ಮನ್ಮುಲ್​ನಲ್ಲಿ ಹಾಲಿಗೆ ನೀರು ಬೆರೆಸಿದ್ದ ಪ್ರಕರಣ; ತನಿಖೆಯನ್ನು ಸಿಐಡಿಗೆ ಒಪ್ಪಿಸಿ ಕರ್ನಾಟಕ ಸರ್ಕಾರ ಆದೇಶ

ಕಳೆದ ತಿಂಗಳ ಕೊನೆಯ ವಾರದಲ್ಲಿ ಮನ್ಮುಲ್​ನಲ್ಲಿ ಬೆಳಕಿಗೆ ಬಂದಿದ್ದ ಹಗರಣಕ್ಕೆ ಕೊನೆಗೂ ಸಿಐಡಿ ತನಿಖೆ ಖಚಿತವಾಗಿದೆ. ಇದೀಗ, ಸರ್ಕಾರದ ಉಪ‌ಕಾರ್ಯದರ್ಶಿ ನಾಗರತ್ನಮ್ಮರಿಂದ ಈ ಅಧಿಕೃತ ಆದೇಶ ಹೊರಬಿದ್ದಿದೆ.

ಮನ್ಮುಲ್​ನಲ್ಲಿ ಹಾಲಿಗೆ ನೀರು ಬೆರೆಸಿದ್ದ ಪ್ರಕರಣ; ತನಿಖೆಯನ್ನು ಸಿಐಡಿಗೆ ಒಪ್ಪಿಸಿ ಕರ್ನಾಟಕ ಸರ್ಕಾರ ಆದೇಶ
ಸಾಂದರ್ಭಿಕ ಚಿತ್ರ

ಮಂಡ್ಯ: ಮನ್ಮುಲ್​ನಲ್ಲಿ ಹಾಲಿಗೆ ನೀರು ಬೆರೆಸಿದ್ದ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿ ಆದೇಶ ಹೊರಡಿಸಲಾಗಿದೆ. ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸರ್ಕಾರದ ಉಪ‌ಕಾರ್ಯದರ್ಶಿ ನಾಗರತ್ನಮ್ಮರಿಂದ ಆದೇಶ ನೀಡಲಾಗಿದೆ. ಪ್ರಕರಣ ಬೆಳಕಿಗೆ ಬಂದು 1 ತಿಂಗಳ ಬಳಿಕ ಸಿಐಡಿ ತನಿಖೆಗೆ ಹಸ್ತಾಂತರ ಮಾಡಲಾಗಿದೆ.

ಮೇ ತಿಂಗಳಲ್ಲಿ ಬೆಳಕಿಗೆ ಬಂದಿದ್ದ ಹಾಲಿಗೆ ನೀರು ಬೆರಕೆ ಪ್ರಕರಣವನ್ನು ಸಿಐಡಿ ತನಿಖೆ ನಡೆಸುವುದಾಗಿ ಜೂನ್ 14ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಬಳಿ ಇರುವ ಮಂಡ್ಯ ಹಾಲು ಒಕ್ಕೂಟದಲ್ಲಿ ಪ್ರಕರಣ ನಡೆದಿತ್ತು.

ಕಳೆದ ತಿಂಗಳ ಕೊನೆಯ ವಾರದಲ್ಲಿ ಮನ್ಮುಲ್​ನಲ್ಲಿ ಬೆಳಕಿಗೆ ಬಂದಿದ್ದ ಹಗರಣಕ್ಕೆ ಕೊನೆಗೂ ಸಿಐಡಿ ತನಿಖೆ ಖಚಿತವಾಗಿದೆ. ಇದೀಗ, ಸರ್ಕಾರದ ಉಪ‌ಕಾರ್ಯದರ್ಶಿ ನಾಗರತ್ನಮ್ಮರಿಂದ ಈ ಅಧಿಕೃತ ಆದೇಶ ಹೊರಬಿದ್ದಿದೆ.

ಮನ್ಮುಲ್ನಲ್ಲಿ ನೀರು ಮಿಶ್ರಿತ ಹಾಲು ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿ 6 ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಎಸ್.ಟಿ.ಸೋಮಶೇಖರ್ ಅವರು ಮದ್ದೂರಿನ ಗೆಜ್ಜಲಗೆರೆ ಡೈರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈಗಾಗಲೇ ಈ ವಿಚಾರದಲ್ಲಿ ತುಷಾರ್ ಪ್ರಾಥಮಿಕವಾಗಿ ಮತ್ತು ಪ್ರತ್ಯಕ್ಷವಾಗಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದಾರೆ ಎಂದು ತಿಳಿಸಿದ್ದರು.

ಕಾರ್ಯದರ್ಶಿಗಳು ಮುಖ್ಯಮಂತ್ರಿಗಳಿಗೆ ಪ್ರಾಥಮಿಕ ಟಿಪ್ಪಣಿಯನ್ನು ನೀಡಿದ್ದಾರೆ ಇದರ ಕುರಿತು ವಿಚಾರಣೆ ಮಾಡುವುದನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು. ಈಗಾಗಲೇ ಆರು ಜನರನ್ನು ಅಮಾನತುಗೊಳಿಸಲಾಗಿದೆ. ಮ್ಯಾನೇಜರ್ ರವರನ್ನು ಸಹ ವರ್ಗಾವಣೆ ಮಾಡಿ ಬೇರೆ ಎಂ.ಡಿ ಯವರನ್ನು ನಿಯೋಜಿಸುವುದಾಗಿದೆ ಎಂದು ತಿಳಿಸಿದ್ದರು.

ಸಹಕಾರ ಇಲಾಖೆಯ 64ರ ತನಿಖೆ ನಡೆಯುತ್ತಿದೆ. 2-3 ದಿನದಲ್ಲಿ ಪ್ರಕರಣದ ಸಂಪೂರ್ಣ ವರದಿ ಬರಲಿದೆ. ಎಷ್ಟು ವರ್ಷದಿಂದ ಹಗರಣ ನಡೆದಿದೆ ಎಂದು ತಿಳಿಯಬೇಕು. ಬಳಿಕ ಯಾವ ಸಂಸ್ಥೆಯಿಂದ ತನಿಖೆ ಎಂದು ಸಿಎಂ ನಿರ್ಧರಿಸ್ತಾರೆ. ಎಷ್ಟೇ ಪ್ರಭಾವಿತರಿದ್ದರೂ ತಪ್ಪು ಯಾರೇ ಮಾಡಿದ್ರೂ ಕಠಿಣ ಕ್ರಮಕ್ಕೆ ಸಿಎಂ ಸೂಚಿಸಿದ್ದಾರೆ. ರೈತರ ಸಂಸ್ಥೆಗೆ ಅನ್ಯಾಯವಾಗಬಾರದು. 14 ಒಕ್ಕೂಟಗಳಲ್ಲೂ ಟ್ಯಾಂಕರ್‌ ಪರಿಶೀಲನೆ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದ್ದರು.

ಇದನ್ನೂ ಓದಿ: ಮನ್ಮುಲ್ನಲ್ಲಿ ಹಾಲಿಗೆ ನೀರು ಬೆರೆಸಿದ ಕೇಸ್ಗೆ ಮೆಗಾ ಟ್ವಿಸ್ಟ್.. ಹಗರಣ ಕೈಬಿಡುವಂತೆ ಒತ್ತಡ ಹಾಕಿದ್ರಾ H.D.ದೇವೇಗೌಡ?

ಮನ್ಮುಲ್​ನಲ್ಲಿ ನೀರು ಮಿಶ್ರಿತ ಹಾಲು ಪೂರೈಕೆ; 6 ಅಧಿಕಾರಿಗಳು ಅಮಾನತು