Mysore: ಜಮೀನಿಗೆ ಅಳವಡಿಸಿದ್ದ ಸೋಲಾರ್ ವಿದ್ಯುತ್ ತಂತಿಗೆ ಆನೆ ಬಲಿ: ಪ್ರಕರಣ ದಾಖಲು
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿದ್ಯುತ್ ಸ್ಪರ್ಶಿಸಿ ಆನೆಯೊಂದು ಸಾವನ್ನಪ್ಪಿದೆ. ಹಳೇ ಮೈಸೂರು ಮಾನಂದವಾಡಿ ರಸ್ತೆಯ ಪಕ್ಕದಲ್ಲಿ ಈ ದುರಂತ ಸಂಭವಿಸಿದ್ದು, ಅಂದಾಜು 30 ರಿಂದ 35 ವರ್ಷದ ಗಂಡಾನೆ ಇದಾಗಿದೆ.
ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ(Nagarahole Tiger Reserve)ದಲ್ಲಿ ವಿದ್ಯುತ್ ಸ್ಪರ್ಶಿಸಿ ಆನೆ(Elephant)ಯೊಂದು ಸಾವನ್ನಪ್ಪಿದ್ದು, ಹಳೇ ಮೈಸೂರು ಮಾನಂದವಾಡಿ ರಸ್ತೆಯ ಪಕ್ಕದಲ್ಲಿ ಈ ದುರಂತ ಸಂಭವಿಸಿದೆ. 30 ರಿಂದ 35 ವರ್ಷದ ಗಂಡಾನೆ ಇದಾಗಿದ್ದು, ಉದಯ ಎಂಬುವವರಿಗೆ ಸೇರಿದ ಜಮೀನಿಗೆ ಅಳವಡಿಸಿದ್ದ ಸೋಲಾರ್ ತಂತಿ ಸ್ಪರ್ಶಿಸಿ ಈ ಘಟನೆ ನಡೆದಿದೆ. ನಂತರ ಜಮೀನು ಮಾಲೀಕ ಉದಯ ಪರಾರಿಯಾಗಿದ್ದ, 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆ ಸೆಕ್ಷನ್ 9 ಮತ್ತು 22 ರ ಪ್ರಕಾರ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸಗೊಬ್ಬರ ಸೇವಿಸಿ ಹಸು ಹಾಗೂ ಎರೆಡು ಎತ್ತು ಸಾವು
ಮಂಡ್ಯ: ಮೇವು ಸೇವಿಸುವ ವೇಳೆ ರಸಗೊಬ್ಬರ ಸೇವಿಸಿ ಹಸು ಹಾಗೂ ಎರೆಡು ಎತ್ತು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಳೆಗೆರಹಳ್ಳಿಯಲ್ಲಿ ನಡೆದಿದೆ. ರೈತ ಮಹಿಳೆ ಸುಮಿತ್ರರಿಗೆ ಸೇರಿದ ಎರೆಡು ಎತ್ತು ಹಾಗೂ ಸೀಮೆಹಸು ಬಲಿಯಾಗಿವೆ. ಗದ್ದೆಗೆ ಹಾಕಲೆಂದು ಮೇವಿನ ಪಕ್ಕದಲ್ಲೆ ರಸಗೊಬ್ಬರ ಇಟ್ಟಿದ್ದು, ಮೇವು ಎಂದು ಕೊಂಡು ರಸಗೊಬ್ಬರವನ್ನ ಜಾನುವಾರುಗಳು ಸೇವಿಸಿದ ಕಾರಣ ಸ್ಥಳದಲ್ಲೇ ಕುಸಿದು ಜಾನುವಾರುಗಳು ಬಿದ್ದಿದೆ. ಕೂಡಲೇ ಅಸ್ವಸ್ಥಗೊಂಡ ಜಾನುವಾರುಗಳಿಗೆ ಚಿಕಿತ್ಸೆ ನೀಡಿದ್ರು, ಫಲಕಾರಿಯಾಗದೇ ಸಾವನ್ನಪ್ಪಿವೆ.
ಪುಂಡಾಟ ನಡೆಸುವ ಕಾಡಾನೆಗಳನ್ನ ಫಳಗಿಸಲು ಹಾರಂಗಿ ಹಿನ್ನೀರಿನಲ್ಲಿ ನೂತನ ಕ್ಯಾಂಪ್
ಕೊಡಗು: ಜಿಲ್ಲೆಯಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 400ಕ್ಕೂ ಅಧಿಕ ಆನೆಗಳಿವೆ. ಹಾಗಾಗಿ ಆನೆ ಮಾನವ ಸಂಘರ್ಷ ತೀವ್ರವಾಗಿದ್ದು, ಪುಂಡಾಟ ನಡೆಸುವ ಕಾಡಾನೆಗಳನ್ನ ಹಿಡಿದು ಕೊಡಗಿನ ದುಬಾರೆ ಮತ್ತು ಮತ್ತಿಗೋಡು ಆನೆ ಶಿಬಿರದಲ್ಲಿ ಪಳಗಿಸಲಾಗುತ್ತದೆ. ಆದ್ರೆ, ಅಲ್ಲಿ ಆನೆಗಳ ಸಂಖ್ಯೆ ಅಧಿಕವಾಗಿದೆ. ಹಾಗಾಗಿ ಅರಣ್ಯ ಇಲಾಖೆ ಇದೀಗ ಹಾರಂಗಿ ಹಿನ್ನೀರಿನಲ್ಲಿ ಆರಂಭಿಸಿರುವ ಆನೆ ಕ್ಯಾಂಪ್ ಪ್ರವಾಸೀ ತಾಣವಾಗಿ ಒಳ್ಳೆಯ ರೆಸ್ಪಾನ್ಸ್ ಗಳಿಸುತ್ತಿದೆ.
ಇದನ್ನೂ ಓದಿ:ಮಂಡ್ಯದಲ್ಲಿ 29 ಸಾಕು ಪ್ರಾಣಿಗಳ ನಿಗೂಢ ಸಾವು! ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭೇಟಿ
ಹೌದು ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದ ಬಳಿ ಈ ಹೊಸ ಆನೆ ಶಿಬಿರ ಸ್ಥಾಪಿಸಲಾಗಿದೆ. ದುಬಾರೆ ಆನೆ ಶಿಬಿರದಲ್ಲಿ ಈಗಾಗಲೇ 35ಕ್ಕೂ ಅಧಿಕ ಆನೆಗಳಿವೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಒಂದು ಶಿಬಿರದಲ್ಲಿ 15ಕ್ಕಿಂತ ಹೆಚ್ಚು ಆನೆಗಳಿರುವಂತಿಲ್ಲ. ಹಾಗಾಗಿ ಅರಣ್ಯ ಇಲಾಖೆ ಹಾರಂಗಿ ಹಿನ್ನೀರಿನ ಬಳಿ ಈ ಆನೆ ಶಿಬಿರವನ್ನ ಸ್ಥಾಪಿಸಿದೆ. ದುಬಾರೆಯಿಂದ 15 ಆನೆಗಳನ್ನ ಇಲ್ಲಿಗೆ ಸ್ಥಳಾಂತರಿಸಲಾಗಿದೆ. ಇನ್ನು ಹಾರಂಗಿ ಜಲಾಶಯಕ್ಕೆ ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಇದೀಗ ಇದೇ ಸ್ಥಾಳದಲ್ಲಿ ಆನೆ ಶಿಬಿರ ಸ್ಥಾಪನೆಯಾಗಿರುವುದು ಪ್ರವಾಸಿಗರ ಪಾಲಿಗೆ ಡಬ್ಬಲ್ ಧಮಾಕದಂತಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:48 am, Fri, 30 June 23