ಮೈಸೂರು: ತಾಯಿ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆ ಶಂಕೆ; ಸೇತುವೆ ಬಳಿ ಶವ ಪತ್ತೆ

ತಾಯಿ ಅಂತ್ಯಕ್ರಿಯೆ ಬಳಿಕ ಅರ್ಜುನ್ ನಾಪತ್ತೆಯಾಗಿದ್ದು, ಇಂದು ಅರಸನಕೆರೆ ಮುಖ್ಯ ಸೇತುವೆ ಬಳಿ ಶವ ಪತ್ತೆಯಾಗಿದೆ. ತಾಯಿ ಅಗಲಿಕೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮೈಸೂರು: ತಾಯಿ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆ ಶಂಕೆ; ಸೇತುವೆ ಬಳಿ ಶವ ಪತ್ತೆ
ಮಗ ಅರ್ಜುನ್ ಹಾಗೂ ತಾಯಿ ಸುಜಾತ

ಮೈಸೂರು: ತಾಯಿ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ. ಸೆಪ್ಟೆಂಬರ್ 15ರಂದು ಹೃದಯಾಘಾತದಿಂದ ತಾಯಿ ಸುಜಾತ ಮೃತಪಟ್ಟಿದ್ದರು. ತಾಯಿ ಸಾವಿನಿಂದ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ಮಗ ಅರ್ಜುನ್ (29) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಯಿ ಅಂತ್ಯಕ್ರಿಯೆ ಬಳಿಕ ಅರ್ಜುನ್ ನಾಪತ್ತೆಯಾಗಿದ್ದು, ಇಂದು ಅರಸನಕೆರೆ ಮುಖ್ಯ ಸೇತುವೆ ಬಳಿ ಶವ ಪತ್ತೆಯಾಗಿದೆ. ತಾಯಿ ಅಗಲಿಕೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮೈಸೂರು: ಟ್ರ್ಯಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು
ಟ್ರ್ಯಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಮಳಲಿ ಗ್ರಾಮದ ಬಳಿ ನಡೆದಿದೆ. ಕಾರಾಪುರ ಗ್ರಾಮದ ನಿವಾಸಿ ಸೋಮನಾಯ್ಕ(48) ಮೃತ ದುರ್ದೈವಿ. ಕಾರಾಪುರ ಜಂಗಲ್ ರೆಸಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಸೋಮನಾಯ್ಕ, ಎಚ್.ಡಿ.ಕೋಟೆಯಿಂದ ಜಂಗಲ್ ರೆಸಾರ್ಟ್​ಗೆ ಆಗಮಿಸುತ್ತಿದ್ದಾಗ ಅಪಘಾತ ಸಂಭವಿಸಿದೆ. ಸದ್ಯ ಬೀಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಜಯನಗರ: ಹಾವು ಕಚ್ಚಿ ರೈತ ಸಾವು
ಹಾವು ಕಚ್ಚಿ ರೈತ ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಜಂಗಮ ತುಂಬಿಗೆರೆಯಲ್ಲಿ ನಡೆದಿದೆ. ರೈತ ಮೈಲಪ್ಪ(38) ಮೃತ ದುರ್ದೈವಿ. ಜಮೀನಿನಲ್ಲಿ ಕಾರ್ಯನಿರ್ವಹಿಸುವ ವೇಳೆ ಹಾವು ಕಚ್ಚಿದ್ದು, ತುರ್ತಾಗಿ ದಾವಣಗೆರೆ ಜಿಲ್ಲಾ ಅಸ್ಪತ್ರೆಗೆ ರವಾನೆ ಮಾಡಲಾಗಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ರೈತ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:

ತಮಿಳುನಾಡು: ನೀಟ್ ಪರೀಕ್ಷೆಯಲ್ಲಿ ಸೋಲುವ ಭಯದಿಂದ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ

ಚಿಕ್ಕಮಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಕಾರು ಸಮೇತ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಇಬ್ಬರು ನೀರುಪಾಲು

Read Full Article

Click on your DTH Provider to Add TV9 Kannada