AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SDA Exam Time Table: ಎಸ್‌ಡಿಎ ಪರೀಕ್ಷೆ ಮರು ದಿನಾಂಕ ಪ್ರಕಟ; ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ ಪ್ರಕಟಿಸಿ ಕೆಪಿಎಸ್‌ಸಿ ಆದೇಶ

ಎಸ್‌ಡಿಎ ಪರೀಕ್ಷೆ ಮರು ದಿನಾಂಕ ಪ್ರಕಟವಾಗಿದೆ. ಪರೀಕ್ಷೆ ಮರು ದಿನಾಂಕ ಪ್ರಕಟಿಸಿ ಕೆಪಿಎಸ್‌ಸಿ ಆದೇಶ ಹೊರಡಿಸಿದೆ. ಸೆಪ್ಟೆಂಬರ್‌ 18, 19ರಂದು 2 ದಿನ ಎಸ್‌ಡಿಎ ಪರೀಕ್ಷೆ ನಡೆಯಲಿದೆ.

SDA Exam Time Table: ಎಸ್‌ಡಿಎ ಪರೀಕ್ಷೆ ಮರು ದಿನಾಂಕ ಪ್ರಕಟ; ಸ್ಪರ್ಧಾತ್ಮಕ ಪರೀಕ್ಷೆ ದಿನಾಂಕ ಪ್ರಕಟಿಸಿ ಕೆಪಿಎಸ್‌ಸಿ ಆದೇಶ
ಸಾಂಕೇತಿಕ ಚಿತ್ರ
Follow us
TV9 Web
| Updated By: ganapathi bhat

Updated on:Jun 30, 2021 | 8:53 PM

ಬೆಂಗಳೂರು: ಎಸ್‌ಡಿಎ ಪರೀಕ್ಷೆ ಮರು ದಿನಾಂಕ ಪ್ರಕಟವಾಗಿದೆ. ಪರೀಕ್ಷೆ ಮರು ದಿನಾಂಕ ಪ್ರಕಟಿಸಿ ಕೆಪಿಎಸ್‌ಸಿ ಆದೇಶ ಹೊರಡಿಸಿದೆ. ಸೆಪ್ಟೆಂಬರ್‌ 18, 19ರಂದು 2 ದಿನ ಎಸ್‌ಡಿಎ ಪರೀಕ್ಷೆ ನಡೆಯಲಿದೆ. ಸೆಪ್ಟೆಂಬರ್‌ 18ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಯಲಿದೆ. ಸೆಪ್ಟೆಂಬರ್‌ 19ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಪರೀಕ್ಷೆಯ ದಿನಾಂಕ ಇಂದು (ಜೂನ್ 30) ಪ್ರಕಟವಾಗಿದೆ.

ಮಾರ್ಚ್​ 20, 21ರಂದು ನಡೆಯಬೇಕಿದ್ದ ಎಸ್​ಡಿಎ (ದ್ವಿತೀಯ ದರ್ಜೆ ಸಹಾಯಕರು / ಕಿರಿಯ ಸಹಾಯಕರು) ಪರೀಕ್ಷೆಯನ್ನು ಕಾಲಾವಕಾಶದ ಕೊರತೆಯಿಂದ ಮುಂದೂಡಿರುವುದಾಗಿ ಕೆಪಿಎಸ್​ಸಿ ಪ್ರಕಟಣೆಯ ಮೂಲಕ ಮಾಹಿತಿ ನೀಡಿತ್ತು. ಕಳೆದ ಜನವರಿ 24 ರಂದು ನಡೆಯಬೇಕಿದ್ದ ಎಫ್​ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮುನ್ನಾದಿನ ಸೋರಿಕೆ ಆಗಿ ಫೆ.28ಕ್ಕೆ ಮುಂದೂಡಲ್ಪಟ್ಟಿತ್ತು. ಇದಾದ ಬೆನ್ನಲ್ಲೇ ಎಸ್​ಡಿಎ ಪರೀಕ್ಷೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲು ಆಯೋಗಕ್ಕೆ ಇನ್ನೂ ಸಮಯ ಬೇಕು ಎಂಬ ಕಾರಣಕ್ಕೆ ಎಸ್​ಡಿಎ ಪರೀಕ್ಷೆಯನ್ನೂ ಮುಂದೂಡಿ ಆದೇಶ ಹೊರಡಿಸಿತ್ತು. ಇದೀಗ ಬದಲಾದ ಪರೀಕ್ಷಾ ದಿನಾಂಕ ಪ್ರಕಟವಾಗಿದೆ.

ಉನ್ನತ ಶಿಕ್ಷಣ ಇಲಾಖೆಯಿಂದ 1,500ರಷ್ಟು ಶೈಕ್ಷಣಿಕ ಹುದ್ದೆಗಳಿಗೆ ನೇರ ನೇಮಕಾತಿ ಕೊವಿಡ್ ಕಾರಣ ಮುಂದೂಡಲಾಗಿದ್ದ ನೇಮಕಾತಿ ಪ್ರಕ್ರಿಯೆಯನ್ನು ಉನ್ನತ ಶಿಕ್ಷಣ ಇಲಾಖೆ ನಡೆಸಲು ಈಗ ಮುಂದಾಗಿದೆ. 1,242 ಹುದ್ದೆಗೆ ಪ್ರೊಫೆಸರ್​ಗಳ ನೇಮಕಾತಿ, 310 ಪ್ರಾಂಶುಪಾಲರ ನೇಮಕ ಮಾಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧಾರ ಕೈಗೊಂಡಿದೆ. ಲಿಖಿತ ಪರೀಕ್ಷೆ ಮೂಲಕ ನೇರ ನೇಮಕಾತಿ ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಡಿಸಿಎಂ ಡಾ.ಅಶ್ವತ್ಥ ನಾರಾಯಣ ಮಾಹಿತಿ ನೀಡಿದ್ದಾರೆ.

2017 ನಂತರ ಅಸಿಸ್ಟೆಂಟ್ ಪ್ರೊಫೆಸರ್, 2009 ರ ನಂತರ ಪ್ರಾಂಶುಪಾಲ ಹುದ್ದೆಗೆ ನೇಮಕಾತಿ ಮಾಡಲಾಗುತ್ತಿದೆ. ನೇಮಕಾತಿ ಸಂಪೂರ್ಣ ಪಾರದರ್ಶಕವಾಗಿ ನಡೆಯಲಿದೆ. ಮೆರಿಟ್ ಮೂಲಕ ಅಭ್ಯರ್ಥಿಯ ಆಯ್ಕೆ ಮಾಡಲಾಗುವುದು. ಕೇವಲ ಮೆರಿಟ್​ನ್ನು ಮಾತ್ರ ಈ ನೇಮಕಾತಿಯಲ್ಲಿ ಪರಿಗಣಿಲಾಗುತ್ತದೆ. ಕೋವಿಡ್ ಕಾರಣಕ್ಕೆ ನೇಮಕಾತಿ ತಡ ಆಗಿತ್ತು ಎಂದು ತಿಳಿಸಲಾಗಿದೆ.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಲಸಿಕೆ ಕಡ್ಡಾಯಗೊಳಿಸಿಲ್ಲ, ಸ್ವಯಂಪ್ರೇರಿತವಾಗಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದೂ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: SBI Clerk Admit Card 2021: ಎಸ್​ಬಿಐ ಕ್ಲರ್ಕ್​ ಪ್ರಾಥಮಿಕ ಪರೀಕ್ಷೆ ಪ್ರವೇಶ ಪತ್ರ ಬಿಡುಗಡೆ; ಡೌನ್​ಲೋಡ್ ಮಾಡಿಕೊಳ್ಳುವ ವಿಧಾನ ಹೀಗಿದೆ..

CA exam 2021: ಸಿಎ ಪರೀಕ್ಷೆ ಮುಂದೂಡುವುದಿಲ್ಲ ಎಂದ ಸುಪ್ರೀಂಕೋರ್ಟ್: ಪರೀಕ್ಷೆ ತೆಗೆದುಕೊಳ್ಳಲು ಆಗದವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ

Published On - 8:36 pm, Wed, 30 June 21