ಮೈಸೂರು: ಕನ್ನಡ ರಾಜ್ಯೋತ್ಸವ ದಿನ ಅನ್ನದಾನ ವಿಚಾರವಾಗಿ ಗಲಾಟೆ; ಪುರಸಭೆ ಸದಸ್ಯನ ಮೇಲೆ ಹಲ್ಲೆ

ಕನ್ನಡ ರಾಜ್ಯೋತ್ಸವದ ದಿನ ಅನ್ನದಾನ ಮಾಡುವ ವಿಚಾರಗಿ ಹುಣುಸೂರಿನಲ್ಲಿ ದೇವರಾಜ್, ಮಕ್ಕಳಾದ ರಾಕೇಶ್ ಮತ್ತು ಶರತ್‌ ಎಂಬುವರು ಮಂಜು ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದರಿಂದ ಗಾಯಗೊಂಡ ಮಂಜು ಅವರನ್ನು ಸ್ಥಳದಲ್ಲಿದ್ದ ಕೆಲವು ಜನ ಹುಣಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೇವರಾಜ್, ರಾಕೇಶ್, ಶರತ್ ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮೈಸೂರು: ಕನ್ನಡ ರಾಜ್ಯೋತ್ಸವ ದಿನ ಅನ್ನದಾನ ವಿಚಾರವಾಗಿ ಗಲಾಟೆ; ಪುರಸಭೆ ಸದಸ್ಯನ ಮೇಲೆ ಹಲ್ಲೆ
ಹುಣಸೂರು ಪೊಲೀಸ್​ ಠಾಣೆ
Edited By: ವಿವೇಕ ಬಿರಾದಾರ

Updated on: Nov 03, 2023 | 7:08 AM

ಮೈಸೂರು ನ.03: ಹುಣಸೂರಿನಲ್ಲಿ (Hunasuru) ಕನ್ನಡ ರಾಜ್ಯೋತ್ಸವದ (Kannada Rajyotsava) ದಿನ ಅನ್ನದಾನ ಮಾಡುವ ವಿಚಾರಗಿ ಗಲಾಟೆ ನಡೆದಿದ್ದು, ಪುರಸಭೆ ಸದಸ್ಯ ಮಂಜು ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಪ್ರಕರಣ ಸಂಬಂಧ ಮೂವರ ವಿರುದ್ಧ ಎಫ್ಐಅರ್ (FIR) ದಾಖಲಾಗಿದೆ. ಗಾಯಗೊಂಡ ಪುರಸಭೆ ಸದಸ್ಯ ಮಂಜು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಕಾರು ಸ್ಟ್ಯಾಂಡ್ ಸಂಘಟನೆಯ ಅಧ್ಯಕ್ಷ ದೇವರಾಜ್, ಇವರ ಪುತ್ರರಾದ ರಾಕೇಶ್, ಶರತ್ ಮೇಲೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ರಾಜ್ಯೋತ್ಸವ ದಿನ ಕಾರ್ ಸ್ಟ್ಯಾಂಡ್ ಸಂಘಟನೆಯಿಂದ ಸಾರ್ವಜನಿಕರಿಗೆ ಅನ್ನದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘಟನೆ ಉಪಾಧ್ಯಕ್ಷ ಮಂಜು ಅವರ ನೇತೃತ್ವದಲ್ಲಿ ಅನ್ನದಾನ ಕಾರ್ಯಕ್ರಮಕ್ಕೆ ಸಿದ್ದತೆ ನಡೆಯುತ್ತಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಅಧ್ಯಕ್ಷ ದೇವರಾಜ್ ಅನ್ನದಾನ ವಿಚಾರದಲ್ಲಿ ಕಿರಿಕ್ ತೆಗೆದಿದ್ದಾರೆ. ಇದು ಜಾತಿ ವಿಚಾರಕ್ಕೆ ತಿರುಗಿದೆ.

ಇದನ್ನೂ ಓದಿ: ಗಲಾಟೆ ವೇಳೆ ಸೀರೆ ಹಿಡಿದು ವ್ಯಕ್ತಿ ಎಳೆದಾಡಿದ ಆರೋಪ: ಮನನೊಂದು ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ಗಲಾಟೆ ಹೆಚ್ಚಾಗಿ ದೇವರಾಜ್, ಮಕ್ಕಳಾದ ರಾಕೇಶ್ ಮತ್ತು ಶರತ್‌, ಮಂಜು ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದರಿಂದ ಗಾಯಗೊಂಡ ಮಂಜು ಅವರನ್ನು ಸ್ಥಳದಲ್ಲಿದ್ದ ಕೆಲವು ಜನ ಹುಣಸೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೇವರಾಜ್, ರಾಕೇಶ್, ಶರತ್ ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us