ಬಿಜೆಪಿ ಸರ್ಕಾರದಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ: ‘ಬಸವರಾಜ ಬೊಮ್ಮಾಯಿ ಓರ್ವ ಕೈಗೊಂಬೆ ಮುಖ್ಯಮಂತ್ರಿ’ ಪ್ರಿಯಾಂಕ್ ಖರ್ಗೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 25, 2022 | 10:03 PM

ಬಿಜೆಪಿ ಎಂದ್ರೆನೇ ಕರಪ್ಷನ್, ಕಮಿಷನ್, ಕಮ್ಯುನಲ್ ಅಂತ ಅರ್ಥ. ಪೇ ಸಿಎಂ ಅಭಿಯಾನ ರಾಜ್ಯದ ಘನತೆಗೆ ದಕ್ಕೆ ತರುತ್ತಿದೆ ಎಂದು ಸರ್ಕಾರದವರು ಹೇಳುತ್ತಾರೆ.

ಬಿಜೆಪಿ ಸರ್ಕಾರದಿಂದ ಯಾವುದೇ ಕೆಲಸಗಳು ಆಗುತ್ತಿಲ್ಲ: ‘ಬಸವರಾಜ ಬೊಮ್ಮಾಯಿ ಓರ್ವ ಕೈಗೊಂಬೆ ಮುಖ್ಯಮಂತ್ರಿ’ ಪ್ರಿಯಾಂಕ್ ಖರ್ಗೆ
ಶಾಸಕ ಪ್ರಿಯಾಂಕ್ ಖರ್ಗೆ
Follow us on

ಮೈಸೂರು: ಬೊಮ್ಮಾಯಿ ಸರ್ಕಾರದಲ್ಲಿ ಯಾವುದೇ ಕೆಲಸಗಳು ಆಗುತ್ತಿಲ್ಲ. ‘ಬಸವರಾಜ ಬೊಮ್ಮಾಯಿ ಓರ್ವ ಕೈಗೊಂಬೆ ಮುಖ್ಯಮಂತ್ರಿ’ ಎಂದು ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದರು. ರಾಜ್ಯದಲ್ಲಿ ಭಾರಿ ಮಳೆ, ನೆರೆಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಅತಿವೃಷ್ಟಿ ಹಾನಿ ಬಗ್ಗೆ ಸಚಿವರಿಗೆ ಎಷ್ಟು ಮಾಹಿತಿಯಿದೆ. ಸಚಿವರು ಅನ್ನದಾತರಿಗೆ ಗೌರವ ಕೊಡುವುದನ್ನು ಕಲಿಯಬೇಕು. ಬಿಜೆಪಿ ಎಂದ್ರೆನೇ ಕರಪ್ಷನ್, ಕಮಿಷನ್, ಕಮ್ಯುನಲ್ ಅಂತ ಅರ್ಥ.
ಪೇ ಸಿಎಂ ಅಭಿಯಾನ ರಾಜ್ಯದ ಘನತೆಗೆ ದಕ್ಕೆ ತರುತ್ತಿದೆ ಎಂದು ಸರ್ಕಾರದವರು ಹೇಳುತ್ತಾರೆ. 40 ಪರ್ಸೆಂಟ್ ಸರ್ಕಾರ ಎಂದು ಹೇಳುವುದರಲ್ಲಿ ತಪ್ಪೇನಿದೆ. ಭ್ರಷ್ಟಾಚಾರ ಮಾಡುತ್ತಿದ್ದಾರೆ. ಅದನ್ನ ನಾವು ಪ್ರಶ್ನೆ ಮಾಡುವುದರಲ್ಲಿ ತಪ್ಪೇನಿದೆ. ಪೇ ಸಿಎಂ ಅಭಿಯಾನ ಹತ್ತಿಕ್ಕೊ ಕೆಲಸ ಆಗುತ್ತಿದೆ. ಹಾಗಾಗಿ ಜಾತಿಯನ್ನ ಈಗ ಎಳೆದು ತರುತ್ತಿದ್ದಾರೆ.

ಲಿಂಗಾಯಿತ ಸಿಎಂಗೆ ಕೆಲಸ ಮಾಡೋಕೆ ಬಿಡುತ್ತಿಲ್ಲ ಎಂದು ಆರೋಪ ಮಾಡುತ್ತಾರೆ. ಹಾಗಾದರೆ ಯಡಿಯೂರಪ್ಪರವರನ್ನ ಯಾಕೆ ಕೆಳಗೆ ಇಳಿಸಿದರು ಎಂದು ಬಿ.ಎಸ್.ವೈ ಮೇಲೆ ಶಾಸಕ ಪ್ರಿಯಾಂಕ ಖರ್ಗೆ ಸಾಫ್ಟ್ ಕಾರ್ನರ್ ತೋರಿಸಿದರು. ಇವರಿಗೆ ಬಸವಣ್ಣನ ತತ್ವ ಗೊತ್ತೇ ಇಲ್ಲಾ. ಕಲಬೇಡ ಕೊಲಬೇಡ ಉಸಿಯ ನುಡಿಯ ಬೇಡ ಎಂಬ ವಚನ ಇದೆ. ಇದು ಬಿಜೆಪಿಯವರಿಗೆ ಗೊತ್ತೇ ಇಲ್ಲಾ ಅಂತ ಕಾಣುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ದ ಪ್ರಿಯಾಂಕ ಖರ್ಗೆ ವಾಗ್ಧಾಳಿ ಮಾಡಿದರು.

‘ಲಿಂಗಾಯತ ವಿರೋಧಿ ಕಾಂಗ್ರೆಸ್’ ಬಿಜೆಪಿ ಅಭಿಯಾನಕ್ಕೆ ಮಾಜಿ ಸಿಎಂ ಕಿಡಿ

‘ಲಿಂಗಾಯತ ವಿರೋಧಿ ಕಾಂಗ್ರೆಸ್’ ಬಿಜೆಪಿ ಅಭಿಯಾನ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಜಾತಿ ಬಣ್ಣ ಕಟ್ಟಿದ್ದಾರೆ. ಮೋದಿ 10 ಪರ್ಸೆಂಟ್​ ಸರ್ಕಾರವೆಂದು ಆರೋಪ ಮಾಡಿದ್ದರು. ನಾನು ಕುರುಬ ಸಮಾಜ ಅಂತ ಮೋದಿ ಆರೋಪ ಮಾಡಿದ್ರಾ? ಏನು ದಾಖಲೆಗಳಿಲ್ಲದೆ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದರು. ಕಾಂಗ್ರೆಸ್​​ನಲ್ಲಿ ಲಿಂಗಾಯತ ನಾಯಕರು ಇಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ನನ್ನ ವಿರುದ್ಧವೂ ಬಿಜೆಪಿಯವರು ಸುಳ್ಳು ಪುಸ್ತಕ ಪ್ರಕಟಿಸಿದ್ದಾರೆ. ಕುರುಬರು ಅಂತ ಹೀಗೆ ಮಾಡುತ್ತಿದ್ದಾರೆ ಅಂತಾ ಹೇಳಬಹುದಾ ಎಂದರು. ಬಿಜೆಪಿಯವರು ಬಿ.ವೈ.ವಿಜಯೇಂದ್ರಗೆ ಮಂತ್ರಿ ಯಾಕೆ ಮಾಡಿಲ್ಲ. ವಿಜಯೇಂದ್ರ ಲಿಂಗಾಯತ ಅಲ್ವಾ ಅಂತಾ ಸಿದ್ದರಾಮಯ್ಯ ಬಿಜೆಪಿಗೆ ತಿರುಗೇಟು ನೀಡಿದರು.

ನಾನು ಕೋಕಾಕೋಲಾ ಕುಡಿಯುವುದಿಲ್ಲ: ಸಿದ್ದರಾಮಯ್ಯ

ಕೋಕಾಕೋಲಾ ಕಂಪನಿ ವಿರುದ್ಧ ಜಾರ್ಜ್​ ಫರ್ನಾಂಡಿಸ್ ಹೋರಾಟಕ್ಕೆ ಕರೆ ಕೊಟ್ಟಿದ್ದರು. ಕೋಕಾಕೋಲಾ ಕುಡಿಯಬಾರದೆಂದು ಎಂದು ಕರೆ ನೀಡಿದ್ದರು. ಅಂದಿನಿಂದ ನಾನು ಕೋಕಾಕೋಲಾ ಕುಡಿಯುವುದಿಲ್ಲ. ಮುಂದೆಯು ಕೋಕಾಕೋಲಾ ಪಾನೀಯ ಸೇವಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.