‘ತ್ರಿಶೂಲಂ’ ಶೂಟಿಂಗ್​ಗೆ ಅಡ್ಡಿ; ‘ಕರ್ನಾಟಕದಲ್ಲಿ ಹೇಗೆ ತೆಲುಗು ಚಿತ್ರ ರಿಲೀಸ್ ಮಾಡುತ್ತಾರೆ ನೋಡುತ್ತೇವೆ’- ನಿರ್ಮಾಪಕ ಶ್ರೀನಿವಾಸ್ ಸವಾಲ್

Trishulam Film: ಚಿತ್ರೀಕರಣಕ್ಕೆ ಹೈದರಾಬಾದ್​ಗೆ ತೆರಳಿದ್ದ ‘ತ್ರಿಶೂಲಂ’ಗೆ ಸಮಸ್ಯೆಯಾಗಿರುವ ಕುರಿತಂತೆ ನಿರ್ಮಾಪಕ ಆರ್.ಶ್ರೀನಿವಾಸ್ ಟಿವಿ9ನೊಂದಿಗೆ ಮಾತನಾಡಿದ್ದಾರೆ. ತೆಲಂಗಾಣದಲ್ಲಿ ಬಹಳ ನೋವು ಮತ್ತು ಅವಮಾನವಾಗಿದೆ ಎಂದು ಅವರು ಬೇಸರ ಹೊರಹಾಕಿದ್ದಾರೆ.

‘ತ್ರಿಶೂಲಂ’ ಶೂಟಿಂಗ್​ಗೆ ಅಡ್ಡಿ; ‘ಕರ್ನಾಟಕದಲ್ಲಿ ಹೇಗೆ ತೆಲುಗು ಚಿತ್ರ ರಿಲೀಸ್ ಮಾಡುತ್ತಾರೆ ನೋಡುತ್ತೇವೆ’- ನಿರ್ಮಾಪಕ ಶ್ರೀನಿವಾಸ್ ಸವಾಲ್
ಆರ್​.ಶ್ರೀನಿವಾಸ್, ‘ತ್ರಿಶೂಲಂ’ ಚಿತ್ರದ ಪೋಸ್ಟರ್
Follow us
TV9 Web
| Updated By: shivaprasad.hs

Updated on: Oct 27, 2021 | 3:02 PM

ಹೈದರಾಬಾದ್‌ನಲ್ಲಿ ರವಿಚಂದ್ರನ್ (Ravichandran) ಹಾಗೂ ಉಪೇಂದ್ರ (Upendra) ಅಭಿನಯದ ‘ತ್ರಿಶೂಲಂ‌’ ಚಿತ್ರದ ಶೂಟಿಂಗ್​ಗೆ ತೊಂದರೆಯಾಗಿರುವುದಕ್ಕೆ ಸಂಬಂಧಪಟ್ಟಂತೆ ನಿರ್ಮಾಪಕ ಆರ್.ಶ್ರೀನಿವಾಸ್ (R.Srinivas) ಟಿವಿ9ನೊಂದಿಗೆ ಮಾತನಾಡಿದ್ದಾರೆ. ‘‘ಕೊರೊನಾದಿಂದ ನಿರ್ಮಾಪಕರು ಈಗಾಗಲೇ ಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಸಿನಿಮಾಗಳಿಗೆ ತೊಂದರೆ ಕೊಡುತ್ತಿದ್ದಾರೆ. ನನಗೆ ಒಂದು ದಿನದ ಚಿತ್ರೀಕರಣ ನಿಂತು 25 ಲಕ್ಷ ರೂಪಾಯಿ ನಷ್ಟವಾಗಿದೆ. ಜೊತೆಗೆ ತೆಲಂಗಾಣದಲ್ಲಿ ಸಾಕಷ್ಟು ನೋವು ಮತ್ತು ಅವಮಾನವಾಗಿದೆ’’ ಎಂದು ಶ್ರೀನಿವಾಸ್ ಬೇಸರ ಹೊರಹಾಕಿದ್ದಾರೆ. ‘‘ಹೀಗೆ ನಮಗೆ ತೊಂದರೆ ಕೊಟ್ಟರೆ ಕರ್ನಾಟಕದಲ್ಲಿ ತೆಲುಗು ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸುತ್ತೇವೆ. ನಮ್ಮಲ್ಲಿಯೂ ನಿರ್ಮಾಪಕರ ಸಂಘಟನೆ ಇದೆ. ಕರ್ನಾಟಕದಲ್ಲಿ ಹೇಗೆ ತೆಲುಗು ಸಿನಿಮಾ ರಿಲೀಸ್ ಮಾಡುತ್ತಾರೆ? ನೋಡಿಕೊಳ್ಳುತ್ತೇವೆ’’ ಎಂದು ಶ್ರೀನಿವಾಸ್ ಸವಾಲು ಹಾಕಿದ್ದಾರೆ.

‘‘ತೆಲಂಗಾಣ ಸಿನಿ ಕಾರ್ಮಿಕ ಒಕ್ಕೂಟದಿಂದ ನಮಗೆ ತೊಂದರೆಯಾಗಿದೆ. ಸಿನಿಮಾ ಚಿತ್ರೀಕರಣಕ್ಕೆ ಯೂನಿಟ್ ಕಳಿಸಲು ಹಣ ನೀಡಬೇಕು. ನಾನು ಈಗಾಗಲೇ ಹಣ ಕೊಟ್ಟಿದ್ದೇನೆ, ಬಾಕಿ ಹಣ ಸಹ ಕೊಡುತ್ತೇನೆ. ಉಳಿದ ಹಣ ನೀಡುವುದಾಗಿ ಹೇಳುತ್ತಿದ್ದರೂ ಯೂನಿಟ್ ಬಂದಿಲ್ಲ. ಇಂದು ಏಕಾಏಕಿ ತ್ರಿಶೂಲಂ ಸಿನಿಮಾಗೆ ತೊಂದರೆ ಮಾಡುತ್ತಿದ್ದಾರೆ’’ ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ.

‘ತ್ರಿಶೂಲಂ’ ಚಿತ್ರೀಕರಣ ನಿಲ್ಲಲು ಕಾರಣವೇನು? ನಿನ್ನೆಯಿಂದ ಹೈದರಾಬಾದ್‌ನಲ್ಲಿ ‘ತ್ರಿಶೂಲಂ’ ಚಿತ್ರತಂಡ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ. ಆದರೆ ಇಂದು ಯುನಿಟ್​ನವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನಿರ್ಮಾಪಕರು ₹ 1 ಲಕ್ಷ ಮುಂಗಡ ನೀಡಿದ್ದೇನೆ. ಉಳಿದ ಹಣ ನೀಡಲು ರಶೀತಿ ಬೇಕು ಎಂದಿದ್ದಾರೆ. ಈ ಗೊಂದಲದಲ್ಲಿ ಯುನಿಟ್ ಇಂದು ಚಿತ್ರೀಕರಣದಕ್ಕೆ ಆಗಮಿಸಿಲ್ಲ. ಒಂದು ದಿನದ ಚಿತ್ರೀಕರಣ ನಿಂತರೆ ಸುಮಾರು ₹ 25 ಲಕ್ಷ ಲಾಸ್ ಆಗುತ್ತದೆ ಎಂದು ಶ್ರೀನಿವಾಸ್ ಹೇಳಿದ್ದಾರೆ. ಈ ಗೊಂದಲಕ್ಕೆ ಹೈದರಾಬಾದ್ ಫಿಲ್ಮ್ ಫೆಡರೇಶನ್ ಕಾರಣ ಎಂದೂ ಅವರು ಆರೋಪಿಸಿದ್ದಾರೆ.

ಸ್ಯಾಂಡಲ್​ವುಡ್​ನ ಖ್ಯಾತ ಕಲಾವಿದರು ‘ತ್ರಿಶೂಲಂ’ನಲ್ಲಿ ಬಣ್ಣಹಚ್ಚುತ್ತಿದ್ದಾರೆ. ರವಿಚಂದ್ರನ್ ಹಾಗೂ ಉಪೇಂದ್ರ ಜೋಡಿ​ ತೆರೆ ಮೇಲೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದೆ. ಸಾನ್ವಿ ಶ್ರೀವಾಸ್ತವ್, ಸಾಧು ಕೋಕಿಲ, ನಿಮಿಕಾ ರತ್ನಾಕರ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಇದನ್ನೂ ಓದಿ:

Trishulam: ಹೈದರಾಬಾದ್ ಫಿಲ್ಮ್ ಫೆಡರೇಷನ್‌ನಿಂದ ಹಣಕ್ಕೆ ಬೇಡಿಕೆ; ರವಿಚಂದ್ರನ್, ಉಪೇಂದ್ರ ನಟನೆಯ ‘ತ್ರಿಶೂಲಂ’ ಶೂಟಿಂಗ್​ಗೆ ಅಡ್ಡಿ

ಶಿವರಾಜ್​ಕುಮಾರ್​ ‘ಭಜರಂಗಿ 2’ಗೆ ಸಾತ್​ ನೀಡಿದ ಯಶ್​-ಪುನೀತ್​ ​; ಒಂದೇ ವೇದಿಕೆ ಮೇಲೆ ಮೂರು ಸ್ಟಾರ್​ಗಳು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ