AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ 10 ವರ್ಷದ ಸೇವೆಯಲ್ಲಿ ನಾನು ಎಂದು ಈ ರೀತಿ ಕೆಲಸ ಮಾಡಿಲ್ಲ; ಆರೋಪ ಸರಿಯಲ್ಲ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಣ್ಣೀರು

ನಮ್ಮದೇ ಜಿಲ್ಲೆಯಲ್ಲಿ ಈ ರೀತಿ ಆಗಿದ್ದರೆ ಹೇಗಾದರೂ ಸರಿಯೇ ಯಾರನ್ನಾದರೂ ಸಂಪರ್ಕಿಸಿ ಆಕ್ಸಿಜನ್ ಪಡೆಯುತ್ತಿದ್ದೆವು. ಅವರು ಆ ಕೆಲಸ ಮಾಡಿಲ್ಲ. ನಾವು ಜನರ ಪ್ರಾಣ ಉಳಿಸಲು 24/7 ಕೆಲಸ ಮಾಡುತ್ತಿದ್ದೇವೆ. ಈ ರೀತಿ ಹೇಳಿದರೆ ನಮಗೂ ನೋವಾಗುತ್ತದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಆರೋಪಕ್ಕೆ ಮೈಸೂರು ಡಿಸಿ ಭಾವುಕರಾದರು.

ನನ್ನ 10 ವರ್ಷದ ಸೇವೆಯಲ್ಲಿ ನಾನು ಎಂದು ಈ ರೀತಿ ಕೆಲಸ ಮಾಡಿಲ್ಲ; ಆರೋಪ ಸರಿಯಲ್ಲ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಣ್ಣೀರು
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ (ಸಂಗ್ರಹ ಚಿತ್ರ)
ಸಾಧು ಶ್ರೀನಾಥ್​
|

Updated on:May 05, 2021 | 1:36 PM

Share

ಮೈಸೂರು: ಚಾಮರಾಜನಗರದಲ್ಲಾದ ಸರಣಿ ಸಾವಿನಿಂದಾಗಿ ನೋವಾಗಿದೆ. ಈ ವಿಚಾರದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಮೈಸೂರಿನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. ನನ್ನ 10 ವರ್ಷದ ಸರ್ವಿಸ್‌ನಲ್ಲಿ ಇಂತಹ ಕೆಲಸ ಮಾಡಿಲ್ಲ. ಸತ್ತವರ ಸಮ್ಮುಖದಲ್ಲಿ ಯಾರೂ ಆರೋಪಗಳನ್ನು ಮಾಡಬಾರದು. ಆರೋಪ ಮಾಡಿದರೆ ನಮ್ಮ ಮೇಲೆ ತಪ್ಪು ಅಭಿಪ್ರಾಯ ಬರುತ್ತೆ. ಚಾಮರಾಜನಗರ ಜಿಲ್ಲಾಧಿಕಾರಿಎಂ ಆರ್​ ರವಿ ಸುಳ್ಳು ಹೇಳಿದ್ದಾರೆ. ಕಷ್ಟ ಕಾಲದಲ್ಲೂ ರಿಸ್ಕ್ ತೆಗೆದುಕೊಂಡು ಆಕ್ಸಿಜನ್ ಕಳಿಸಿದ್ದೇನೆ ಎಂದು ಹೇಳುತ್ತಾ ಭಾವುಕರಾದ ಮೈಸೂರು ಡಿಸಿ ರೋಹಿಣಿ ಸಿಂಧೂರಿ ಕಣ್ಣೀರಾದರು.

ಆಸ್ಪತ್ರೆಯಲ್ಲಿದ್ದ 40 ಆಕ್ಸಿಜನ್ ಸಿಲಿಂಡರ್ ಕಳುಹಿಸಿದ್ದೇವೆ. ಯಾರೂ ಆಸ್ಪತ್ರೆಯಿಂದ ಆಕ್ಸಿಜನ್ ಕಳಿಸಿ ರಿಸ್ಕ್ ತೆಗೆದುಕೊಳ್ಳಲ್ಲ. ಆದರೆ ನಿಮಗಾಗಿ ನಾನು ಅಂತಹ ರಿಸ್ಕ್ ತೆಗೆದುಕೊಂಡಿದ್ದೇನೆ. ಇದು ಮಾನವೀಯತೆ ಅಲ್ವಾ ಎಂದು ಡಿಸಿ M.R.ರವಿಗೆ ಡಿಸಿ ರೋಹಿಣಿ ಸಿಂಧೂರಿ ಪ್ರಶ್ನೆ ಹಾಕಿದ್ದಾರೆ. ಮೊದಲೇ ಆಕ್ಸಿಜನ್ ಬೇಕೆಂದು ನಮಗೆ ಕೇಳಿದ್ರೆ ಕಳಿಸುತ್ತಿದ್ದೆ. ಚಾಮರಾಜನಗರ ಜಿಲ್ಲಾಧಿಕಾರಿ ಸರಿಯಾಗಿ ನಿರ್ವಹಣೆ ಮಾಡದೆ, ರಾಜ್ಯಮಟ್ಟದ ಉನ್ನತಾಧಿಕಾರಿಗಳ ಗಮನಕ್ಕೆ ತಾರದೆ ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದೂ ರೋಹಿಣಿ ಝಾಡಿಸಿದ್ದಾರೆ.

ಅವರು ಮಾಧ್ಯಮದಲ್ಲಿ ಹೇಳಿಕೆ ನೀಡದಿದ್ದರೆ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅವರು ಅಸತ್ಯವಾದ ವಿಚಾರಗಳನ್ನು ಹೇಳಿದ್ದಾರೆ. ಅದಕ್ಕೆ ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ. ತನಿಖೆಯಲ್ಲಿ ಎಲ್ಲವೂ ಗೊತ್ತಾಗಲಿದೆ. ಚಾಮರಾಜನಗರ ಸ್ಪಂದಿಸಿಲ್ಲ ಸತ್ಯಕ್ಕೆ ದೂರವಾದ ಮಾತು.

ನಮ್ಮದೇ ಜಿಲ್ಲೆಯಲ್ಲಿ ಈ ರೀತಿ ಆಗಿದ್ದರೆ ಹೇಗಾದರೂ ಸರಿಯೇ ಯಾರನ್ನಾದರೂ ಸಂಪರ್ಕಿಸಿ ಆಕ್ಸಿಜನ್ ಪಡೆಯುತ್ತಿದ್ದೆವು. ಅವರು ಆ ಕೆಲಸ ಮಾಡಿಲ್ಲ. ನಾವು ಜನರ ಪ್ರಾಣ ಉಳಿಸಲು 24/7 ಕೆಲಸ ಮಾಡುತ್ತಿದ್ದೇವೆ. ಈ ರೀತಿ ಹೇಳಿದರೆ ನಮಗೂ ನೋವಾಗುತ್ತದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಆರೋಪಕ್ಕೆ ಮೈಸೂರು ಡಿಸಿ ಭಾವುಕರಾದರು.

(mysuru dc rohini sindhuri cries foul at chamatajanagar dc ravi over alleged failure in oxygen supply) Also Read: ರಾಜ್ಯ ಮಟ್ಟದ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸದೆ, ಪಕ್ಕದ ಜಿಲ್ಲಾಧಿಕಾರಿಯನ್ನ ದೂಷಿಸುವುದು ಸರ್ವತಾ ಸಾಧುವಲ್ಲ: ರೋಹಿಣಿ

Published On - 1:31 pm, Wed, 5 May 21

ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಕಿರೀಟಿ ಧಿಮಾಕು, ಕೊಬ್ಬಲ್ಲಿ ಬರುತ್ತಾನೆ ಅಂದಿಕೊಂಡಿದ್ವಿ: ರವಿಚಂದ್ರನ್
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ