ಹೌದು ನಾನು ಬಿಜೆಪಿ ಬಿ ಟೀಂ ನಾಯಕ: ರಾಹುಲ್​ ಆರೋಪಕ್ಕೆ ದೇವೇಗೌಡ ತೀಕ್ಷ್ಣ ತಿರುಗೇಟು

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಮಲ್ಲೇಶಬಾಬು ಪರ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡ, ನಾನು ಬಿಜೆಪಿಯ ಬಿ ಟೀಂ ನಾಯಕ ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಇರಲ್ಲ ಎಂದು ಕಿಡಿಕಾರಿದ್ದಾರೆ. 

ಹೌದು ನಾನು ಬಿಜೆಪಿ ಬಿ ಟೀಂ ನಾಯಕ: ರಾಹುಲ್​ ಆರೋಪಕ್ಕೆ ದೇವೇಗೌಡ ತೀಕ್ಷ್ಣ ತಿರುಗೇಟು
ಹೆಚ್.ಡಿ.ದೇವೇಗೌಡ
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: Apr 19, 2024 | 3:09 PM

ಚಿಕ್ಕಬಳ್ಳಾಪುರ, ಏಪ್ರಿಲ್​ 19: ನನ್ನನ್ನು ಬಿಜೆಪಿ (BJP) ಬಿ ಟೀಂ ನಾಯಕ ಎಂದಿದ್ದಾರೆ. ಹೌದು ನಾನು ಬಿ ಟೀಂ ನಾಯಕ ಎಂದು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​ಡಿ ದೇವೇಗೌಡ (HD Devegowda) ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಶಿಡ್ಲಘಟ್ಟದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಮಲ್ಲೇಶಬಾಬು ಪರ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ಯಾರಂಟಿಗಳ ಮೊರೆ ಹೋಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿದಿರಿ. ಈಗ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಮಹಿಳೆಯರು ಪರದಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

ಎತ್ತಿನಹೊಳೆ ಯೋಜನೆ ಮಂಜೂರು ಮಾಡಿದ್ದು ಮಾಜಿ ಸಿಎಂ ಜಗದೀಶ ಶೆಟ್ಟರ್. ಆದರೆ ಈಗ ಎತ್ತಿನಹೊಳೆ ಯೋಜನೆ ಪೈಪ್​​ಗಳು ತುಕ್ಕು ಹಿಡಿದಿವೆ. ಕಾಂಗ್ರೆಸ್​ನವರು ಎತ್ತಿನಹೊಳೆಗೆ ಪ್ರಾಮುಖ್ಯತೆ ಕೊಡುತ್ತಿಲ್ಲ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಇರಲ್ಲ ಎಂದು ಕಿಡಿಕಾರಿದ್ದಾರೆ.

400 ಎಂಪಿ ಗೆಲ್ಲುವ ಬಗ್ಗೆ ಮೋದಿ ಸಂಕಲ್ಪ ಮಾಡಿದ್ದಾರೆ: ಹೆಚ್​ಡಿ ದೇವೇಗೌಡ 

ನನಗೆ 93 ವರ್ಷ ವಯಸ್ಸು ಆಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಸವಾಲು ಹಾಕಿ‌ ನಾನು ಸೋತಿದ್ದೆ. ಸವಾಲಿನಂತೆ ಸಂಸದನ ಸ್ಥಾನಕ್ಕೆ ರಾಜೀನಾಮೆಗೆ ಮುಂದಾಗಿದ್ದೆ. ಆದರೆ ಮೋದಿ ನನ್ನ ಅನುಭವ ಬಳಸಿಕೊಳ್ಳಲು ನೀವು ಸಂಸತ್​​ನಲ್ಲಿ ಇರಬೇಕು ಎಂದಿದ್ದರು. ಆದರೆ ಈ ಭಾರಿ 400 ಎಂಪಿ ಗೆಲ್ಲುವ ಬಗ್ಗೆ ಮೋದಿ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಸನಾತನ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದ ಅರವಿಂದ ಲಿಂಬಾವಳಿ

ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಮಾತನಾಡಿದ್ದು, ಮಾಲೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಎಡಗೈಯಲ್ಲಿ ದೀಪ ಅಂಟಿಸುವುರ ಮೂಲಕ ರಾಹುಲ್ ಗಾಂಧಿ ಸನಾತನ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಬಂಡೇಪ್ಪ ಕಾಶಂಪುರ ಮಾತನಾಡಿ ಕುರುಬ ಸಮಾಜ ಸಿದ್ದರಾಮಯ್ಯ ಬದಲು ಮೋದಿಯನ್ನು ಬೆಂಬಲಿಸಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಏಪ್ರಿಲ್​ 20ಕ್ಕೆ ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ ಭೇಟಿ: NH 44 ಬಂದ್, ಮಾರ್ಗ ಬದಲಾವಣೆ ಇಲ್ಲಿದೆ​

ಚುನಾವಣೆ ಬಳಿಕ ಕಾಂಗ್ರೆಸ್ ಗ್ಯಾರಂಟಿ ಯೋಜನೆ ರದ್ದು ಮಾಡುತ್ತಾರೆ ಎಂಬ ಬಿಜೆಪಿಗರ ಹೇಳಿಕೆ ವಿಚಾರವಾಗಿ ಮಾಗಡಿ ಕಾಂಗ್ರೆಸ್ ಶಾಸಕ ಎಚ್​ಸಿ ಬಾಲಕೃಷ್ಣ ಪ್ರತಿಕ್ರಿಯಿಸಿದ್ದು, ಅವರ ಯೋಗ್ಯತೆ ಅವರೆಲ್ಲರೂ ಅಪಪ್ರಚಾರದವರೆ. ಕಾಂಗ್ರೆಸ್​​ನವರು ಜನತಾದಳ ಇಬ್ಬರು ಅಪಪ್ರಚಾರದವರು. ಬಾಯ್ತಪ್ಪಿ ಬಿಜೆಪಿ ಅಪಪ್ರಚಾರ ಮಾಡುತ್ತಾರೆ ಎಂಬುದಕ್ಕೆ ಬದಲಾಗಿ ಕಾಂಗ್ರೆಸ್ ಜನತಾದಳದವರು ಅಪಪ್ರಚಾರ ಮಾಡುವವರು ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.