ಘಂಟೆ ಗಣಪತಿ, ಸಾತೊಡ್ಡಿ ಜಲಪಾತ.. ಯಲ್ಲಾಪುರದಲ್ಲಿ ನೋಡಲೇಬೇಕಾದ ಸ್ಥಳಗಳು ಏನೆಲ್ಲಾ ಇವೆ ಗೊತ್ತಾ?

Uttara Kannada Tourist Places: ಸಾತೊಡ್ಡಿ ಕರ್ನಾಟಕದ ಪ್ರಸಿದ್ದ ಜಲಪಾತವಾಗಿದೆ. ಚಿಕ್ಕಪುಟ್ಟ ತೊರೆ, ಹಳ್ಳಗಳಿಂದ ಈ ಜಲಪಾತ ಸೃಷ್ಟಿಯಾಗಿದೆ. ದಟ್ಟ ಕಾಡಿನ ನಡುವೆ ೫೦ ಅಡಿ ಎತ್ತರದಿಂದ ಧುಮುಕುತ್ತದೆ. ಜಲಪಾತದ ನೀರು ಮುಂದೆ ಕೊಡಸಳ್ಳಿ ಜಲಾಶಯದ ಹಿನ್ನಿರಿನಲ್ಲಿ ಸಂಗಮವಾಗುತ್ತದೆ.

ಘಂಟೆ ಗಣಪತಿ, ಸಾತೊಡ್ಡಿ ಜಲಪಾತ.. ಯಲ್ಲಾಪುರದಲ್ಲಿ ನೋಡಲೇಬೇಕಾದ ಸ್ಥಳಗಳು ಏನೆಲ್ಲಾ ಇವೆ ಗೊತ್ತಾ?
ಬೇಡ್ತಿ ನದಿಯ ಸುಂದರ ಸೃಷ್ಟಿ ಮಾಗೋಡು ಜಲಪಾತ (ಚಿತ್ರಕೃಪೆ:ವಿಕಿಪೀಡಿಯಾ)
Follow us
guruganesh bhat
| Updated By: Skanda

Updated on: Mar 13, 2021 | 7:43 AM

ಉತ್ತರ ಕನ್ನಡ ಪ್ರವಾಸಿಗರ ಪಾಲಿನ ಸ್ವರ್ಗ. ಇಲ್ಲಿನ ಪ್ರತಿಯಂದೂ ತಾಲೂಕುಗಳು ಅದರದೇ ಆದ ವೈಶಿಷ್ಟ್ಯತೆ ಹೊಂದಿವೆ. ಅದರಲ್ಲೂ ಯಲ್ಲಾಪುರವಂತೂ. ಪ್ರವಾಸಿಗರ ನೆಚ್ಚಿನ ತಾಣ. ಇದೀಗ ಕೊರೊನಾ ಲಾಕ್​ಡೌನ್ ಕೊನೆಗೊಂಡು ಇಲ್ಲಿಯ ಬಹುತೇಕ ಪ್ರವಾಸಿ ಸ್ಥಳಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಹಾಗಾದರೆ, ಉತ್ತರ ಕನ್ನಡದ ಯಲ್ಲಾಪುರದಲ್ಲಿ ನೋಡಲೇಬೇಕಾದ ಸ್ಥಳಗಳು ಯಾವುವು.. ಇಲ್ಲಿದೆ ಸಂಪೂರ್ಣ ವಿವರ.

ಸಾತೊಡ್ಡಿ ಕರ್ನಾಟಕದ ಪ್ರಸಿದ್ದ ಜಲಪಾತವಾಗಿದೆ. ಚಿಕ್ಕಪುಟ್ಟ ತೊರೆ, ಹಳ್ಳಗಳಿಂದ ಈ ಜಲಪಾತ ಸೃಷ್ಟಿಯಾಗಿದೆ. ದಟ್ಟ ಕಾಡಿನ ನಡುವೆ 50 ಅಡಿ ಎತ್ತರದಿಂದ ಧುಮುಕುತ್ತದೆ. ಜಲಪಾತದ ನೀರು ಮುಂದೆ ಕೊಡಸಳ್ಳಿ ಜಲಾಶಯದ ಹಿನ್ನಿರಿನಲ್ಲಿ ಸಂಗಮವಾಗುತ್ತದೆ.

ಸಾತೊಡ್ಡಿ ಜಲಪಾತಕ್ಕೆ ತೆರಳುವ ದಾರಿಯಲ್ಲೇ ಕಾಳಿ ನದಿಗೆ ತೂಗುಸೇತುವೆ ಇದೆ. ಯಲ್ಲಾಪುರ ಹಾಗೂ ಜೊಯಿಡಾ ಬೆಸೆಯುವಲ್ಲಿ ಈ ತೂಗು ಸೇತುವೆ ಪ್ರಮುಖ ಪಾತ್ರ ವಹಿಸಿದೆ. ಸೇತುವೆ ನಿರ್ಮಾಣದ ಪೂರ್ವದಲ್ಲಿ ಜನ ತೆಪ್ಪದ ಮೂಲಕ ಸಾಗುತ್ತಿದ್ದರು. ಸೇತುವೆ ಸಂಚರಿಸುವಾಗ ಕೆಳಗೆ ಹರಿಯುವ ಕಾಳಿನದಿ ನೋಡುತ್ತ ತಂಪಾದ ಗಾಳಿ ಸವಿಯಬಹುದು.

ಕವಡಿಕೆರೆ ಪ್ರವಾಸಿ ತಾಣವಾಗಿಯೂ, ಪುಣ್ಯಕ್ಷೇತ್ರವಾಗಿಯೂ ಕವಡಿಕೆರೆ ಪ್ರಸಿದ್ದಿ ಪಡೆದಿದೆ. 60 ಎಕರೆ ಪ್ರದೇಶದಲ್ಲಿ ಪೃಕೃತಿ ಸಹಜವಾಗಿ ನಿರ್ಮಾಣವಾದ ಕೆರೆ ದಡದಲ್ಲಿ ದುರ್ಗಾ ದೇವಸ್ಥಾನವಿದೆ. ಕೆರೆ ಹಲವು ಬಗೆ ಬಗೆಯ ಮೀನು ಹಾಗೂ ಹಲವು ವಿಸ್ಮಯಗಳೊಂದಿಗೆ ಕಮಲದ ಹೂಗಳಿಂದ ತುಂಬಿಕೊಂಡಿದೆ.

GHANTE GANAPATI

ಚಂದಗುಳಿಯ ಘಂಟೆ ಗಣಪತಿ ದೇಗುಲದಲ್ಲಿ ಭಕ್ತರು ಹರಕೆ ತೀರಿಸುವ ಬಗೆಯೇ ವಿಶಿಷ್ಟ

ಘಂಟೆ ಗಣಪತಿ ಇಷ್ಟಾರ್ಥ ಸಿದ್ದಿಗೆ ಗಂಟೆ ಗಣಪತಿ ದೇವಸ್ಥಾನ ಪ್ರಸಿದ್ದಿ. ಭಕ್ತರು ದೇವರಿಗೆ ಹರಕ ರೂಪದಲ್ಲಿ ಗಂಟೆಗಳನ್ನು ಸಲ್ಲಿಸುತ್ತಾರೆ. ಮಾತು ಬಾರದವರಿಗೆ, ತೊದಲು ಮಾತಿನ ಮಕ್ಕಳಿಗಾಗಿ ಹರಕೆ ಕಟ್ಟಿಕೊಳ್ಳುವದು ವಾಡಿಕೆ ಎಲ್ಲಾ ಧರ್ಮಿಯರು ಇಲ್ಲಿ ನಡೆದುಕೊಳ್ಳುತ್ತಾರೆ. ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಗಂಟೆ ಗಣಪತಿ ಸನ್ನಿಧಿಯಲ್ಲಿ ಭಕ್ತರು ಪ್ರಸಾದ ಕೇಳುತ್ತಾರೆ.

ಮಾಗೋಡು ಜಲಪಾತ ಬೇಡ್ತಿ ನದಿಯಿಂದ ಮಾಗೋಡು ಜಲಪಾತ ಸೃಷ್ಟಿಯಾಗಿದೆ. 650 ಅಡಿ ಎತ್ತರದಿಂದ ಎರಡು ಹಂತದಲ್ಲಿ ರಮಣೀಯವಾಗಿ ಧುಮುಕುತ್ತದೆ. ಮಳೆಗಾಲದಲ್ಲಿ ಜಲಪಾತದ ಸುತ್ತಲು ದಟ್ಟವಾದ ಬಿಳಿಮೋಡ ಕವಿಯುತ್ತದೆ. ಮಳೆಗಾಲದ ಕೊನೆ ಹಾಗೂ ಚಳಿಗಾಲದಲ್ಲಿ ಜಲಪಾತ ವೀಕ್ಷಣೆ ಸುಲಭ. ಸಂಜೆ 5 ಗಂಟೆಯ ಇಲ್ಲಿಗೆ ತೆರಳುವದ ನಿಷಿದ್ಧ.

SATODDI FALLS YELLAPUR

ಸಾತೊಡ್ಡಿ ಜಲಪಾತ (ಚಿತ್ರಕೃಪೆ: ವಿಕಿಪೀಡಿಯಾ)

ಜೇನುಕಲ್ಲು ಗುಡ್ಡ 450 ಮೀಟರ್ ಎತ್ತರದಲ್ಲಿರುವ ಜೇನುಕಲ್ಲು ಗುಡ್ಡದ ಕೆಳಗೆ ಆಳವಾದ ಪ್ರಪಾತವಿದೆ. ಪ್ರಪಾತದಲ್ಲಿ ನದಿ ಹರಿಯುತ್ತದೆ. ಪ್ರತಿದಿನದ ಸೂರ್ಯಾಸ್ಥವೂ ಇಲ್ಲಿನ ವಿಶೇಷ. ಗುಡ್ಡದ ತಳಭಾಗ ಜೇನುಗೂಡುಗಳಿವೆ. ಬಳೆಕಲ್ಲು ಗುಡ್ಡ ಮತ್ತು ಕೊಡೆಕಲ್ಲು ಗುಡ್ಡಗಳು ಜೇನುಕಲ್ಲು ಗುಡ್ಡದ ಸಮೀಪದಲ್ಲಿದೆ.

ನಂದೊಳ್ಳಿ ಸಮೀಪದ ಪುರಾತನ ಭೃಹ್ಮೇತಿ ಕೆರೆಯು ಶಿರ್ಲೆ ಜಲಪಾತದ ಉಗಮ ಸ್ಥಾನ. 160ಅಡಿ ಎತ್ತರದಿಂದ ಶಿರ್ಲೆ ಜಲಪಾತ ಅಡಿಕೆ ಮರಗಳ ನಡುವೆ ಧುಮುಕುತ್ತದೆ. ಕುಂಕಿ, ಸಂಪೆಕೊಡ್ಲು ಮುಂತಾದ ಊರಿನ ಮಾರ್ಗವಾಗಿ ಹರಿಯುವ ನೀರು ಮುಂದೆ ಡಬ್ಗುಳಿಯಿಂದ ಗಂಗಾವಳಿ ನದಿ ಸೇರುತ್ತದೆ. ಜಲಪಾತದ ಕೆಳಭಾಗದಲ್ಲಿ ಬಾವಲಿಗಳಿರುವ ಗುಹೆಯಿದೆ.

KAIGA WIKI

ಕೈಗಾ ಅಣುಸ್ಥಾವರದ ಬಳಿಯ ವಿಹಂಗಮ ನೋಟ

ಕಾರವಾರ ಯಲ್ಲಾಪುರ ಗಡಿ ಭಾಗದಲ್ಲೂ ಇವೆ.. ಕಾಳಿ ನದಿಗೆ ಅಡ್ಡಲಾಗಿ ಐದು ಅಣೆಕಟ್ಟುಗಳನ್ನು ಕಟ್ಟಲಾಗಿದೆ. ಅದರಲ್ಲಿ ಕದ್ರಾ ಅಣೆಕಟ್ಟು 34.5  ಅಡಿ ಹಾಗೂ ಕೊಡಸಳ್ಳಿ ಅಣೆಕಟ್ಟು 74.50 ಅಡಿ ನೀರಿನ ಸಾಮರ್ಥ್ಯ ಹೊಂದಿದೆ. ಸಾಮಾನ್ಯವಾಗಿ ಮಳೆ ಪ್ರಮಾಣ ಹೆಚ್ಚಾದಾಗಲೆಲ್ಲ ಅಣೆಕಟ್ಟು ಭರ್ತಿಯಾಗುವದರಿಂದ ನೀರು ಹೊರ ಬಿಡಲಾಗುತ್ತದೆ.

ಕೈಗಾ ಕೈಗಾದಲ್ಲಿ ಪ್ರಸ್ತುತ ನಾಲ್ಕು ಅಣು ವಿದ್ಯುತ್ ಘಟಕಗಳಿವೆ. ವಾರ್ಷಿಕ 880 ಮೇಗಾವ್ಯಾಟ್ ಅಣು ವಿದ್ಯುತ್ ಉತ್ಪಾದನೆ ಆಗುತ್ತದೆ. ಐದು ಹಾಗೂ ಆರನೇ ಘಟಕ ನಿರ್ಮಾಣದ ನಂತರ ಅವು ತಲಾ 700 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಿವೆ. ಕೈಗಾ ಅಣು ವಿದ್ಯುತ್ ಘಟಕ ಒಳ ಪ್ರವೇಶಕ್ಕೆ ದೇಶದ ಭದ್ರತೆ ದೃಷ್ಟಿಯಿಂದ ಪೂರ್ವಾನುಮತಿ ಪಡೆಯುವದು ಕಡ್ಡಾಯ.

ಇದನ್ನೂ ಓದಿ:Pashupatinath Temple: ನೇಪಾಳದ ಪಶುಪತಿನಾಥ ದೇವಾಲಯ ಮಹಾಶಿವರಾತ್ರಿ ವಿಶೇಷ ಚಿತ್ರಗಳುಕಾಯುವನೇ ಶಿವ

Maha Shivaratri; ಕಾಯುವನೇ ಶಿವ?: ನೋಡ್ಪಾ ಕವಳೇಶ್ವರಾ ಈ ಭಕ್ತಿಪಿಕ್ತಿ ನಂಗೊತ್ತಿಲ್ಲ ನೀನಂದರ ನನಗ ಪ್ರೀತಿ ಮತ್ತ ಶಕ್ತಿ

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ