ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಆದೇಶದ ವೇಳೆ ಗಾಂಧೀಜಿಯ ರಾಮರಾಜ್ಯ ಪಾಠ ಹೇಳಿದ ಕೋರ್ಟ್​!

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ತೀರ್ಪು ಪ್ರಕಟಿಸುವ ವೇಳೆ ಆಡಳಿತಗಾರರಿಗೆ ಗಾಂಧೀಜಿಯವರ ರಾಮ ರಾಜ್ಯ ಪರಿಕಲ್ಪನೆ ಬಗ್ಗೆ ಪಾಠ ಹೇಳಿದ್ದ ವಿಚಾರ ಬೆಳಕಿಗೆ ಬಂದಿದೆ. ಜಡ್ಜ್ ಹೇಳಿದ್ದೇನೆಂಬ ವಿವರ ಇಲ್ಲಿದೆ.

ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಆದೇಶದ ವೇಳೆ ಗಾಂಧೀಜಿಯ ರಾಮರಾಜ್ಯ ಪಾಠ ಹೇಳಿದ ಕೋರ್ಟ್​!
ಸಿದ್ದರಾಮಯ್ಯ ವಿರುದ್ಧ ಆದೇಶದ ವೇಳೆ ಗಾಂಧೀಜಿಯ ರಾಮರಾಜ್ಯ ಪಾಠ ಹೇಳಿದ ಕೋರ್ಟ್ (ಸಾಂದರ್ಭಿಕ ಚಿತ್ರ)
Follow us
Shivaprasad
| Updated By: Ganapathi Sharma

Updated on:Sep 27, 2024 | 2:09 PM

ಬೆಂಗಳೂರು, ಸೆಪ್ಟೆಂಬರ್ 27: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿದ್ದು, ಅದರಂತೆ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತರು ಎಫ್ಐಆರ್ ದಾಖಲಿಸುವ ಸಾಧ್ಯತೆ ಇದೆ. ಆದರೆ, ತನಿಖೆಗೆ ಆದೇಶಿಸಿ ತೀರ್ಪು ಪ್ರಕಟಿಸಿದ್ದ ವೇಳೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆಡಳಿತಗಾರರಿಗೆ ಗಾಂಧೀಜಿ ತತ್ವಗಳ ಬಗ್ಗೆ ಪಾಠ ಮಾಡಿದ ವಿಚಾರ ಬಹಿರಂಗವಾಗಿದೆ.

ತೀರ್ಪು ನೀಡುವ ವೇಳೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಜಡ್ಜ್, ಡಾ. ಎಂ ರಾಮಾ ಜೋಯಿಸ್ ಅವರ ಪುಸ್ತಕದಲ್ಲಿನ ಆಡಳಿತದ ಕಲ್ಪನೆಯನ್ನು ಉಲ್ಲೇಖಿಸಿದ್ದಾರೆ. ‘ರಾಜ ಧರ್ಮದೊಂದಿಗೆ ರಾಜನೀತಿಯ ಪಾಠಗಳು’ ಪುಸ್ತಕದ ಅಂಶಗಳನ್ನು ಉಲ್ಲೇಖಿಸಿರುವುದು ತಿಳಿದುಬಂದಿದೆ.

ಗಾಂಧೀಜಿ ರಾಮ ರಾಜ್ಯದ ಪಾಠ ಮಾಡಿದ ಜಡ್ಜ್

ಗಾಂಧೀಜಿಯವರ ಆದರ್ಶ, ರಾಮರಾಜ್ಯದ ಆಡಳಿತವಾಗಿತ್ತು. ಉನ್ನತ ನೈತಿಕ ಜೀವನದ ಸಮಾಜದ ನಿರ್ಮಾಣದ ಪರವಾಗಿತ್ತು. ದಕ್ಷ ಹಾಗೂ ಪ್ರಾಮಾಣಿಕ ಆಡಳಿತವಿದ್ದರೆ ಮಾತ್ರ ಆದರ್ಶ ಸಮಾಜ ನೆಲೆಗೊಳ್ಳಲು ಸಾಧ್ಯ. ಇಂಥ ಸಮಾಜದಲ್ಲಿ ಮಾತ್ರ ಧರ್ಮ, ಅರ್ಥ, ಕಾಮ, ಮೋಕ್ಷಗಳಿಗೆ ಅವಕಾಶವಿದೆ ಎಂದು ಜಡ್ಜ್ ನೈತಿಕತೆಯ ಪಾಠ ಹೇಳಿದ್ದಾರೆ.

ಇದನ್ನೂ ಓದಿ: ಮುಡಾ ಹಗರಣ ತನಿಖೆಗೆ ಸಿಬಿಐ ಎಂಟ್ರಿ ತಡೆಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್!

ರಾಜ ಧರ್ಮ ಬೋಧನೆ

ಹಿಂದೆ ರಾಜನಾದವನು ಆಡಳಿತದ ಧರ್ಮ (ರಾಜ ಧರ್ಮ) ಪಾಲಿಸಬೇಕಿತ್ತು. ಮಹಾತ್ಮ ಗಾಂಧೀಜಿಯವರ ಪ್ರಕಾರ ಇದುವೇ ಆದರ್ಶ ರಾಮರಾಜ್ಯ. ಈಗ ಜನಪ್ರತಿನಿಧಿಗಳಿಂದ ಕೂಡಿದ ಜವಾಬ್ದಾರಿಯುತ ಸರ್ಕಾರವಿದೆ. ಆಡಳಿತದಲ್ಲಿರುವವರು ರಾಜ ಧರ್ಮವನ್ನು ಪಾಲಿಸದಿದ್ದರೆ ಆಗ ಅದು ರಾವಣ ರಾಜ್ಯವಾಗಲಿದೆ. ರಾಮ ರಾಜ್ಯವಾಗಬೇಕೋ ರಾವಣ ರಾಜ್ಯವಾಗಬೇಕೋ ಎಂಬುದನ್ನು ನಾವೇ ಆರಿಸಿಕೊಳ್ಳಬೇಕಿದೆ ಎಂದು ಆಡಳಿತಗಾರರಿಗೆ, ಸರ್ಕಾರಕ್ಕೆ ಜಡ್ಜ್ ಪಾಠ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:06 pm, Fri, 27 September 24

‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಎಕ್ಸಿಟ್ ಪೋಲ್​ಗಳು ನೀಡುವ ಭವಿಷ್ಯದ ಮೇಲೆ ವಿಶ್ವಾಸವಿಲ್ಲ: ಶಿವಲಿಂಗೇಗೌಡ
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಪರ್ತ್​ ಟೆಸ್ಟ್‌ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಆಡುವ ಅವಕಾಶ..!
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಬಡವರ ಅನ್ನ ಕಸಿದು ಮಂತ್ರಿಗಳ ಬಂಗ್ಲೆ ರಿನೋವೇಶನ್ ಗೆ ಹಣ ಬಳಕೆ: ಆರ್​. ಅಶೋಕ
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ TRP
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಬಿಗ್​ಬಾಸ್ ಮನೆಯಲ್ಲಿ ಶುರುವಾಗಿದೆ ಕಳ್ಳರ ಕಾಟ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
ಅನ್ನಭಾಗ್ಯ ಎಂದು ಸಿದ್ದರಾಮಯ್ಯರಿಂದ ಕನ್ನಭಾಗ್ಯ: ಆರ್ ಅಶೋಕ್ ವ್ಯಂಗ್ಯ
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ