ಸಾರಿಗೆ ಇಲಾಖೆ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ಅಕ್ರಮ: ಕೋಟಿ ಹಣ, ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿಕೊಂಡ ಅಭ್ಯರ್ಥಿಗಳು
ರಾಜ್ಯ ಸಾರಿಗೆ ಇಲಾಖೆಯ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಯ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಅಭ್ಯರ್ಥಿಗಳು ನಕಲಿ ಸರ್ಟಿಫಿಕೇಟ್ ನೀಡಿ ಕೆಲಸ ಗಿಟ್ಟಿಸಿಕೊಂಡಿರುವ ಆರೋಪ ಕೇಳಿಬಂದಿದೆ.
ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಯ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಅಭ್ಯರ್ಥಿಗಳು ನಕಲಿ ಸರ್ಟಿಫಿಕೇಟ್ ನೀಡಿ ಕೆಲಸ ಗಟ್ಟಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಈ 20 ಜನರ ಸರ್ಟಿಫಿಕೇಟ್ ಟಿವಿ9ಗೆ ಲಭ್ಯವಾಗಿವೆ. 2016ರಲ್ಲಿ 150 ಮೋಟರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಕೆಪಿಎಸ್‌ಸಿ ಪರೀಕ್ಷೆ ನಡೆದಿತ್ತು. ಸಾರಿಗೆ ಇಲಾಖೆ ಪರೀಕ್ಷೆಯ ನಂತರ ದಾಖಲೆಗಳ ಪರಿಶೀಲನೆ ಮಾಡಿದ್ದರು. ಈ ವೇಳೆ ಅಭ್ಯರ್ಥಿಗಳು ನಕಲಿ ಸರ್ಟಿಫಿಕೇಟ್ ನೀಡಿ, ಒಂದೊಂದು ಪೋಸ್ಟ್ಗು ಒಂದೊಂದು ಕೋಟಿ ರುಪಾಯಿ ಡೀಲ್ ಆಗಿರುವ ಆರೋಪ ಕೇಳಿಬಂದಿದೆ.
ಪರಿಶೀಲನಾ ಹಂತದಲ್ಲಿ ನಡೆದಿತ್ತು ಸಾಲು ಸಾಲು ಅಕ್ರಮಗಳು ಸುಳ್ಳು ದಾಖಲೆಯನ್ನು ಸಾರಿಗೆ ಇಲಾಖೆಗೆ ನೀಡಿದ್ದ ಹಲವು ಅಭ್ಯರ್ಥಿಗಳು 2016ರಲ್ಲಿ ನಡೆದ ಪರೀಕ್ಷೆಗೆ 2019ರಲ್ಲಿ 129 ಸಂಭವನೀಯ ಪಟ್ಟಿ ಪ್ರಕಟಿಸಲಾಗಿತ್ತು. ಪಟ್ಟಿಯಲ್ಲಿ ಅಕ್ರಮ ಎಸಗಿದ್ದ ಅಭ್ಯರ್ಥಿಗಳ ಹೆಸರೇ ಇತ್ತು. ಈ ಹಿನ್ನೆಲೆ ನೊಂದ ಅಭ್ಯರ್ಥಿಗಳು 2019ರಲ್ಲೇ ಕೆಎಟಿಗೆ ಹಾಗು ಹೈಕೋರ್ಟ್ ಹೋಗಿದ್ದರು. 2021ರಲ್ಲಿ ಹೈಕೋರ್ಟ್ ಅಭ್ಯರ್ಥಿಗಳ ಕೋರಿಕೆಯಂತೆ ಲಿಸ್ಟ್ ವಾಪಸ್ ಪಡೆಯುವಂತೆ ಆದೇಶ ಹೊರಡಿಸಿತ್ತು. ಕೋರ್ಟ್ ಆದೇಶದದನ್ವಯ ಸಾರಿಗೆ ಇಲಾಖೆ ಪಟ್ಟಿ ವಾಪಸ್ ಪಡೆದಿತ್ತು.
ಅಕ್ರಮ ಆಗಿದ್ದು ಹೇಗೆ?
ಹುದ್ದೆಗಳನ್ನು ಅಲಂಕರಿಸಲು ಕಡ್ಡಾಯವಾಗಿದ್ದ ಕೆಲ ಷರತ್ತುಗಳು
22.10.2013ರಲ್ಲಿನ ವೃಂದ ಮತ್ತು ನೇಮಕಾತಿ ನಿಯಮದನ್ವಯ ಅಭ್ಯರ್ಥಿ LMV (ಪೆಟ್ರೋಲ್, ಡೀಸೆಲ್) Heavy Vehicle (ಬಸ್ಸು, ಲಾರಿ) ಇವುಗಳನ್ನು ರಿಪೇರಿ ಮಾಡಲು ಕಡ್ಡಾಯವಾಗಿ ಕಲಿತಿರಬೇಕು. ಯಾವುದಾದರೂ ಸರ್ವೀಸ್ ಸ್ಟೇಷನ್ ಅಥವಾ ಗ್ಯಾರೇಜ್‌ನಲ್ಲಿ ಕೆಲಸ ಮಾಡಿರಬೇಕು. ಕನಿಷ್ಟ 1 ವರ್ಷವಾದರೂ ಸೇವಾನುಭವ ಪಡೆದಿರಬೇಕು ಎಂದು ನಿಯಮವಿದೆ.
ಆದರೆ 2019ರಲ್ಲಿ ಬಿಡುಗಡೆ ಮಾಡಲಾದ 129 ಅಭ್ಯರ್ಥಿಗಳಿಗೆ ಸೇವಾನುಭವ ಇರಲಿಲ್ಲ. ಸೇವಾನುಭವ ಇರೋದಾಗಿ ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಂಡಿದ್ರಾ? ನಕಲಿ ಸ್ಯಾಲರಿ ಸರ್ಟಿಫಿಕೇಟ್, ನಕಲಿ ಹಾಜರಾತಿ, ನಕಲಿ ಗ್ಯಾರೇಜ್ ಸರ್ಟಿಫಿಕೇಟ್ಗಳನ್ನು ವಾಮ ಮಾರ್ಗದಲ್ಲಿ ಮಾಡಿಸಿಕೊಳ್ಳಲಾಗಿತ್ತು. ಇದೇ ಸುಳ್ಳು ದಾಖಲೆಗಳನ್ನು ನೀಡಿ ಸಾರಿಗೆ ಇಲಾಖೆಯನ್ನು ವಂಚಿಸಲಾಗಿತ್ತು. ಸಾರಿಗೆ ಇಲಾಖೆಯ ಅಧಿಕಾರಿಗಳೂ ಇದಕ್ಕೆ ಸಾಥ್ ನೀಡ್ದಿದ್ದರು ಎಂಬ ಅನುಮಾನ ಮೂಡಿದೆ.
ಕೋರ್ಟ್ ಆದೇಶದ ನಂತರ ಮುಂದೇನಾಯ್ತು?
ಕೋರ್ಟ್ ಆದೇಶನದ ನಂತರ ಮತ್ತೊಂದು ಸಂಭವನೀಯ ಪಟ್ಟಿ ಬಿಡುಗಡೆ ಮಾಡಲಾಯ್ತು. 2021ರಲ್ಲಿ ಕೆಪಿಎಸ್‌ಸಿಯಿಂದ 141 ಜನರ ಮತ್ತೊಂದು ಸಂಭವನೀಯ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಈ ಪಟ್ಟಿಯಲ್ಲೂ ಸುಳ್ಳು ದಾಖಲೆ ನೀಡಿದ್ದವರ ಹೆಸರುಗಳು ಮುಂದುವರೆದಿತ್ತು. 1ನೇ ಪಟ್ಟಿಯಲ್ಲಿ ಸುಳ್ಳು ದಾಖಲೆ ನೀಡಿದ್ದವರೇ 2ನೇ ಪಟ್ಟಿಯಲ್ಲೂ ಸ್ಥಾನ ಪಡೆದರು. 103ಕ್ಕೂ ಹೆಚ್ಚು ಅಭ್ಯರ್ಥಿಗಳು ಬಹುತೇಕ ನಕಲಿ ದಾಖಲೆಗಳನ್ನು ನೀಡಿದ್ದಾರೆ ಎನ್ನಲಾಗುತ್ತಿದೆ. ಇಂತಹ 20 ಅಭ್ಯರ್ಥಿಗಳ ದಾಖಲೆ ಸಮೇತ ಮಾಹಿತಿ ಟಿವಿ9 ಗೆ ಲಭ್ಯವಾಗಿದೆ. ಬೆಂಗಳೂರು, ಮೈಸೂರು, ಕೋಲಾರ, ಶಿವಮೊಗ್ಗ, ವಿಜಯಪುರ, ಹಾಸನ ಹಾಗೂ ಮಂಡ್ಯ ಜಿಲ್ಲೆಗಳ ಅಭ್ಯರ್ಥಿಗಳ ನಕಲಿ ದಾಖಲೆ ಲಭ್ಯವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:07 am, Sat, 4 February 23