ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಕೃತ್ಯ ಸಾಬೀತು: ದಸರಾ ವೇಳೆಯೇ ಕಾಮುಕನಿಗೆ ಶಿಕ್ಷೆ ಪ್ರಕಟ

ಮೈಸೂರಿನಲ್ಲಿ 9 ವರ್ಷದ ಬಾಲಕಿಯನ್ನ ಅತ್ಯಾಚಾರವೆಸಗಿ, ಕೊಲೆ ಮಾಡಿದ ಪ್ರಕರಣದಲ್ಲಿ ಕಾರ್ತಿಕ್ ಅಪರಾಧಿ ಎಂದು ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ. ದಸರಾ ಸಮಯದಲ್ಲಿ ಬಲೂನ್ ಮಾರಲು ಬಂದಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ ಘಟನೆ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ನ್ಯಾಯಾಧೀಶ ಅನಿಲ್ ಪಿ. ವಘಾಡೆ ನಾಳೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದ್ದಾರೆ.

ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಕೃತ್ಯ ಸಾಬೀತು: ದಸರಾ ವೇಳೆಯೇ ಕಾಮುಕನಿಗೆ ಶಿಕ್ಷೆ ಪ್ರಕಟ
ಅಪರಾಧಿ ಕಾರ್ತಿಕ್
Image Credit source: tv9 kannada
Edited By:

Updated on: Oct 15, 2026 | 4:28 PM

ಮುಖ್ಯಾಂಶಗಳು

  • ಮೈಸೂರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ
  • ಕೃತ್ಯ ಎಸಗಿದ್ದ ಕಾರ್ತಿಕ್​ ಅಪರಾಧಿ ಎಂದು ಸಾಬೀತು
  • ನಾಳೆ ಅಪರಾಧಿ ಕಾರ್ತಿಕ್​ಗೆ ಶಿಕ್ಷೆ ಪ್ರಮಾಣ ಪ್ರಕಟಿಸುವ ಕೋರ್ಟ್

ಮೈಸೂರು, ಅಕ್ಟೋಬರ್​ 15: ಕಳೆದ ವರ್ಷ ಮೈಸೂರು ದಸರಾ ಮಹೋತ್ಸವ ವೇಳೆ ಬಲೂನ್ ಮಾರಲು ಬಂದಿದ್ದ 9 ವರ್ಷದ ಬಾಲಕಿಯನ್ನ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಕೃತ್ಯ ಎಸಗಿದ್ದ ಕಾರ್ತಿಕ್​(32) ಅಪರಾಧಿ ಎಂದು ಇದೀಗ ಸಾಬೀತಾಗಿದ್ದು, ದೋಷಿ ಎಂದು ಪರಿಗಣಿಸಿರುವ ಮೈಸೂರು ಶೀಘ್ರಗತಿ ನ್ಯಾಯಾಲಯ, ನಾಳೆ ಕಾರ್ತಿಕ್​ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ. ಅಂದು ದಸರಾ ಸಮಯದಲ್ಲೇ ಕೃತ್ಯವೆಸಗಿದ್ದ ಆರೋಪಿಗೆ ಇದೀಗ ದಸರಾ ಮಹೋತ್ಸವ ಸಮಯದಲ್ಲೇ ಶಿಕ್ಷೆ ವಿಧಿಸಿರುವುದು ವಿಶೇಷ.

ನಾಳೆ ಅಪರಾಧಿ ಕಾರ್ತಿಕ್​ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿರುವ ಕೋರ್ಟ್

ಮೈಸೂರಿನ ನಜರಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ನಡೆದ 24 ಗಂಟೆಯಲ್ಲಿ ಪೊಲೀಸರು
ಆರೋಪಿಯನ್ನು ಬಂಧಿಸಿದ್ದರು. ಮೈಸೂರಿನ FTSC-1 ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು. ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಜಯಂತಿ ವಾದ ಮಂಡಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆ ಕಾರ್ತಿಕ್ ಅಪರಾಧಿ ಎಂದು ನ್ಯಾ.ಅನಿಲ್.ಪಿ ವಘಾಢೆ ಅವರು ತೀರ್ಪು ನೀಡಿದ್ದು, ನಾಳೆ ನ್ಯಾಯಾಧೀಶರು ಅಪರಾಧಿ ಕಾರ್ತಿಕ್​​​ಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿದ್ದಾರೆ.

ಘಟನೆ ಹಿನ್ನೆಲೆ

ಮೈಸೂರಿನ ದಸರಾ ಜನರು ಪಾಲಿಗೆ ಕೇವಲ ಕಣ್ಮನ ಸೆಳೆಯುವ ಹಬ್ಬವಾದರೆ, ವ್ಯಾಪಾರಿಗಳ ಪಾಲಿಗೆ ಇದು ಹೊಟ್ಟೆ ತುಂಬಿಸೋ ಹಬ್ಬ. ಇದೇ ದಸರಾದಲ್ಲಿ ವ್ಯಾಪಾರಕ್ಕೆ ಅಂತಾ ದೂರದ ಊರುಗಳಿಂದ ಜನ ಬರ್ತಾರೆ. ಹೀಗೆ ಬಲೂನ್‌, ಬೊಂಬೆ ಮಾರಾಟಕ್ಕೆ ಹಕ್ಕಿಬಿಕ್ಕಿ ಜನಾಂಗದವರು ಬಂದಿದ್ದರು. ಅರಮನೆ ಮುಂಭಾಗ ದೊಡ್ಡಕೆರೆ ಮೈದಾನದಲ್ಲಿ ತಾತ್ಕಾಲಿಕ ಟೆಂಟ್‌ ಹಾಕಿಕೊಂಡು ವಾಸವಾಗಿದ್ದರು. ಹೀಗಿರುವಾಗಲೇ ಅಕ್ಟೋಬರ್‌ 9ರ ಬೆಳಗಿನಜಾವ ಘೋರ ಘಟನೆಯೊಂದು ನಡೆದಿತ್ತು. ಪೋಷಕರ ಜೊತೆಗಿದ್ದ ಬಾಲಕಿಯನ್ನ ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ.

ಇದನ್ನೂ ಓದಿ: ಮೈಸೂರು ದಸರೆಗೆ ಬಲೂನ್ ಮಾರಲು ಬಂದಿದ್ದ ಬಾಲಕಿ ಅತ್ಯಾಚಾರ ಕೊಲೆ:ಕೀಚಕನಿಗೆ ಪೊಲೀಸ್ ಗುಂಡೇಟು

ಸಿಸಿಟಿವಿ ದೃಶ್ಯ ಆಧಾರಿಸಿ ಕಾರ್ತಿಕ್​​ ನನ್ನು ಪೊಲೀಸರು ಘಟನೆ ನಡೆದು 24 ಗಂಟೆಗಳಲ್ಲಿ ಬಂಧಿಸಿದ್ದರು. ಇನ್ನು ಈ ಕಾರ್ತಿಕ್‌ ಮೈಸೂರಿನ ಸಿದ್ದಲಿಂಗಪುರದ ನಿವಾಸಿ ಆಗಿದ್ದು, ಮೈಸೂರು-ಕೊಳ್ಳೇಗಾಲ ಮಾರ್ಗದ ಬಸ್‌ನಲ್ಲಿ ಕ್ಲೀನರ್​ ಕೂಡ ಆಗಿದ್ದ. ಈ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕಾರ್ತಿಕ್​ ಅಪರಾಧಿ ಎಂದು ಸಾಬೀತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:28 pm, Thu, 15 October 26

ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us