ಮುಡಾ ಹಗರಣ ಕೇಸ್​: ಸಿಎಂ ಪತ್ನಿ ವಾಪಸ್​ ನೀಡಿದ್ದ 14 ನಿವೇಶನಗಳ ಖಾತೆ ರದ್ದು!

ಮುಡಾ ಹಗರಣ (MUDA Scam Case) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ, ಇ.ಡಿ ಎಫ್‌ಐಆರ್‌ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಸೇರಿದ್ದ 14 ನಿವೇಶನಗಳ ಖಾತೆಯನ್ನು ರದ್ದುಗೊಳಿಸಲಾಗಿದೆ.

ಮುಡಾ ಹಗರಣ ಕೇಸ್​: ಸಿಎಂ ಪತ್ನಿ ವಾಪಸ್​ ನೀಡಿದ್ದ 14 ನಿವೇಶನಗಳ ಖಾತೆ ರದ್ದು!
ಮುಡಾ ಹಗರಣ
Follow us
| Updated By: ರಮೇಶ್ ಬಿ. ಜವಳಗೇರಾ

Updated on:Oct 01, 2024 | 6:46 PM

ಮೈಸೂರು, (ಅಕ್ಟೋಬರ್ 01): ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ  ಸಿದ್ದರಾಮಯ್ಯನವರಿಗೆ ಮೇಲೆಂದ ಮೇಲೆ ಸಂಕಷ್ಟಗಳು ಎದುರಾಗುತ್ತಿರುವ ಬೆನ್ನಲೇ ಅವರ ಪತ್ನಿ ಸೈಟ್​ಗಳನ್ನು ವಾಪಸ್ ನೀಡಿದ್ದಾರೆ. ತಮಗೆ ನೀಡಿದ್ದ ಒಟ್ಟು 14 ನಿವೇಶನಗಳನ್ನು ವಾಪಸ್ ಮುಡಾಗೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಆ 14 ನಿವೇಶನಗಳ ಖಾತೆ ರದ್ದಾಗಿದೆ.  ಖುದ್ದು ಸಿಎಂ ಪತ್ನಿ ಪಾರ್ವತಿ ಅವರೇ ಇಂದು(ಅಕ್ಟೋಬರ್ 01) ಮೈಸೂರಿನ ಉಪನೋಂದಣಿ ಕಚೇರಿಗೆ ತೆರಳಿ ತಮಗೆ ಮಂಜೂರಾಗಿದ್ದ ಒಟ್ಟು 14 ಮುಡಾ ನಿವೇಶನಗಳ ಖಾತೆ ರದ್ದು ಮಾಡಿಸಿದ್ದಾರೆ.

ಮುಡಾ ಆಯುಕ್ತರ ರಘುನಂದನ್​ ಹೇಳಿದ್ದೇನು?

ಇನ್ನು ಈ ಬಗ್ಗೆ ಮುಡಾ ಆಯುಕ್ತರ ರಘುನಂದನ್​ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, 14 ಸೈಟ್​ಗಳು ಮುಡಾಗೆ ವಾಪಸ್​ ಆಗಿದ್ದು, ಈಗ 14 ಸೈಟ್​ಗಳ ಕ್ರಯಪತ್ರ ರದ್ದಾಗಿದೆ. ಅವರು ಸ್ವಇಚ್ಛೆಯಿಂದ ಬಂದು ಕೊಟ್ಟಿದ್ದಕ್ಕೆ ನಾವು ಸ್ವೀಕರಿಸಿದ್ದೇವೆ. ಇದನ್ನ ಸರ್ಕಾರದ ಗಮನಕ್ಕೆ ತಂದಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಪಾರ್ವತಮ್ಮ ಸಿದ್ದರಾಮಯ್ಯ ಅವರ ಈಗ ಸ್ವ ಇಚ್ಛೆಯಿಂದ ಸೈಟ್ ವಾಪಸ್ಸು ಕೊಟ್ಟಿದ್ದಾರೆ. ಕಾನೂನು ಪರಿಗಣಿಸಿ ನಾವು ಪಾರ್ವತಮ್ಮ ಅವರ ಹೆಸರಿನಲ್ಲಿ ಇದ್ದ 14 ಸೈಟ್ ಗಳ ಸೆಲ್ ಡೀಡ್ ರದ್ದು ಮಾಡಿದ್ದೇವೆ‌. ಈಗ 14 ನಿವೇಶನ ಮೂಡಾ ವ್ಯಾಪ್ತಿಗೆ ಬಂದಿವೆ, ಈ ಸೈಟ್ ಗಳನ್ನು ಬೇರೆಯವರಿಗೆ ಹಂಚಬಹುದಾ ಅಥವಾ ತನಿಖೆ ಮುಗಿಯುವವರೆಗೂ ಅದನ್ನು ಹಂಚಬಾರದು ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇವೆ. ಪಾರ್ವತಮ್ಮ ಅವರ ಸೈಟ್ ಗಳು ತಮ್ಮ ವಶಕ್ಕೆ ಪಡೆದ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ಕೊಡುತ್ತೇವೆ. ತನಿಖೆ ನಡೆಯುತ್ತಿದ್ದರು ಸಂಬಂಧಿತರು ಸೈಟ್ ವಾಪಾಸ್ ಕೊಟ್ಟರೆ ವಾಪಸ್ಸು ಪಡೆಯಬಹುದು. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆ ಎಂದರು.

ಇದನ್ನೂ ಒದಿ: ಸೈಟ್ ಹಿಂದಿರುಗಿಸಿದ್ರೆ ಮುಡಾ ಕೇಸಿನಿಂದ ಸಿಎಂ ಬಚಾವ್ ಆಗ್ತಾರಾ? ಕಾನೂನು ತಜ್ಞರು ಹೇಳಿದ್ದಿಷ್ಟು

ಮುಡಾ ಕಾರ್ಯದರ್ಶಿ ಹೇಳಿದ್ದಿಷ್ಟು

ಸಿದ್ದರಾಮಯ್ಯ ಪತ್ನಿ ಸೈಟ್ ವಾಪಸ್ಸು ಕೊಟ್ಟಿರುವ ಬಗ್ಗೆ ಮುಡಾ ಕಾರ್ಯದರ್ಶಿ ಪ್ರಸನ್ನಕುಮಾರ್ ಮಾತನಾಡಿ, 1991ನ ರೂಲ್ಸ್‌ 8ನಲ್ಲಿ ಸ್ವ ಇಚ್ಚೆಯಿಂದ ಸೈಟ್ ಕೊಡಬಹುದು. ಆ ಸೈಟ್‌ನನ್ನು ನಾವು ಪಡೆದುಕೊಳ್ಳಲು ಅವಕಾಶವಿದೆ. ನಮ್ಮ ಬಳಿ ಭೂ ಮಾಲೀಕರು ಬಂದಿಲ್ಲ. ಅವರ ಸ್ಥಳಕ್ಕೆ ಹೋಗಿ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶವಿದೆ. ಈ ರೀತಿ ಕಚೇರಿಗೆ ಬಾರದೆ ಅವರು ನಿವೇಶನ ವಾಪಸ್ಸು ಕೊಟ್ಟಿದ್ದಾರೆ. ನಾವು ಇದನ್ನು ರಿಜಿಸ್ಟರ್‌ಗೆ ಕಳಿಸಿಕೊಟ್ಟಿದ್ದೇವೆ. ಮುಂದಿನ ಎಲ್ಲಾ ಪ್ರಕ್ರಿಯೆಯನ್ನು ರಿಜಿಸ್ಟರ್ ಮಾಡ್ತಾರೆ. 24 ಗಂಟೆಯಲ್ಲಿ ಕಾನೂನು ಪ್ರಕಾರ ರದ್ದು ಮಾಡುವ ಅವಕಾಶವಿದೆ/ ನಮ್ಮಲ್ಲಿ ಇರುವ ವಕೀಲರು ತಜ್ಞರ ಬಳಿಯೂ ಕೇಳಿದ್ದೇವೆ. ಅವರು ಸಹ ಅವಕಾಶ ಇದೆ ಎಂದು ಹೇಳಿದ್ದಾರೆ. ಇದು ಅಪರೂಪದಲ್ಲಿ ಅಪರೂಪದ ಪ್ರಕರಣ. ವಾಪಸ್ಸು ಕೊಟ್ಟಿರುವುದು ಮುಡಾದಲ್ಲಿ ಮೊದಲ ಪ್ರಕರಣ. ಇದರಿಂದ ಮುಡಾಗೆ ಅನಕೂಲವಾಗಲಿದ್ದು, ಮುಂದೆ ಯಾರೇ ಸೈಟನ್ನು ವಾಪಸ್ಸು ಕೊಟ್ಟರು ಇಷ್ಟೇ ವೇಗವಾಗಿ ವಾಪಸ್ಸು ಪಡೆಯುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಪತ್ನಿ ಪಾವರ್ತಿ ಅವರು ತಮ್ಮ ಜಮೀನಿಗೆ ಪರಿಹಾರ ನೀಡುವಂತೆ ಮುಡಾಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಂತೆ ಪರಿಹಾರವಾಗಿ ಪಾರ್ವತಿ ಅವರಿಗೆ ಮುಡಾ ವಿಜಯನಗರದ 3 ಮತ್ತು 4ನೇ ಹಂತಗಳಲ್ಲಿ ವಿವಿಧ ಅಳತೆಯಲ್ಲಿ ಒಟ್ಟು 14 ನಿವೇಶಗಳನ್ನು ನೀಡಿತ್ತು. ಇದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಪ್ರಕರಣದಲ್ಲಿ ಈಗ ಇಡಿ ಪ್ರವೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಹಾಗೂ ಅವರ ಕುಟುಂಬಕ್ಕೆ ಸಂಕಷ್ಟ ಹೆಚ್ಚಾಗಿದೆ. ಇದರಿಂದ ಪಾರ್ವತಿ ಅವರು ಮುಡಾ ಪತ್ರ ಬರೆದು ನೀಡಲಾಗಿದ್ದ 14 ನಿವೇಶ ವಾಪಸ್‌ ಪಡೆಯುವಂತೆ ನಿನ್ನೆ(ಸೆ.30)  ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಬಳಿಕ ಪುತ್ರ ಯತೀಂದ್ರ ಇಂದು (ಅಕ್ಟೋಬರ್ 01) ಬೆಳಗ್ಗೆ ಮುಡಾ ಆಯುಕ್ತನ್ನು ಭೇಟಿ ಮಾಡಿ ತಾಯಿಯ ಪತ್ರವನ್ನು ನೀಡಿದ್ದರು. ಇದೀಗ ಪಾರ್ವತಿ ಅವರಿಗೆ ಮಂಜೂರಾಗಿದ್ದ ಮುಡಾ 14 ನಿವೇಶನಗಳ ಖಾತೆಯನ್ನು ರದ್ದುಗೊಳಿಸಲಾಗಿದ್ದು, 14 ಸೈಟ್​ಗಳು ಮುಡಾ ತೆಕ್ಕೆಗೆ ಹೋಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:02 pm, Tue, 1 October 24