ಒಂದೇ ಹುದ್ದೆಗಾಗಿ ಇಬ್ಬರು ಅಧಿಕಾರಿಗಳ ಮಧ್ಯೆ ಕುರ್ಚಿ ವಾರ್
ಮಂಡ್ಯ: ಅವರಿಬ್ಬರು ಜಿಲ್ಲಾ ಮಟ್ಟದ ಅಧಿಕಾರಿಗಳು. ಸಹಕಾರ ಸಂಘಗಳಲ್ಲಿ ಲೋಪದೋಷ ಕಂಡು ಬಂದ್ರೆ ಸರಿದಾರಿಗೆ ತಂದು ಸಹಕಾರ ಇಲಾಖೆ ಗೌರವ ಕಾಪಾಡಬೇಕಾದ ಅವರೇ ಕುರ್ಚಿಗೆ ಕಿತ್ತಾಡಲು ಆರಂಭಿಸಿದ್ದಾರೆ. ಒಂದೇ ಹುದ್ದೆಗೆ ಇಬ್ಬರ ಮಧ್ಯೆ ರೇಸ್ ಏರ್ಪಟ್ಟಿದ್ದು, ಕುರ್ಚಿಗಾಗಿ ನಡೆಯುತ್ತಿರುವ ಸಮರದಲ್ಲಿ ಸಾರ್ವಜನಿಕರು ಬೇಸತ್ತಿದ್ದಾರೆ. ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಹುದ್ದೆಗೀಗ ಜಟಾಪಟಿ ಏರ್ಪಟ್ಟಿದೆ. ಕೃಷ್ಣಮೂರ್ತಿ ಮತ್ತು ವಿಕ್ರಮರಾಜೇ ಅರಸ್ ಎಂಬ ಇಬ್ಬರು ಅಧಿಕಾರಿಗಳ ನಡುವೆ ಕುರ್ಚಿಗಾಗಿ ವಾರ್ ನಡೆಯುತ್ತಿದೆ. ಅಂದಹಾಗೆ ಮಂಡ್ಯ ಜಿಲ್ಲಾ ಸಹಕಾರ […]
ಮಂಡ್ಯ: ಅವರಿಬ್ಬರು ಜಿಲ್ಲಾ ಮಟ್ಟದ ಅಧಿಕಾರಿಗಳು. ಸಹಕಾರ ಸಂಘಗಳಲ್ಲಿ ಲೋಪದೋಷ ಕಂಡು ಬಂದ್ರೆ ಸರಿದಾರಿಗೆ ತಂದು ಸಹಕಾರ ಇಲಾಖೆ ಗೌರವ ಕಾಪಾಡಬೇಕಾದ ಅವರೇ ಕುರ್ಚಿಗೆ ಕಿತ್ತಾಡಲು ಆರಂಭಿಸಿದ್ದಾರೆ. ಒಂದೇ ಹುದ್ದೆಗೆ ಇಬ್ಬರ ಮಧ್ಯೆ ರೇಸ್ ಏರ್ಪಟ್ಟಿದ್ದು, ಕುರ್ಚಿಗಾಗಿ ನಡೆಯುತ್ತಿರುವ ಸಮರದಲ್ಲಿ ಸಾರ್ವಜನಿಕರು ಬೇಸತ್ತಿದ್ದಾರೆ.
ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಹುದ್ದೆಗೀಗ ಜಟಾಪಟಿ ಏರ್ಪಟ್ಟಿದೆ. ಕೃಷ್ಣಮೂರ್ತಿ ಮತ್ತು ವಿಕ್ರಮರಾಜೇ ಅರಸ್ ಎಂಬ ಇಬ್ಬರು ಅಧಿಕಾರಿಗಳ ನಡುವೆ ಕುರ್ಚಿಗಾಗಿ ವಾರ್ ನಡೆಯುತ್ತಿದೆ. ಅಂದಹಾಗೆ ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾಗಿ ಕೃಷ್ಣಮೂರ್ತಿ ಕಳೆದ 5 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದರು. ಆದರೆ ಸರ್ಕಾರ ಅವರನ್ನ ಜನವರಿ 18 ರಂದು ಚಾಮರಾಜನಗರಕ್ಕೆ ವರ್ಗಾವಣೆ ಮಾಡಿತ್ತು. ಇದಾದ ನಂತರ ದೊಡ್ಡ ಹೈಡ್ರಾಮವೇ ಕ್ರಿಯೇಟ್ ಆಗಿದ್ದು, ಕುರ್ಚಿ ನಂದು ಕುರ್ಚಿ ನಂದು ಅಂತಾ ಅಧಿಕಾರಿಗಳ ಕಿತ್ತಾಡುವಂತಾಗಿದೆ.
ಮೈಸೂರಿನ ಕಾಫಿ ಸಂಸ್ಕರಣ ಸಹಕಾರ ಸಂಘದ ಉಪ ನಿಬಂಧಕರಾಗಿದ್ದ ವಿಕ್ರಮರಾಜೇ ಅರಸ್ಗೆ ಮುಂಬಡ್ತಿ ನೀಡಿ ಮಂಡ್ಯ ಸಹಕಾರ ಸಂಘಗಳ ಉಪನಿಬಂಧಕರಾಗಿ ನೇಮಿಸಲಾಗಿತ್ತು. ಇನ್ನು ಜನವರಿ 20 ರಂದು ಕೃಷ್ಣಮೂರ್ತಿ ಅನುಪಸ್ಥಿತಿಯಲ್ಲಿ ವಿಕ್ರಮರಾಜೇ ಅರಸ್ ಅಧಿಕಾರ ವಹಿಸಿಕೊಂಡಿದ್ದು ಕಾರ್ಯ ನಿರ್ವಹಿಸ್ತಿದ್ದಾರೆ. ಈ ಮಧ್ಯೆ ಸರ್ಕಾರ ತಮ್ಮನ್ನು ವರ್ಗಾವಣೆ ಮಾಡಿರುವ ಕ್ರಮ ಪ್ರಶ್ನಿಸಿ ಕೃಷ್ಣಮೂರ್ತಿ ಕೆಎಟಿಗೆ ಅರ್ಜಿ ಸಲ್ಲಿಸಿ ವರ್ಗಾವಣೆ ರದ್ದತಿಗೆ ಮನವಿ ಮಾಡಿದ್ದರು. ಅದರಂತೆ ‘ಕೆಎಟಿ’ ಯತಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದರಿಂದ ಕೃಷ್ಣಮೂರ್ತಿ ಮತ್ತೆ ಕಚೇರಿಗೆ ಆಗಮಿಸಿ ಕೆಲಸ ನಿರ್ವಹಿಸಲಾರಂಭಿಸಿದ್ದಾರೆ. ಈ ವೇಳೆ ಇಬ್ಬರೂ ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ.
ಕೃಷ್ಣಮೂರ್ತಿ ಚಾಮರಾಜನಗರಕ್ಕೆ ವರ್ಗಾವಣೆಯಾಗುವ ಮೊದಲು ಮಂಡ್ಯಕ್ಕೆ ಬಂದು 5 ತಿಂಗಳು ಆಗಿತ್ತಷ್ಟೇ. ಹೀಗಾಗಿ ಇಷ್ಟು ಬೇಗ ವರ್ಗಾವಣೆ ಮಾಡುವಂತಿಲ್ಲ. ಮುಂಬಡ್ತಿ ನೀಡಬೇಕಂದ್ರೆ ಖಾಲಿ ಇರುವ ಜಾಗಕ್ಕೆ ವರ್ಗಾವಣೆ ಮಾಡಬೇಕು. ಆದ್ರೆ ಈಗ ಕೈಗೊಂಡಿರುವ ಕ್ರಮ ಸರಿಯಿಲ್ಲ ಅಂತಾ ಕೃಷ್ಣಮೂರ್ತಿ ಜನವರಿ 21 ರಂದು ಕೆಎಟಿ ಮೊರೆ ಹೋಗಿ, ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಿದರು. ಕೆಎಟಿ ತಡೆಯಾಜ್ಞೆ ನೀಡಿ ಯಥಾಸ್ಥಿತಿಗೆ ಆದೇಶ ನೀಡಿದೆ. ಹಾಗೇ ಕೃಷ್ಣಮೂರ್ತಿ ಕಾರ್ಯನಿರ್ಹಿಸಬೇಕೇಂದು ಹೇಳಿತ್ತು. ಅದರಂತೆ ಮಂಡ್ಯ ಕಚೇರಿಗೆ ಆಗಮಿಸಿದ ಕೃಷ್ಣಮೂರ್ತಿ ತಮ್ಮ ನಾಮಫಲಕ ತೆಗೆದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿರುವ ವಿಕ್ರಮರಾಜೇ ಅರಸ್, ನಾನು ಇಲ್ಲೇ ಕೆಲಸ ಮಾಡ್ತೀನಿ ಅಂತಿದ್ದಾರೆ.
ಒಟ್ನಲ್ಲಿ ಮಂಡ್ಯದ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲಿ ಮೂರ್ನಾಲ್ಕು ದಿನಗಳಿಂದ ಒಂದೇ ಹುದ್ದೆಯನ್ನ ಇಬ್ಬರು ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಕಚೇರಿಗೆ ಬರುವ ಜನ ಯಾರ ಬಳಿ ಸಹಿ ಪಡೆಯಬೇಕೆಂದು ಗೊಂದಲಕ್ಕೊಳಗಾಗಿದ್ದು, ಸರ್ಕಾರ ಈ ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.