ಡೇರಿಗೆ ಹಾಲು ಹಾಕಲು ಹೋಗುತ್ತಿದ್ದಾಗ ಕಾಡಾನೆ ದಾಳಿ: ಪ್ರಾಣಾಪಾಯದಿಂದ ರೈತ ಪಾರು

  • TV9 Web Team
  • Published On - 11:48 AM, 8 Dec 2019
ಡೇರಿಗೆ ಹಾಲು ಹಾಕಲು ಹೋಗುತ್ತಿದ್ದಾಗ ಕಾಡಾನೆ ದಾಳಿ: ಪ್ರಾಣಾಪಾಯದಿಂದ ರೈತ ಪಾರು

ಮೈಸೂರು: ಡೇರಿಗೆ ಹಾಲು ಹಾಕಲು ಹೋಗುತ್ತಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಸರಗೂರು ತಾಲೂಕಿನ ಕಲ್ಲಂಬಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾಡಾನೆ ದಾಳಿಯಿಂದ 68 ವರ್ಷದ ರಾಮಯ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗ್ರಾಮಸ್ಥರ ಜೊತೆ ಡೇರಿಗೆ ಹಾಲು ಹಾಕಲು ರಾಮಯ್ಯ ತೆರಳುತ್ತಿದ್ದರು. ಈ ವೇಳೆ ಕಾಡಾನೆಯೊಂದು ರಾಮಯ್ಯನನ್ನು ತಳ್ಳಿ ಬೀಳಿಸಿದೆ. ಈ ಸಂದರ್ಭದಲ್ಲಿ ಗಾಯಗೊಂಡ ರಾಮಯ್ಯ ಕೂಗಾಟ ಕೇಳಿ ಜನರು ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣ ಜನರನ್ನು ಕಂಡು ಕಾಡಾನೆ ಓಡಿ ಹೋಗಿದೆ. ಗಾಯಾಳು ರಾಮಯ್ಯಗೆ ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದರೂ ಸ್ಥಳಕ್ಕೆ ಆಗಮಿಸದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.