ಮೈಸೂರು: ಸಂಚಾರಿ ನಿಯಮ ಉಲ್ಲಂಘಿಸಿದ್ದವರಿಗೆ ದಂಡ ಪಾವತಿಸಲು (Traffic Fine) ವಾಹನ ಸವಾರರಿಗೆ ಶೇ.50ರಷ್ಟು ರಿಯಾಯ್ತಿ ನೀಡಲಾಗಿದೆ. ಇಲಾಖೆ ಆಫರ್ ಬಳಸಿಕೊಂಡು ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ (L Nagendra) ದಂಡ ಕಟ್ಟಿದ್ದಾರೆ. ವೇಗವಾಗಿ ಕಾರು ಚಾಲನೆಗೆ 7 ಸಾವಿರ ರೂ. ದಂಡ ಪಾವತಿಸಬೇಕಿತ್ತು. ಆದರೆ 50% ರಿಯಾಯ್ತಿಯಲ್ಲಿ 3,500 ರೂ. ಪಾವತಿಸಿ ರಶೀದಿ ಪಡೆದುಕೊಂಡಿದ್ದಾರೆ. ಮೈಸೂರಿನ ಮೆಟ್ರೋಪೋಲ್ ವೃತ್ತದಲ್ಲಿ ಎಲ್.ನಾಗೇಂದ್ರ ಅವರು ದಂಡ ಕಟ್ಟಿದ್ದಾರೆ.
ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಪಾವತಿಗೆ ಶೇ 50 ರಷ್ಟು ರಿಯಾಯಿತಿ ನೀಡಿದ ಮೇಲೆ ನಿನ್ನೆ (ಫೆ.3) ಒಂದೇ ದಿನ ಕೋಟಿ ಕೋಟಿ ಹಣ ಹರಿದು ಬಂದಿದೆ. ನಿನ್ನೆ 5 ಕೋಟಿ 61 ಲಕ್ಷದ 55 ಸಾವಿರ ದಂಡದ ಹಣ ಸಂಗ್ರಹವಾಗಿದೆ. ಒಟ್ಟು 2 ಲಕ್ಷ 1 ಸಾವಿರದ 828 ಪ್ರಕರಣಗಳ ದಂಡ ಪಾವತಿಯಾಗಿದೆ. ಪೊಲೀಸ್ ಠಾಣೆಗಳಲ್ಲಿ 89,699 ಪ್ರಕರಣಗಳಿಂದ 2,17,24,990 ಕೋಟಿ ರೂ, ಪೇ ಟಿಎಂ ಮೂಲಕ 1,04,273 ಪ್ರಕರಣದಿಂದ 3, 23,68,900 ಕೋಟಿ, ಸಂಚಾರ ನಿರ್ವಹಣಾ ಕೆಂದ್ರದಲ್ಲಿ 540 ಪ್ರಕರಣ ದಂಡ ಪಾವತಿಯಾಗಿದ್ದು 89,650 ರೂ ಮತ್ತು ಬೆಂಗಳೂರು ಒನ್ನಲ್ಲಿ 7,316 ಪ್ರಕರಣದಿಂದ 16,21,600 ರೂ ದಂಡ ಸಂಗ್ರಹವಾಗಿದೆ.
ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಉಲ್ಲಂಘನೆ ದಂಡ ರಿಯಾಯಿತಿ: 50% ಆಫರ್ ಸಿಕ್ಕಿದ್ದೇ ತಡ ದಂಡ ಪಾವತಿಗೆ ಮುಗಿಬಿದ್ದ ವಾಹನ ಸವಾರರು
1. ಕರ್ನಾಟಕ ಓನ್ ವೆಬ್ಸೈಟ್ನಲ್ಲಿ ವಿವರಗಳನ್ನು ಪಡೆದುಪಾವತಿಸಬಹುದಾಗಿದೆ.
2. ಪೇ ಟಿಎಂ ಆ್ಯಪ್ ಮುಖಾಂತರವು ಉಲ್ಲಂಘನೆಯ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ.
3. ಹತ್ತಿರ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ಪಡೆಯಬಹುದಾಗಿರುತ್ತದೆ. ದಂಡದ ಮೊತ್ತವನ್ನು ಪಾವತಿಸಿ ರಶೀದಿಯನ್ನು ಪಡೆದುಕೊಳ್ಳಬಹುದಾಗಿದೆ.
4. ಸಂಚಾರ ನಿರ್ವಹಣ ಕೇಂದ್ರದ ಮೊದಲನೆ ಮಹಡಿಯಲ್ಲೂ ಸಹ ಪಾವತಿಸಬಹುದಾಗಿದೆ. ಈ ನಿಯಮ 11-02-2023 ವರಗೆ ಮಾತ್ರ ಅನ್ವಯವಾಗುತ್ತದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ನಗರದಲ್ಲಿ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಹೋಗುವವರ ಸಂಖ್ಯೆ ಕಡಿಮೆಯಾಗಿಲ್ಲ. ಅದರಲ್ಲೂ ದ್ವಿಚಕ್ರ ವಾಹನ ಸವಾರರು, ಆಕಡೆ ಈಕಡೆ ನೋಡಿ ಪೊಲೀಸರು ಇಲ್ಲಾ ಎಂದು ಖಚಿತವಾಗುತ್ತಿದ್ದಂತೆ ಹೆಲ್ಮೆಟ್ ಇಲ್ಲದೆ ನೇರವಾಗಿ ಹೋಗುತ್ತಾರೆ. ಆದರೆ ಇನ್ನು ಮುಂದೆ ನೀವು ಹೀಗೆ ಹೋದರೆ ಒಂದೇ ದಿನ ಅನೇಕ ಬಾರಿ ದಂಡ ಕಟ್ಟಬೇಕಾಗಬಹುದು. ನೀವು ಬೆಂಗಳೂರಿನಲ್ಲಿ ಹೆಲ್ಮೆಟ್ ಧರಿಸದೆ ಬೈಕ್ ಓಡಿಸುತ್ತಿದ್ದೀರಿ ಎಂದಾದರೆ ಕ್ಯಾಮೆರಾ ಇರುವ ಪ್ರತಿ ಸಿಗ್ನಲ್ನಲ್ಲೂ ದಂಡ ಕಟ್ಟಲು ಸಿದ್ಧರಾಗಿ.
ಇದನ್ನೂ ಓದಿ: Traffic Violation: ಟ್ರಾಫಿಕ್ ರೂಲ್ಸ್ ದಂಡ ಪಾವತಿಗೆ 50% ರಿಯಾಯಿತಿ: ದಂಡ ಪಾವತಿಸುವುದು ಹೇಗೆ? ಇಲ್ಲಿದೆ ವಿವರ
ಇದನ್ನು ಸರಳವಾಗಿ ಹೇಳುವುದಾದರೆ, ನೀವು ಹೆಲ್ಮೆಟ್ ಇಲ್ಲದೆ ಕ್ಯಾಮೆರಾ ಇರುವ ಮೂರು ಸಿಗ್ನಲ್ಗಳನ್ನು ಕ್ರಾಸ್ ಮಾಡಿದರೆ ಮೂರು ಬಾರಿ ಪ್ರತ್ಯೇಕ ದಂಡ ಕಟ್ಟಬೇಕು. ಒಟ್ಟಾರೆಯಾಗಿ ಬೆಂಗಳೂರಿನಲ್ಲಿ ಒಟ್ಟು 50 ಜಂಕ್ಷನ್ಗಳಲ್ಲಿ 280 ಎಎನ್ಪಿಆರ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನೆನಪಿರಲಿ, ಹೆಲ್ಮೆಟ್ ರಹಿತ ಚಾಲನೆಯ ದಂಡದ ಮೊತ್ತ 500 ರೂಪಾಯಿ. ಒಂದು ದಿನದಲ್ಲಿ ನೀವು ಮೂರು ಬಾರಿ ಸಿಗ್ನಲ್ ಕ್ರಾಸ್ ಆದರೆ ಒಂದೂವರೆ ಸಾವಿರ ರೂಪಾಯಿ ದಂಡ ಪಾವತಿಸಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:40 pm, Sat, 4 February 23