ವಿಜಯಪುರ: ಅವಧಿಗೂ ಮುನ್ನ ಹೆರಿಗೆ; 575 ಗ್ರಾಂ ತೂಕದ ಹೆಣ್ಣು ಶಿಶು ಜನನ

ಅವಧಿ ಪೂರ್ವ ಅಂದರೆ ಏಳು ತಿಂಗಳಿಗೆ ಹೆರಿಗೆಯಾಗಿ ಅತೀ ಕಡಿಮೆ 575 ಗ್ರಾಂ ತೂಕದ ಹೆಣ್ಣು ಶಿಶು ಜನನವಾಗಿದೆ. ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಮಗುವನ್ನು ತಂದಾಗ ಈ ಮಗು ಬದುಕುಳಿಯೋದು ವಿರಳೆಂದು ಅಲ್ಲಿನ ವೈದ್ಯರು ಹೇಳಿದ್ದಾರೆ. ಅಲ್ಲಿಂದ ಮಗುವನ್ನು ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಗುವಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯಪುರ: ಅವಧಿಗೂ ಮುನ್ನ ಹೆರಿಗೆ;  575 ಗ್ರಾಂ ತೂಕದ ಹೆಣ್ಣು ಶಿಶು ಜನನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Jun 27, 2021 | 4:32 PM

ವಿಜಯಪುರ: ಮಕ್ಕಳಿದ್ದ ಮನೆಗೆ ಬೀಸಣಿಕೆ ಯಾತಕ್ಕ ಕೂಸು ಕಂದಮ್ಮ ಒಳಗೋಡಿ ಬಂದರ ಸುಳಿದಾವ ತಂಗಾಳಿ ಎಂಬ ಜಾನಪದ ಹಾಡು ಮಕ್ಕಳ ಬಗ್ಗೆ ವರ್ಣನೆ ಮಾಡಿದೆ. ಆದರೆ ಬದಲಾದ ಕಾಲ ಘಟ್ಟದಲ್ಲಿ ಈಗ ಮನೆಗೊಂದು ಮಗು ಎಂಬಂತಾಗಿದೆ. ಇರುವ ಒಂದು ಮಗುವನ್ನು ಬಹಳ ಮುದ್ದಿನಿಂದಲೇ ಪೋಷಣೆ ಮಾಡಲಾಗುತ್ತದೆ. ಮಕ್ಕಳ ಖುಷಿಗಾಗಿಯೇ ತಂದೆ- ತಾಯಿ ತಮ್ಮ ಜೀವನವನ್ನು ಮಿಸಲಿರಿಸುತ್ತಾರೆ. ಆದರೆ ಇತ್ತೀಚೆಗೆ ಮಕ್ಕಳು ಹುಟ್ಟುತ್ತಲೇ ನಾನಾ ಕಾಯಿಲೇಗಳನ್ನು ಹೊತ್ತು ತರುತ್ತವೆ. ಇಲ್ಲವೆ ಅವಧಿಗೂ ಮುನ್ನ ಜನಿಸುತ್ತವೆ. ಇಂತಹದ್ದೇ ಸನ್ನಿವೇಶವೊಂದು ವಿಜಯಪುರದಲ್ಲಿ ನಡೆದಿದ್ದು, ಅವಧಿಗೂ ಪೂರ್ವ ಹಾಗೂ ಕಡಿಮೆ ತೂಕದ ಶಿಶು ಜನಿಸಿದ್ದು, ಜಿಲ್ಲಾ ಮಟ್ಟಿಗೆ ದಾಖಲೆಯಾದ ಅತೀ ಕಡಿಮೆ ತೂಕದ ಮಗು ಇದಾಗಿದೆ.

ಅವಧಿ ಪೂರ್ವ ಹಾಗೂ ಅತ್ಯಂತ ಕಡಿಮೆ ತೂಕವುಳ್ಳ ಶಿಶು ಜನಿಸಿದರೆ ಬದುಕುಳಿಯೋದು ತುಂಬಾ ವಿರಳ. ಇದು ವೈದ್ಯಕೀಯ ಲೋಕಕ್ಕೆ ತಿಳಿದಿರುವ ಸಂಗತಿ. ತಾಯಿಯಲ್ಲಿ ಪೌಷ್ಟಿಕಾಂಶ ಇಲ್ಲದೆ ಇರುವುದು, ಪೋಷಕಾಂಶದ ಕೊರತೆ, ಸಂಬಂಧಿಕರಲ್ಲಿ ಮದುವೆ, ಆನುವಂಶಿಕತೆ ಸೇರಿದಂತೆ ಇತರೆ ಕಾರಣದಗಳಿಂದ, ಅವಧಿ ಪೂರ್ವ, ಕಡಿಮೆ ತೂಕದ ಶಿಶು ಜನಿಸುತ್ತದೆ. ಸದ್ಯ ಕಳೆದ 11 ದಿನಗಳ ಹಿಂದೆ ಜನಿಸಿರುವ ಅತೀ ಕಡಿಮೆ ತೂಕದ ಶಿಶುವೊಂದು ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ. ಕಳೆದ ಜೂನ್ 15 ರಂದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದಲ್ಲಿ ಜಿಲ್ಲೆಯ ಇತಿಹಾಸದಲ್ಲಿಯೇ ಅತೀ ಕಡಿಮೆ ತೂಕದ ಶಿಶು ಜನ್ಮ ತಾಳಿತ್ತು.

ಜಾಲವಾದ ಗ್ರಾಮದ ಬಸಮ್ಮ-ಮಾಂತೇಶ ನಾಯ್ಕೋಡಿ ದಂಪತಿಗಳ ಮೊದಲ ಮಗು ಮನೆಯಲ್ಲೇ ಜನಿಸಿತ್ತು. ಇದಕ್ಕೂ ಮುನ್ನ ಬಸಮ್ಮ ದೇವರಹಿಪ್ಪರಗಿ ಹಾಗೂ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, ಅಲ್ಲಿನ ವೈದ್ಯರು ಗರ್ಭಕೋಶದಲ್ಲಿ ನೀರಿನ ಪ್ರಮಾಣ ಕಡಿಮೆಯಿದೆ. ಅವಧಿ ಪೂರ್ವ ಹೆರಿಗೆಯಾಗುವ ಸಂಭವವಿದೆ ಎಂದು ಹೇಳಿದ್ದರೆ. ಇದಾದ ಬಳಿಕ ಬಸಮ್ಮನಿಗೆ ಮನೆಯಲ್ಲಿಯೇ ಹೆರಿಗೆಯಾಗಿದೆ. ಅವಧಿ ಪೂರ್ವ ಅಂದರೆ ಏಳು ತಿಂಗಳಿಗೆ ಹೆರಿಗೆಯಾಗಿ ಅತೀ ಕಡಿಮೆ 575 ಗ್ರಾಂ ತೂಕದ ಹೆಣ್ಣು ಶಿಶು ಜನನವಾಗಿದೆ. ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಮಗುವನ್ನು ತಂದಾಗ ಈ ಮಗು ಬದುಕುಳಿಯೋದು ವಿರಳೆಂದು ಅಲ್ಲಿನ ವೈದ್ಯರು ಹೇಳಿದ್ದಾರೆ. ಅಲ್ಲಿಂದ ಮಗುವನ್ನು ಜಿಲ್ಲಾ ಆಸ್ಪತ್ರೆಯ ತಾಯಿ ಮತ್ತು ಮಗುವಿನ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೀಗೆ ಅವಧಿ ಪೂರ್ವವಾಗಿ ಜನಿಸಿದ ಈ ಶಿಶುವಿನ ತೂಕವೂ ಸಹ ಅತೀ ಕಡಿಮೆಯಿದೆ. ಶಿಶುವಿನ ತೂಕ ಕೇವಲ 575 ಗ್ರಾಂ ಇದೆ. ಅವಧಿಗೂ ಮುನ್ನ ಹಾಗೂ ಒಂದು ಕೆಜಿ ತೂಕದೊಳಗಿನ ಮಕ್ಕಳು ನಮ್ಮ ದೇಶದಲ್ಲಿ ಹೆಚ್ಚಾಗಿ ಬದುಕುಳಿಯೋದು ಕಷ್ಟಕರ. ಅವಧಿ ಪೂರ್ವ ಹೆರಿಗೆ ಹಾಗೂ ಕಡಿಮೆ ತೂಕದ ಶಿಶು ಜನನವಾದ ಕಾರಣ ಮಗುವನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿನ ನವಜಾತ ಶಿಶು ಆರೈಕೆ ಕೇಂದ್ರದಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿರುವ SNCU ( Special Newborn Care Unit ) ನಲ್ಲಿ ಕಳೆದ11 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಈ ನವಜಾತ ಶಿಶು ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ಶಿಶು ತಜ್ಞೆ ಡಾ ಲಕ್ಷ್ಮಿ ತಿಳಿಸಿದ್ದಾರೆ.

ಅವಧಿ ಪೂರ್ವ ಹಾಗೂ ಕಡಿಮೆ ತೂಕದ ಶಿಶು ಚಿಕಿತ್ಸೆಗೆ ಸ್ಪಂಧಿಸುತ್ತಿರುವುದು ನಮಗೂ ಸಂತಸವಾಗಿದೆ. ಮಗುವನ್ನು ಉಳಿಸಿಕೊಳ್ಳಲು ನಮ್ಮ ತಂಡ ಶ್ರಮವಹಿಸುತ್ತಿದೆ. ಜತೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಇಂಥಹ ಪ್ರಕರಣಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಮತ್ತಷ್ಟು ಸೌಲಭ್ಯಗಳನ್ನು ನೀಡಬೇಕು. ಆಧುನಿಕ ಸಲಕರಣೆಗಳು ಇಲ್ಲಿ ಅಗತ್ಯವಾಗಿದೆ. ಪ್ರೀ ಮೆಚ್ಯೂರ್ ಬೇಬಿಗಳಿಗೆ ಕೇವಲ ಚಿಕಿತ್ಸೆ ನೀಡಿ ಬದುಕಿಸುವುದು ಮುಖ್ಯವಲ್ಲ. ಅವರು ಚಿಕಿತ್ಸೆ ಬಳಿಕ ಇತರರಂತೆ ಸಹಜವಾಗಿರುವುದು ನಮ್ಮ ಆಶಯ ಎಂದು ಶಿಶು ತಜ್ಞೆ ಡಾ ಲಕ್ಷ್ಮಿ ಹೇಳಿದ್ದಾರೆ.

ಇನ್ನು ವಿಜಯಪುರ ಜಿಲ್ಲೆಯಲ್ಲಿ ಕಡಿಮೆ ತೂಕದ ಮಕ್ಕಳು ಜನನವಾಗುವ ಸಂಖ್ಯೆ ಹೆಚ್ಚಿದೆ. ಆದರೆ ಇಷ್ಟು ಕಡಿಮೆ ತೂಕದ ಮಗು ಜನನವಾಗಿದ್ದು, ಇಲ್ಲಿಯವರೆಗಿನ ದಾಖಲೆಯೇ ಆಗಿದೆ. ಈ ಹಿಂದೆ ಮುದ್ದೇಬಿಹಾಳ ತಾಲೂಕಿನ ಭಂಟನೂರ ಗ್ರಾಮದ ಸುನಿತಾ-ಸಂತೋಷ ಚಿಮ್ಮಲಗಿ ಎಂಬ ದಂಪತಿಗಳಿಗೂ ಕೇವಲ800 ಗ್ರಾಂ ತೂಕವುಳ್ಳ ಹೆಣ್ಣು ಮಗುವೊಂದು ಜನಿಸಿತ್ತು. ಆ ಮಗುವಿನ ತೂಕ ಗಣನೀಯವಾಗಿ ಏರಿಕೆಯಾಗಿದೆ. ಈಗ1200 ಗ್ರಾಂ ತೂಕ ಹೊಂದಿದ್ದು ಆ ಮಗು ಆರೋಗ್ಯವಾಗಿದೆ.

ಕೇಂದ್ರ ಸರ್ಕಾರದ ಕಾಯಕಲ್ಪ ಪ್ರಶಸ್ತಿಗೆ ಭಾಜವಾಗಿರುವ ವಿಜಯಪುರ ಜಿಲ್ಲಾಸ್ಪತ್ರೆ ಚಿಕಿತ್ಸೆ ನೀಡುವಲ್ಲಿಯೂ ಖ್ಯಾತಿ ಪಡೆದಿದೆ. ಸರ್ಕಾರಿ ಆಸ್ಪತ್ರೆ ಎಂದು ಮೂಗು ಮುರಿಯುವವರ ಮಧ್ಯೆ ಇಂಥ ವಿರಳಾತಿ ವಿರಳ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದೆ. ಸದ್ಯ ಕಡಿಮೆ ತೂಕವಿರುವ ಶಿಶು ಚಿಕಿತ್ಸೆಗೆ ಸ್ಪಂಧಿಸುತ್ತಿರುವುದು ಸಹ ವೈದ್ಯರ ಉತ್ಸಾವನ್ನು ಇಮ್ಮಡಿಗೊಳಿಸಿದೆ. ಆದಷ್ಟು ಬೇಗಾ ಮಗುವಿನ ಆರೋಗ್ಯ ಸುಧಾರಿಸಲಿ ಎಂಬುದು ನಮ್ಮೆಲ್ಲರ ಹಾರೈಕೆಯಾಗಿದೆ.

ಇದನ್ನೂ ಓದಿ:

ನವಜಾತ ಶಿಶುವಿಗೆ ಬ್ಲ್ಯಾಕ್ ಫಂಗಸ್​: ಆಪರೇಷನ್ ಮಾಡಿ ಮಗುವಿನ ಜೀವ ಉಳಿಸಿದ ವೈದ್ಯರು

One Child Policy: ‘ಒಂದು ಮಗು’ ನೀತಿ ರದ್ದುಪಡಿಸಿ 5 ವರ್ಷವಾಯ್ತು; ಆದರೂ ಚೀನಾದಲ್ಲಿ ಏರಿಕೆ ಆಗ್ತಿಲ್ಲ ಜನನ ಪ್ರಮಾಣ

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು