ಮಹಾಂತೇಶ ಕವಟಗಿಮಠಗೆ ಕೊರೊನಾ ಪಾಸಿಟಿವ್; ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗಿಯಾದ ನಾಯಕರಿಗೆ ಶುರುವಾಯ್ತು ಆತಂಕ

Mahantesh Kavatagimath: ಏಪ್ರಿಲ್ 3ರಂದು ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಹಾಂತೇಶ ಭಾಗಿಯಾಗಿದ್ದರು. ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರ ಬೈಲಹೊಂಗಲ, ಸವದತ್ತಿ, ರಾಮದುರ್ಗದಲ್ಲಿ ಪ್ರಚಾರ ನಡೆಸಿದ್ದರು. ಇದರಿಂದಾಗಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ನಾಯಕರಿಗೂ ಕೂಡ ಆತಂಕ ಸೃಷ್ಟಿಯಾಗಿದೆ.

ಮಹಾಂತೇಶ ಕವಟಗಿಮಠಗೆ ಕೊರೊನಾ ಪಾಸಿಟಿವ್; ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗಿಯಾದ ನಾಯಕರಿಗೆ ಶುರುವಾಯ್ತು ಆತಂಕ
ಕಮಲ ಅರಳಿಸಲು ಬಿಜೆಪಿ ನಾಯಕರ ಪ್ರಚಾರ
Follow us
preethi shettigar
| Updated By: Digi Tech Desk

Updated on:Apr 05, 2021 | 10:42 AM

ಬೆಳಗಾವಿ: ವಿಧಾನಪರಿಷತ್ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಫೇಸ್‌ಬುಕ್​ನಲ್ಲಿ ಪೋಸ್ಟ್ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಿನ್ನೆ ಕೊವಿಡ್ ಟೆಸ್ಟ್ ಮಾಡಿಸಿದ ವೇಳೆ ಮಹಾಂತೇಶ ಅವರಿಗೆ ಸೋಂಕು ದೃಢಪಟ್ಟಿತ್ತು. ಸದ್ಯ ವೈದ್ಯರ ಸಲಹೆಯಂತೆ ಖಾಸಗಿ ಆಸ್ಪತ್ರೆಗೆ ಕವಟಗಿಮಠ ಅವರನ್ನು ದಾಖಲು ಮಾಡಲಾಗಿದೆ. ಇನ್ನು ಏಪ್ರಿಲ್ 3 ರಂದು ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಹಾಂತೇಶ ಭಾಗಿಯಾಗಿದ್ದರು. ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಪರ ಬೈಲಹೊಂಗಲ, ಸವದತ್ತಿ, ರಾಮದುರ್ಗದಲ್ಲಿ ಪ್ರಚಾರ ನಡೆಸಿದ್ದರು. ಇದರಿಂದಾಗಿ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದ ನಾಯಕರಿಗೂ ಕೂಡ ಆತಂಕ ಸೃಷ್ಟಿಯಾಗಿದೆ.

ಕೋಲಾರದ ಗಾರ್ಮೆಂಟ್ಸ್​ನ 33 ಉದ್ಯೋಗಿಗಳಲ್ಲಿ ಕೊರೊನಾ ಸೋಂಕು ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು ಹಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ವೇಗವಾಗಿ ಹಬ್ಬಲು ಆರಂಭಿಸಿದೆ. ಕೋಲಾರ ತಾಲ್ಲೂಕು ಬೆತ್ತನಿ ಗ್ರಾಮದ ಬಳಿ ಇರುವ ಶಾಹಿ ಗಾರ್ಮೆಂಟ್ಸ್​ನ 33 ಉದ್ಯೋಗಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾರ್ಮೆಂಟ್ಸ್​ನ ಒಟ್ಟು 900 ಜನರಿಗೆ ಕೊವಿಡ್​ ಟೆಸ್ಟ್​ ಮಾಡಿಸಲಾಗಿದ್ದು, ಆ ಪೈಕಿ 33 ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.

ಅನಾಥಾಶ್ರಮದ 27 ಮಕ್ಕಳಿಗೆ ಕೊರೊನಾ ಸೋಂಕು ಇನ್ನೊಂದೆಡೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಅತ್ತಿಗಿರಿಕುಪ್ಪ ಬಳಿಯಿರುವ ಅನಾಥಾಶ್ರಮದ 27 ಮಕ್ಕಳಿಗೆ ಕೊವಿಡ್​ ಸೋಂಕು ದೃಢಪಟ್ಟಿದ್ದು, ಆತಂಕ ಮೂಡಿಸಿದೆ. ಅನಾಥಾಶ್ರಮದ ಒಬ್ಬ ವಿದ್ಯಾರ್ಥಿನಿಗೆ ಕೆಮ್ಮು, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲಾ ಮಕ್ಕಳಿಗೂ ಕೊವಿಡ್ ಟೆಸ್ಟ್ ಮಾಡಿಸಲಾಗಿದೆ. ಬಜೇರಿಯಾ ಟ್ರಸ್ಟ್​ನಿಂದ ನಡೆಸುತ್ತಿರುವ ಅನಾಥಾಶ್ರಮದಲ್ಲಿ 60ಕ್ಕೂ ಹೆಚ್ಚು ಮಕ್ಕಳಿದ್ದು, ಆ ಪೈಕಿ 27 ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಪಾಸಿಟಿವ್​ ಬಂದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಆಶ್ರಮವನ್ನು ಕಂಟೈನ್ಮೆಂಟ್​ ಜೋನ್ ಮಾಡಿದ್ದಾರೆ.

ಇದನ್ನೂ ಓದಿ: 

ಕೊರೊನಾ ವಿರುದ್ಧ ಸೂಕ್ತ ನಡವಳಿಕೆಯ ಬಗ್ಗೆ ಏಪ್ರಿಲ್ 6ರಿಂದ 21ರವರೆಗೆ ಜಾಗೃತಿ ಅಭಿಯಾನ: ಪ್ರಧಾನಿ ನರೇಂದ್ರ ಮೋದಿ

Karnataka Covid-19 Update: ಕರ್ನಾಟಕದಲ್ಲಿ ಇಂದು 4,553 ಜನರಿಗೆ ಕೊರೊನಾ ದೃಢ; ಬೆಂಗಳೂರಲ್ಲಿ 2787 ಪ್ರಕರಣ ದಾಖಲು

Published On - 10:17 am, Mon, 5 April 21