AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಮಹಾರಾಜ ಕಾಲೇಜಿನಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣ; ಕಳೆದ 1 ವಾರದಿಂದ ತರಗತಿ ನಡೆಸಲು ಕಿರಿಕಿರಿ

ನಟ ಸುಕುಮಾರನ್ ಅಭಿನಯದ ಜನಗಣಮನ ಸಿನಿಮಾದ ಕೋರ್ಟ್ ಸೀನ್ ಶೂಟಿಂಗ್ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಉಪನ್ಯಾಸಕರು ಅಸಮಾಧಾನ ಹೊರ ಹಾಕಿದ್ದಾರೆ.

ಮೈಸೂರು: ಮಹಾರಾಜ ಕಾಲೇಜಿನಲ್ಲಿ ಮಲಯಾಳಂ ಸಿನಿಮಾ ಚಿತ್ರೀಕರಣ; ಕಳೆದ 1 ವಾರದಿಂದ ತರಗತಿ ನಡೆಸಲು ಕಿರಿಕಿರಿ
ಸಿನಿಮಾ ಚಿತ್ರೀಕರಣ
TV9 Web
| Edited By: |

Updated on:Nov 12, 2021 | 2:29 PM

Share

ಮೈಸೂರು: ಕಳೆದ 1 ವಾರದಿಂದ ಮಲೆಯಾಳಂ ಸಿನಿಮಾದ ಚಿತ್ರೀಕರಣ ಮೈಸೂರು ಜಿಲ್ಲೆಯ ಮಹಾರಾಜ ಕಾಲೇಜಿನಲ್ಲಿ ನಡೆಯುತ್ತಿದೆ. ಇದರಿಂದಾಗಿ ಕಳೆದ 7 ದಿನಗಳಿಂದ ಕಾಲೇಜಿನಲ್ಲಿ ತರಗತಿ ನಡೆಸಲು ಕಿರಿಕಿರಿ ಉಂಟಾಗುತ್ತಿದೆ. ಮಲಯಾಳಂನ ‘ಜನಗಣಮನ’ ಸಿನಿಮಾದ ಚಿತ್ರೀಕರಣ(Film Shooting) ಮಹಾರಾಜ ಕಾಲೇಜಿನ( Maharaja College)  ಆವರಣದಲ್ಲಿ ನಡೆಯುತ್ತಿದೆ. ನಟ ಸುಕುಮಾರನ್ ಅಭಿನಯದ ಜನಗಣಮನ ಸಿನಿಮಾದ ಕೋರ್ಟ್ ಸೀನ್ ಶೂಟಿಂಗ್ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಉಪನ್ಯಾಸಕರು ಅಸಮಾಧಾನ ಹೊರ ಹಾಕಿದ್ದಾರೆ.

ಕಾಲೇಜಿನಲ್ಲಿ ಶೂಟಿಂಗ್ ಹಿನ್ನೆಲೆ ತರಗತಿಗಳಿಗೆ ಬಂಕ್ ಸಿನಿಮಾ ಚಿತ್ರೀಕರಣ ಎಂದು, ಅದರಲ್ಲೂ ಕಾಲೇಜಿನ ಆವರಣದಲ್ಲಿಯೇ ಚಿತ್ರೀಕರಣ ಆಗುತ್ತಿರುವ ಹಿನ್ನಲೇ ತರಗತಿಗಳಿಗೆ ಬಾರದೆ ವಿದ್ಯಾರ್ಥಿಗಳು ಬಂಕ್ ಹಾಕುತ್ತಿದ್ದಾರೆ. ಇನ್ನು ಪೊಲೀಸ್ ಜೀಪ್, ವ್ಯಾನ್ ಓಡಾಟದ ದೃಶ್ಯ ಚಿತ್ರೀಕರಣ ಆಗಿರುವುದರಿಂದ ಉಪನ್ಯಾಸಕರಿಗೆ ಕಿರಿಕಿರಿ ಉಂಟಾಗುತ್ತಿದೆ. ಅಲ್ಲದೇ ಧ್ವನಿ ವರ್ಧಕಗಳ ಬಳಕೆಯಿಂದ ತೊಂದರೆಯಾಗುತ್ತಿದೆ. ಇನ್ನು ತರಗತಿಗಳಿಗೆ ಚಕ್ಕರ್ ಹಾಕಿದ ವಿದ್ಯಾರ್ಥಿಗಳು ಶೂಟಿಂಗ್ ವೀಕ್ಷಣೆಯಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ: ಚಿತ್ರೀಕರಣದ ವೇಳೆ ಶೂಟ್​ ಮಾಡಿದ ನಟ; ಛಾಯಾಗ್ರಾಹಕಿ​ ನಿಧನ; ನಿರ್ದೇಶಕನಿಗೆ ಗಂಭೀರ ಗಾಯ

‘ತ್ರಿಶೂಲಂ’ ಶೂಟಿಂಗ್​ಗೆ ಅಡ್ಡಿ; ‘ಕರ್ನಾಟಕದಲ್ಲಿ ಹೇಗೆ ತೆಲುಗು ಚಿತ್ರ ರಿಲೀಸ್ ಮಾಡುತ್ತಾರೆ ನೋಡುತ್ತೇವೆ’- ನಿರ್ಮಾಪಕ ಶ್ರೀನಿವಾಸ್ ಸವಾಲ್

Published On - 9:48 am, Fri, 12 November 21