ಬಾಗಿದ ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಗೋಪುರ ಕಳಶ ಕೆಡಕಿನ ಮುನ್ಸೂಚನೆ? ಜನರ ನಂಬಿಕೆ ಜತೆ ಅಧಿಕಾರಿಗಳು ಚೆಲ್ಲಾಟ

ಕಳಶ ಬಾಗಿರೋದನ್ನ ನೋಡಿ ಭಕ್ತರಲ್ಲಿ ಬೇಸರದೊಂದಿಗೆ, ಆತಂಕವೂ ಮನೆ ಮಾಡಿದೆ. ಗೋಪುರದ ಕಳಶದಲ್ಲಿ ದೇವಾನು ದೇವತೆಗಳು ವಾಸಿಸುತ್ತಾರೆಂಬ ನಂಬಿಕೆಯಿದೆ. ಗರ್ಭಗುಡಿಯ ದೇವರ ದರ್ಶನದಷ್ಟೇ ಕಳಸ ದರ್ಶನಕ್ಕೂ ಮಹತ್ವ ಇದೆ. ಕಳಶ ಬಿದ್ದರೆ ಕೇಡು ನಿಶ್ಚಿತ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿರುವ ನಂಬಿಕೆ. ಶುಭ ಸಂಕೇತದ ಕಳಶ ಬಾಗಿದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂಬುದು ಭಕ್ತರ ಆತಂಕವನ್ನು ಹೆಚ್ಚಿಸಿದೆ.

ಬಾಗಿದ ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಗೋಪುರ ಕಳಶ ಕೆಡಕಿನ ಮುನ್ಸೂಚನೆ? ಜನರ ನಂಬಿಕೆ ಜತೆ ಅಧಿಕಾರಿಗಳು ಚೆಲ್ಲಾಟ
ಬಾಗಿದ ಮೇಲುಕೋಟೆ ಯೋಗಾನರಸಿಂಹ ಸ್ವಾಮಿ ಗೋಪುರ ಕಳಶ ಕೆಡಕಿನ ಮುನ್ಸೂಚನೆ? ಜನರ ನಂಬಿಕೆ ಜತೆ ಅಧಿಕಾರಿಗಳು ಚೆಲ್ಲಾಟ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Nov 13, 2021 | 1:17 PM

ಮಂಡ್ಯ: ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಐತಿಹಾಸಿಕ, ಧಾರ್ಮಿಕ ಮೇಲುಕೋಟೆ ಬೆಟ್ಟದ ಯೋಗಾನರಸಿಂಹ ಸ್ವಾಮಿ ಸನ್ನಿಧಿಯ ಗೋಪುರದಲ್ಲಿ ಕಳಶ ಬಾಗಿದೆ. ಇದರಿಂದ ನೂರಾರು ವರ್ಷಗಳ ಪುರಾತನ ಗೋಪುರ ಕಳಶ ವಾಲಿರೋದಕ್ಕೆ ಭಕ್ತರಲ್ಲಿ ಆತಂಕ ಮನೆಮಾಡಿದೆ. ಈ ಪುರಾತನ ದೇವಾಲಯದ ರಾಜಗೋಪುರದಲ್ಲಿ ಕಳಸ ಭಿನ್ನವಾಗಿದೆ.

ಕಳಶ ಬಾಗಿರೋದನ್ನ ನೋಡಿ ಭಕ್ತರಲ್ಲಿ ಬೇಸರದೊಂದಿಗೆ, ಆತಂಕವೂ ಮನೆ ಮಾಡಿದೆ. ಗೋಪುರದ ಕಳಶದಲ್ಲಿ ದೇವಾನು ದೇವತೆಗಳು ವಾಸಿಸುತ್ತಾರೆಂಬ ನಂಬಿಕೆಯಿದೆ. ಗರ್ಭಗುಡಿಯ ದೇವರ ದರ್ಶನದಷ್ಟೇ ಕಳಸ ದರ್ಶನಕ್ಕೂ ಮಹತ್ವ ಇದೆ. ಕಳಶ ಬಿದ್ದರೆ ಕೇಡು ನಿಶ್ಚಿತ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿರುವ ನಂಬಿಕೆ. ಶುಭ ಸಂಕೇತದ ಕಳಶ ಬಾಗಿದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂಬುದು ಭಕ್ತರ ಆತಂಕವನ್ನು ಹೆಚ್ಚಿಸಿದೆ. ಕಳಶ ಹಿಂದಕ್ಕೆ ವಾಲಿ ತಿಂಗಳುಗಳೇ ಕಳೆದರೂ ಸರಿಪಡಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತೆ ಬಗ್ಗೆ ಮೇಲುಕೋಟೆ ಜನರು ಆಕ್ರೋಶಗೊಂಡಿದ್ದಾರೆ. ಜನರ ನಂಬಿಕೆ ಜತೆ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರೆಂಬ ಬೇಸರ ಮನೆಮಾಡಿದೆ.

ಭಕ್ತರ ಆತಂಕಕ್ಕೇ ಕಾರಣವೇನು: ಶ್ರೀರಂಗನಾಥ ದೇವಾಲಯದ ಗೋಪುರದ ಕಳಶ ಬಿದ್ದಾಗ ಮಹಾರಾಜರು ಸಾವು ಸಂಭವಿಸಿತ್ತು. ಕಳಶ ಬಿದ್ದ ಕೆಲವೇ ತಿಂಗಳಲ್ಲಿ ಮೈಸೂರು ರಾಜವಂಶಸ್ಥ ಶ್ರೀಕಂಠದತ್ತ ಒಡೆಯರ್ ನಿಧನರಾಗಿದ್ದರು. ಶ್ರೀರಂಗನಾಥ ದೇಗುಲದ ಗೋಪುರದ ಕಳಶ ಬಿದ್ದಾಗಲೂ ನಿರ್ಲಕ್ಷ್ಯತೆ ಪ್ರದರ್ಶನವಾಗಿತ್ತು. ಈಗ ಯೋಗನರಸಿಂಹ ಸ್ವಾಮಿ ದೇವಾಲಯ ಕಳಶ ಬಾಗಿರುವುದರಿಂದ ಭಕ್ತರಲ್ಲಿ ಆತಂಕ ಹೆಚ್ಚಾಗಿದೆ. ಇಲ್ಲಿನ ರಾಜಗೋಪುರದ ಕಳಸ ದೇವರಷ್ಟೇ ಪ್ರಖ್ಯಾತಿಯನ್ನ ಗಳಿಸಿದೆ. ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬಾಗಿಲು ಮುಚ್ಚಿದ್ದರೆ ಗೋಪುರದ ಕಳಸ ನೋಡಿಕೊಂಡು ಹೋಗ್ತಾರೆ. ಅಂತಹ ಮಹತ್ವ ಪಡೆದುಕೊಂಡಿರೊ ಕಳಸ ವಾಲಿರೋದು ಭಕ್ತರಲ್ಲಿ ಆತಂಕ ಉಂಟು ಮಾಡಿದೆ. ಹೀಗಾಗಿ ಸಂಬಂಧ ಪಟ್ಟವರು ಕೂಡಲೇ ಕಳಸ ದುರಸ್ಥಿಗೊಳಿಸಬೇಕು ಎಂದು ಶ್ರೀರಂಗಪಟ್ಟಣದಲ್ಲಿ ಜ್ಯೋತಿಷಿ ಡಾ ಭಾನುಪ್ರಕಾಶ್ ಶರ್ಮ ಹೇಳಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿ ಹಿಂದಿನ ಆದೇಶ: ಯೋಗನರಸಿಂಹಸ್ವಾಮಿ ದೇವಾಲಯದಲ್ಲಿನ ರಾಜಗೋಪುರದ ಕಳಸ ವಾಲಿದ ಪ್ರಕರಣ ವರದಿಯಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಧಿಕಾರಿ ಕಳಸ ದುರಸ್ಥಿಗೆ ಸೂಚನೆ ನೀಡಿದ್ದಾರೆ. ಕಳಸಗಳಿಗೆ ಚಿನ್ನದ ಲೇಪನ ಮಾಡಿಸಲು ಅನುಮತಿ ನೀಡುವಂತೆ ಸೂಚನೆ ನೀಡಿದ್ದಾರೆ. ಅನಿವಾಸಿ ಭಾರತೀಯರಾದ ರವೀಂದ್ರ ಎಂಬುವವರಿಗೆ ಅನುಮತಿ ನೀಡಲು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ಡಿಸಿ ಸೂಚನೆ ನೀಡಿದ್ದಾರೆ.

ಜನವರಿ 28, 2021 ರಲ್ಲಿಯೇ ಅನುಮತಿ ನೀಡುವಂತೆ ಸೂಚನೆ ನೀಡಲಾಗಿದೆ. ಆದರೆ ಕಾರ್ಯನಿರ್ವಾಹಕ ಅಧಿಕಾರಿ ಈ ವರೆಗೂ ಅನುಮತಿ ನೀಡಿಲ್ಲ! ಎನ್​ಆರ್​​​ಐ ರವೀಂದ್ರ ಅವರು 15 ಲಕ್ಷ ರೂ ವೆಚ್ಚದಲ್ಲಿ ಕಳಸಗಳಿಗೆ ಚಿನ್ನದ ಲೇಪನ ಮಾಡಿಸಲು ಅನುಮತಿ ಕೋರಿದ್ದರು. ಇಷ್ಟು ದಿನಗಳಾದ್ರು ಸಿಗದ ಅನುಮತಿ, ಮತ್ತು ಬದಲಾಗದ ಕಳಸಗಳ ಸ್ಥಿತಿಗತಿ ನೋಡಿ ಇದೀಗ ಭಕ್ತರು ಆಕ್ರೋಶಗೊಂಡಿದ್ದಾರೆ.

Melukote Temple’s Gopuram Kalasha Tilts | ಯೋಗಾನರಸಿಂಹ ಸ್ವಾಮಿ ಗೋಪುರದಲ್ಲಿ ಬಾಗಿದ ಕಳಶ

(melukote yoganarasimha swamy temple gopura damaged officials fail to repair it)

Published On - 11:43 am, Sat, 13 November 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ