AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾದಲ್ಲಿ ಹೈಡ್ರಾಮಾ: ನಂದಿ ಕಂಬ ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್‌ಪಿ ರಿಷ್ಯಂತ್

ಮೈಸೂರು ದಸರಾದಲ್ಲಿ ಹೈಡ್ರಾಮಾ: ನಂದಿ ಕಂಬ ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್‌ಪಿ ರಿಷ್ಯಂತ್

ರಾಮ್​, ಮೈಸೂರು
| Edited By: |

Updated on:Oct 22, 2026 | 8:38 AM

Share

ಮೈಸೂರು ದಸರಾ ನಂದಿ ಕಂಬ ಪೂಜೆ ವೇಳೆ ಎಸ್ಪಿ ರಿಷ್ಯಂತ್ ಸಚಿವರ ಪ್ರವೇಶ ತಡೆದದ್ದು ವಿವಾದಕ್ಕೆ ಕಾರಣವಾಗಿದೆ. ದಶಕಗಳ ಸಂಪ್ರದಾಯದಂತೆ ಸಿಎಂ ಜೊತೆ ಸಚಿವರು ಪೂಜೆಗೆ ಆಗಮಿಸಿದ್ದರು. ಭದ್ರತೆಯ ನೆಪದಲ್ಲಿ ಎಸ್ಪಿ ಸಚಿವರನ್ನು ಅಡ್ಡಗಟ್ಟಿದ್ದರಿಂದ ಮಾತಿನ ಚಕಮಕಿ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಅವಕಾಶ ನೀಡಿ ಇತರರಿಗೆ ನಿರಾಕರಿಸಿದ್ದು ಬಿಗುವಿನ ವಾತಾವರಣ ಸೃಷ್ಟಿಸಿತು.

ಮೈಸೂರು, ಅ.22: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆಯೂ, ಐತಿಹಾಸಿಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಡೆದ ‘ನಂದಿ ಕಂಬ ಪೂಜೆ’ ವೇಳೆ ಆಡಳಿತ ಪಕ್ಷದ ಸಚಿವರು ಹಾಗೂ ಪೊಲೀಸ್ ಇಲಾಖೆ ನಡುವೆ ತೀವ್ರ ಮಾತಿನ ಚಕಮಕಿ ನಡೆದಿರುವ ವರದಿಯಾಗಿದೆ. ಭದ್ರತೆಯ ಕಾರಣ ನೀಡಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಿಷ್ಯಂತ್ ಅವರು ಸಚಿವರು ಹಾಗೂ ಜನಪ್ರತಿನಿಧಿಗಳನ್ನು ಪೂಜೆಗೆ ತೆರಳದಂತೆ ಅಡ್ಡಗಟ್ಟಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೂ ಮುನ್ನ ಮುಖ್ಯಮಂತ್ರಿಗಳ ಜೊತೆ ಆಗಮಿಸುವ ಸಚಿವರು, ಶಾಸಕರು ಹಾಗೂ ಗಣ್ಯರು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಜರುಗುವ ಪವಿತ್ರ ‘ನಂದಿ ಕಂಬ’ಕ್ಕೆ (ನಂದಿ ಧ್ವಜ) ಪೂಜೆ ಸಲ್ಲಿಸುವುದು ದಶಕಗಳಿಂದ ನಡೆದುಕೊಂಡು ಬಂದ ಸಂಪ್ರದಾಯ ಹಾಗೂ ವಾಡಿಕೆಯಾಗಿದೆ. ಆದರೆ, ಈ ಬಾರಿ ಸಿಎಂ ಜೊತೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಮಾತ್ರ ನಂದಿ ಕಂಬ ಪೂಜೆಗೆ ಬಿಡಲಾಗಿದ್ದು, ಅವರೊಂದಿಗೆ ಬಂದಿದ್ದ ಇತ್ತೇತರ ಸಚಿವರು ಹಾಗೂ ಇತರೆ ಜನಪ್ರತಿನಿಧಿಗಳನ್ನು ಸ್ಥಳದಲ್ಲೇ ಎಸ್‌ಪಿ ರಿಷ್ಯಂತ್ ಅಡ್ಡಗಟ್ಟಿದ್ದಾರೆ. ಶಿಷ್ಟಾಚಾರದ ಹೆಸರಿನಲ್ಲಿ ಮತ್ತು ಭದ್ರತೆಯ ನೆಪದಲ್ಲಿ ಏಕಾಏಕಿ ಪ್ರವೇಶ ನಿರಾಕರಿಸಿದ್ದರಿಂದ ಆಕ್ರೋಶಗೊಂಡ ಸ್ಥಳದಲ್ಲಿದ್ದ ಸಚಿವರು ಎಸ್‌ಪಿ ರಿಷ್ಯಂತ್ ಅವರೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ನಂದಿ ಕಂಬ ಪೂಜೆಗೆ ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದರಿಂದ ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಇದೇ ವೇಳೆ ಭದ್ರತೆಯ ಕಾರಣ ನೀಡಿ ಹಿರಿಯ ಶಾಸಕರಾದ ತನ್ವೀರ್ ಸೇಠ್ ಹಾಗೂ ಶಾಸಕ ಶ್ರೀವತ್ಸ ಅವರನ್ನು ಕೂಡ ಪೊಲೀಸರು ಅಡ್ಡಗಟ್ಟಿದ್ದಾರೆ. ಇದರಿಂದಾಗಿ ತನ್ವೀರ್ ಸೇಠ್ ಅವರು ಕೆಲಕಾಲ ಹೊರಗಡೆಯೇ ನಿಲ್ಲಬೇಕಾಯಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಗಳು ಪರಿಸ್ಥಿತಿಯನ್ನು ಗಮನಿಸಿ, ತನ್ವೀರ್ ಸೇಠ್ ಅವರೊಂದಿಗೆ ಮಾತನಾಡಿ ಮನವೋಲಿಸಿ ಜತೆಯಲ್ಲಿಯೇ ಪೂಜೆಗೆ ಕರೆದುಕೊಂಡು ಹೋದರು. ಅಂತಿಮವಾಗಿ ಮೇಲಿನವರ ಸೂಚನೆ ಮತ್ತು ಸಿಎಂ ಸೂಚನೆಯ ಮೇರೆಗೆ ಅವರನ್ನು ಪೂಜೆಗೆ ಒಳಗೆ ಬಿಡಲಾಯಿತು. ಸ್ಥಳದಲ್ಲಿದ್ದ ಮೈಸೂರಿನ ಇತರೆ ಶಾಸಕರಾದ ಅನಿಲ್ ಚಿಕ್ಕಮಾದು, ಡಿ. ರವಿಶಂಕರ್, ದರ್ಶನ ಧ್ರುವನಾರಾಯಣ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ. ಶಿವಕುಮಾರ್, ತಿಮ್ಮಯ್ಯ ಅವರಿಗೆ ಒಳಗೆ ಪ್ರವೇಶ ಸಿಗದ ಕಾರಣ ದೂರದಿಂದಲೇ ನಂದಿ ಕಂಬ ಪೂಜೆಯನ್ನು ವೀಕ್ಷಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 22, 2026 08:09 AM

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More