ಅಸ್ಸಾಂನಲ್ಲಿ ರಸ್ತೆ ಅಪಘಾತ: ಮೈಸೂರು ಮೂಲದ ಸಿಆರ್‌ಪಿಎಫ್ ಯೋಧ ಸಾವು

ಸೇನೆಗೆ ಸೇರಿ 10 ವರ್ಷ ಪೂರೈಸಿದ್ದ ಮೋಹನ್, ಇತ್ತೀಚೆಗೆ ಅಸ್ಸಾಂನಲ್ಲಿ ಹೈವೇ ಪೆಟ್ರೋಲಿಂಗ್‌ ಕರ್ತವ್ಯ ನಿರ್ವಹಿಸುತ್ತಿದ್ದರು. ಮೋಹನ್​ ಅವರು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪೋಷಕರು, ಮೃತದೇಹದ ನಿರೀಕ್ಷೆಯಲ್ಲಿದ್ದಾರೆ.

  • TV9 Web Team
  • Published On - 12:55 PM, 1 Mar 2021
ಅಸ್ಸಾಂನಲ್ಲಿ ರಸ್ತೆ ಅಪಘಾತ: ಮೈಸೂರು ಮೂಲದ ಸಿಆರ್‌ಪಿಎಫ್ ಯೋಧ ಸಾವು
ಸಿಆರ್‌ಪಿಎಫ್ ಪೇದೆ 34 ವರ್ಷದ ಮೋಹನ್

ಮೈಸೂರು: ಅಸ್ಸಾಂ ರಾಜ್ಯದಲ್ಲಿ ನಡೆದಿರುವ ರಸ್ತೆ ಅಪಘಾತದಲ್ಲಿ ಯೋಧರೊಬ್ಬರು ಕೊನೆಯುಸಿರೆಳೆದಿದ್ದಾರೆ. ಸಿಆರ್‌ಪಿಎಫ್ ಪೇದೆ 34 ವರ್ಷದ ಮೋಹನ್ ಮೃತ ದುರ್ದೈವಿ. ಇವರು ತಿ.ನರಸೀಪುರ ತಾಲೂಕಿನ ಮುಡುಕುತೊರೆ ಸಮೀಪದ ಬೆಟ್ಟಹಳ್ಳಿ ಗ್ರಾಮದ ನಿವಾಸಿ.

ಸೇನೆಗೆ ಸೇರಿ 10 ವರ್ಷ ಪೂರೈಸಿದ್ದ ಮೋಹನ್, ಇತ್ತೀಚೆಗೆ ಅಸ್ಸಾಂನಲ್ಲಿ ಹೈವೇ ಪೆಟ್ರೋಲಿಂಗ್‌ ಕರ್ತವ್ಯ ನಿರ್ವಹಿಸುತ್ತಿದ್ದರು. ಮೋಹನ್​ ಅವರು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದಿದೆ. ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪೋಷಕರು, ಮೃತದೇಹದ ನಿರೀಕ್ಷೆಯಲ್ಲಿದ್ದಾರೆ.

mysuru yodha

ಇದನ್ನೂ ಓದಿ: Soldiers Family Assault: ಯೋಧರ ಕುಟುಂಬಸ್ಥರ ಮೇಲೆ ಪಕ್ಕದ ಮನೆಯವರಿಂದ ಹಲ್ಲೆ: 9 ಜನರ ವಿರುದ್ಧ ದೂರು ದಾಖಲು

ಇದನ್ನೂ ಓದಿ: ಪಾದಚಾರಿಗೆ ಡಿಕ್ಕಿ ಹೊಡೆದು.. ಅಡಿಕೆ ತೋಟಕ್ಕೆ ನುಗ್ಗಿದ ಕಾರು: ವೃದ್ಧ ತಂದೆಯ ಸಾವಿಗೆ ಬಿಕ್ಕಿ ಬಿಕ್ಕಿ ಅತ್ತ ಯೋಧ