ರೈತರಿಗೆ ಕೊಡುವ ಸಬ್ಸಿಡಿ ಮತ್ತು ಅನುದಾನ ಕೂಡ ಏರಿಕೆ ಆಗುತ್ತದೆ: ಚಲುವರಾಯಸ್ವಾಮಿ
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಕೆಎಂಎಫ್ನ ನಂದಿನಿ ಹಾಲಿನ ದರ ಏರಿಕೆಯಾಗಿದೆ. ದರ ಏರಿಕೆಯನ್ನು ಪ್ರತಿಪಕ್ಷಗಳು ವಿರೋಧಿಸುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತವೆ. ದರ ಏರಿಕೆ ವಿಚಾರವಾಗಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಬೆಳಗಾವಿ, ಜೂನ್ 26: ಯಾವುದೇ ಸರ್ಕಾರ ಬಂದರೂ ಬೆಲೆ ಏರಿಕೆ (Price Hike) ಆಗುತ್ತದೆ. ಅಭಿವೃದ್ಧಿ ಕೆಲಸ ಮಾಡಲು ಸಹಜವಾಗಿ ದರ ಏರಿಕೆ ಆಗುತ್ತದೆ. ರೈತರಿಗೆ ಕೊಡುವ ಸಬ್ಸಿಡಿ ಮತ್ತು ಅನುದಾನ ಕೂಡ ಏರಿಕೆ ಆಗುತ್ತದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (N Chaluvaraya swamy) ಹೇಳಿದರು. ಬೆಳಗಾವಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ತೆರಿಗೆ ಹಾಕದೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂದರು.
ಅವೈಜ್ಞಾನಿಕವಾಗಿ ದರ ಏರಿಕೆ ಮಾಡಿದರೆ ತಪ್ಪು ಅಂತ ಪ್ರಶ್ನೆ ಮಾಡಬಹುದು. ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಅನುದಾನ ಕೂಡ ಕೊಟ್ಟಿಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ದರ ಕಡಿಮೆ ಇದೆ. ಒಂದು ಲೀಟರ್ಗೆ ಹೆಚ್ಚುವರಿಯಾಗಿ 50 ಎಂಎಲ್ ಹಾಲು ನೀಡುತ್ತಿರುವುದರಿಂದ 2 ರೂ. ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕಾಣಿಕೆ ನೀಡಲು ದರ ಏರಿಕೆ ಮಾಡಲಾಗಿಎ ಎಂಬ ಪ್ರತಿಪಕ್ಷಗಳ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ರಾಜ್ಯದಲ್ಲಿ ಆಡಳಿತ ಮಾಡಿದಾಗ ಎಷ್ಟು ಕೊಟ್ಟಿದೆ? BJP ಅಧಿಕಾರದಲ್ಲಿದ್ದಾಗ ಬಿಎಸ್ ಯಡಿಯೂರಪ್ಪ ಎಷ್ಟು ಕೊಟ್ಟಿದ್ದಾರೆ, ನಾವು ಬಿಜೆಪಿ ರೀತಿ ಮಾಡಿಲ್ಲ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ: ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಕರ್ನಾಟಕ ಬಿಜೆಪಿ ತೀರ್ಮಾನ
ಬಿಜೆಪಿಯವರು ದರ ಏರಿಕೆ ಮಾಡಿದರೆ ಜನಹಿತ, ನಮಗೆ ಪ್ರತಿಭಟನೆನಾ: ಖರ್ಗೆ
ದರ ಹೆಚ್ಚಳ ಮಾಡಿದರೂ ಹಾಲಿನ ಪ್ರಮಾಣ ಜಾಸ್ತಿ ಆಗಿದೆ. ರೈತರಿಗೆ ಇದರ ಲಾಭ ಆಗಲಿದೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಪೆಟ್ರೋಲ್, ಹಾಲು ದರ ಎಷ್ಟಿದೆ? ಬಿಜೆಪಿ ಆಡಳಿತ ರಾಜ್ಯ, ನಮ್ಮ ರಾಜ್ಯಕ್ಕೂ ಹೋಲಿಕೆ ಮಾಡಲಿ. ಬೆಲೆ ಏರಿಕೆಗೆ ಕಾರಣ ಯಾರು? 10 ವರ್ಷಗಳಿಂದ ದೇಶ ಆಳುತ್ತಿರುವುದು ಯಾರು? ಬಿಜೆಪಿಯವರು ದರ ಏರಿಕೆ ಮಾಡಿದರೆ ಜನಹಿತ, ನಾವು ಏರಿಕೆ ಮಾಡಿದರೆ ಪ್ರತಿಭಟನೆನಾ? ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ