AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರಿ ಜಾಗ ಈಗ ಮುಸ್ಲಿಂ ಮಕಾನ್, ಹಿಂದೂಗಳ ಅಂತ್ಯ ಸಂಸ್ಕಾರಕ್ಕಿಲ್ಲ ಜಾಗ

ಮಂಡ್ಯ ಜಿಲ್ಲೆ ಹೊಸಬೂದನೂರು ಗ್ರಾಮದಲ್ಲಿ 60 ವರ್ಷದಿಂದ ಇದ್ದ ಸರ್ಕಾರಿ ಸ್ಮಶಾನವಾಗಿದ್ದ ಜಾಗವನ್ನು ಮುಸ್ಲಿಮರಿಗೆ ಬಿಟ್ಟುಕೊಡಲಾಗಿತ್ತು. 2017 ರಲ್ಲಿ ಈ ಹಿಂದೂ ಜಾಗವನ್ನು ಏಕಾಏಕಿ ಮುಸ್ಲಿಂ ಮಕಾನ್ ಆಗಿ ಪರಿವರ್ತನೆ ಮಾಡಿದ್ದರು. ಮುಸ್ಲಿಮರೇ ಇಲ್ಲದ ಊರಿನಲ್ಲಿ ಅವರಿಗಾಗಿ ಜಾಗ ಬಿಟ್ಟುಕೊಟ್ಟಿದ್ದು ಇದೀಗ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

ಸರ್ಕಾರಿ ಜಾಗ ಈಗ ಮುಸ್ಲಿಂ ಮಕಾನ್, ಹಿಂದೂಗಳ ಅಂತ್ಯ ಸಂಸ್ಕಾರಕ್ಕಿಲ್ಲ ಜಾಗ
ಹಿಂದೂಗಳ ಸ್ಮಶಾನವನ್ನು ಮುಸ್ಲಿಮರಿಗೆ ಕೊಟ್ಟಿದ್ದನ್ನು ವಿರೋಧಿಸಿ ಮಂಡ್ಯ ಜನರು ಪ್ರತಿಭಟನೆ ಮಾಡಿದರು.
ದಿಲೀಪ್​, ಚೌಡಹಳ್ಳಿ
| Updated By: ಭಾವನಾ ಹೆಗಡೆ|

Updated on: Oct 15, 2025 | 1:15 PM

Share

ಮಂಡ್ಯ, ಅಕ್ಟೋಬರ್ 15: ಮಂಡ್ಯ ಜಿಲ್ಲೆ ಹೊಸಬೂದನೂರು ಗ್ರಾಮದಲ್ಲಿ 60 ವರ್ಷದಿಂದ ಇದ್ದ ಸರ್ಕಾರಿ ಸ್ಮಶಾನವಾಗಿದ್ದ (Graveyard) ಜಾಗ 2017 ರಲ್ಲಿ ಮುಸ್ಲಿಮರಿಗೆ ಬಿಟ್ಟುಕೊಡಲಾಗಿದೆ. ಮುಸ್ಲಿಮರೇ ಇಲ್ಲದ ಊರಿನಲ್ಲಿ ಅವರಿಗಾಗಿ ಜಾಗ ಬಿಟ್ಟುಕೊಟ್ಟ ಬಗ್ಗೆ ಈಗ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಜಿಲ್ಲಾಡಳಿತದ ಈ ನಿರ್ಧಾವನ್ನು ವಿರೋಧಿಸಿ ಮಂಡ್ಯದ ಜನರು ಪ್ರತಿಭಟನೆಗಿಳಿದಿದ್ದಾರೆ.

ಹಿಂದೂ ಜಾಗವನ್ನು ಏಕಾಏಕಿ ಮುಸ್ಲಿಂ ಮಕಾನ್ ಆಗಿ ಪರಿವರ್ತನೆ ಮಾಡಿದ್ದ ವಕ್ಫ್ ಬೋರ್ಡ್

ಮಂಡ್ಯ ಜಿಲ್ಲೆಯ ತಾಲೂಕಿನ ಹೊಸಬೂದನೂರು ಗ್ರಾಮದಲ್ಲಿ ನೂರಾರು ಹಿಂದೂ ಧರ್ಮದ ಕುಟುಂಬಗಳಿವೆ. ಇಲ್ಲಿನ ಗ್ರಾಮಸ್ಥರು ಕಳೆದ 60 ವರ್ಷಗಳಿಂದ ಈ ಗ್ರಾಮದಲ್ಲಿನ ಒಂದು ಭೂಪ್ರದೇಶವನ್ನು ಸ್ಮಶಾನವಾಗಿ ಬಳಸುತ್ತಿದ್ದರು. ಇದೀಗ ಹಿಂದೂ ಧರ್ಮದಲ್ಲಿ ಒಂದು ಸಾವಾದರೂ ನೆಮ್ಮದಿಯಿಂದ ಅಂತ್ಯಸಂಸ್ಕಾರ ಮಾಡುವ ಅವಕಾಶವನ್ನೂ ಕಸಿದುಕೊಳ್ಳಲಾಗಿದೆ.

1963 ರಿಂದ 2017 ರವರೆಗೂ ಗ್ರಾಮದ ಸರ್ವೆ ನಂ. 313 ರ 1 ಎಕರೆ 13 ಗುಂಟೆ ಜಾಗ ಸರ್ಕಾರಿ ಸ್ಮಶಾನವಾಗಿತ್ತು. ಹಿಂದಿನಿಂದಲೂ ಇಲ್ಲಿನ ಹಿಂದೂಗಳು ಸಾವನಪ್ಪಿದಾಗ ಇದೇ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಿದ್ದರು. ಆದರೆ ವಕ್ಫ್ ಬೋರ್ಡ್​ 2017 ರಲ್ಲಿ ಈ ಹಿಂದೂ ಜಾಗವನ್ನು ಏಕಾಏಕಿ ಮುಸ್ಲಿಂ ಮಕಾನ್ ಆಗಿ ಪರಿವರ್ತನೆ ಮಾಡಿದ್ದರು. ಮುಸ್ಲಿಂ ಜನರೇ ಇಲ್ಲದ ಊರಲ್ಲಿ ಹಿಂದೂ ಸ್ಮಶಾನವನ್ನು ಮುಸ್ಲಿಂ ಮಕಾನ್ ಮಾಡಿದ್ದಕ್ಕೆ ಗ್ರಾಮಸ್ಥರು ಅಸಮಾಧಾನ ಹೊರ ಹಾಕಿದ್ದಾರೆ.

ಸ್ಮಶಾನ ಅಭಿವೃದ್ದಿಗೆ ಒತ್ತಾಯಿಸಿ ಗ್ರಾಮಸ್ಥರ ಪ್ರತಿಭಟನೆ

2021 ರಲ್ಲಿ ಅಂತ್ಯ ಸಂಸ್ಕಾರ ನಡೆಸದಂತೆ ವಕ್ಫ್ ಮಂಡಳಿ ಕ್ಯಾತೆ ತೆಗೆದಿತ್ತು. ಬಳಿಕ ಗ್ರಾಮಸ್ಥರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ ಸ್ಮಶಾನ ಜಾಗವನ್ನು ಗ್ರಾಮಸ್ಥರಿಗೆ ನೀಡಿತ್ತು. ಕೇವಲ 24 ಗುಂಟೆ ಜಾಗದಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡಿತ್ತು. ಆ ಸ್ಥಳದಲ್ಲಿ ಇದೀಗ ಅಂತ್ಯ ಸಂಸ್ಕಾರಕ್ಕೂ ತಡೆಯೊಡ್ಡಲಾಗಿದೆ. ಗ್ರಾಮ ಪಂಚಾಯತಿಯಿಂದ ಸ್ಮಶಾನ ಅಭಿವೃದ್ದಿ ಆಗಬೇಕಿದ್ದಾಗಲೂ ತಹಶೀಲ್ದಾರರು ಕೆಲಸ ತಡೆಹಿಡಿದಿದ್ದರು. ಇದರಿಂದ ಜಿಲ್ಲಾಡಳಿತ ವಿರುದ್ದ ಸಿಡಿದೆದ್ದ ಗ್ರಾಮಸ್ಥರು, ಮುಸ್ಲಿಂ ಮಕಾನನ್ನು ವಾಪಸ್ಸು ಹಿಂದೂ ಸ್ಮಶಾನವಾಗಿ ಮಾಡುವಂತೆ ಆಗ್ರಹಿಸಿದ್ದಾರೆ. ಸ್ಮಶಾನ ಅಭಿವೃದ್ದಿಗೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆಗೆ ಸಹ ಇಳಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ