ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕಿತ್ತೊಗೆಯಲು ಕರ್ನಾಟಕದ ಜನರಿಂದ ಸುಪಾರಿ ಪಡೆದಿದ್ದೇನೆ: ಹೆಚ್ಡಿ ಕುಮಾರಸ್ವಾಮಿ ಕಿಡಿ
2 ರಾಷ್ಟ್ರೀಯ ಪಕ್ಷಗಳನ್ನು ಕಿತ್ತೊಗೆಯಲು ಸುಪಾರಿ ಪಡೆದಿದ್ದೇನೆ. ರಾಜ್ಯದ ಜನರಿಂದ ಸುಪಾರಿ ಪಡೆದಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ. ನಾನು ಓಲೈಕೆ ರಾಜಕಾರಣ ಮಾಡುತ್ತಿಲ್ಲ. ನನಗೆ ಸಮಾಜದ ಸ್ವಾಸ್ಥ್ಯ ಮುಖ್ಯ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈಸೂರು: ಕರ್ನಾಟಕದಲ್ಲಿ ಉಂಟಾಗಿರುವ ಕೋಮು ಗಲಭೆ, ವಿವಾದಾತ್ಮಕ ವಾತಾವರಣದ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ. ₹400 ರಿಂದ 500 ಕೋಟಿ ರೂಪಾಯಿ ಮಾವು ವ್ಯವಹಾರ ನಡೆಯುತ್ತೆ. ಎಲ್ಲಾ ಮಾವು ವಿಶ್ವ ಹಿಂದೂ ಪರಿಷತ್ ಖರೀದಿ ಮಾಡುತ್ತಾ? ವಿಹಿಂಪ ನವರು ರೇಷ್ಮೆ, ಮಾವಿನ ಡೀಲರ್ಸ್ ಆಗುತ್ತಾರಾ? ನಾಳೆ ಹುಣಸೆ, ಸಪೋಟ ಹಣ್ಣಿನ ವ್ಯಾಪಾರವೂ ಬರುತ್ತದೆ. ಆಗ ಏನು ಮಾಡುತ್ತೀರಿ. ನೀವು ಬೇಕಿದ್ದರೆ ನಾಮ ಹಾಕಿಕೊಂಡು ಓಡಾಡಿ. ಆದರೆ ರೈತರಿಗೆ ನಾಮ ಹಾಕುವುದಕ್ಕೆ ಬರಬೇಡಿ. ರೈತರ ಬದುಕಿಗೆ ನಾಮ ಹಾಕಿ ಹಾಳುಮಾಡಬೇಡಿ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಬಿಜೆಪಿಯಿಂದ ಹೆಚ್ಡಿಕೆ ಸುಪಾರಿ ಪಡೆದಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, 2 ರಾಷ್ಟ್ರೀಯ ಪಕ್ಷಗಳನ್ನು ಕಿತ್ತೊಗೆಯಲು ಸುಪಾರಿ ಪಡೆದಿದ್ದೇನೆ. ರಾಜ್ಯದ ಜನರಿಂದ ಸುಪಾರಿ ಪಡೆದಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ. ನಾನು ಓಲೈಕೆ ರಾಜಕಾರಣ ಮಾಡುತ್ತಿಲ್ಲ. ನನಗೆ ಸಮಾಜದ ಸ್ವಾಸ್ಥ್ಯ ಮುಖ್ಯ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸಿಎಂ ಮೌನ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಹಿಂದೂ-ಮುಸಲ್ಮಾನರ ಮಧ್ಯೆ ಕಂದಕ ಸೃಷ್ಟಿಸುತ್ತಿದ್ದಾರೆ. ಮುಸ್ಲಿಂ ಯುವಕರು ಅಂತಾ ಕನಿಕರ ತೋರಿಸಿ ಎನ್ನುವುದಿಲ್ಲ. ತಪ್ಪಿತಸ್ಥ ಆರೋಪಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿ. ಆದರೆ, ಇತ್ತೀಚಿನ ಸಿನಿಮಾಗಳೇ ಕೆಲವು ರೀತಿಯ ಕೃತ್ಯಗಳಿಗೆ ಪ್ರೇರಣೆ ನೀಡುತ್ತಿದೆ. ಕಾಣದ ಕೈಗಳಿಂದ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಕೆಲಸ ಮಾಡಲಾಗುತ್ತಿದೆ. ರಾಜ್ಯದಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಜನರ ಕೊಲೆಯಾದವು. ಈ ವಿಚಾರದಲ್ಲಿ ಸೆಲೆಕ್ಟಿವ್ ಆಗಿ ಕಾರ್ಯ ಪ್ರವೃತ್ತವಾಗುತ್ತವೆ. ಬಿಜೆಪಿಯ ಈ ನಡೆ ಸರಿಯಲ್ಲ. ಸಮಾಜವನ್ನು ಹಾಳು ಮಾಡಿ ಸಿಎಂ ಆಗುವ ಆಸೆ ನನಗೆ ಇಲ್ಲ ಎಂದು ಅವರು ಹೇಳಿದ್ದಾರೆ.
ಈಗ ದಲಿತ ಎಂಬ ಹೆಸರಿನಲ್ಲಿ ಬಿಜೆಪಿಯವರು ಕುತಂತ್ರ ಮಾಡ್ತಿದ್ದಾರೆ
ಯುವಕ ಚಂದ್ರು ಕೊಲೆ ಪ್ರಕರಣದಲ್ಲಿ ವಾಸ್ತವಾಂಶ ಹೇಳಬೇಕು. ಚಂದ್ರು ಹತ್ಯೆಯಾಗಿ 24 ಗಂಟೆಯಾದ್ರೂ ವಾಸ್ತವ ವಿಷಯ ಹೇಳಿಲ್ಲ. ಅದುಬಿಟ್ಟು ಚೂರಿಯಿಂದ ಚುಚ್ಚಿ ಚುಚ್ಚಿ ಸಾಯಿಸಿದ್ದಾರೆಂದಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಹತ್ಯೆಯಾದ ಚಂದ್ರು ಹಿಂದೂ ಎಂದು ಗೃಹಸಚಿವರು ಹೇಳಲಿಲ್ಲ. ದಲಿತ ಯುವಕ ಎಂಬ ಹೇಳಿಕೆ ನೀಡಿ ಕುತಂತ್ರ ಮಾಡುತ್ತಿದ್ದಾರೆ. ದಲಿತ ಎಂಬ ಹೆಸರಿನಲ್ಲಿ ಬಿಜೆಪಿಯವರು ಕುತಂತ್ರ ಮಾಡ್ತಿದ್ದಾರೆ. ರಾಜ್ಯದಲ್ಲಿ ಹಲವಾರು ಕೊಲೆಗಳಾಗಿದ್ದರೂ ಪ್ರತಿಕ್ರಿಯೆ ನೀಡಿಲ್ಲ. ಇಲ್ಲಿ ಮುಸ್ಲಿಂ ಯುವಕರು ಕೊಂದಿದ್ದಕ್ಕೆ ಗೃಹಮಂತ್ರಿ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಅವರಿಗೆ ಬೇಕಾದಂತೆ ತಿರುಚಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರ ಹುನ್ನಾರ, ಕುತಂತ್ರಗಳು ರಾಜ್ಯದ ಜನರಿಗೆ ಗೊತ್ತಿದೆ. ಮೈಸೂರು ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಾಲಿಶ ಹೇಳಿಕೆ ನೀಡಿದ್ದರು. ಇಂತಹವರು ಹೇಗೆ ತಮ್ಮ ಇಲಾಖೆಯನ್ನ ನಿಭಾಯಿಸುತ್ತಾರೆ? ಕೊಲೆ ಪ್ರಕರಣದಲ್ಲಿ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಬೇಕು. ಗೃಹಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುವುದು ಸರಿಯಲ್ಲ. ಹತ್ಯೆಯಾದ ಯುವಕ ಚಂದ್ರು ಕುಟುಂಬ ಕಡುಬಡವರಿದ್ದಾರೆ. ಮೃತ ಯುವಕ ಚಂದ್ರು ಕುಟುಂಬಕ್ಕೆ ಪರಿಹಾರ ನೀಡಬೇಕು. ಶಿವಮೊಗ್ಗದ ಹರ್ಷನಿಗೆ ನೀಡಿದಂತೆ ಪರಿಹಾರವನ್ನು ನೀಡಲಿ. ರಾಜ್ಯ ಸರ್ಕಾರ ಶೀಘ್ರದಲ್ಲೇ ಪರಿಹಾರ ನೀಡುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಧರ್ಮ ಸಂಘರ್ಷಕ್ಕೆ ಬ್ರೇಕ್ ಹಾಕಲು ಮುಂದಾದ ಹೆಚ್ಡಿ ಕುಮಾರಸ್ವಾಮಿ; ಪ್ರತಿಭಟನೆ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ
ಇದನ್ನೂ ಓದಿ: ಪೂರ್ಣ ಅಧಿಕಾರ ಕೊಟ್ರೆ ನೀರಾವರಿ ಯೋಜನೆ ಪೂರ್ತಿ ಮಾಡ್ತೇನೆ; ಇಲ್ಲಾಂದ್ರೆ ಜೆಡಿಎಸ್ ವಿಸರ್ಜನೆ ಮಾಡ್ತೇನೆ- ಹೆಚ್ ಡಿ ಕುಮಾರಸ್ವಾಮಿ
Published On - 2:12 pm, Wed, 6 April 22