ST Reservation: ಮೀಸಲಾತಿ ಅಖಾಡಕ್ಕಿಳಿದ ಮತ್ತೊಂದು ಸಮುದಾಯ; ST ಮೀಸಲಾತಿ ಹೋರಾಟಕ್ಕೆ ಮಡಿವಾಳ ಸಮುದಾಯ ನಿರ್ಧಾರ

ST Reservation: ಡಾ.ಬಸವ ಮಾಚಿದೇವ ಸ್ವಾಮೀಜಿ ದೇಶದ 18 ರಾಜ್ಯಗಳು ಮೀಸಲಾತಿ ನೀಡಿದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ನಮಗೆ ಸವಲತ್ತು ಸಿಗುತ್ತಿಲ್ಲ. ನಮ್ಮ ಸಮುದಾಯದವರಿಗೆ ರಾಜಕೀಯ ಪ್ರಾಧಾನ್ಯತೆ ಸಿಕ್ಕಿಲ್ಲ. ಹೀಗಾಗಿ ಫೆಬ್ರವರಿ 24ರಂದು ಚಿತ್ರದುರ್ಗದಲ್ಲಿ ಸಭೆ ಮಾಡುತ್ತೇವೆ ಎಂದು ಹೇಳಿದರು.

  • TV9 Web Team
  • Published On - 12:15 PM, 22 Feb 2021
ST Reservation: ಮೀಸಲಾತಿ ಅಖಾಡಕ್ಕಿಳಿದ ಮತ್ತೊಂದು ಸಮುದಾಯ; ST ಮೀಸಲಾತಿ ಹೋರಾಟಕ್ಕೆ ಮಡಿವಾಳ ಸಮುದಾಯ ನಿರ್ಧಾರ
ಸಭೆ ನಡೆಸಿದ ಡಾ. ಶ್ರೀ ಬಸವ ಮಾಚಿದೇವ ಸ್ವಾಮೀಜಿ

ಮೈಸೂರು: ಈಗಾಗಲೇ ಕುರುಬ ಸಮುದಾಯಕ್ಕೆ ಎಸ್​​ಟಿ (ST) ಮೀಸಲಾತಿ, ಪಂಚಮಸಾಲಿಗೆ 2ಎ ಮೀಸಲಾತಿ ಆಗ್ರಹಿಸಿ ಹೋರಾಟ ನಡೆಸುತ್ತಿರುವ ಬೆನ್ನಲೇ ರಾಜ್ಯದಲ್ಲಿ ಮತ್ತೊಂದು ಸಮುದಾಯ ಮೀಸಲಾತಿಗಾಗಿ ಆಗ್ರಹಿಸಿ ಹೋರಾಟಕ್ಕೆ ಇಳಿಯಲು ಮುಂದಾಗಿದೆ. ಮಡಿವಾಳ ಸಮುದಾಯ ಎಸ್​ಟಿ ಮೀಸಲಾತಿಗಾಗಿ ಹೋರಾಟ ನಡೆಸಲು ನಿರ್ಧರಿಸಿದ್ದು,ಜಿಲ್ಲೆಯಲ್ಲಿ ಹೋರಾಟದ ರೂಪುರೇಷೆಗಳ ಬಗ್ಗೆ ಸಮುದಾಯದ ಮುಖಂಡರ ಸಭೆ ನಡೆದಿದೆ.  ಚಿತ್ರದುರ್ಗ ಮಡಿವಾಳ ಮಾಚಿದೇವ ಸಂಸ್ಥಾನ ಮಠದ ಡಾ. ಶ್ರೀ ಬಸವ ಮಾಚಿದೇವ ಸ್ವಾಮೀಜಿ ನೇತೃತ್ವದಲ್ಲಿ ಈ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಡಾ.ಬಸವ ಮಾಚಿದೇವ ಸ್ವಾಮೀಜಿ ಅವರು ದೇಶದ 18 ರಾಜ್ಯಗಳು ಮೀಸಲಾತಿ ನೀಡಿವೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ನಮಗೆ ಸವಲತ್ತು ಸಿಗುತ್ತಿಲ್ಲ. ನಮ್ಮ ಸಮುದಾಯದವರಿಗೆ ರಾಜಕೀಯ ಪ್ರಾಧಾನ್ಯತೆ ಸಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು. ಅಲ್ಲದೇ ಫೆಬ್ರವರಿ 24 ರಂದು ಚಿತ್ರದುರ್ಗದಲ್ಲಿ ಸಭೆ ಮಾಡುತ್ತೇವೆ. ನಡೆಯುವ ಸಭೆಯಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸುತ್ತೇವೆ ಎಂದು ತಿಳಿಸಿದರು.

ಎಸ್​​ಟಿ ಮೀಸಲಾತಿ ನೀಡುವಂತೆ ಕಳೆದ 40 ವರ್ಷಗಳಿಂದ ಒತ್ತಾಯ ಮಾಡುತ್ತಲೇ ಇದ್ದೇವೆ. ಆದರೂ ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ.  ದೇಶದ ಸುಮಾರು ಹದಿನೆಂಟು ರಾಜ್ಯದಲ್ಲಿ ಮೀಸಲಾತಿ ನೀಡಿದೆ. ಆದರೆ ನಮ್ಮ ರಾಜ್ಯದಲ್ಲಿ ಸವಲತ್ತು ಸಿಗುತ್ತಿಲ್ಲ. ನಮ್ಮ ಸಮುದಾಯದಲ್ಲಿ ಯಾವೊಬ್ಬ ರಾಜಕಾರಣಿಯೂ ಇಲ್ಲ. ಒಬ್ಬ ಎಂಪಿ, ಎಂಎಲ್ಎ ಕೂಡಾ ಇಲ್ಲ. ರಾಜಕೀಯ ಪ್ರಾಧಾನ್ಯತೆ ಸಿಕ್ಕಿಲ್ಲ. ಈ ಹಿನ್ನೆಲೆ ಇದೆ ತಿಂಗಳ 24 ಕ್ಕೆ ಚಿತ್ರದುರ್ಗದಲ್ಲಿ ನಮ್ಮ ಸಮುದಾಯದ ಮುಖಂಡರು ಸಭೆ ನಡೆಸುತ್ತೇವೆ ಎಂದು ಡಾ. ಶ್ರೀ ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.

ಪಂಚಮಸಾಲಿ ಹೋರಾಟ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಕೂಡಲ ಸಂಗಮದ ಪಂಚಮಸಾಲಿ ಪೀಠದಿಂದ ಜನವರಿ 14 ರಂದು ಪಾದಯಾತ್ರೆ ಆರಂಭವಾಗಿದ್ದು, ಇದೀಗ ಬೆಂಗಳೂರಿಗೆ ಬಂದು ತಲುಪಿದೆ. ಅಲ್ಲದೇ ರಾಜ್ಯ ಸರ್ಕಾರಕ್ಕೆ ಪಂಚಮಸಾಲಿ ಸಮುದಾಯ 2ಎ ಮೀಸಲಾತಿ ನೀಡುವುದಕ್ಕೆ ಮಾರ್ಚ್ 4ರ ವರೆಗೆ ಗಡುವು ನೀಡಿದೆ. ಪ್ರವರ್ಗ 3ಬಿ ಯಿಂದ 2ಎ ಗೆ ಸೇರಿಸಬೇಕೆಂದು ಪಂಚಮಸಾಲಿ ಸಮುದಾಯ ಒತ್ತಾಯಿಸುತ್ತಿದೆ. ಉದ್ಯೋಗ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಮುದಾಯದ ಯುವ ಜನತೆಗೆ ಅನ್ಯಾಯವಾಗುತ್ತಿದೆ ಎಂದು ಹೇಳಿ  2ಎ ಮೀಸಲಾತಿ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ:

ಪಂಚಮಸಾಲಿ ಸಮಾವೇಶದಲ್ಲಿ ಸಿಎಂ BSY ವಿರುದ್ಧ ಯತ್ನಾಳ್​ ಗುಡುಗು.. ಹೈಕಮಾಂಡ್​ನಿಂದ ಬಂತು ಬುಲಾವ್

ಪಂಚಮಸಾಲಿ ಹೋರಾಟದ ಕುರಿತು ಸರ್ಕಾರದ ನಿಲುವು ತಿಳಿಸಲು ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್ ನಾಳೆ ಸುದ್ದಿಗೋಷ್ಠಿ