 15 ರಿಂದ 20 ರವರೆಗೆ ಬೀದರ್​​ಗೆ ತೆರಳಲು ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಹೈಕೋರ್ಟ್ ಪೀಠ ಇಂದು (ಅಕ್ಟೋಬರ್ 12) ಆದೇಶಿಸಿದೆ.

ಕನ್ನಾಳೆ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದ್ದು, ಕನ್ನಾಳೆ ಪತ್ನಿ ಮಗುವಿಗೆ ಜನ್ಮ ನೀಡಿದ್ದಾರೆ. 12 ದಿನದ ಮಗುವಿಗೆ ನಾಮಕರಣದ ಅಗತ್ಯವಿದೆ. ಹೀಗಾಗಿ ಮಾನವೀಯತೆ ಮೇಲೆ ಒಂದು ವಾರದ ಜಾಮೀನು ನೀಡುವಂತೆ ಮನವಿ ಮಾಡಿದರು. ಇತ್ತ ಸರ್ಕಾರದ ಪರ ಎಸ್‌ಪಿಪಿ ಬಿ.ಎನ್.ಜಗದೀಶ್ ಪ್ರತಿವಾದ ಮಂಡಿಸಿದ್ದು, ಕನ್ನಾಳೆ ಹಲವು ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಿದ್ದಾನೆ. ಸಿಐಡಿ ಕಸ್ಟಡಿಯಲ್ಲಿಯೇ ಬೀದರ್‌ಗೆ ತೆರಳಲು ಷರತ್ತು ವಿಧಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: ಕೆಪಿಎಸ್​​ಸಿ ಹಗರಣದ ಕಿಂಗ್​​ಪಿನ್​​ ಬಸವರಾಜ್​​ ಕನ್ನಾಳೆಗೆ ಮತ್ತೊಂದು ಆಘಾತ: ತುಮಕೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯತ್ವಕ್ಕೂ ಕಂಟಕ

ಈ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಹೈಕೋರ್ಟ್ ಪೀಠ, ಅ.15ರಿಂದ ಅ.20ರವರೆಗೆ ಬಸವರಾಜ ಕನ್ನಾಳೆಗೆ ಷರತ್ತಿನ ಮಧ್ಯಂತರ ಜಾಮೀನು ನೀಡಿದ್ದು, ಪೊಲೀಸರೇ ಎಸ್ಕಾರ್ಟ್‌ನಲ್ಲಿ ಕರೆದೊಯ್ದು ಕರೆತರಲು ಸೂಚಿಸಿ ಆದೇಶ ಹೊರಡಿಸಿದೆ.

ಅಭ್ಯರ್ಥಿಗಳಿಂದ 1.50 ಕೋಟಿ ಅಡ್ವಾನ್ಸ್‌ ಪಡೆದಿದ್ದ ಕನ್ನಾಳೆ

2024ರಲ್ಲಿ ಪಶು ವೈದ್ಯಾಧಿಕಾರಿಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಅಭ್ಯರ್ಥಿಗಳೊಂದಿಗೆ ಡೀಲ್‌ ಕುದುರಿಸುವಲ್ಲಿ ಕನ್ನಾಳೆ ಯಶಸ್ವಿಯಾಗಿದ್ದ. ಪ್ರತಿ ಹುದ್ದೆಯನ್ನು ಸುಮಾರು 80 ಲಕ್ಷ ರೂ.ಗಳಿಗೆ ಮಾರಾಟ ಮಾಡುವ ಯೋಜನೆ ರೂಪಿಸಿದ್ದ. ಈ ಪೈಕಿ ಸುಮಾರು 15ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಮುಂಗಡವಾಗಿ 1.50 ಕೋಟಿ ರೂ. ಸಂಗ್ರಹಿಸಲಾಗಿತ್ತು. ಇದೇ ಮೊತ್ತದಲ್ಲಿ ಕನ್ನಾಳೆಯು ಗಂಗ್ವಾರ್‌ಗೆ 1.30 ಕೋಟಿ ರೂ. ನಗದು ತಲುಪಿಸಿದ್ದ. ಈ ಹಣದ ಪೈಕಿ ಓಂ ಶ್ರೀ ಲಕ್ಷ್ಮೀ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್‌ಗೆ 80 ಲಕ್ಷ ರೂ. ಜಮೆ ಆಗಿತ್ತು. ಅಷ್ಟೇ ಅಲ್ಲದೆ, ಐಎಎಸ್‌ ಅಧಿಕಾರಿ ಗಂಗ್ವಾರ್‌ ಸಂಬಂಧಿಕರಿಗೂ ಅಕ್ರಮ ಹಣ ತಲುಪಿದೆ. ಪ್ರಮುಖವಾಗಿ ಗಂಗ್ವಾರ್‌ ಸಹೋದರನ ಖಾತೆಗೆ 10.94 ಲಕ್ಷ ರೂ. ಹಾಗೂ ಅತ್ತಿಗೆಯ ಖಾತೆಗೆ 15.39 ಲಕ್ಷ ರೂ. ಜಮೆ ಮಾಡಲಾಗಿತ್ತು ಎಂದು ಇ.ಡಿ ತನಿಖಾ ಮೂಲಗಳು ತಿಳಿಸಿವೆ.

ಇನ್ನು ಈ ಬಗ್ಗೆ ಇಡಿ ಅಧಿಕಾರಿಗಳ ತನಿಖೆ ಮುಂದುವರೆದಿದ್ದು, ಇದರ ಏತನ್ಮದ್ದೇ ಕೆಎಸ್​​ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಗೀತಾಳನ್ನು ಸಹ ಬಂಧಿಸಿ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷಟ್ಉ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ರಮೇಶ್​ ಎಮ್​.
ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More