ಕರ್ನಾಟಕದ ಶಿಲ್ಪಿ ಅರುಣ್​ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹ ಫೈನಲ್, ಮೂರ್ತಿ ಹೇಗಿದೆ ಗೊತ್ತಾ?

ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ಮೂರ್ತಿಯನ್ನು ಮೈಸೂರು (Mysuru) ಮೂಲದ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಎನ್ನುವರು ಕೆತ್ತನೆ ಮಾಡಿರುವುದು ವಿಶೇಷವಾಗಿದ್ದು, ಇದೀಗ ಅವರು ಕೆತ್ತನೆ  ಮಾಡಿದ ಮೂರ್ತಿಯೇ ಫೈನಲ್​​​​​​ ಎಂದು ಹೇಳಿದೆ. ರಾಮಜನ್ಮ ಭೂಮಿ ಟ್ರಸ್ಟ್​​​​​​ ಈ ಬಗ್ಗೆ ಮಾಹಿತಿ ನೀಡಿದೆ. ಮತ ಹಾಕುವ ಮೂಲಕ ರಾಮಲಲ್ಲಾನ ಮೂರ್ತಿಯನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಜನವರಿ 22ರಂದು ಈ ಮೂರ್ತಿಯನ್ನು ಪ್ರಾಣ ಪ್ರತಿಷ್ಠೆ ಮಾಡಲಾಗುವುದು.

Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 01, 2024 | 3:13 PM

ಮೈಸೂರು, : ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ (Ayodhya Ram Mandir) ಇದೇ ಜನವರಿ 22ರಂದು ಉದ್ಘಾಟನೆಯಾಗಲಿದೆ. ಇನ್ನು ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ಮೂರ್ತಿಯನ್ನು ಮೈಸೂರು (Mysuru) ಮೂಲದ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಎನ್ನುವರು ಕೆತ್ತನೆ ಮಾಡಿರುವುದು ವಿಶೇಷವಾಗಿದ್ದು, ಇದೀಗ ಅವರು ಕೆತ್ತನೆ  ಮಾಡಿದ ಮೂರ್ತಿಯೇ ಫೈನಲ್​​​​​​ ಎಂದು ಹೇಳಿದೆ. ರಾಮಜನ್ಮ ಭೂಮಿ ಟ್ರಸ್ಟ್​​​​​​ ಈ ಬಗ್ಗೆ ಮಾಹಿತಿ ನೀಡಿದೆ. ಮತ ಹಾಕುವ ಮೂಲಕ ರಾಮಲಲ್ಲಾನ ಮೂರ್ತಿಯನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಜನವರಿ 22ರಂದು ಈ ಮೂರ್ತಿಯನ್ನು ಪ್ರಾಣ ಪ್ರತಿಷ್ಠೆ ಮಾಡಲಾಗುವುದು.  ಎಂಬಿಎ ಪದವೀಧರರಾಗಿರುವ ಅರುಣ್ ಯೋಗಿರಾಜ್, ಕಾರ್ಪೋರೇಟ್ ನೌಕರಿಯನ್ನು ತೊರೆದು ಕುಟುಂಬ ನಡೆಸಿಕೊಂಡು ಬಂದ ಶಿಲ್ಪ ಕೆತ್ತನೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು, ಇದೀಗ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮ ಲಲ್ಲ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ.

ಮೈಸೂರಿನ ಅರುಣ್​ ಅವರೊಂದಿಗೆ ಬೆಂಗಳೂರಿನ ಜಿ,ಎಲ್,ಭಟ್ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೇ ಕೂಡ ಈ ರಾಮ ಲಲ್ಲ ಮೂರ್ತಿ ಕೆತ್ತನೆ ಮಾಡಿದ್ದಾರೆ. ಇನ್ನು 51 ಇಂಚು ಎತ್ತರದ ಮೂರ್ತಿ ಇದಾಗಿದ್ದು, ಒಟ್ಟು ಮೂರ್ತಿಯ ಗ್ರಾತ್ರ 8 ಅಡಿ ಎತ್ತರ ಹಾಗೂ ಮೂರು ಅಡಿ ಅಗಲ ಇದೆ. ಇದರಲ್ಲಿ ಪ್ರಭಾವಳಿಯೂ ಒಳಗೊಂಡಿದೆ. ಈ ಮೂರ್ತಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಲಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಆವರಣದಲ್ಲಿ ಸ್ಥಾಪನೆಯಾಗಲಿದೆ ಜಮಾಲುದ್ದೀನ್ ನಿರ್ಮಿಸಿದ ರಾಮನ ವಿಗ್ರಹ

ಜನವರಿ 22ರಂದು ಆಯೋಧ್ಯೆ ರಾಮ ಮಂದರದಲ್ಲಿ ಆಯೋಜನೆಗೊಂಡಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ 2 ಸಾವಿರ ಆಹ್ವಾನಿತರಲ್ಲಿ ಅರುಣ್​ ಸಹ ಒಬ್ಬರು. ಎಂಬಿಎ ಪದವೀಧರರಾಗಿರುವ ಅರುಣ್ ಕಾರ್ಪೋರೇಟ್ ನೌಕರಿಯನ್ನು ತೊರೆದು ಕುಟುಂಬ ನಡೆಸಿಕೊಂಡು ಬಂದ ಶಿಲ್ಪ ಕೆತ್ತನೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2008ರಿಂದ ಈವರೆಗೂ ಸುಮಾರು 1 ಸಾವಿರಕ್ಕೂ ಹೆಚ್ಚು ವಿವಿಧ ಪ್ರತಿಮೆಗಳನ್ನು ಕತ್ತನೆ ಮಾಡಿದ್ದಾರೆ. ಈ ಮೊದಲು ಕೇದರನಾಥ ದೇಗುಲ್ಕೆ ಆದಿ ಶಂಕರಾಚಾರ್ಯರ ಮೂರ್ತಿಯನ್ನು ಅರುಣ್ ಕೆತ್ತಿದ್ದರು. ದೆಹಲಿಯ ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾದ ಸುಭಾಶಚಂದ್ರ ಬೋಸ್ ಅವರ ಪ್ರತಿಮೆಯನ್ನು ಸಹ ಅರುಣ್ ಕೆತ್ತಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನು ದೆಹಲಿಯ ಜೈಸಲ್ಮೇರ್ ಹೌಸ್​ನಲ್ಲಿ ಡಾ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಕೆತ್ತನೆಗೆಊ ನ್ಯಾಯಾಂ ಇಲಾಖೆ ಅರುಣ್ ಅವರಿಗೆ ನೀಡಿದ್ದು, ಪ್ರತಿಮೆ ಫೆಬ್ರವರಿ ಅಂತ್ಯದೊಳಗೆ ನೀಡುವಂತೆ ಸೂಚಿಸಿದೆ. ಇದು ಬರುವ ಏಪ್ರಿಲ್ 14ರಂದು ಲೋಕಾರ್ಪಣೆಗೊಳ್ಳಲಿದೆ. ರಾಮಲಲ್ಲಾ ವಿಗ್ರಹವನ್ನು ಕೆತ್ತನೆ ಮಾಡಿರುವ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಅರುಣ್, ರಾಮಲಲ್ಲಾ ಕಲ್ಲಿನ ವಿಗ್ರಹ ಕೆತ್ತನೆಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಸಂತಸ ಹಂಚಿಕೊಂಡಿದ್ದಾರೆ.

ಏನಿದು ರಾಮಲಲ್ಲಾ ಕಲ್ಲಿನ ವಿಗ್ರಹ

ಅಯೋಧ್ಯೆ ಅಂದ್ರೆ ಥಟ್ಟನೆ ನೆನಪಾಗುವುದು ರಾಮಲಲ್ಲಾ. ಲಲ್ಲಾ ಅಂದರೆ ಮಗು. ಅಂದ್ರೆ ರಾಮನ ಬಾಲ್ಯದ ಮೂರ್ತಿ. ಅಯೋಧ್ಯಾ ರಾಮಮಂದಿರದಲ್ಲಿ ಅತ್ಯಾಕರ್ಷಕವಾದ ರಾಮಲಲ್ಲಾನ ಕಲ್ಲಿನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ರಾಮ ಬಾಲಕನಿದ್ದಾಗ ಹೇಗಿದ್ದ ಅನ್ನೋ ಪರಿಕಲ್ಪನೆಯಲ್ಲಿ ಈ ವಿಗ್ರಹ ಇರುತ್ತದೆ. 51 ಇಂಚಿನ ಕಲ್ಲಿನ ವಿಗ್ರಹದಲ್ಲಿ ಶ್ರೀ ರಾಮನ ಬಾಲ್ಯದ ಸ್ವರೂಪ, ಶ್ರೀ ರಾಮನ ಮುಗ್ದತೆ, ತುಂಟತನದ ಜೊತೆಗೆ ಗಾಂಭೀರ್ಯತೆ ಸಹಾ ಇರಲಿದೆ. ಪುಟ್ಟ ಬಾಲಕ ಧನುರ್ದಾಯಿಯಾಗಿ ಕಾಣಿಸಿಕೊಳ್ಳಲಿದ್ದಾನೆ. ಇದರ ಜೊತೆಗೆ ಮತ್ತೊಂದು ವಿಶೇಷ ಅಂದ್ರೆ ಇದುವರೆಗೂ ಪುರಾಣಗಳಲ್ಲಿ, ಕಥೆಗಳಲ್ಲಿ, ಧಾರವಾಹಿಗಳಲ್ಲಿ, ಸಿನಿಮಾಗಳಲ್ಲಿ, ಪುಸ್ತಕದ ಪುಟಗಳಲ್ಲಿ ಎಲ್ಲೂ ಸಹಾ ರಾಮಲಲ್ಲಾನನ್ನು ಯಾರು ನೋಡಿಲ್ಲ. ನಮ್ಮಲ್ಲಿ ಏನಿದ್ದರು ಶ್ರೀ ಕೃಷ್ಣನ ಬಾಲಲೀಲೆಯೇ ಹೊರತು ರಾಮನ ಬಾಲ್ಯದ ಬಗ್ಗೆ ಉಲ್ಲೇಖಗಳು ಚಿತ್ರಗಳು ಕಡಿಮೆಯೇ. ಹೀಗಾಗಿ ಇದೊಂದು ವಿಭಿನ್ನವಾದ ಕಲಾಕೃತಿಯಾಗಿ ಮೂಡಿಬರುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಇಂತಹ ವಿಭಿನ್ನ ವಿಶೇಷವಾದ ಮೂರ್ತಿ ಮೂಡಿಬಂದಿರುವುದೇ ರೋಚಕ.

ಯಾರಿದು ಅರುಣ್ ಯೋಗಿರಾಜ್……!

ಅರುಣ್ ಯೋಗಿರಾಜ್ ಮೈಸೂರು ಮಣ್ಣಿನ ಅಪ್ಪಟ ಪ್ರತಿಭೆ. ಇವರದ್ದು ಕಲ್ಲಿನ ವಿಗ್ರಹ ಶಿಲ್ಪದಲ್ಲಿ 200 ವರ್ಷಗಳ ತಲೆಮಾರಿನ ಪರಂಪರೆ. ಇವರ ತಂದೆ, ತಾತಾ, ಮುತ್ತಾತ, ಅವರ ತಂದೆ ತಾತಾ ಅಂದರೆ ಬರೋಬ್ಬರಿ ಐದು ತಲೆ ಮಾರಿನಿಂದ ಕಲ್ಲಿನ ಶಿಲ್ಪ ಕಲೆಯಲ್ಲಿ ಇವರ ವಂಶಸ್ಥರು ತೊಡಗಿಕೊಂಡಿದ್ದಾರೆ. ಅರುಣ್ ತಂದೆ ಯೋಗಿರಾಜ್ ಕೂಡ ನುರಿತ ಶಿಲ್ಪಿ. ಅವರ ಅಜ್ಜ ಬಸವಣ್ಣ ಶಿಲ್ಪಿ ಮೈಸೂರು ರಾಜರ ಆಸ್ತಾನದಲ್ಲಿದ್ದರು. ತಾತಾ ಮುತ್ತಾತ ಕೂಡ ಶಿಲ್ಪಿಗಳಾಗಿದ್ದರು. ಸುಮಾರು 200 ವರ್ಷದ ಹಿಂದಿನವರ ಕಲೆ ಅರುಣ್ ಅವರಿಗೆ ಸಿದ್ದಿಯಾಗಿದೆ. ಅರುಣ್ ಯೋಗಿರಾಜ್ ಅವರು ಬಾಲ್ಯದಿಂದಲೂ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಎಂಬಿಎ ಮುಗಿಸಿದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಕಾಲ ಕೆಲಸ ಮಾಡುತ್ತಿದ್ದರು. ಆದರೆ ಅವರಿಗೆ ಆ ಕೆಲದ ತೃಪ್ತಿ ನೀಡಲಿಲ್ಲ. ಆಗ ಅವರಿಗೆ ಅನಿಸಿದ್ದು ತಮ್ಮ ಪೂರ್ವಜರ ಕಲೆಯನ್ನು ಮುಂದುವರಿಸಬೇಕು ಅಂತಾ. ಮತ್ತೆ ವಾಪಸ್ಸು ಕಲೆಯ ಕಡೆಗೆ ಬಂದರು. ತಂದೆಗೆ ವಿಚಾರ ತಿಳಿಸಿದರು. ಮೊದ ಮೊದಲು ತಂದೆ ಇದಕ್ಕೆ ಒಪ್ಪದಿದ್ದರು ಮಗನ ಆಸಕ್ತಿ ಮುಂದೆ ಅವರು ಸೋಲಲೇಬೇಕಾಯಿತು. ಆದರೆ ಅವರು ಒಂದು ಷರತ್ತನ್ನು ಹಾಕಿ ಮಗನಿಗೆ ಅನುಮತಿ ನೀಡಿದರು. ನೀನು ಎಂಬಿಎ ಪದವೀಧರ. ಮಾರ್ಕೆಟಿಂಗ್ ನಿನ್ನ ತಲೆಯಲ್ಲಿ ಹಾಸು ಹೊಕ್ಕಿರುತ್ತದೆ. ಆದರೆ ಇದು ಶ್ರದ್ದಾ ಭಕ್ತಿಯ ಕೆಲಸ ಇಲ್ಲಿ ನೀನು ಮಾರ್ಕೆಟಿಂಗ್ ಮಾಡುವುದಾದರೆ ಸುತಾರಾಂ ನೀನು ಬರಬೇಡು. ಕಲ್ಲಿನ ವಿಗ್ರಹಗಳ ಖರೀದಿ ಮಾರಾಟಕ್ಕೆ ಇಲ್ಲಿ ಅವಕಾಶವಿಲ್ಲ. ಇಲ್ಲೇನಿದ್ದರು ಕಲಾಸೇವೆ ಅಷ್ಟೇ ಅಂತಾ ಕಡ್ಡಿ ತುಂಡಾದ ರೀತಿ ಷರತ್ತು ವಿಧಿಸಿದ್ದರು. ಅದಕ್ಕೆ ಒಪ್ಪಿದ ಅರುಣ್ ಯೋಗಿರಾಜ್ 2008ರಿಂದ ಮತ್ತೆ ಶಿಲ್ಪ ಕೆತ್ತನೆ ವೃತ್ತಿ ಮುಂದುವರಿಸಿದರು.

ಎರಡನೇ ಇನಿಂಗ್ಸ್‌ನಲ್ಲಿ ಭರ್ಜರಿ ಯಶಸ್ಸು – ಸಾಂಸ್ಕೃತಿಕ ರಾಜಧಾನಿಯಿಂದ ದೇಶದ ರಾಜಧಾನಿಗೆ……..!

ಅರುಣ್ ಯೋಗಿರಾಜ್ ಅವರು ತಮ್ಮ ಕಲೆಯಲ್ಲಿ ತೊಡಗಿಸಿಕೊಂಡಿದ್ದೇ ತಡ ಅವರು ಅಂದುಕೊಂಡಿದ್ದು ದಿಟವಾಯ್ತು. ಕಲೆ ಅನ್ನೋದು ಅವರ ರಕ್ತದಲ್ಲೇ ಇದೆ ಅನ್ನೋದು ಸಾಬೀತಾಯಿತು. ಹುಳಿ ಹಿಡಿದ ಕೈಗಳಲ್ಲಿ ಅದ್ಬುತಗಳು ಮೂಡಿದವು. ಆರಂಭದಲ್ಲಿ ಸಣ್ಣ ಪುಟ್ಟ ಮಂಟಪಗಳ ಕೆತ್ತನೆಯೊಂದಿಗೆ ಹೊಸ ಇನಿಂಗ್ಸ್‌ನ್ನು ಆರಂಭಿಸಿದರು‌. ನಂತರ ದೇಗುಲಗಳಿಗೆ ಭಗವಾನ್ ಪಂಚಮುಖಿ ಗಣಪತಿ, ಭಗವಾನ್ ಮಹಾವಿಷ್ಣು, ದೇವರು ಬುದ್ಧ, ನಂದಿ, ಸ್ವಾಮಿ ಶಿವಬಾಲ ಯೋಗಿ, ಸ್ವಾಮಿ ಶಿವಕುಮಾರ ಮತ್ತು ಬನಶಂಕರಿ ದೇವಿಯ ವಿಗ್ರಹಗಳನ್ನು ಕೆತ್ತನೆ ಮಾಡಿ ನೀಡಿದರು. ಇದಾದ ನಂತರ ಮೈಸೂರಿನಲ್ಲಿ 5 ಅಡಿಯ ಗರುಡ ದೇವರ ವಿಗ್ರಹ. ಕೆಆರ್ ನಗರದಲ್ಲಿ 7 ಅಡಿ ಎತ್ತರದ ಯೋಗಾನರಸಿಂಹ ಸ್ವಾಮಿ ದೇವರ ವಿಗ್ರಹ, ಭಾರತದ ಅತಿ ದೊಡ್ಡ 10 ಅಡಿ ಏಕಶಿಲೆಯ ಬಿಳಿ ಅಮೃತಶಿಲೆಯ ಶ್ರೀ ರಾಮಕೃಷ್ಣ ಪರಮಹಂಸರ ಶಿಲ್ಪ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ “ಕ್ರಿಯೇಶನ್ ಆಫ್ ಕ್ರಿಯೇಶನ್” ಪರಿಕಲ್ಪನೆಯಲ್ಲಿ 11 ಅಡಿ ಏಕಶಿಲೆಯ ಆಧುನಿಕ ಕಲಾ ಕಲ್ಲಿನ ಶಿಲ್ಪ, 15 ಅಡಿ ಏಕಶಿಲೆಯ ಬಿಳಿ ಅಮೃತಶಿಲೆಯ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಪೀಠದೊಂದಿಗೆ ಮೈಸೂರಿನ ಶಿಲ್ಪ, 15 ಅಡಿ ಏಕಶಿಲೆಯ ಬಿಳಿ ಅಮೃತಶಿಲೆಯ ಡಾ.ಬಿ.ಆರ್. ಅಂಬೇಡ್ಕರ್ ಅವರ ಪೀಠದೊಂದಿಗಿನ ಶಿಲ್ಪ. ಕೆ.ಆರ್.ನಗರದ ಚುಂಚಕಟ್ಟೆಯಲ್ಲಿ 21 ಅಡಿ ಏಕಶಿಲೆಯ ಹನುಮಾನ್ ಹೊಯ್ಸಳ ಶೈಲಿ ಶಿಲ್ಪ ಇವರ ಕೈ ಚಳಕದಲ್ಲಿ ಅದ್ಬುತವಾಗಿ ಮೂಡಿಬಂದವು. ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದ ಅರುಣ್ ಯೋಗಿರಾಜ್ ಅವರನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದು ಉತ್ತರಾಖಂಡದ ಕೇದಾರನಾಥದಲ್ಲಿ 12 ಅಡಿಯ ಆದಿ ಶಂಕರಾಚಾರ್ಯರ ವಿಗ್ರಹ ಹಾಗೂ 28 ಅಡಿ ಏಕಶಿಲೆಯ ಕಪ್ಪು ಗ್ರಾನೈಟ್ ಕಲ್ಲಿನಲ್ಲಿ ಅರಳಿ ಇಂಡಿಯಾ ಗೇಟ್‌ನಲ್ಲಿ ರಾರಾಜಿಸುತ್ತಿರುವ ಸುಭಾಷ್ ಚಂದ್ರ ಬೋಸ್ ಅವರ ಕಲಾಕೃತಿಗಳು. ಈ ಕಲಾಕೃತಿಗಳನ್ನು ಖುದ್ದು ದೇಶದ ಪ್ರಧಾನಿ ಮೆಚ್ಚಿ ಅನಾವರಣಗೊಳಿಸಿದರು‌. ಇದೀಗ ರಾಮಲಲ್ಲಾ ಅರುಣ್ ಅವರ ಹ್ಯಾಟ್ರಿಕ್ ಕಲಾಕೃತಿಯಾಗಲಿದೆ‌.

ಕಲೆಗೆ ಒಲಿದು ಬಂತು ಅವಕಾಶ – ಶ್ರದ್ದಾ ಭಕ್ತಿಯಲ್ಲಿ ಮೂಡಿದ ರಾಮಲಲ್ಲಾ ಮೂರ್ತಿ

ಅರುಣ್ ಯೋಗಿರಾಜ್ ಪ್ರತಿಭೆ ನೋಡಿದ ಪ್ರಧಾನಿ ಮೋದಿ ಮತ್ತೊಮ್ಮೆ ರಾಮಲಲ್ಲಾ ವಿಗ್ರಹ ಕೆತ್ತನೆಯ ಅವಕಾಶ ನೀಡಿದ್ದಾರೆ. ಇವರ ಜೊತೆಗೆ ಬೆಂಗಳೂರು ಹಾಗೈ ರಾಜಸ್ಥಾನದ ಇಬ್ಬರು ರಾಮಲಲ್ಲಾ ಮೂರ್ತಿ ಕೆತ್ತನೆ ಮಾಡಲಿದ್ದಾರೆ. ಮೂವರಲ್ಲಿ ಯಾರ ಮೂರ್ತಿ ಆಕರ್ಷಕ ಅರ್ಥಪೂರ್ಣವಾಗಲಿದೆ ಆ ಮೂರ್ತಿಯನ್ನು ಮುಖ್ಯ ಪೀಠಿಕೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಉಳಿದ ಎರಡು ಮೂರ್ತಿಗಳು ಅಯೋಧ್ಯಾ ರಾಮಮಂದಿರಲ್ಲೇ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಗಿದೆ. ಇನ್ನು ಅರುಣ್ ರಾಮಲಲ್ಲಾ ವಿಗ್ರಹ ಕೆತ್ತನೆ ಮಾಡಿದ ರೀತಿ ರೋಚಕ. ಅರುಣ್ ಕೆತ್ತನೆಗೆ ಆಯ್ಕೆಯಾಗುತ್ತಿದ್ದಂತೆ ಅವರಿಗೆ ಕಂಕಣಧಾರಣೆ ಮಾಡಲಾಗಿದೆ. ಕೆಲಸ ಆರಂಭಕ್ಕೂ ಮುನ್ನ ನಂತರ ಶ್ರೀ ರಾಮ ಸ್ತೋತ್ರ ಪಠನೆ. ಸಂಪೂರ್ಣ ಶ್ರದ್ದಾ ಭಕ್ತಿಯಿಂದ ಕೆಲಸ ಮಾಡಿದ್ದಾರೆ. ಇನ್ನು ಅರುಣ್ ಅವರು ಈ ಕಾರ್ಯದಲ್ಲಿ ಎಷ್ಟು ಮುಳುಗಿ ಹೋಗಿದ್ದರು ಅಂದ್ರೆ ವಿಗ್ರಹ ಕೆತ್ತನೆ ಪರಿಪೂರ್ಣವಾಗಿರಲಿ ಅನ್ನೋ ಕಾರಣಕ್ಕೆ ಸದಾ ಕಾಲ ಮಕ್ಕಳ ಒಡನಾಟದಲ್ಲೇ ಕಾಲ ಕಳೆದಿದ್ದಾರೆ. ಚಿಣ್ಣರ ಮೇಳ, ಮಕ್ಕಳಿರುವ ಕಡೆ ಗಂಟೆಗಟ್ಟಲೇ ಕುಳಿತು ಮಕ್ಕಳ ಹಾವಭಾವವನ್ನು ಕಣ್ತುಂಬಿಕೊಂಡಿದ್ದಾರೆ. ಇದರ ಪ್ರತಿಫಲವಾಗಿ ಶ್ರೀ ರಾಮಲಲ್ಲಾ ವಿಗ್ರಹ ಮೂಡಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:09 pm, Mon, 1 January 24

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?