AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಪಿಎಸ್ಐ ಮೇಲೆ ಹಲ್ಲೆ ಪ್ರಕರಣ: ವಿಡಿಯೋ ಮೂಲಕ ಕ್ಷಮೆ ಕೇಳಿದ ಶಾಸಕ ಸುರೇಶ್​ ಗೌಡ ಪುತ್ರಿ ಐಶ್ವರ್ಯಾ

ಮಹಿಳಾ ಪಿಎಸ್ಐ ಮೇಲೆ ಹಲ್ಲೆ ಪ್ರಕರಣ: ವಿಡಿಯೋ ಮೂಲಕ ಕ್ಷಮೆ ಕೇಳಿದ ಶಾಸಕ ಸುರೇಶ್​ ಗೌಡ ಪುತ್ರಿ ಐಶ್ವರ್ಯಾ

ದಿಲೀಪ್​, ಚೌಡಹಳ್ಳಿ
| Edited By: |

Updated on:Sep 22, 2026 | 11:58 AM

Share

ಪಿಎಸ್ಐ ಸವಿತಾ ಪಾಟೀಲ್ ಅವರಿಗೆ ಕಪಾಳ ಮೋಕ್ಷ ಮಾಡಿದ್ದ ಆರೋಪದ ಮೇಲೆ, ಶಾಸಕ ಸುರೇಶ್ ಗೌಡರ ಪುತ್ರಿ ಐಶ್ವರ್ಯ ಗೌಡ ಕ್ಷಮೆ ಯಾಚಿಸಿದ್ದಾರೆ. ಆಗಸ್ಟ್ 12ರಂದು ತುಮಕೂರಿನ ಉಕ್ಕಡ ಮಾರಮ್ಮನ ದೇವಸ್ಥಾನದಲ್ಲಿ ನಡೆದ ಘಟನೆಗೆ ಸಂಬಂಧಿಸಿ ವಿಡಿಯೋ ಹಂಚಿಕೊಂಡಿರುವ ಅವರು, ಕೋಪ ಮತ್ತು ಉದ್ವೇಗದಿಂದ ನಡೆದ ಘಟನೆ ಬಗ್ಗೆ ಬೇಷರತ್ ಕ್ಷಮೆ ಕೋರಿದ್ದಾರೆ.

ಮಂಡ್ಯ, ಸೆಪ್ಟೆಂಬರ್​​ 22: ಲೇಡಿ PSIಗೆ ಕಪಾಳಮೋಕ್ಷ ಪ್ರಕರಣ ಸಂಬಂಧ ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್​​ ಗೌಡ ಅವರ ಪುತ್ರಿ ಐಶ್ವರ್ಯಾ ಗೌಡ ವಿಡಿಯೋ ಮೂಲಕ ಪಿಎಸ್ಐ ಸವಿತಾ ಪಾಟೀಲ್ ಬಳಿ ಕ್ಷಮೆ ಕೋರಿದ್ದಾರೆ. ಆಗಸ್ಟ್ 12ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ದೇವರ ದರ್ಶನಕ್ಕೆ ಮಕ್ಕಳೊಂದಿಗೆ ಐಶ್ವರ್ಯಾ ಗೌಡ ತೆರಳಿದ್ದರು. ಈ ವೇಳೆ ಗರ್ಭಗುಡಿಗೆ ಬಿಡುವ ವಿಚಾರವಾಗಿ ಭದ್ರತೆಗೆ ನಿಯೋಜನೆಗೊಂಡಿದ್ದ ಪಿಎಸ್ಐ ಜತೆ ಐಶ್ವರ್ಯಾ ವಾಗ್ವಾದ ನಡೆಸಿದ್ದರು. ಆ ಬಳಿಕ ಪಿಎಸ್ಐಗೆ ಕಪಾಳಮೋಕ್ಷ ಮಾಡಿದ್ದರು. ಈ ಸಂಬಂಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಪಿಎಸ್​ಐ ಸವಿತಾ ಬಳಿ ಕ್ಷಮೆ ಕೋರಲು ಕೋರ್ಟ್ ತಾಕೀತು ಹಿನ್ನೆಲೆ ಐಶ್ವರ್ಯಾ ಈಗ ಕ್ಷಮೆಯಾಚಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Sep 22, 2026 11:57 AM

Follow Us