ಇದು ಹೀಗೆ ಮುಂದುವರೆದರೆ ಪೋಸ್ಟರ್​ ಅಂಟಿಸುವುದಕ್ಕೂ ಅವರ ಬಳಿ ಜನ ಇರುವುದಿಲ್ಲ: ಸಚಿವ ಎಸ್​ ಟಿ ಸೋಮಶೇಖರ್

ಮಾಜಿ ಸಿಎಂ ಆದವರು ಫುಟ್‌ಪಾತ್‌ಗೆ ಬಂದು ಪೋಸ್ಟರ್ ಅಂಟಿಸುತ್ತಾರೆ. ಇದು ಹೀಗೆ ಮುಂದುವರೆದರೆ ಪೋಸ್ಟರ್​ ಅಂಟಿಸುವುದಕ್ಕೂ ಅವರ ಬಳಿ ಜನ ಇರುವುದಿಲ್ಲ.

ಇದು ಹೀಗೆ ಮುಂದುವರೆದರೆ ಪೋಸ್ಟರ್​ ಅಂಟಿಸುವುದಕ್ಕೂ ಅವರ ಬಳಿ ಜನ ಇರುವುದಿಲ್ಲ: ಸಚಿವ ಎಸ್​ ಟಿ ಸೋಮಶೇಖರ್
ಸಚಿವ S.T.ಸೋಮಶೇಖರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 25, 2022 | 5:52 PM

ಮೈಸೂರು: ಕಾಂಗ್ರೆಸ್ ಯೋಗ್ಯತೆಗೆ ಬೆಂಕಿ ಹಾಕ ಭಾರತ್ ಜೋಡೋ ಮಾಡುತ್ತಾರಂತೆ. ಮಾಜಿ ಸಿಎಂ ಆದವರು ಫುಟ್‌ಪಾತ್‌ಗೆ ಬಂದು ಪೋಸ್ಟರ್ ಅಂಟಿಸುತ್ತಾರೆ. ಇದು ಹೀಗೆ ಮುಂದುವರೆದರೆ ಪೋಸ್ಟರ್​ ಅಂಟಿಸುವುದಕ್ಕೂ ಅವರ ಬಳಿ ಜನ ಇರುವುದಿಲ್ಲ ಎಂದು ಜಿಲ್ಲೆಯಲ್ಲಿ ಕಾಂಗ್ರೆಸ್ ವಿರುದ್ಧ ಸಚಿವ S.T.ಸೋಮಶೇಖರ್ ಗುಡುಗಿದರು. ಈಗಾಗಲೇ ಎಲ್ಲಾ ನಾಯಕರು ಕಾಂಗ್ರೆಸ್‌ ಪಕ್ಷ ಬಿಟ್ಟು ಹೋಗುತ್ತಿದ್ದಾರೆ. ನಾನೂ ಕಾಂಗ್ರೆಸ್‌ನಲ್ಲಿದ್ದವನು ಯಾರು ಪೇಸಿಎಂ ಅನ್ನೋದು ಗೊತ್ತಿದೆ. ನಾವು ಹಣ ಮಾಡಿದ್ದೇವೆ ಎಂದು ರಮೇಶ್ ಕುಮಾರ್ ಹೇಳಿಲ್ವಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ ನಾಯಕರು ಮಾಡಿರೋದೆಲ್ಲಾ ಬಟಾ ಬಯಲಾಗುತ್ತದೆ. ಕಾಂಗ್ರೆಸ್ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನಮ್ಮ ರಾಜ್ಯದ ಸಿಎಂ ಕೊಡುವ ಸಿಎಂ, ತೆಗೆದುಕೊಳ್ಳುವ ಸಿಎಂ ಅಲ್ಲ. ಪೇಸಿಎಂ ಅಲ್ಲ ಪ್ಲೇನ್ ಸಿಎಂ. ಸಿದ್ಧರಾಮಯ್ಯ ಒಂದು ಬಣ, ಮಲ್ಲಿಕಾರ್ಜುನ ಖರ್ಗೆ ಒಂದು ಬಣ, ಡಿ.ಕೆ. ಶಿವಕುಮಾರ ಒಂದು ಬಣ. ಮುನಿಯಪ್ಪ ಎಂಟು ಬಾರಿ ಗೆದ್ದವರು ಅವರನ್ನು ಫುಟ್ ಪಾತ್​ಗೆ ಎಸೆದಿದ್ದೀರಾ. ನಿಮ್ಮ ಕಥೆ ಹೇಳುತ್ತಾ ಹೋದರೆ ಮುಗಿಯೋದಿಲ್ಲ ಎಂದು ಸಚಿವ S.T.ಸೋಮಶೇಖರ್ ಹೇಳಿದರು.

ನಾಗೇಂದ್ರ ಯಾವಾಗಲೂ ಸಿಎಂ ಹಿಂದೆ ಮುಂದೆನೇ ಓಡಾಡುತ್ತಾನೆ. ಕೋಟಿ ಕೋಟಿ ವಸೂಲಿ ಮಾಡಿರುವುದು ನೋಡಿದರೆ ಚಾಮರಾಜ ಕ್ಷೇತ್ರದಲ್ಲಿ ಯಾವುದೂ ಕೆಲಸ ಬ್ಯಾಲೆನ್ಸ್ ಇಲ್ಲ ಅನಿಸುತ್ತದೆ. ಸಹಕಾರ ಮಂತ್ರಿ ಆದ್ರೂ ಸಿಎಂ ನನ್ನ ಕ್ಷೇತ್ರಕ್ಕೆ ಇಷ್ಟು ಅನುದಾನ ಕೊಟ್ಟಿಲ್ಲ. ಎಲ್ಲ ಮಂತ್ರಿಗಳ ಹತ್ತಿರವೂ ನಾಗೇಂದ್ರ ಗಲಾಟೆ ಮಾಡಿದ್ದು ನೋಡಿದ್ದೇನೆ. ಅಕ್ಕಿ ಕೊಟ್ಟೆ, ಏಳು ಕೆಜಿ ಕೊಟ್ಟೆ, ಹತ್ತು ಕೆಜಿ ಕೊಟ್ಟೆ ಅಂತ ಹೇಳಿದವರನ್ನು ನೋಡಿದ್ದೇವೆ. ಆದರೆ ಇದೆಲ್ಲಕ್ಕಿಂತ ಹೆಚ್ಚಿನ ಯೋಜನೆ ಕೊಟ್ಟಿರುವುದು ಬೊಮ್ಮಾಯಿ. ಬ್ಯಾಂಕ್​ನಿಂದ ಸಾಲ ಪಡೆದ ರೈತರ ಮನೆ ಪ್ರಾಪರ್ಟಿ ಜಪ್ತಿ ಮಾಡಬಾರದು ಅಂತ ನಿನ್ನೆ ಸಿಎಂ ಘೋಷಣೆ ಮಾಡಿದ್ದಾರೆ. ಇದೊಂದು ಐತಿಹಾಸಿಕ ತೀರ್ಮಾನ ಎಂದು ಹೇಳಿದರು.

ಈಗಿನ ಸಿಎಂಗೂ, ಹಿಂದಿನ ಸಿಎಂಗಳಿಗೂ ಬಹಳ ವ್ಯತ್ಯಾಸವಿದೆ: ಪ್ರತಾಪ್‌ ಸಿಂಹ

ಈಗಿನ ಸಿಎಂಗೂ, ಹಿಂದಿನ ಸಿಎಂಗಳಿಗೂ ಬಹಳ ವ್ಯತ್ಯಾಸ ಇದೆ ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಹೇಳಿಕೆ ನೀಡಿದರು. 2014ರಲ್ಲಿ ನಾನು ಮೈಸೂರು-ಕೊಡಗು ಕ್ಷೇತ್ರದ ಸಂಸದನಾದೆ. ಅಂದಿನ ಸಿಎಂ ಸಿದ್ದರಾಮಯ್ಯ ಯಾವಾಗ ಮೈಸೂರಿಗೆ ಬರುತ್ತಿದ್ದರು ಎಂದು ನಾಲ್ಕು ವರ್ಷ ಬಹಳ ಹತ್ತಿರದಿಂದ ನೋಡಿದ್ದೇನೆ. ಸಿಎಂ ಆಗಿದ್ದಾಗ ಹೆಚ್‌.ಡಿ.ಕುಮಾರಸ್ವಾಮಿ ಸಹ ಮೈಸೂರಿಗೆ ಬರುತ್ತಿದ್ದರು. ಆದರೆ ಈಗಿನ ಸಿಎಂಗೂ, ಹಿಂದಿನ ಸಿಎಂಗಳಿಗೂ ಬಹಳ ವ್ಯತ್ಯಾಸ ಇದೆ.

ಸಿದ್ದರಾಮಯ್ಯ ಸಿಎಂ ಆದಾಗ ಮೈಸೂರಿಗೆ ಬರೀ ಬಾಡೂಟ, ಬೀಗರೂಟ ಮದುವೆ, ಮುಂಜಿಗೆ ಮಾತ್ರ ಮೈಸೂರಿಗೆ ಬರುತ್ತಿದ್ದರು. ಸಿದ್ದರಾಮಯ್ಯಗೆ ಯಾವುದೇ ಸರ್ಕಾರಿ ಕಾರ್ಯಕ್ರಮ ನೆನಪು ಆಗುತ್ತಿರಲಿಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಏರ್‌ಪೋರ್ಟ್‌ ದನ ಕಾಯುವ ಸ್ಥಿತಿಯಲ್ಲಿತ್ತು. ಆದರೆ ಬೊಮ್ಮಾಯಿ ಸಿಎಂ ಆಗಿ ಹತ್ತಾರು ಯೋಜನೆ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ರಾಜದ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?