Mysore Dasara: ದಸರಾ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಹೊಸ ಕಳೆ, ಗಾಜಿನ ಮನೆಯಲ್ಲಿ ಗಮನ ಸೆಳೆಯುತ್ತಿದೆ ರಾಷ್ಟ್ರಪತಿ ಭವನದ ಪ್ರತಿಕೃತಿ

ಗಾಜಿನಮನೆಯ ಹೊರಗೆ ತಂಡೀ ಸಡಕ್ ನಿರ್ಮಿಸಲಾಗಿದೆ. ಮೆಕ್ಕೆಜೋಳ ಹಾಗೂ ತುಜಾ ಲಿವೀಸ್​ ಬಳಸಲಾಗುತ್ತಿದೆ.

Mysore Dasara: ದಸರಾ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ಹೊಸ ಕಳೆ, ಗಾಜಿನ ಮನೆಯಲ್ಲಿ ಗಮನ ಸೆಳೆಯುತ್ತಿದೆ ರಾಷ್ಟ್ರಪತಿ ಭವನದ ಪ್ರತಿಕೃತಿ
ಮೈಸೂರಿನ ಗಾಜಿನಮನೆಯಲ್ಲಿ ಸಿದ್ಧವಾಗುತ್ತಿರುವ ರಾಷ್ಟ್ರಪತಿ ಭವನದ ಪ್ರತಿಕೃತಿ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 25, 2022 | 1:08 PM

ಮೈಸೂರು: ದಸರಾ ಪ್ರಯುಕ್ತ ಮೈಸೂರಿನಲ್ಲಿ (Mysore Dasara) ಈ ಬಾರಿ ಆಕರ್ಷಕ ಫಲಪುಷ್ಪ ಪ್ರದರ್ಶನ (Flower Show) ಆಯೋಜಿಸಲಾಗಿದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ದಸರಾ ಆಚರಣೆಗಳು ಕಳೆಗುಂದಿದ್ದವು. ಫಲಪುಷ್ಪ ಪ್ರದರ್ಶನವನ್ನೂ ಆಯೋಜಿಸಿರಲಿಲ್ಲ. ಆದರೆ ಈ ಬಾರಿ ದಸರಾ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಡೀ ದೇಶದ ಗಮನ ಸೆಳೆಯುವಷ್ಟು ಆಕರ್ಷಕವಾಗಿ ಫಲಪುಷ್ಪ ಪ್ರದರ್ಶನ ಮಾಡಲಾಗುತ್ತಿದೆ. ನಗರದ ಗ್ಲಾಸ್ ಹೌಸ್​ನಲ್ಲಿ ಹೂಗಳಿಂದಲೇ ರಾಷ್ಟ್ರಪತಿ ಭವನದ ಪ್ರತಿಕೃತಿ ನಿರ್ಮಿಸಲಾಗಿದೆ. ಇದಕ್ಕಾಗಿ ರೆಡ್​ ರೋಸ್, ವೈಟ್ ರೋಸ್, ಆ್ಯಸ್ಪಾರಾಗಸ್, ಸೇವಂತಿ ಬಳಸಲಾಗಿದೆ. ರಾಷ್ಟ್ರಪತಿ ಭವನದ ಪ್ರತಿಕೃತಿಯು 30 ಅಡಿ ಎತ್ತರ ಹಾಗೂ 50ರಿಂದ 60 ಅಡಿ ಅಗಲವಿದೆ.

ಗಾಜಿನಮನೆಯ ಹೊರಗೆ ತಂಡೀ ಸಡಕ್ ನಿರ್ಮಿಸಲಾಗಿದೆ. ಮೆಕ್ಕೆಜೋಳ ಹಾಗೂ ತುಜಾ ಲಿವೀಸ್​ ಬಳಸಲಾಗುತ್ತಿದೆ. ಪುನೀತ್ ಪುತ್ಥಳಿ ನಿರ್ಮಾಣಕ್ಕೆ ಹೂಕುಂಡಗಳನ್ನು ಬಳಸಲಾಗಿದೆ. ಪುಣೆ, ಹೊಸೂರು, ಬೆಂಗಳೂರು ನಗರಗಳಿಂದ 25ರಿಂದ 30 ಜಾತಿಯ ವಿವಿಧ ತಳಿಗಳನ್ನು ಪ್ರದರ್ಶಿಸಲಾಗುತ್ತಿದೆ. ಹೂಗಳಿಂದ ತಯಾರಿಸಿದ ಜೇನುಹುಳು, ಕ್ಯಾಪ್ಸಿಕಮ್​ ಮನೆ, ಇರುವೆ, ಜಿರಾಫೆ, ನಂದಿ ಸೇರಿದಂತೆ ಹಲವು ಬಗೆಯ ಕಲಾಕೃತಿಗಳನ್ನು ಹೂಗಳಿಂದಲೇ ರೂಪಿಸಲಾಗಿದೆ. ಮೈಸೂರು ಉತ್ಸವದ ಅವಿಭಾಜ್ಯ ಅಂಗವಾದ ಆನೆಗಳ ಕಲಾಕೃತಿ ವೈಟ್​ಹೌಸ್​ಗೆ ಬರುವವರನ್ನು ಸ್ವಾಗತಿಸುತ್ತಿವೆ. ತುಜಾ ಲೀವ್ಸ್, ಆ್ಯಸ್ಪರಾಗಸ್ ಸಾಲ್ವಿಯಾ, ಪಾಯಿನ್ ಸಿಟಿಯಾ, ಕೆಲಂಚೋ, ಡಯಾಂತರಸ್, ಪೆಂಟಾಸ್ ಕಾರ್ನಿಯಾ, ಜರ್ಬೇರ, ಸೆಲೋಷಿಯಾ, ಜೀನಿಯಾ ಸೇರಿದಂತೆ 30ಕ್ಕೂ ಹೆಚ್ಚು ಜಾತಿಯ ಹೂಗಳನ್ನು ಪ್ರದರ್ಶಿಸಲಾಗಿದೆ.

ಫಲಪುಷ್ಪ ಪ್ರದರ್ಶನಕ್ಕಾಗಿ 50 ಸಾವಿರಕ್ಕೂ ಹೆಚ್ವು ಹೂಕುಂಡಗಳನ್ನು ಪ್ರದರ್ಶನಕ್ಕೆ ಬಳಸಲಾಗಿದೆ. ನಾಳೆ ಬೆಳಿಗ್ಗೆ 12.30ಕ್ಕೆ ಉಸ್ತುವಾರಿ ಸಚಿವ ಸೋಮಶೇಖರ್ ಹಾಗೂ ತೋಟಗಾರಿಕೆ ಇಲಾಖೆ ಸಚಿವರಾದ ಮುನಿರತ್ನ ಫಲಪುಷ್ಪ ಉದ್ಘಾಟನೆ ಮಾಡಲಿದ್ದಾರೆ. ಸೆ 26 ರಿಂದ ಅಕ್ಟೋಬರ್ 5 ರ ವರೆಗೂ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿದೆ.

ರಾಷ್ಟ್ರಪತಿಯಿಂದ ದಸರಾಗೆ ಚಾಲನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಬೆಳಿಗ್ಗೆ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ರಾಷ್ಟ್ರಪತಿ‌ ಭೇಟಿ ಹಿನ್ನೆಲೆಯಲ್ಲಿ ಬೆಳಿಗ್ಗೆ 11.30ರಿಂದ ಸಾರ್ವಜನಿಕರಿಗೆ ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮ ಮುಗಿದ ನಂತರ ಎಂದಿನಂತೆ ದರ್ಶನಕ್ಕೆ ಅವಕಾಶ ಇರಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾಹಿತಿ ನೀಡಿದ್ದಾರೆ.

ದಸರಾ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನ ಮೈಸೂರಿನಲ್ಲಿಯೇ ಇರಲಿದ್ದಾರೆ. ಸಾಂಸ್ಕೃತಿಕ ನಗರಿಗೆ ಇಂದು ಮಧ್ಯಾಹ್ನ 3 ಗಂಟೆಗೆ ಆಗಮಿಸುವ ಮುಖ್ಯಮಂತ್ರಿ ‘ಮೋದಿ ಯುಗ್ ಉತ್ಸವ್’ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಾಳೆ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ದಸರಾ ಉದ್ಘಾಟನೆಗೆಂದು ಮೈಸೂರಿಗೆ ಆಗಮಿಸುವ ರಾಷ್ಟ್ರಪತಿ ಮುರ್ಮು ಅವರಿಗೆ ಸ್ವಾಗತ ಕೋರಿ, ಕುಟುಂಬ ಸಮೇತ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ರಾಷ್ಟ್ರಪತಿಗಳೊಂದಿಗೆ ಹುಬ್ಬಳ್ಳಿಗೆ ತೆರಳಲಿದ್ದಾರೆ.

ನಾಡದೇವತೆ ತಾಯಿ ಚಾಮುಂಡೇಶ್ವರಿ ಮಹಿಷಾಸುರ ಮರ್ದಿನಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಉತ್ಸವಕ್ಕೆ ಚಾಲನೆ ಸಿಗಲಿದೆ. ಚಾಮುಂಡಿ ತಾಯಿಯ ಉತ್ಸವ ಮೂರ್ತಿ ಶುದ್ದಿ ಕಾರ್ಯವನ್ನು ದೇಗುಲದ ಪ್ರಧಾನ ಅರ್ಚಕ ಡಾ ಶಶಿ ಶೇಖರ್ ದೀಕ್ಷಿತ್ ನೆರವೇರಿಸಲಿದ್ದಾರೆ. ನಂತರ ಪಂಚಲೋಹದ ಚಾಮುಂಡೇಶ್ವರಿ ಮಹಿಷಾಸುರ ಮರ್ದಿನಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ರಥದಲ್ಲಿ ಇರಿಸಲಾಗುತ್ತಿದೆ. ದೇವಿಯ ವಿಗ್ರಹಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಷ್ಪಾರ್ಚನೆ ಮಾಡಲಿದ್ದಾರೆ. ನಾಳೆಯಿಂದ 9 ದಿನಗಳ ಕಾಲ‌ ಉತ್ಸವ ಮೂರ್ತಿಗೆ ವಿಶೇಷ ಪೂಜೆ ನಡೆಯಲಿದ್ದು, ವಿಜಯದಶಮಿಯ ದಿನದಂದು ಉತ್ಸವ ಕಳೆಕಟ್ಟಲಿದೆ. ನಂತರ ಮೆರವಣಿಗೆಯ ಮೂಲಕ ಅರಮನೆಗೆ ವಿಗ್ರಹವನ್ನು ಕಳುಹಿಸಲಾಗುತ್ತದೆ.

Published On - 12:30 pm, Sun, 25 September 22

ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
ಮೋಕ್ಷಿತಾ ಈಗ ಯುವರಾಣಿ; ಇಬ್ಭಾಗವಾದ ಬಿಗ್ ಬಾಸ್ ಮನೆ
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
6,6,6,6,6: RCB ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್ ಸಿಡಿಲಬ್ಬರ ಶುರು
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Devotional: ಪುಣ್ಯಕ್ಷೇತ್ರಗಳಿಗೆ ತೆರಳುವಾಗ ಅಪಘಾತವಾದರೆ ಏನರ್ಥ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
Daily Horoscope: ಈ ರಾಶಿಯವರ ವ್ಯಾಪಾರದ ತೊಂದರೆಗಳು ನಿವಾರಣೆಯಾಗುತ್ತದೆ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಹನುಮಂತನೊಟ್ಟಿಗೆ ಜಗಳ, ಮಹಾಪ್ರಭುಗಳ ಆಜ್ಞೆಯನ್ನೂ ಧಿಕ್ಕರಿಸಿದ ಶೋಭಾ ಶೆಟ್ಟಿ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರದ ಎಲ್ಲ ಹಗರಣಗಳನ್ನು ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ: ಅಶೋಕ
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಸರ್ಕಾರ ಯಾವುದೇ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸುವುದಿಲ್ಲ: ಶಿವಕುಮಾರ್
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಾಂಗ್ಲಾದೇಶದಲ್ಲಿ ಹಿಂದೂಗಳ ಸ್ಥಿತಿ ಅತ್ಯಂತ ಕಳವಳಕಾರಿಯಾಗಿದೆ: ಸಿಟಿ ರವಿ
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಬಿಜೆಪಿ ಚುನಾವಣೆಯಲ್ಲಿ ಸೋತಾಗಲೂ ಅಪ್ಪ-ಮಗ ಹೊಣೆ ಹೊರಬೇಕು: ಯತ್ನಾಳ್
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ
ಸಹೋದರನ ಮದುವೆಗೆ 35 ಅಡಿ ಉದ್ದದ ನೋಟಿನ ಮಾಲೆ ಉಡುಗೊರೆಯಾಗಿ ನೀಡಿದ ಅಣ್ಣ