ಮೈಸೂರಿನ ಹೆಬ್ಬಾಳ ಕೆರೆಯಲ್ಲಿ ಮೀನುಗಳ ಸಾವು: ಮೂಗು ಮುಚ್ಚಿಕೊಂಡು ವಾಯುವಿಹಾರ ಮಾಡುತ್ತಿರುವ ಸಾರ್ವಜನಿಕರು

ಜಿಲ್ಲೆಯ ರಿಂಗ್ ರಸ್ತೆ ಬಳಿಯಿರುವ ಹೆಬ್ಬಾಳ ಕೆರೆಯನ್ನು ಅಭಿವೃದ್ಧಿ ಪಡಿಸಲು ಇನ್ಫೋಸಿಸ್ ಕೆರೆ ನಿರ್ವಹಣಾ ತಂಡ ಸಾವಿರಾರು ಮೀನುಗಳನ್ನು ಕೆರೆಗೆ ಬಿಟ್ಟಿತ್ತು. ಕೆರೆಯಲ್ಲಿ ಮೀನುಗಳನ್ನ ಬಿಟ್ಟಿರುವ ಬಗ್ಗೆ ನಿನ್ನೆಯಷ್ಟೇ (ಮಾರ್ಚ್ 12) ಇನ್ಫೋಸಿಸ್ ಸಿಬ್ಬಂದಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್​ಗೆ ಮಾಹಿತಿ ನೀಡಿತ್ತು.

ಮೈಸೂರಿನ ಹೆಬ್ಬಾಳ ಕೆರೆಯಲ್ಲಿ ಮೀನುಗಳ ಸಾವು: ಮೂಗು ಮುಚ್ಚಿಕೊಂಡು ವಾಯುವಿಹಾರ ಮಾಡುತ್ತಿರುವ ಸಾರ್ವಜನಿಕರು
ಹೆಬ್ಬಾಳ ಕೆರೆಯಲ್ಲಿ ಸಾವನ್ನಪ್ಪಿರುವ ಮೀನುಗಳು
Follow us
|

Updated on: Mar 13, 2021 | 10:41 AM

ಮೈಸೂರು: ಈ ಬಾರಿ ರಾಜ್ಯದ ಹಲವು ಕಡೆಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಕೆರೆಯ ಮೀನುಗಳು ಸಾವನ್ನಪ್ಪುತ್ತಿವೆ. ಕೆಲವು ಕಡೆ ಕಾರ್ಖಾನೆಯ ಕಲುಷಿತ ನೀರಿನಿಂದ ಸಾವನ್ನಪ್ಪಿದ್ದರೆ ಇನ್ನು ಕೆಲವು ಕಡೆ ಉದ್ದೇಶ ಪೂರ್ವಕವಾಗಿ ಕೆರೆಗೆ ವಿಷವನ್ನು ಹಾಕಿ ಮೀನುಗಳನ್ನು ಸಾಯಿಸಿರುವ ಘಟನೆಗಳು ಕೂಡಾ ನಡೆದಿವೆ. ಅದರಂತೆ ಇತ್ತೀಚೆಗಷ್ಟೇ ಅಭಿವೃದ್ಧಿ ಹೊಂದಿದ್ದ ಕೆರೆಯ ಮೀನುಗಳು ಇದೀಗ ಸಾವನ್ನಪ್ಪಿರುವ ಘಟನೆ ರಿಂಗ್ ರಸ್ತೆ ಬಳಿಯಿರುವ ಹೆಬ್ಬಾಳ ಕೆರೆಯಲ್ಲಿ ಸಂಭವಿಸಿದೆ.

ಜಿಲ್ಲೆಯ ರಿಂಗ್ ರಸ್ತೆ ಬಳಿಯಿರುವ ಹೆಬ್ಬಾಳ ಕೆರೆಯನ್ನು ಅಭಿವೃದ್ಧಿ ಪಡಿಸಲು ಇನ್ಫೋಸಿಸ್ ಕೆರೆ ನಿರ್ವಹಣಾ ತಂಡ ಸಾವಿರಾರು ಮೀನುಗಳನ್ನು ಕೆರೆಗೆ ಬಿಟ್ಟಿತ್ತು. ಕೆರೆಯಲ್ಲಿ ಮೀನುಗಳನ್ನ ಬಿಟ್ಟಿರುವ ಬಗ್ಗೆ ನಿನ್ನೆಯಷ್ಟೇ (ಮಾರ್ಚ್ 12) ಇನ್ಫೋಸಿಸ್ ಸಿಬ್ಬಂದಿ ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್​ಗೆ ಮಾಹಿತಿ ನೀಡಿತ್ತು. ಅಲ್ಲದೇ ಬಿಟ್ಟಿದ್ದ ಮೀನುಗಳನ್ನು ಸಚಿವರು ನಿನ್ನೆ ವೀಕ್ಷಣೆಯನ್ನೂ ಮಾಡಿದ್ದರು. ಆದರೆ ಇದೀಗ ಹೆಬ್ಬಾಳ ಕೆರೆಯ ಮೀನುಗಳು ಸಾವನ್ನಪ್ಪಿವೆ. ಮೀನುಗಳ ಸಾವಿಗೆ ಇನ್ನು ಕಾರಣ ತಿಳಿದುಬಂದಿಲ್ಲ. ಸತ್ತಿರುವ ಮೀನುಗಳಿಂದ ವಿಪರೀತ ವಾಸನೆ ಹುಟ್ಟಿದ್ದು, ವಾಯುವಿಹಾರ ಮಾಡುತ್ತಿರುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ.

ಸತ್ತಿರುವ ಮೀನುಗಳಿಂದ ವಾಸನೆ ಹೆಚ್ಚಾಗಿ ಓಡಾಡುವವರಿಗೆ ತೊಂದರೆ ಎದುರಾಗಿದೆ

ಸಾವನ್ನಪ್ಪಿರುವ ಮೀನುಗಳು ಕೆರೆಯ ದಡದ ಮೇಲೆ ಬಂದಿವೆ

ಚಿಕ್ಕ ಮಗಳೂರಿನಲ್ಲಿ ಮೀನುಗಳ ಮಾರಣಹೋಮ ಕೆರೆಗೆ ವಿಷ ಹಾಕಿದ್ದರಿಂದ ರಾಶಿ- ರಾಶಿ ಮೀನುಗಳು ಸಾವನ್ನಪ್ಪಿರುವ ಘಟನೆ ಎರಡು ತಿಂಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮೈಮಲ್ಲಾಪುರದಲ್ಲೂ ನಡೆದಿತ್ತು. ತಮ್ಮಯ್ಯ ಎಂಬುವವರ ಕೆರೆಯಲ್ಲಿ ಮೀನುಗಳನ್ನು ಸಾಕಿದ್ದರು. ಆದರೆ ಕಿಡಿಗೇಡಿಗಳು ವಿಷ ಹಾಕಿದ್ದರಿಂದ ಲಕ್ಷಾಂತರ ಮೀನುಗಳು ಸಾವನ್ನಪ್ಪಿದ್ದವು.

ಹೆಬ್ಬಾಳ ಕೆರೆಯಲ್ಲಿ ತೇಲುತ್ತಿರುವ ಮೀನುಗಳು

ಇದನ್ನೂ ಓದಿ

ರೂಪದರ್ಶಿಯ ನಿಗೂಢ ಸಾವು: ಮಾಡಲಿಂಗ್ ಆಸೆಯೇ ಆ ವಿದ್ಯಾರ್ಥಿನಿಯ ಬದುಕಿಗೆ ಮುಳುವಾಯಿತಾ?

ಭಾರತದಲ್ಲಿ ಕೊರೊನಾದಿಂದ ಸಾವು ಸಂಭವಿಸಿ ಭರ್ತಿ ಒಂದು ವರ್ಷ, ಸಾವಿಗೆ ನಾಂದಿ ಹಾಡಿದ್ದೇ ಕರ್ನಾಟಕ

ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್