AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mandya News: ಮೈಶುಗರ್​​ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭ, ಮಂಡ್ಯ ಜನರ ಮೊಗದಲ್ಲಿ ಸಂತಸ

ಸರ್ಕಾರಿ ಸ್ವಾಮ್ಯದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಶುಗರ್​ನಲ್ಲಿ ಕಬ್ಬು ಅರೆಯುವಿಕೆ ಆರಂಭವಾಗಿದೆ.

Mandya News: ಮೈಶುಗರ್​​ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಆರಂಭ, ಮಂಡ್ಯ ಜನರ ಮೊಗದಲ್ಲಿ ಸಂತಸ
ಮೈಶುಗರ್​​ ಕಾರ್ಖಾನೆ
ಪ್ರಶಾಂತ್​ ಬಿ.
| Updated By: ವಿವೇಕ ಬಿರಾದಾರ|

Updated on:Jul 06, 2023 | 12:22 PM

Share

ಮಂಡ್ಯ: ರಾಜ್ಯದಲ್ಲಿ ಸಕ್ಕರೆನಾಡು ಎಂದೇ ಪ್ರಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯ ಜನರ ಜೀವನಾಡಿ ಮೈಶುಗರ್​​ ಕಾರ್ಖಾನೆ. ಸರ್ಕಾರಿ ಸ್ವಾಮ್ಯದ ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮೈಶುಗರ್ (Mysugar factory)ಯಲ್ಲಿ ಕಬ್ಬು ಅರೆಯುವಿಕೆ ಒಂದು ವರ್ಷದ ನಂತರ ಆರಂಭವಾಗಿದೆ. ಪ್ರಸಕ್ತ ವರ್ಷ ಐದು ಲಕ್ಷ ಟನ್ ಕಬ್ಬು ಅರಿಯುವ ಗುರಿ ಇಡಲಾಗಿದೆ. ಇನ್ನು ಕಾರ್ಖಾನೆಯಲ್ಲಿ ಕಬ್ಬು (Sugar cane) ಅರಿಯುವಿಕೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ (N Chaluvarayaswamy), ಸಕ್ಕರೆ ಇಲಾಖೆ ಸಚಿವ ಶಿವಾನಂದ ಪಾಟೀಲ್ (Shivand Patil)​ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ (Sumalata Ambareesh) , ಶಾಸಕರಾದ ರವಿಕುಮಾರ್ ಗೌಡ (Ravikumar Gowda) , ಬಂಡಿಸಿದ್ದೇಗೌಡ ಭಾಗಿಯಾಗಿದ್ದರು.

ಅರಿಯುವಿಕೆಗೆ ಚಾಲನೆ ನೀಡದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ ಮೈಶುಗರ್ ಕಾರ್ಖಾನೆ ಖಾಸಗಿಕರಣಕ್ಕೆ ಜನರ ವಿರೋಧ ಇತ್ತು. ನಮ್ಮ ಸರ್ಕಾರ ಮಾತು ಕೊಟ್ಟಂತೆ ಕಾರ್ಖಾನೆ ನಡೆಯುತ್ತೆ. ಹೆಚ್ಚು ಕಬ್ಬು ಅರೆಯುವ ಕಾರ್ಯ ನಡೆಯುತ್ತೆ. ಇನ್ನೂ ಯಾವತ್ತು ಈ ಕಾರ್ಖಾನೆ ಮುಚ್ಚಲ್ಲ. ಇನ್ನೂ ಕಾರ್ಖಾನೆ ಸಮಸ್ಯೆ ಇರಲ್ಲ. ಹೊಸ ಕಾರ್ಖಾನೆ ಕೂಡ ಆಗುತ್ತೆ ಎಂದು ಹೇಳಿದರು.

ಇದೇ ವೇಳೆ ಮನ್ಮುಲ್ ಅಧ್ಯಕ್ಷ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು ಜೆಡಿಎಸ್ 7 ಜನ ಇದ್ದಾರೆ. ಬಿಜೆಪಿಯವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಚುನಾವಣೆ ಏನಾಗುತ್ತೆ ಕಾದು ನೋಡೋಣ. ಅವರು ಹೊಂದಾಣಿಕೆ ಮಾಡಿಕೊಳ್ಳುತ್ತಾರೋ ಬಿಡ್ತಾರೋ ಗೊತ್ತಿಲ್ಲ ಎಂದರು.

40 ಲಕ್ಷ ಕರೆಂಟ್ ಬಿಲ್ ಬಾಕಿ ಮನ್ನ ಮಾಡುವಂತೆ ಕೇಂದ್ರಕ್ಕೆ ಮನವಿ: ಸುಮಲತಾ

ಕಬ್ಬು ಅರೆಯುವಿಕೆಗೆ ಚಾಲನೆ ನೀಡಿರುವುದಕ್ಕೆ ನನ್ನ ಸ್ವಾಗತವಿದೆ. ಮೈಶುಗರ್ ನಲ್ಲಿ ಕೆಲವು ಸಮಸ್ಯೆ ಮತ್ತು ಗೊಂದಲವಿದೆ. ಅವುಗಳನ್ನ ಸರಿಪಡಿಸಿಕೊಂಡು ಹೋದರೇ ಮುಂದೆ ಯಾವುದೇ ಸಮಸ್ಯೆ ಇರಲ್ಲ. 40 ಲಕ್ಷ ಕರೆಂಟ್ ಬಿಲ್ ಬಾಕಿಯ ಬಗ್ಗೆ ಕೇಂದ್ರದ ಇಂಧನ ಸಚಿವರಿಗೆ ಪತ್ರ ಬರೆದು ಮನ್ನ ಮಾಡುವಂತೆ ಮನವಿ ಮಾಡುತ್ತೇನೆ. ಹೊಸದಾಗಿ ಕಾರ್ಖಾನೆ ಪ್ರಾರಂಭಿಸಿದಾಗ ಸಮಸ್ಯೆಗಳು ಇದ್ದೆ ಇರುತ್ತೆ ಅದನ್ನ ಸರಿಪಡಿಸಿಕೊಳ್ಳಬೇಕು ಎಂದು ಸಂಸದೆ ಸುಮಲತಾ ಅಂಬರೀಷ್​ ಹೇಳಿದರು.

ಇದನ್ನೂ ಓದಿ: ಮಂಡ್ಯದ ಮನ್ಮುಲ್ ಅಧ್ಯಕ್ಷ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಪೈಪೋಟಿ: ಚುನಾವಣೆಗೆ ದಿನಾಂಕ ನಿಗದಿ

ಕೆಆರ್​​ಎಸ್​ ಡ್ಯಾಂ ವಿಚಾರವಾಗಿ ಮಾತನಾಡಿದ ಅವರು ಡ್ಯಾಂ ಬಿರುಕು ಬಗ್ಗೆ ನಾನು ವೀಕ್ಷಣೆ‌ ಮಾಡುತ್ತಿಲ್ಲ. ನಾನು ಡ್ಯಾಂ ಬಿರುಕು ಬಗ್ಗೆ ವಿಸಿಟ್ ಮಾಡುತ್ತಿಲ್ಲ. ಇತ್ತೀಚೆಗೆ ಮಳೆ ಕಡಿಮೆ ಆಗಿ ಡ್ಯಾಂನಲ್ಲಿ ನೀರಿನ ಕೊರತೆ ಇದೆ. ಡ್ಯಾಂ ನ ನೀರಿನ ಮಟ್ಟ ಹಾಗೂ ಕುಡಿಯುವ ನೀರಿನ ಬಗ್ಗೆ ವಿಸಿಟ್ ಮಾಡುತ್ತಿದ್ದೇನೆ. ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಕೆಎಸ್​ಆರ್​ಎಸ್​ ಭೇಟಿ ಕೊಡುತ್ತಿದ್ದೇನೆ.

ದಿನಕ್ಕೆ 3 ಸಾವಿರ ಟನ್ ಕಬ್ಬು ಅರೆಯುವ ಕಾರ್ಯ ನಡೆಯುತ್ತೆ

ಸಚಿವ ಶಿವಾನಂದ ಪಾಟೀಲ್​ ಮಾತನಾಡಿ ಜೂ.24ರಂದು ಮೈಶುಗರ್ ಕಾರ್ಖಾನೆಯಲ್ಲಿ ಕಬ್ಬು ಅರಿಯಬೇಕಿತ್ತು. ಟರ್ಬೈನ್ ಸಮಸ್ಯೆಯಿಂದ ಕಬ್ಬು ಅರೆಯುವ ಕಾರ್ಯ ತಡವಾಗಿದೆ. ವಿಳಂಬವಾಗಿದ್ದಕ್ಕೆ ರೈತರ ಬಳಿ ಕ್ಷಮೆಯಾಚಿಸುವೆ. ಸೀಜನ್ ಮುಗಿಯೋವರೆಗೆ ಕಬ್ಬು ಅರೆಯುವ ಕಾರ್ಯ ನಡೆಯುತ್ತೆ. ದಿನಕ್ಕೆ 3 ಸಾವಿರ ಟನ್ ಕಬ್ಬು ಅರೆಯುವ ಕಾರ್ಯ ನಡೆಯುತ್ತೆ. ಇವತ್ತು ಮತ್ತು ನಾಳೆ ಎರಡರಿಂದ ಮೂರು ಸಾವಿರ ಟನ್ ಆಗುತ್ತೆ. ಕ್ರಮೇಣ ಕಬ್ಬು ಅರೆಯುವ ಪ್ರಮಾಣ ಹೆಚ್ಚಿಸುವ ಕೆಲಸ ಆಗುತ್ತೆ ಎಂದು ತಿಳಿಸಿದರು.

ಕಬ್ಬು ಬೆಳೆಗಾರರ ಜೀವನಾಡಿ

ಯಂತ್ರೋಪಕರಣಗಳು ಕೆಟ್ಟ ಹಿನ್ನೆಲೆ 4 ವರ್ಷಗಳಿಂದ ಮೈಶುಗರ್ ಕಾರ್ಖಾನೆ ಮುಚ್ಚಿತ್ತು. ಹೀಗಾಗಿ ಯಂತ್ರೋಪಕರಣಗಳನ್ನು ಸರಿಪಡಿಸಬೇಕು, ಕಾರ್ಖಾನೆಯನ್ನು ಪುನರಾರಂಭಿಸಬೇಕೆಂದು ಸಾಕಷ್ಟು ಹೋರಾಟಗಳು ನಡೆದಿದ್ದವು.

ಹೋರಾಟಕ್ಕೆ ಮಣಿದು ಕಾರ್ಖಾನೆ ಪುನರಾರಂಭಕ್ಕೆ ಬಿಜೆಪಿ ಸರ್ಕಾರ ಭರವಸೆ ನೀಡಿತ್ತು. ಅದರಂತೆ ಕಳೆದ ವರ್ಷ ಜಿಲ್ಲೆಯ ಇತರ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆ ಆರಂಭಿಸಿದಾಗ, ಮೈಶುಗರ್‌ನಲ್ಲಿ ಯಂತ್ರೋಪಕರಣಗಳ ದುರಸ್ತಿ ಕಾರ್ಯ ಶುರುವಾಗಿತ್ತು. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಸರ್ಕಾರ ಮೈಶುಗರ್ ಕಾರ್ಖಾನೆ ಪುನಾರಂಭಕ್ಕೆ 50 ಕೋಟಿ ಅನುದಾನ ನೀಡಿತ್ತು.

ಹೀಗಾಗಿ ಕಳೆದ  ತಿಂಗಳು ಜೂನ್​​ನಲ್ಲಿ ಮುಹೂರ್ತ ಫಿಕ್ಸ್​​ ಆಗಿ ಮೈಶುಗರ್​ ಕಾರ್ಖನೆಯಲ್ಲಿ ಪೂಜೆ, ಹೋಮ-ಹವನ ನಡೆದು ಬಳಿಕ ಬಾಯ್ಲರ್​​ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಸಾಂಕೇತಿಕವಾಗಿ ಸಚಿವ ಶಿವಾನಂದ ಪಾಟೀಲ್​ ಚಾಲನೆ ನೀಡಿದ್ದರು. ಇದೀಗ ಕಬ್ಬು ಅರಿಯುವಿಕೆಗೆ ಚಾಲನೆ ದೊರೆತಿದ್ದು ಮಂಡ್ಯ ಜನರಲ್ಲಿ ಸಂತಸ ಮನೆ ಮಾಡಿದೆ.

ಅಂಬರೀಶ್ ಅವರ ಕನಸು ಇದಾಗಿತ್ತು

ಕಾರ್ಖಾನೆಗೆ ಸಾಂಕೇತಿವಾಗಿ ಚಾಲನೆ ದೊರೆತ ನಂತರ ಸಂಸದೆ ಸುಮಲತಾ ಅಂಬರೀಷ್​ ಮಾತನಾಡಿ ಇಂದು ಆಗುತ್ತಿರುವ ಖುಷಿ ಎಂದೂ ಆಗಿಲ್ಲ ಎಂದಿದ್ದರು. ಅಲ್ಲದೇ ಅಂಬರೀಷ್​​ ಅವರ ಕನಸು ಇದಾಗಿತ್ತು. ಎಷ್ಟೋ ವರ್ಷಗಳ ಹೋರಾಟದ ಫಲವಿದು‌. ಮಂಡ್ಯ ಜಿಲ್ಲೆಯ ರೈತರಿಗೆ ಐತಿಹಾಸಿಕ ಹಾಗೂ ಸಂಭ್ರಮದ ದಿನ ಇದು ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:26 am, Thu, 6 July 23

ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ
ಬೆಂಗಳೂರು ಶಾಸಕರ ಜತೆ ಪ್ರತ್ಯೇಕ ಸಭೆ ನಡೆಸಿದೆ ಡಿಕೆಶಿ ಹೇಳಿದ್ದೇನು ನೋಡಿ