KSRTC BMTC Buses: ಸಿಎಂ ಯಡಿಯೂರಪ್ಪ ಓಕೆ ಅಂದ್ರೆ ಸೋಮವಾರದಿಂದಲೇ ಬಸ್ ಸಂಚಾರ ಆರಂಭ: ಸಾರಿಗೆ ಸಚಿವ ಲಕ್ಷ್ಮಣ ಸವದಿ
Karnataka Unlock: ಸದ್ಯಕ್ಕೆ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡುವ ಯೋಚನೆಯಿದೆ. ಕೊರೊನಾ ಕಡಿಮೆಯಾದ ನಂತರ ಪೂರ್ಣ ಪ್ರಮಾಣದಲ್ಲಿ ಸೇವೆಗೆ ಅವಕಾಶ ನೀಡುತ್ತೇವೆ. ಅಗತ್ಯವಿರುವ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸೂಚಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಬೆಂಗಳೂರು: ಸೋಮವಾರದಿಂದ (ಜೂನ್ 21) ರಾಜ್ಯದಲ್ಲಿ ಬಸ್ ಸಂಚಾರಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆ ನಡೆಸಿದ್ದೇವೆ. ಇಂದು ಸಂಜೆ ಸಿಎಂ ಯಡಿಯೂರಪ್ಪ ಅವರ ನೇತೃತ್ವದ ನಡೆಯಲಿರುವ ಸಭೆಯಲ್ಲಿ ಬಸ್ ಸಂಚಾರ ಆರಂಭದ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರೆ ಕೊವಿಡ್ ನಿಯಮಾನುಸಾರ ಸೋಮವಾರದಿಂದಲೇ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಬೆಂಗಳೂರಿನಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.
ಸದ್ಯಕ್ಕೆ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಅವಕಾಶ ನೀಡುವ ಯೋಚನೆಯಿದೆ. ಕೊರೊನಾ ಕಡಿಮೆಯಾದ ನಂತರ ಪೂರ್ಣ ಪ್ರಮಾಣದಲ್ಲಿ ಸೇವೆಗೆ ಅವಕಾಶ ನೀಡುತ್ತೇವೆ. ಅಗತ್ಯವಿರುವ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸೂಚಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಸರ್ಕಾರದ ಅನುಮತಿ ಸಿಕ್ಕರೆ ಬಿಎಂಟಿಸಿ ಬಸ್ ಸಂಚಾರ ಆರಂಭಿಸಲಿದ್ದೇವೆ. ಮೊದಲ ಶಿಫ್ಟ್ನಲ್ಲಿ 1000 ಬಸ್, 2ನೇ ಪಾಳಿಯಲ್ಲಿ 800-1000 ಬಸ್ಗಳ ಸೇವೆ ಆರಂಭಿಸುತ್ತೇವೆ. ಡ್ರೈವರ್, ಕಂಡಕ್ಟರ್ಗಳಿಗೆ ಈಗಾಗಲೇ ವ್ಯಾಕ್ಸಿನೇಷನ್ ಆಗಿದೆ ಟಿವಿ9ಗೆ ಬಿಎಂಟಿಸಿ ಎಂಡಿ ಸಿ.ಶಿಖಾ ತಿಳಿಸಿದ್ದಾರೆ. ಆರಂಭದಲ್ಲಿ 1800-2000 ಬಸ್ಗಳು ಆಪರೇಟ್ ಆಗಲಿವೆ. ಅದಾದ ಬಳಿಕ ಪ್ರಯಾಣಿಕರ ಸಂಖ್ಯೆ ಗಮನಿಸಿ ಬಸ್ಗಳ ಸಂಖ್ಯೆ ಹೆಚ್ಚಿಸುತ್ತೇವೆ. ಬಿಎಂಟಿಸಿಗೆ ಪ್ರತಿನಿತ್ಯ 5 ಕೋಟಿ ರೂಪಾಯಿ ಆದಾಯ ಇದೆ. ಆದರೆ ಲಾಕ್ಡೌನ್ನಿಂದಾಗಿ ಬಿಎಂಟಿಸಿಗೆ 150 ಕೋಟಿ ನಷ್ಟವಾಗುತ್ತಿದೆ. ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯಗೊಳಿಸಲಿದ್ದು, ದೈಹಿಕ ಅಂತರಕ್ಕಾಗಿ ಶೇ.50ರಷ್ಟು ಪ್ರಯಾಣಿಕರಿಗೆ ವ್ಯವಸ್ಥೆ ಮಾಡಲಾಗುವುದು. ಗೂಗಲ್ ಪೇ, ಫೋನ್ ಪೇ ಮೂಲಕವೂ ಟಿಕೆಟ್ ಹಣ ಪಾವತಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಪ್ಯಾಲಸ್ಟೀನ್ಗೆ 10 ಲಕ್ಷ ಕೊವಿಡ್ ಲಸಿಕೆ ಕಳಿಸಲು ಇಸ್ರೇಲ್ ಸಮ್ಮತಿ: ಎಕ್ಸ್ಪೈರಿ ದಿನಕ್ಕೆ ಹತ್ತಿರದ್ದು ಎಂಬುದೇ ವಿಪರ್ಯಾಸ
ವೈದ್ಯರ ಮೇಲೆ ಹಲ್ಲೆ ಪ್ರಕರಣ: ಕೊವಿಡ್ನಿಂದ ಗುಣವಾಗಿ ಬಂದ ನಟ ಕೋಮಲ್ ಹೇಳಿದ್ದೇನು?
(KSRTC and BMTC Buses will be start service from Monday June 21 if CM Yediyurappa give permission says transport minister Laxman savadi)