ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಪತನ, ಆಗ ತಲ್ವಾರ್​ ತುದಿ ಹೇಗೆ ಜಳಪಿಸುತ್ತೆ ನೋಡಿ: ಅನಂತಕುಮಾರ್ ಹೆಗಡೆ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಅನಂತಕುಮಾರ್ ಹೆಗಡೆ ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸರ್ಕಾರ ಪತನ ಆಗುತ್ತದೆ. ಆಗ ನೋಡಿ ಮಾರಿ ಹಬ್ಬ ಆರಂಭ ಆಗುತ್ತದೆ. ಅವಾಗ ನಮ್ಮ ತಲ್ವಾರದ ತುದಿ ಹೇಗೆ ಜಳಪಿಸುತ್ತೆ ನೋಡಿ ಎಂದು ಮತ್ತೆ ಪ್ರಚೋದಾತ್ಮಕ ಹೇಳಿಕೆ ನೀಡಿದ್ದಾರೆ.

ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಪತನ, ಆಗ ತಲ್ವಾರ್​ ತುದಿ ಹೇಗೆ ಜಳಪಿಸುತ್ತೆ ನೋಡಿ: ಅನಂತಕುಮಾರ್ ಹೆಗಡೆ
ಸಂಸದ ಅನಂತಕುಮಾರ್ ಹೆಗಡೆ
Edited By:

Updated on: Mar 06, 2024 | 3:01 PM

ಬೆಳಗಾವಿ, ಮಾರ್ಚ್​​ 6: ದೇಶದಲ್ಲಿ ಬಿಜೆಪಿಗೆ 400 ಸೀಟು ಬಂದರೆ ಕೇಂದ್ರದಲ್ಲಿ ನಮ್ಮ ಸರ್ಕಾರ ಬರುತ್ತೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ರಾಜ್ಯದಲ್ಲೂ ನಮ್ಮ ಸರ್ಕಾರವೇ ಇರುತ್ತೆ. ಆಗ ನೋಡಿ ಮಾರಿ ಹಬ್ಬ ಆರಂಭ ಆಗುತ್ತದೆ. ಅವಾಗ ನಮ್ಮ ತಲ್ವಾರದ ತುದಿ ಹೇಗೆ ಜಳಪಿಸುತ್ತೆ ನೋಡಿ ಎಂದು ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಮತ್ತೆ ಪ್ರಚೋದಾತ್ಮಕ ಹೇಳಿಕೆ ನೀಡಿದ್ದಾರೆ. ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸರ್ಕಾರ ಪತನ ಆಗುತ್ತದೆ ಎಂದು ಹೇಳಿದ್ದಾರೆ.

ಅದಕ್ಕಾಗಿ ಬಿಜೆಪಿ ನಿಮ್ಮಲ್ಲಿ ವಿನಂತಿ ಮಾಡುತ್ತೆ ಪ್ರತಿಯೊಂದು ಓಟು ಮಹತ್ವವಿದೆ. ಈ ಹಿಂದೆ ಸರ್ಕಾರ ಕೇವಲ ಒಂದು ಮತದ ಅಂತರ ಸೋಲಾಗಿ ವಾಜಪೇಯಿ ಪ್ರಧಾನಿ ಸ್ಥಾನದಿಂದ ಕೆಳಗಿಳಿದರು. ಬರುವ ಎರಡು ತಿಂಗಳ ಚುನಾವಣೆಯಲ್ಲಿ ಪ್ರಕ್ರಿಯೆ ಮುಗಿದು ಹೋಗಿರುತ್ತೆ. ಐದರಿಂದ ಹತ್ತು ದಿನಗಳ ಅವಧಿಯಲ್ಲಿ ಚುನಾವಣೆ ದಿನಾಂಕ ಘೋಷಣೆ ಆಗುತ್ತೆ. ಏಪ್ರಿಲ್ ಕೊನೆ ವಾರದಲ್ಲಿ ಚುನಾವಣೆ ಮುಗಿಯುತ್ತೆ ಅಲ್ಲಿಯವರೆಗೆ ನಾವು ಕೆಲಸ ಮಾಡಬೇಕಿದೆ. ಮುಂದಿನ ಎರಡು ತಿಂಗಳಲ್ಲಿ ಚುನಾವಣೆ ಬಂದಿದೆ, ಎಲ್ಲರೂ ಪ್ರಚಾರ ಮಾಡಬೇಕು ಅಂತಿಲ್ಲ, ಹೊಸಬರಿಗೆ ಮೋದಿ ಬಗ್ಗೆ ಹೇಳಬೇಕು. ಮತ್ತೊಮ್ಮೆ ಮೋದಿಗೆ ಅವಕಾಶ ಕೊಡಬೇಕೆಂದು ಮನವಿ ಮಾಡಿದ್ದಾರೆ.

ಕಾಂಗ್ರೆಸ್​ ವಿರುದ್ಧ ಸಂಸದ ಅನಂತಕುಮಾರ್ ಹೆಗಡೆ ಕಿಡಿ

ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಹರಾಜಾಗುತ್ತಿದೆ. 1 ವರ್ಷದಲ್ಲಿ ಸಿದ್ದರಾಮಯ್ಯ ಸರ್ಕಾರ ಹರಾಜಾಗಿದೆ. ವೇತನ ಕೊಡುವುದಕ್ಕೂ ಸರ್ಕಾರದ ಬಳಿ ಹಣ ಇಲ್ಲ. ಮನೆಯಲ್ಲಿ ಯಾರಾದರೂ ಸರ್ಕಾರಿ ನೌಕರರಿದರೆ ಕೇಳಿ ಸಂಬಳದಲ್ಲೂ ವ್ಯತ್ಯಯ ಆಗುತ್ತಿದೆ ಎಂದು ಕಾಂಗ್ರೆಸ್​ ವಿರುದ್ಧ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಬಿಜೆಪಿ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಯಾರಿಗೆಲ್ಲ ಟಿಕೆಟ್? ಸಂಭಾವ್ಯ ಅಭ್ಯರ್ಥಿಗಳ ವಿವರ ಇಲ್ಲಿದೆ

ಪ್ರಧಾನಿ ಮೋದಿ ಗ್ಯಾರಂಟಿ ಕಳೆದ ಹತ್ತು ವರ್ಷಗಳಿಂದ ಜಾರಿಯಲ್ಲಿದೆ. ದಿನದಿಂದ ದಿನಕ್ಕೆ ಭಾರತ ದೇಶ ಗಟ್ಟಿಯಾಗುತ್ತಿದೆ, ದೇಶ ಸಾಧನೆಯ ಕಡೆ ಹೊರಟಿದೆ. ನಾವೇನೂ ಹೇಳಿದ್ದೇವೆ ಅದನ್ನ ಮಾಡಿ ತೋರಿಸಿದ್ದೇವೆ. ಕಾಶ್ಮೀರ, ರಾಮಮಂದಿರ, ಮುಂದಿನ ದಿನಗಳಲ್ಲಿ ಮಥುರಾ ಕಾಶಿ ವಿಶ್ವನಾಥ ಇರಬಹುದು. ಇನ್ನು ಕೆಲವು ದೇವಾಲಗಳು ಇವತ್ತಲ್ಲ ನಾಳೆ ಹಿಂದುಗಳ ಸುಪರ್ದಿಗೆ ಬರುತ್ತವೆ. ಎಲ್ಲವೂ ಯಾವಾಗ ಸಾಧ್ಯ ಅಂದರೆ ಕೇಂದ್ರದಲ್ಲಿ ಮೋದಿ ಸರ್ಕಾರದ ಬಂದಾಗ‌ ಎಂದರು.

ಇದನ್ನೂ ಓದಿ: ಯಾವುದಾದರೂ ಉತ್ತರಕುಮಾರನಿಗೆ ಧಮ್ಮಿದ್ರೆ ಬಂದು ನನ್ನ ಕುರ್ಚಿ ಮೇಲೆ ಕೂರಲಿ: ಅನಂತಕುಮಾರ್ ಹೆಗಡೆ, ಸಂಸದ

ಇದುವರೆಗೆ ಕಾಂಗ್ರೆಸ್​ನಿಂದ ಯಾರು ನಿಲುತ್ತಾರೆ ಗೊತ್ತಿಲ್ಲ, ಆದರೆ ವದಂತಿ ಇದೆ. ಖಾನಾಪುರ ಮತಕ್ಷೇತ್ರದಲ್ಲಿ ರಿಜೆಕ್ಟ್ ಮೆಟೀರಿಯಲ್ ಲೋಕಸಭಾ ಕ್ಯಾಂಡಿಡೆಟ್ ಆಗಲಿದ್ದಾರಂತೆ. ಪರೋಕ್ಷವಾಗಿ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳಕರ್ ವಿರುದ್ಧ ವಾಗ್ದಾಳಿ ಮಾಡಿದರು. ಇಲ್ಲಿ ರಿಜೆಕ್ಟ್ ಆಗಿರುವ ಕ್ಯಾಂಡಿಡೇಟ್ ಮೆಟಿರಿಯಲ್ ಲೋಕಸಭೆ ನಿಲ್ಲಲಿದ್ದಾರಂತೆ. ಅವರಿಗೆ ಹೇಗೆ ಉತ್ತರ ಕೊಡಬೇಕು ಅನೋದು ನಿಮಗೆ ಗೊತ್ತಿದೆ. ಕ್ಷೇತ್ರದ ಜನರು ಬಹಳ ಬುದ್ದಿವಂತರಿದ್ದಾರೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us