ಕನ್ನಡ ಮಾತನಾಡಿದ್ದಕ್ಕೆ ಕಾರ್ಮಿಕನ ಮೇಲೆ ಯುಪಿ ಮೂಲದ ಮೂವರು ವ್ಯಕ್ತಿಗಳಿಂದ ಹಲ್ಲೆ: ವಶಕ್ಕೆ
ಹಿಂದಿ ಮಾತನಾಡು ಎಂದು ಕಾರ್ಮಿಕ ಮೇಲೆ ಯುಪಿ ಮೂಲದ ಮೂವರು ವ್ಯಕ್ತಿಗಳಿಂದ ಕಾರ್ಮಿಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಹಲ್ಲೆಗೊಳಗಾದ ಕಾರ್ಮಿಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಆನೇಕಲ್, ಸೆಪ್ಟೆಂಬರ್ 11: ಕನ್ನಡ ಮಾತನಾಡಿದ್ದಕ್ಕೆ ಕಾರ್ಮಿಕನ (Labore) ಮೇಲೆ ಉತ್ತರ ಪ್ರದೇಶ ಮೂಲದ ಮೂವರಿಂದ ಮಾರಣಾಂತಿಕ ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಸದ್ಯ ಹಲ್ಲೆ ಮಾಡಿದ ಯುಪಿ ಮೂಲದ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಹಿಂದಿ ಮಾತನಾಡು ಎಂದು ಕಾರ್ಮಿಕ ಶಿವಲಿಂಗ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಕಾರ್ಮಿಕ ಶಿವಲಿಂಗ ಕೃಷ್ಣಮೂರ್ತಿ ಕಾರ್ಖಾನೆಯಲ್ಲಿ ಮಗ್ಗದ ಕೆಲಸ ಮಾಡುತ್ತಿದ್ದ. ಈ ಕಾರ್ಖಾನೆಯಲ್ಲೇ ಉತ್ತರ ಪ್ರದೇಶದ ಮೂವರು ಕೆಲಸ ಮಾಡುತ್ತಿದ್ದರು. ನಮ್ಮ ಜೊತೆ ಹಿಂದಿಯಲ್ಲಿ ಮಾತಾಡು, ಕನ್ನಡದಲ್ಲಿ ಮಾತನಾಡಬೇಡ ಎಂದು ಶಿವಲಿಂಗ ಜೊತೆ ಕಿರಿಕ್ ಮಾಡಿ ಹಲ್ಲೆ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಥೈಲ್ಯಾಂಡ್ನಿಂದ ಹೈಡ್ರೋ ಗಾಂಜಾ ತರಿಸಿಕೊಳ್ಳುತ್ತಿದ್ದವನ ಬಂಧನ
ಕಬ್ಬಿಣದ ರಾಡ್, ಮಗ್ಗದ ವಸ್ತುಗಳಿಂದ ಶಿವಲಿಂಗನ ಮೇಲೆ ಹಲ್ಲೆ ಮಾಡಲಾಗಿದ್ದು, ತಲೆ, ಕಿವಿಭಾಗಕ್ಕೆ ಗಾಯಗಳಾಗಿವೆ. ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು
ನೆಲಮಂಗಲ: ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ರಾಷ್ಟ್ರೀಯ ಹೆದ್ದಾರಿ 4ರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆ ಗ್ರಾಮದ ಬಳಿ ನಡೆದಿದೆ. ಟಿ.ಬೇಗೂರಿನ ಅರಸೇಗೌಡ (45) ಮೃತ ಸವಾರ.
ಇದನ್ನೂ ಓದಿ: ಮಡಿಕೇರಿ: ಆಟೋ ಚಾಲಕನ ಆತ್ಮಹತ್ಯೆ ಕೇಸ್ಗೆ ಬಿಗ್ ಟಿಸ್ಟ್: ಶೆಡ್ನಲ್ಲಿ ಹತ್ಯೆ ಮಾಡಲಾಯ್ತೆ?
ಅಪಘಾತದ ಬಳಿಕ ಟಿಪ್ಪರ್ ಸ್ಥಳದಲ್ಲೇ ನಿಲ್ಲಿಸಿ ಚಾಲಕ ಪರಾರಿ ಆಗಿದ್ದಾರೆ. ಅಪಘಾತದಿಂದಾಗಿ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಎಸ್ಆರ್ಟಿಸಿ ಬಸ್ ಹರಿದು ಬೈಕ್ ಸವಾರ ಸಾವು
ಮೈಸೂರು: ಕೆಎಸ್ಆರ್ಟಿಸಿ ಬಸ್ ಹರಿದು ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ ಬಳಿ ನಡೆದಿದೆ. ಬಸ್ ಹರಿದು ಸಯ್ಯದ್ ನೌಮಾನ್(27) ದುರ್ಮರಣ ಹೊಂದಿದ್ದಾರೆ. ಹಸು ಅಡ್ಡ ಬಂದಿದ್ದಕ್ಕೆ ಸವಾರ ಸಯ್ಯದ್ ಕೆಳಗೆ ಬಿದಿದ್ದಾನೆ. ಈ ವೇಳೆ ಸವಾರನ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದಿದೆ. ಕೆ.ಆರ್.ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.