AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಆ.11ರಿಂದ ಆರಂಭ

Karnataka legislature Monsoon session: ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್ 11 ಅಧಿವೇಶನ ಆರಂಭವಾಗಲಿದೆ. ಈ ಕುರಿತಂತೆ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್ ಅಧಿಸೂಚನೆ ಹೊರಡಿಸಿದ್ದು, ಒಟ್ಟು 12 ದಿನದಲ್ಲಿ 8 ದಿನ ಅಧಿವೇಶನ ನಡೆಯಲಿದೆ.

ಕರ್ನಾಟಕ  ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್: ಆ.11ರಿಂದ ಆರಂಭ
Vidhana Soudha
TV9 Web
| Edited By: |

Updated on: Jul 18, 2025 | 8:00 PM

Share

ಬೆಂಗಳೂರು, (ಜುಲೈ 18): ಸಂಸತ್ತಿನ ಮುಂಗಾರು ಅಧಿವೇಶನ ಇದೇ ಜುಲೈ 21ರಿಂದ ಆರಂಭವಾಗಲಿದ್ದು, ಇತ್ತ ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ (Karnataka legislature Monsoon session) ಆಗಸ್ಟ್ 11ರಿಂದ ಆರಂಭವಾಗಲಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್ ಅಧಿಸೂಚನೆ ಹೊರಡಿಸಿದ್ದು, ಆಗಸ್ಟ್ 11ರಿಂದ ಆ. 22ರ ವರೆಗೆ ಕರ್ನಾಟಕ ವಿಧಾನ ಮಂಡಲದ ಮುಂಗಾರು ಅಧಿವೇಶನ ನಡೆಯಲಿದೆ. ಇನ್ನು ಆಗಸ್ಟ್ 11ರಂದು ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದು, ಒಟ್ಟು 12 ದಿನಗಳ ಪೈಕಿ 8 ದಿನ ಮಾತ್ರ ಅಧಿವೇಶನ ನಡೆಯಲಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಜಿ.ಶ್ರೀಧರ್ ಅಧಿಸೂಚನೆ ಹೊರಡಿಸಿದ್ದು, ಭಾರತ ಸಂವಿಧಾನದ 174ನೇ ಅನುಚ್ಛೇದದ (1)ನೇ ಖಂಡದ ಮೂಲಕ ನನಗೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ರಾಜ್ಯಪಾಲರು ಆದ ನಾನು 2025ರ ಆಗಸ್ಟ್ 11ರಂದು ಸೋಮವಾರ ಬೆಳಗ್ಗೆ 11ಕ್ಕೆ ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಮಂಡಲದ ಅಧಿವೇಶನ ಸಮಾವೇಶಗೊಳಿಸಬೇಕೆಂದು ಈ ಮೂಲಕ ಕರೆಯುತ್ತಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ.

ಇನ್ನೂ ಕರ್ನಾಟಕ ವಿಧಾನಮಂಡಲದ ಅಧಿವೇಶನದ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಆಗಸ್ಟ್ 11 ಸೋಮವಾರದಿಂದ 22-08-2025ರವರೆಗೆ ವಿಧಾನಮಂಡಲದ ಕಲಾಪಗಳು ನಡೆಯಲಿವೆ ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ವಿಧಾನಸಭೆಯ ತಾತ್ಕಾಲಿಕ ಕಾರ್ಯಕ್ರಮಗಳ ಪಟ್ಟಿ

  • ಆ.11ರಂದು ಸರ್ಕಾರಿ ಕಾರ್ಯಕಲಾಪಗಳು
  • ಆ.12ರಂದು ಸರ್ಕಾರಿ ಕಾರ್ಯಕಲಾಪಗಳು
  • ಆ,13ರಂದು ಸರ್ಕಾರಿ ಕಾರ್ಯಕಲಾಪಗಳು
  • ಆ.14ರಂದು ಖಾಸಗಿ-ಸರ್ಕಾರಿ ಕಾರ್ಯಕಲಾಪಗಳು
  • ಆ.15ರಂದು ಸಾರ್ವತ್ರಿಕ ರಜಾದಿನ
  • ಆ.16ರಂದು 2ನೇ ಶನಿವಾರ ಆಗಿರುವುದರಿಂದ ಸರ್ಕಾರಿ ಕಾರ್ಯಕಲಾಪಗಳು ಇರುವುದಿಲ್ಲ
  • ಆ.17ರಂದು ಭಾನುವಾರ ಸಾರ್ವಜನಿಕ ರಜಾದಿನ
  • ಆ.18ರಂದು ಸರ್ಕಾರಿ ಕಾರ್ಯಕಲಾಪಗಳು
  • ಆ.19ರಂದು ಸರ್ಕಾರಿ ಕಾರ್ಯಕಲಾಪಗಳು
  • ಆ.20ರಂದು ಸರ್ಕಾರಿ ಕಾರ್ಯಕಲಾಪಗಳು
  • ಆ.21ರಂದು ಖಾಸಗಿ-ಸರ್ಕಾರಿ ಕಾರ್ಯಕಲಾಪಗಳು
  • ಆ.22ರಂದು ಸರ್ಕಾರಿ ಕಾರ್ಯಕಲಾಪಗಳು

Follow Us
ಬಡವರಿಗೆ ‘ಸರಿಗಮಪ’ದಲ್ಲಿ ಮಣೆ ಎಂದವರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
ಬಡವರಿಗೆ ‘ಸರಿಗಮಪ’ದಲ್ಲಿ ಮಣೆ ಎಂದವರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಗೊತ್ತಾ?
ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ!
ಇಂದು ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ!
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ:ನಾಗರಿಕರ ಹಿತರಕ್ಷಣೆ ಮೊದಲ ಆದ್ಯತೆ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ದಾವಣಗೆರೆ ದಕ್ಷಿಣ ಉಪಚುನಾವಣೆ: ಆರಂಭದಲ್ಲೇ ಕಾಂಗ್ರೆಸ್​​​ಗೆ ಮರ್ಮಾಘಾತ
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
ಹಬ್ಬಕ್ಕೆ ಹೋಗಿದ್ದ ಜನ ಬೆಂಗಳೂರಿಗೆ ವಾಪಸ್: ನೆಲಮಂಗಲ ಬಳಿ ಫುಲ್ ಟ್ರಾಫಿಕ್
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
3ನೇ ವ್ಯಕ್ತಿಯ ಹಸ್ತಕ್ಷೇಪದ ಬಗ್ಗೆ ಉಮೇಶ್‌ ಮೇಟಿ ತಂಗಿ ಮಹಾದೇವಿ ಹೇಳಿದ್ದೇನು
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ಸಲ್ಮಾನ್ ಖಾನ್ ಮನೆ ಎದುರು ಅಭಿಮಾನಿಗಳ ದಂಡು: ಶುಭ ಕೋರಿದ ಸಲೀಂ ಖಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ದಾವಣಗೆರೆ ಬೈ ಎಲೆಕ್ಷನ್: ಕಾಂಗ್ರೆಸ್​​ ವಿರುದ್ಧವೇ ತೊಡೆತಟ್ಟಿದ ಪೈಲ್ವಾನ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್
ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್