AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂದೆಯ ಜೊತೆ ಅನೈತಿಕ ಸಂಬಂಧ; ದೊಡ್ಡಮ್ಮನನ್ನೇ ಚಾಕುವಿನಿಂದ ಕತ್ತು ಕೊಯ್ದ ಕೊಂದ ಮಗ

ಆ ಏರಿಯಾದ ಜನ ಮಟಮಟ ಮಧ್ಯಾಹ್ನವೇ ಬೆಚ್ಚಿ ಬಿದ್ದಿದ್ದರು. ಹಾಡುಹಗಲೇ ಅದೊಬ್ಬಳು ವೃದ್ದೆಯನ್ನ ಭೀಕರವಾಗಿ ಮನೆಯಲ್ಲಿಯೇ ಹತ್ಯೆ ಮಾಡಲಾಗಿತ್ತು. ಈ ವಿಚಾರ ಆ ಏರಿಯಾದ ಜನರ ಆತಂಕಕ್ಕೂ ಕೂಡ ಕಾರಣವಾಗಿತ್ತು. ಹಾಗಾದರೆ ಆ ವೃದ್ದೆ ಕೊಲೆಯಾಗಿದ್ದು ಯಾಕೆ? ಹತ್ಯೆ ಮಾಡಿದ ಆರೋಪಿ ಯಾರು ಅಂತೀರಾ. ಈ ಸ್ಟೋರಿ ಓದಿ.

ತಂದೆಯ ಜೊತೆ ಅನೈತಿಕ ಸಂಬಂಧ; ದೊಡ್ಡಮ್ಮನನ್ನೇ ಚಾಕುವಿನಿಂದ ಕತ್ತು ಕೊಯ್ದ ಕೊಂದ ಮಗ
ಮೃತ ವೃದ್ದೆ, ಕೊಲೆ ಆರೋಪಿ
ಪ್ರಶಾಂತ್​ ಬಿ.
| Edited By: |

Updated on:Jun 23, 2024 | 2:46 PM

Share

ಮಂಡ್ಯ, ಜೂ.23: ಅನೈತಿಕ ಸಂಬಂಧಕ್ಕೆ ಮಗನಿಂದಲೇ ದೊಡ್ಡಮ್ಮ ಒಬ್ಬಳು ಭೀಕರವಾಗಿ ಹತ್ಯೆಯಾಗಿರುವ ಘಟನೆ ಮಂಡ್ಯ (Mandya)ದ ಆನೆಕೆರೆ ಬೀದಿ ನಗರದಲ್ಲಿ ನಡೆದಿದೆ. 80 ವರ್ಷದ ಕೆಂಪಮ್ಮ ಮೃತ ವೃದ್ದೆ. ಇನ್ನು 34 ವರ್ಷದ ಹರೀಶ್ ಕೊಲೆ ಆರೋಪಿ. ಅಂದಹಾಗೆ ಆರೋಪಿ ಹರೀಶ್​ನ ತಂದೆ ರಾಮಕೃಷ್ಣ ಎಂಬಾತ ಸೆಲೂನ್ ಶಾಪ್​ವೊಂದರಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಅಣ್ಣನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನಂತೆ. ತನ್ನ ಅಣ್ಣ ತೀರಿ ಹೋದ ನಂತರ ರಾಮಕೃಷ್ಣ, ಕೆಂಪಮ್ಮನನ್ನ 25 ವರ್ಷಗಳ ಕೆಳಗೆ ತನ್ನ ಜೊತೆಗೆ ಕರೆದುಕೊಂಡು ಬಂದು ಮನೆಯಲ್ಲಿ ಇಟ್ಟುಕೊಂಡಿದ್ದ. ಇದರಿಂದಾಗಿ ರಾಮಕೃಷ್ಣನ ಹೆಂಡತಿ ಗಂಡನನ್ನ ತೊರೆದು, ಬೆಂಗಳೂರಿನಲ್ಲಿ ಮಗನ ಜೊತೆ ವಾಸವಿದ್ದಳು. ಇದೇ ವಿಚಾರಕ್ಕೆ ಹಲವು ಬಾರಿ ಗಲಾಟೆ ಕೂಡ ನಡೆದಿತ್ತು. ಆದರೆ ನಿನ್ನೆ(ಜೂ.22) ಮಧ್ಯಾಹ್ನ ಕುಡಿದು ಮನೆಗೆ ಬಂದಿದ್ದ ಹರೀಶ್, ಕೆಂಪಮ್ಮಳ ಜೊತೆ ಮಾತಿನ ಚಕಮಕಿ ನಡೆಸಿ, ನಂತರ ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಆರೋಪಿ ಹರೀಶ್, ತಂದೆ ರಾಮಕೃಷ್ಣನಿಗೂ ಕಾಲ್ ಮಾಡಿ, ಕೆಂಪಮ್ಮಳನ್ನ ಕೊಲೆ ಮಾಡಿರುವುದಾಗಿ ತಿಳಿಸಿ, ನಂತರ ತಾನೇ ಠಾಣೆಗೆ ಹೋಗಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಮೃತ ಕೆಂಪಮ್ಮಳಿಗೆ ಗಂಡ ತೀರಿಹೋದ ನಂತರ ಮೈದುನಾ ರಾಮಕೃಷ್ಣನೇ ಆಸರೆಯಾಗಿದ್ದ. ಮೂವರು ಹೆಣ್ಣು ಮಕ್ಕಳನ್ನ ಬಿಟ್ಟು ಮೈದುನ ರಾಮಕೃಷ್ಣನ ಜೊತೆ ಕೆಂಪಮ್ಮ ವಾಸವಿದ್ದಳು. ಇನ್ನು ಆರೋಪಿ ಹರೀಶ್ ಸಹ ಇವರ ಜೊತೆಗೆ ವಾಸವಿದ್ದ. ಕೆಲ ಕಾಲ ಕೆಲಸವಿದೆ ಎಂದು ಬೇರೆ ಬೇರೆ ಊರಿಗೆ ತೆರಳುತ್ತಿದ್ದ.

ಇದನ್ನೂ ಓದಿ:ಅನೈತಿಕ ಸಂಬಂಧ: ಮನಬಂದಂತೆ ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

ಈಗಾಗಲೇ ಎರಡು ಮದುವೆಯಾಗಿ ಇಬ್ಬರು ಪತ್ನಿಯನ್ನು ಕೂಡ ಆರೋಪಿ ಹರೀಶ್ ತೊರೆದಿದ್ದಾನೆ. ಸಾಕಷ್ಟು ಕುಡಿತದ ಚಟಕ್ಕೆ ದಾಸನಾಗಿದ್ದ ಹರೀಶ್, ನಿನ್ನೆ ಏಕಾಏಕಿ ಮನೆಗೆ ಬಂದು ತಂದೆ ರಾಮಕೃಷ್ಣ ಕೆಲಸಕ್ಕೆ ಹೋದ ಸಮಯದಲ್ಲಿ ದೊಡ್ಡಮ್ಮನ ಕಥೆಯನ್ನ ಮುಗಿಸಿದ್ದಾನೆ. ಇನ್ನು ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಂಡ್ಯ ಎಸ್ ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಸಂಬಂಧ ಪ್ರಕರಣ ದಾಖಲಾಗಿದೆ. ಒಟ್ಟಾರೆ, ಅನೈತಿಕ ಸಂಬಂಧ, ಸಿಟ್ಟು, ಕುಡಿತದ ಚಟದಿಂದಾಗಿ ಸ್ವತಃ ದೊಡ್ಡಮ್ಮಳ ಕಥೆಯನ್ನೇ ಮಗನೊಬ್ಬ ಮುಗಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Sun, 23 June 24

ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ