ಪೆನ್​ಡ್ರೈವ್​ ಕೇಸ್​ನಲ್ಲಿ ಹಾಸನ ಬಿಜೆಪಿ ಮಾಜಿ ಶಾಸಕನ ಕೈವಾಡವಿದೆ: ಹೊಸ ಬಾಂಬ್ ಸಿಡಿಸಿದ ಕೈ ಶಾಸಕ

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಪ್ರಕರಣ, ರಾಜ್ಯ ಅಷ್ಟೇ ಅಲ್ಲದೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಅದರಂತೆ ಪೆನ್​ಡ್ರೈವ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್​ ಅವರ ಕೈವಾಡ ಎಂಬ ಆರೋಪದ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ, ‘ಡಿಕೆಶಿ ಮಾಡ್ಸಿದ್ದಾರೆ ಎನ್ನುವುದರ ಕುರಿತು ದಾಖಲೆ ಕೊಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಪೆನ್​ಡ್ರೈವ್​ ಕೇಸ್​ನಲ್ಲಿ ಹಾಸನ ಬಿಜೆಪಿ ಮಾಜಿ ಶಾಸಕನ ಕೈವಾಡವಿದೆ: ಹೊಸ ಬಾಂಬ್ ಸಿಡಿಸಿದ ಕೈ ಶಾಸಕ
ಕಾಂಗ್ರೆಸ್​ ಶಾಸಕ ರವಿಕುಮಾರ್​ ಗಣಿಗ
Follow us
ಮಂಜುನಾಥ ಕೆಬಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: May 07, 2024 | 3:42 PM

ಮಂಡ್ಯ, ಮೇ.07: ಪೆನ್​ಡ್ರೈವ್​ ಕೇಸ್​ನಲ್ಲಿ ರಾಜ್ಯ ಮಟ್ಟದಲ್ಲಿ ಬಿಜೆಪಿಯ ಅತ್ಯುತ್ತಮ ಸ್ಥಾನದಲ್ಲಿ ಕುಳಿತಿರುವ ನಾಯಕ, ಹಾಸನದ ಮಾಜಿ ಶಾಸಕನ ಕೈವಾಡ ಇದೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ(Ravikumar Ganiga) ಹೊಸ ಬಾಂಬ್​ ಸಿಡಿಸಿದ್ದಾರೆ. ಪೆನ್​ಡ್ರೈವ್ ಪ್ರಕರಣದಲ್ಲಿ ಡಿಕೆ ಶಿವಕುಮಾರ್​ ಅವರ ಕೈವಾಡ ಎಂಬ ಆರೋಪದ ವಿಚಾರವಾಗಿ ಮಂಡ್ಯದಲ್ಲಿ ಮಾತನಾಡಿದ ಅವರು, ‘ಡಿಕೆಶಿ ಮಾಡ್ಸಿದ್ದಾರೆ ಎನ್ನುವುದರ ಕುರಿತು ದಾಖಲೆ ಕೊಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಶಿವರಾಮೇಗೌಡರನ್ನ ಕಳುಹಿಸಿ ಯಾಕೆ ಷಡ್ಯಂತ್ರ ಹೂಡಿರಬಾರದು?

ಅವರ ಹತ್ತಿರ ಸಾವಿರಾರು ಜನ ಬರ್ತಾರೆ, ಶಿವಕುಮಾರ್ ಭೇಟಿ ಮಾಡಲು ದೇವರಾಜೇಗೌಡ, ಬಿಜೆಪಿಯ ಮಾಜಿ ಶಾಸಕ ಇವರೇ ಯಾಕೆ ಷಡ್ಯಂತ್ರ ಹೂಡಿರಬಾರದು? ಎಂದು ಪ್ರಶ್ನಿಸಿದ್ದಾರೆ. ಪ್ರಜ್ವಲ್ ರೇವಣ್ಣ ಸ್ಟೇ ತಂದಾಗ ಇದೇ ದೇವರಾಜೇಗೌಡ ಹಾಸನದಲ್ಲಿ ನಿನ್ನ ಸ್ಟೇ ವೆಕಾಟ್ ಇದೆ, ಎಲ್ಲವನ್ನ ಬಿಡ್ತಿನಿ ಎಂದು ಹೇಳಿದ್ದಾರೆ. ಒಂದು ತಿಂಗಳ ದೇವರಾಜೇಗೌಡ ಸ್ಟೇಟ್ಮೇಂಟ್ ನೋಡಿ. ಇದರಲ್ಲಿ ಕೈವಾಡವಿರುವ ಮಾಜಿ ಶಾಸಕನೇ ಕೋಟ್ಯಾಂತರ ರೂ. ಹೂಡಿಕೆ ಮಾಡಿ ಪೆನ್ ಡ್ರೈ ಹಂಚಿದ್ದಾರೆ. ರೇವಣ್ಣ ಕುಟುಂಬದ ಜೊತೆ ರಾಜಕೀಯ ವಿರೋಧಿ ಇದ್ದಾರೆ, ಅವರೇ ಷಡ್ಯಂತ್ರ ಮಾಡಿರೋದು. ಇವಾಗ ಡಿಕೆ ಶಿವಕುಮಾರ್ ಮೇಲೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ:ಪ್ರಜ್ವಲ್ ವಿಡಿಯೋ ಕೇಸ್​: ಪೆನ್​ಡ್ರೈವ್ ಕಥಾ ನಾಯಕರೇ ಕಾಂಗ್ರೆಸ್ ಅಧ್ಯಕ್ಷರು, ಡಿಕೆಶಿ ಆಡಿಯೋ ರಿಲೀಸ್

ದೇವರಾಜೇಗೌಡನ ಪೋನ್ ಕಾಲ್ ಟ್ರ್ಯಾಪ್ ಮಾಡಿದ್ರೆ ಎಲ್ಲ ಗೊತ್ತಾಗುತ್ತೆ

ಈ ಪ್ರಕರಣದಲ್ಲಿ ಮೊಸರು ತಿಂದು ಮೇಕೆ ಬಾಯಿಗೆ ಒರೆಸಿದ ಹಾಗೆ ಮಾಡುತ್ತಿದ್ದಾರೆ. ದೇವರಾಜೇಗೌಡನ ಪೋನ್ ಕಾಲ್ ಟ್ರ್ಯಾಪ್ ಮಾಡಿದ್ರೆ ಎಲ್ಲ ಗೊತ್ತಾಗುತ್ತದೆ. ಇದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧ ಇಲ್ಲ. ಇದಕ್ಕೆ ನೇರ ಹೊಣೆ ಬಿಜೆಪಿ,  ಜೆಡಿಎಸ್ ಪಕ್ಷವನ್ನ ಮುಗಿಸಲು ಬಿಜೆಪಿ ತನ್ನ ಕೋಟೆಯನ್ನ ಭದ್ರಪಡಿಸಿಕೊಳ್ಳುತ್ತಿರುವುದು. ಆದರೆ, ಪವರ್ ಪುಲ್ ಪೀಪಲ್ ಆಗಿರುವ ಡಿಕೆಶಿ ತಲೆಗೆ ಕಟ್ಟಲು ನೋಡ್ತಿದ್ದಾರೆ.

ಕರ್ನಾಟಕ ಪೋಲಿಸ್ ಎಸ್ಐಟಿ ಅಧಿಕಾರಿಗಳು ದಕ್ಷರಿದ್ದಾರೆ. ಎಲ್ಲವನ್ನೂ ಹೊರ ತರ್ತಾರೆ. ಪೆನ್​ಡ್ರೈವ್ ಬಿಡುಗಡೆ ಮಾಡಿದ್ದೇ ದೇವರಾಜೇಗೌಡ, ಅದನ್ನ ಮಾರ್ಕೆಟ್ ಮಾಡಿದ್ದು ಬಿಜೆಪಿಯವರು. ದೇವೇಗೌಡರ ಕುಟುಂಬ, ಕುಮಾರಣ್ಣನ ರಾಜಕೀಯವಾಗಿ ಮುಗಿಸಲು ಬಿಜೆಪಿ ಹೀಗೆ ಮಾಡುತ್ತಿದೆ. ಜೆಡಿಎಸ್ ಮುಗಿಸಿ ಬಿಜೆಪಿ ಭದ್ರಕೋಟೆ ನಿರ್ಮಿಸಿಕೊಳ್ಳುತ್ತದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ