AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡಾಯ ಅಭ್ಯರ್ಥಿ ನಾಮಪತ್ರ ತಿರಸ್ಕೃತ, ನಿಟ್ಟುಸಿರು ಬಿಟ್ಟ ಬಿಜೆಪಿ: ಬಿವಿ ನಾಯಕ್ ಮುಂದಿನ ನಡೆ ನಿಗೂಢ

ರಾಯಚೂರಿಗೆ ಆಗಮಿಸಿದ್ದ ಅಗರವಾಲ್ ಬಿವಿ ನಾಯಕ್​ ಮನವೊಲಿಸಿ ಅವರ ಮೂಲಕವೇ ರಾಜಾ ಅಮರೇಶ್ವರ ನಾಯಕ್​ಗೆ ಬಿ ಫಾರ್ಮ್ ಕೊಡಿಸಿದ್ದರು. ಇದಾದ ಬಳಿಕ ಎಲ್ಲವೂ ತಣ್ಣಗಾಯ್ತು ಅಂತ ಭಾವಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಬಿಜೆಪಿ ಸಂಸದ ಹಾಗೂ ಘೋಷಿತ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ, ಬಿವಿ ನಾಯಕ್ ಬಂಡಾಯವೆದ್ದು ಅಜ್ಞಾತ ಸ್ಥಳದಿಂದಲೇ ತಮ್ಮ ಸೂಚಕರ ಮೂಲಕ ನಾಮಪತ್ರ ಸಲ್ಲಿಸಿದ್ದರು. ಅಚ್ಚರಿ ಅಂದ್ರೆ ಬಿವಿ ನಾಯಕ್ ಕೂಡ ಬಿಜೆಪಿಯಿಂದಲೇ ನಾಮಪತ್ರ ಸಲ್ಲಿಸಿದ್ದರು.

ಬಂಡಾಯ ಅಭ್ಯರ್ಥಿ ನಾಮಪತ್ರ ತಿರಸ್ಕೃತ, ನಿಟ್ಟುಸಿರು ಬಿಟ್ಟ ಬಿಜೆಪಿ: ಬಿವಿ ನಾಯಕ್ ಮುಂದಿನ ನಡೆ ನಿಗೂಢ
ಬಿವಿ ನಾಯಕ್
ಭೀಮೇಶ್​​ ಪೂಜಾರ್
| Edited By: |

Updated on: Apr 26, 2024 | 10:50 PM

Share

ರಾಯಚೂರು, ಏಪ್ರಿಲ್​ 26: ಗಡಿ ಜಿಲ್ಲೆ ರಾಯಚೂರಿನಲ್ಲಿ ಬಿಜೆಪಿ (BJP) ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಬಿವಿ ನಾಯಕ್ (B. V. Nayak) ನಾಮಪತ್ರ ತಿರಸ್ಕೃತಗೊಂಡಿದೆ. ಬಿಜೆಪಿ ಪಕ್ಷದಿಂದಲೇ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆ ತಾಂತ್ರಿಕ ಕಾರಣಗಳಿಂದ ನಾಮಪತ್ರ ರಿಜೆಕ್ಟ್ ಆಗಿದ್ದು, ಇತ್ತ ಬಿಜೆಪಿ ಪಾಳಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ ಬಿವಿ ನಾಯಕ್ ಮುಂದಿನ ನಡೆ ಮಾತ್ರ ನಿಗೂಢವಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ಹಿನ್ನೆಲೆ ಬಿವಿ ನಾಯಕ್​ ಕೆರಳಿದ್ದರು.  ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದ ಬಿವಿ ನಾಯಕ್ ರಾಜ್ಯ,ಕೇಂದ್ರ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಆದರೆ ಇದರಿಂದ ಟಿಕೆಟ್ ಬದಲಾವಣೆ ಆಗಿರಲಿಲ್ಲ.

ಈ ಮಧ್ಯೆ ಬಿವಿ ನಾಯಕ್ ಬಂಡಾಯ ತಣಿಸಲು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಅಗರವಾಲ್ ಹರಸಾಹಸ ಪಟ್ಟಿದ್ದರು. ಖುದ್ದು ರಾಯಚೂರಿಗೆ ಆಗಮಿಸಿದ್ದ ಅಗರವಾಲ್ ಬಿವಿ ನಾಯಕ್​ ಮನವೊಲಿಸಿ ಅವರ ಮೂಲಕವೇ ರಾಜಾ ಅಮರೇಶ್ವರ ನಾಯಕ್​ಗೆ ಬಿ ಫಾರ್ಮ್ ಕೊಡಿಸಿದ್ದರು. ಇದಾದ ಬಳಿಕ ಎಲ್ಲವೂ ತಣ್ಣಗಾಯ್ತು ಅಂತ ಭಾವಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಬಿಜೆಪಿ ಸಂಸದ ಹಾಗೂ ಘೋಷಿತ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ, ಬಿವಿ ನಾಯಕ್ ಬಂಡಾಯವೆದ್ದು ಅಜ್ಞಾತ ಸ್ಥಳದಿಂದಲೇ ತಮ್ಮ ಸೂಚಕರ ಮೂಲಕ ನಾಮಪತ್ರ ಸಲ್ಲಿಸಿದ್ದರು. ಅಚ್ಚರಿ ಅಂದ್ರೆ ಬಿವಿ ನಾಯಕ್ ಕೂಡ ಬಿಜೆಪಿಯಿಂದಲೇ ನಾಮಪತ್ರ ಸಲ್ಲಿಸಿದ್ದರು.

ಇದನ್ನೂ ಓದಿ: ರಾಯಚೂರಿನಲ್ಲಿ ನಿಲ್ಲದ ಬಿವಿ ನಾಯಕ್ ಬಂಡಾಯ! ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದರ ವಿರುದ್ಧ ಸುಳ್ಳು ಜಾತಿ ಆರೋಪ

ಇಂದು ನಾಮಪತ್ರ ಹಿಂಪಡೆಯಲು ಕೊನೆದಿನವಾದ್ದರಿಂದ ಅದು ಕೂಡ ಮುಕ್ತಾಯಗೊಂಡಿದೆ. ನಾಮಪತ್ರ ಪರಿಷ್ಕರಣೆ ವೇಳೆ ಬಿವಿ ನಾಯಕ್ ನಾಮಪತ್ರ ತಿರಸ್ಕೃತಗೊಂಡಿದೆ. ಬಿಜೆಪಿಯಿಂದಲೇ ಬಿವಿ ನಾಯಕ್ ನಾಮಪತ್ರ ಸಲ್ಲಿಸಿದ್ರಿಂದ ಎ,ಬಿ ಫಾರ್ಮ್ ಇರಲಿಲ್ಲ. ಒಂದು ವೇಳೆ ಫಾರ್ಮ್ ಇಲ್ಲದ ಪಕ್ಷದಲ್ಲಿ 10 ಜನ ಸೂಚಕರು ಇವರ ಪರ ಇರಬೇಕು. ಆದರೆ ಬಿವಿ ನಾಯಕ್ ಪರ ಓರ್ವ ಸೂಚಕ ಮಾತ್ರ ಇದ್ದರು. ಇದೇ ಕಾರಣಕ್ಕೆ ನಾಮಪತ್ರ ತಿರಸ್ಕೃತಗೊಂಡಿದೆ ಅಂತ ಜಿಲ್ಲಾ ಚುನಾವಣಾಧಿಕಾರಿ ಚಂದ್ರಶೇಖರ್ ನಾಯಕ್ ಹೇಳಿದ್ದಾರೆ.

ಇತ್ತ ಬಂಡಾಯ ಅಭ್ಯರ್ಥಿ ಬಿವಿ ನಾಯಕ್​ ನಾಮಪತ್ರ ತಿರಸ್ಕೃತಗೊಂಡಿರೊ ಹಿನ್ನೆಲೆ ಜಿಲ್ಲಾ ಬಿಜೆಪಿ ಪಾಳಯ ನಿಟ್ಟುಸಿರು ಬಿಟ್ಟಿದೆ. ಬಿವಿ ನಾಯಕ್​ರ ಬಂಡಾಯದಿಂದ ಕ್ಷೇತ್ರದಲ್ಲಿ ನೆಗೆಟಿವ್​ ವೇವ್ ಶುರುವಾಗಿತ್ತು. ಆದ್ರೀಗ ನಾಮಪತ್ರ ತಿರಸ್ಕೃತಗೊಂಡಿರೊ ಹಿನ್ನೆಲೆ ಬಿಜೆಪಿ ಪಾಳಯಕ್ಕೆ ಮತ್ತಷ್ಟು ಶಕ್ತಿಬಂದಂತಾಗಿದೆ. ಈಗಾಗಲೇ ವರಿಷ್ಠರ ಸಂಧಾನಕ್ಕೆ ಒಪ್ಪಿದ್ದ ಬಿವಿ ನಾಯಕ್​ ಇನ್ಮುಂದೆ ಬಿಜೆಪಿ ಪರ ಪ್ರಚಾರಕ್ಕಿಳುತ್ತಾರೆ ಅಂತ ಬಿಜೆಪಿ ಮೂಲಗಳು ಹೇಳಿವೆ. ಆದರೆ ಈ ಬಗ್ಗೆ ಪ್ರತಿಕ್ರಿಯೆಗೆ ಬಿವಿ ನಾಯಕ್ ಸಿಕ್ಕಿಲ್ಲ.

ಇದನ್ನೂ ಓದಿ: ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ್​ರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದ ಕಾರ್ಯಕರ್ತನಿಂದ ಕ್ಷಮೆಯಾಚನೆ

ಬಿವಿ ನಾಯಕ್ ರನ್ನ ಶತಾಯಗತಾಯ ಫಿಲ್ಡ್​ಗೆ ಕರೆತಂದು ಕ್ಯಾಂಪೇನ್ ಮಾಡ್ಬೇಕು ಅಂತ ಜಿಲ್ಲಾ ಘಟಕ ಹರಸಾಹಸ ಪಡ್ತಿದೆ. ಈ ಮಧ್ಯೆ ಬಿವಿ ನಾಯಕ್ ನಾಮಪತ್ರದ ಕುರಿತು ಪ್ರತಿಕ್ರಿಯೆ ನೀಡಲು ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ್ ನಾಯಕ್ ನಿರಾಕರಿಸಿದ್ದು, ಅದು ಅವರ ವೈಯಕ್ತಿಕ ಅಂತ ಹೇಳ್ತಿದ್ದಾರೆ. ಒಟ್ಟಿನಲ್ಲಿ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು ಬಿವಿ ನಾಯಕ್ ಬಿಜೆಪಿ ಪರ ಬ್ಯಾಟ್ ಬೀಸ್ತಾರಾ, ಇಲ್ಲಾ ಒಳಹೊಡೆತ ಕೊಡ್ತಾರಾ ಅನ್ನೋದೇ ಕುತೂಹಲ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ