AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: ಮತ್ತಷ್ಟು ಡಿವೈಎಸ್​ಪಿ-ಇನ್‌ಸ್ಪೆಕ್ಟರ್‌ಗಳ ದಿಢೀರ್‌ ವರ್ಗಾವಣೆ

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಭಾರೀ ವರ್ಗಾವಣೆ ನಡೆದಿದೆ. ಮೊನ್ನೆ ಅಷ್ಟೇ 293 ಇನ್ಸ್‌ಪೆಕ್ಟರ್‌ಗಳು ಹಾಗೂ 74 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದರ ಬೆನ್ನಲ್ಲೇ ಇನ್ನಷ್ಟು ಅಂದರೆ 12 ಡಿವೈಎಸ್​ಪಿ, 87 ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆ ಮಾಡಲಾಗಿದೆ. ಹಲವು ದಿನಗಳಿಂದ ಸ್ಥಳ ನಿರೀಕ್ಷಣೆಯಲ್ಲಿದ್ದ ಅಧಿಕಾರಿಗಳಿಗೆ ಹೊಸ ಪೋಸ್ಟಿಂಗ್ ನೀಡಲಾಗಿದೆ. ಜೊತೆಗೆ ಈ ಹಿಂದೆ ಮಾಡಲಾಗಿದ್ದ ಕೆಲವರ ವರ್ಗಾವಣೆ ಆದೇಶಗಳನ್ನು ಮಾರ್ಪಡಿಸಿ, ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ.

ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ: ಮತ್ತಷ್ಟು ಡಿವೈಎಸ್​ಪಿ-ಇನ್‌ಸ್ಪೆಕ್ಟರ್‌ಗಳ ದಿಢೀರ್‌ ವರ್ಗಾವಣೆ
Karnataka Police
ಶಿವಪ್ರಸಾದ್​ ಬಿ.
| Edited By: |

Updated on: May 13, 2026 | 7:26 PM

Share

ಬೆಂಗಳೂರು, (ಮೇ 13): ಕರ್ನಾಟಕ ರಾಜ್ಯ ಪೊಲೀಸ್ (Karnataka Police) ಇಲಾಖೆಯಲ್ಲಿ ಡಿವೈಎಸ್ಪಿ ಹಾಗೂ ಇನ್ಸ್​​ಪೆಕ್ಟರ್​​​ಗಳ ವರ್ಗಾವಣೆ ಮುಂದುವರೆದಿದೆ . ಕಳೆದ ಎರಡು ದಿನಗಳಿಂದ ಅಷ್ಟೇ ರಾಜ್ಯ ಸರ್ಕಾರ ಬರೋಬ್ಬರಿ 293 ಇನ್ಸ್‌ಪೆಕ್ಟರ್‌ಗಳು ಹಾಗೂ 74 ಡಿವೈಎಸ್‌ಪಿಗಳನ್ನು ವರ್ಗಾವಣೆ ಮಾಡಿತ್ತು. ಇದರ ಬೆನ್ನಲ್ಲೇ ಇಂದು (ಮೇ 13) ಮತ್ತೆ 12 ಡಿವೈಎಸ್​ಪಿ, 87 ಪೊಲೀಸ್ ಇನ್ಸ್​ಪೆಕ್ಟರ್​ಗಳನ್ನು (ಸಿವಿಲ್) ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕರು (ಡಿಜಿ- ಐಜಿಪಿ) ಆದೇಶ ಹೊರಡಿಸಿದ್ದಾರೆ.

  • ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮುಂದುವರೆದ ಡಿವೈಎಸ್ಪಿ ಹಾಗೂ ಇನ್ಸ್​​ಪೆಕ್ಟರ್​​​ಗಳ ವರ್ಗಾವಣೆ.
  • 87 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ 12 ಡಿವೈಎಸ್‌ಪಿ ವರ್ಗಾವಣೆ.
  • ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕರಿಂದ ಆದೇಶ.
  • ಎರಡು ದಿನದಿಂದ ಅಷ್ಟೇ 293 ಇನ್ಸ್‌ಪೆಕ್ಟರ್ ಹಾಗೂ 74 ಡಿವೈಎಸ್‌ಪಿಗಳನ್ನ ವರ್ಗಾವಣೆ ಮಾಡಲಾಗಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಮೂವರು ಹಿರಿಯ IPS, ನಾಲ್ವರು IAS ಅಧಿಕಾರಿಗಳ ವರ್ಗಾವಣೆ: ಯಾರು ಎಲ್ಲಿಗೆ? ಇಲ್ಲಿದೆ ವಿವರ

ಮೇ 10, 2026ರಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿಯ (Police Establishment Board) ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಈ ವರ್ಗಾವಣೆ ಆದೇಶಗಳನ್ನು ಹೊರಡಿಸಲಾಗಿದೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಸೇವೆಯ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿದುಬಂದಿದ್ದು, ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ಹಳೆಯ ಹುದ್ದೆಗಳಿಂದ ಬಿಡುಗಡೆಗೊಂಡು, ನಿಯೋಜಿತ ಹೊಸ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

ವರ್ಗಾವಣೆಗೊಂಡ ಡಿವೈಎಸ್‌ಪಿಗಳ ಪಟ್ಟಿ

  • ಉಮಾಶಂಕರ್ ಬಿ: ಬಿ.ಎಂ.ಟಿ.ಎಫ್, ಬೆಂಗಳೂರು.
  • ಪ್ರಭಾವತಿ ಪಾಂಡುರಂಗ: ಸಿಐಡಿಯಿಂದ ಮಲ್ಲೇಶ್ವರಂ ಉಪ ವಿಭಾಗ, ಬೆಂಗಳೂರು ನಗರ.
  • ದೀಪಕ್ ಸಿ.ವಿ: ಸಿಸಿಬಿಯಿಂದ ಚಿಕ್ಕಪೇಟೆ ಉಪ ವಿಭಾಗಕ್ಕೆ ವರ್ಗ.
  • ರಮೇಶ್ ಜಿ.ಆರ್-ಡಿಸಿಆರ್​​ಇಗೆ ವರ್ಗಾವಣೆ
  • ಗೀತಾ ಸಿ.ಆರ್: ರಾಜ್ಯ ಗುಪ್ತವಾರ್ತೆಯಿಂದ ರಾಮನಗರದ ಸಿ.ಸಿ.ಪಿ.ಎಸ್
  • ಮೇರಿ ಶೈಲಜಾ: ಎ.ಎನ್.ಟಿ.ಎಫ್ ಯಿಂದ ಸಿಐಡಿಗೆ ವರ್ಗ
  • ಶಿವಶಂಕರ ರೆಡ್ಡಿ ಬಿ: ರಾಜ್ಯ ಗುಪ್ತವಾರ್ತೆಯಿಂದ ಸಿ.ಸಿ.ಪಿ.ಎಸ್, ಆಗ್ನೇಯ ವಿಭಾಗ, ಬೆಂಗಳೂರು ನಗರ
  • ಪವನ್ ಎನ್: ಬೆಂಗಳೂರು ಸಿ.ಸಿ.ಪಿ.ಎಸ್, ಆಗ್ನೇಯ ವಿಭಾಗದಿಂದ ಸಿಐಡಿಗೆ ವರ್ಗಾವಣೆ
  • ವಜೀರ್ ಅಲಿ ಖಾನ್: ಹಿಂದಿನ ವರ್ಗಾವಣೆ ರದ್ದುಪಡಿಸಿ ಕೆ.ಎಸ್.ಹೆಚ್.ಆರ್.ಸಿಯಲ್ಲೇ ಮುಂದುವರಿಕೆ
  • ಸುಧೀರ್ ಎಂ ಹೆಗಡೆ: ವರ್ಗಾವಣೆ ರದ್ದುಪಡಿಸಿ, ಪ್ರಸ್ತುತ ಹುದ್ದೆಯಲ್ಲೇ (ಸಿ.ಐ.ಡಿ) ಮುಂದುವರಿಕೆ
  • ಅಂಜುಮಾಲಾ ಶಿವಣ್ಣ ನಾಯಕ್: ಸಿಐಡಿಯಿಂದ ಬೆಂಗಳೂರು ನಗರ ಸಂಚಾರ ಕೇಂದ್ರ ಉಪ ವಿಭಾಗಕ್ಕೆ ವರ್ಗ.
  • ಶಶಿಕಲಾ ಎಸ್.ಪಿ: ಬೆಂಗಳೂರು ನಗರ ಸಂಚಾರ ಕೇಂದ್ರ ಉಪ ವಿಭಾಗದಿಂದ ಸಿಐಡಿಗೆ ವರ್ಗಾವಣೆ.

ಕರ್ನಾಟಕದ ಮತ್ತಷ್ಟು  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಕೆಪಿಎಸ್ಸಿ ರದ್ದುಗೊಳಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ: ಕಾರಣ ಇಲ್ಲಿದೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಮತ್ತೊಮ್ಮೆ ಚರ್ಚೆಗೆ ಗ್ರಾಸವಾದ ಸಚಿವ ಬಸವರಾಜ ರಾಯರೆಡ್ಡಿ ನಡೆ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ಈರುಳ್ಳಿ ತುಂಬಿದ್ದ ಕ್ಯಾಂಟರ್ ನಡು ರಸ್ತೆಯಲ್ಲೇ ಪಲ್ಟಿ
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ದೆಹಲಿಯಲ್ಲಿ ಮಲೇಷ್ಯಾ ಪ್ರಧಾನಿ ಹಿಂದಿ ಸಾಂಗ್ ಮ್ಯಾಜಿಕ್
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ಜಾಗತಿಕ ನಾಯಕರಿಂದ ಭಾರತದ ಸಾಂಪ್ರದಾಯಿಕ ಸಿರಿಧಾನ್ಯಗಳ ಮೆನುಗೆ ಮೆಚ್ಚುಗೆ
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ವಂದೇ ಮಾತರಂ ಗೀತೆ ವಿವಾದ: ಸರ್ಕಾರದ ಆದೇಶಕ್ಕೆ ಜನಾರ್ದನ ರೆಡ್ಡಿ ಸೆಡ್ಡು
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ