ಸ್ನೇಹಕೊಂದ ಕೊಲೆಗಾತಿ: ಮೈಸೂರಿನಲ್ಲಿ ಬೆಚ್ಚಿ ಬೀಳಿಸಿದ ವೃದ್ದೆಯ ಮರ್ಡರ್ ಕಹಾನಿ

ಮೈಸೂರಿನಲ್ಲಿ ನಡೆದ ಒಂದು ಆಘಾತಕಾರಿ ಘಟನೆಯಲ್ಲಿ, ಸ್ನೇಹಿತೆಯೊಬ್ಬರು ಸಾಲಕ್ಕಾಗಿ ವೃದ್ಧೆಯನ್ನು ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆಕೆಯೇ ಕೊಲೆ ಮಾಡಿ ಚಿನ್ನಾಭರಣಗಳನ್ನು ಗಿರವಿ ಇಟ್ಟು, ಸಾಲ ತೀರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಘಟನೆಯಿಂದ ಮೈಸೂರು ಜನರು ಬೆಚ್ಚಿಬಿದಿದ್ದಾರೆ.

ಸ್ನೇಹಕೊಂದ ಕೊಲೆಗಾತಿ: ಮೈಸೂರಿನಲ್ಲಿ ಬೆಚ್ಚಿ ಬೀಳಿಸಿದ ವೃದ್ದೆಯ ಮರ್ಡರ್ ಕಹಾನಿ
ಸ್ನೇಹಕೊಂದ ಕೊಲೆಗಾತಿ: ಮೈಸೂರಿನಲ್ಲಿ ಬೆಚ್ಚಿ ಬೀಳಿಸಿದ ವೃದ್ದೆಯ ಮರ್ಡರ್ ಕಹಾನಿ
Edited By:

Updated on: Mar 13, 2025 | 3:57 PM

ಮೈಸೂರು, ಮಾರ್ಚ್​ 13: ಕೊಟ್ಟ ಸಾಲ ವಾಪಸ್​​ ಕೇಳಲು ಹೋಗಿದ್ದಕ್ಕೆ ಸ್ನೇಹಿತೆಯಿಂದಲೇ (friend) ವೃದ್ದೆ ಕೊಲೆಯಾಗಿರುವಂತಹ (kill) ಘಟನೆ ಮೈಸೂರಿನ ಕೆಸಿ.ಬಡಾವಣೆ ಮಾರ್ಚ್ 5 ರಂದು ನಡದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೆಸಿ ಬಡಾವಣೆಯ ಸುಲೋಚನಾ (62) ಎಂಬುವವರನ್ನು ಅದೇ ಬಡವಾಣೆ ನಿವಾಸಿ ಶಕುಂತಲಾ (42) ಕೊಲೆ ಮಾಡಿದ್ದಾರೆ. ಉಸಿರುಗಟ್ಟಿಸಿ ಕೊಂದು, ಬಳಿಕ ಸ್ನೇಹಿತೆ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ ಎಂದು ಶಕುಂತಲಾ ನಾಟಕವಾಡಿದ್ದಾರೆ. ಅನುಮಾನ ಬಂದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಾಗಿದ್ದು, ಸದ್ಯ ಅವರನ್ನು ಅರೆಸ್ಟ್​ ಮಾಡಲಾಗಿದೆ. ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.

ಮೃತ ಸುಲೋಚನಾ ಪೊಲೀಸ್ ಇಲಾಖೆ ನಿವೃತ್ತ ನೌಕರ ಗಂಗಣ್ಣ ಪತ್ನಿ. ಶಂಕುಂತಲಾ ಕುಟುಂಬ ಅಡುಗೆ ಕೆಲಸ ಮಾಡಿಕೊಂಡಿದ್ದರು. ಸಾಲದ ಸುಳಿಯಲ್ಲಿ ಸಿಲುಕಿ ತೀರಿಸಲು ಆಗದಿದ್ದಾಗ ಇಂತಹ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಘಟನೆ ವೇಳೆ ಪ್ರಜ್ಞೆ ತಪ್ಪಿ ಬಿದ್ದು ಹೋದರೆಂದು ಶಕುಂತಲಾ, ಸುತ್ತಲ ಮನೆಯವರನ್ನ ನಂಬಿಸಿದ್ದಾರೆ. ಇನ್ನು ಮೃತದೇಹದ ಮೇಲಿದ್ದ ಚಿನ್ನದ ಸರವನ್ನು ಶಂಕುಂತಲಾ ಕದಿದ್ದು, 1.5 ಲಕ್ಷ ರೂ ಗಿರವಿ ಇಟ್ಟಿದ್ದರು. ಅನುಮಾನ ಬಂದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ.

ಸ್ಪೋಟಕ ಮಾಹಿತಿ ಬಿಚ್ಚಿಟ್ಟ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕಾರ್ 

ಘಟನೆ ಬಗ್ಗೆ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕಾರ್ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಎದೆ ಮೇಲೆ ಕುಳಿತು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಆರೋಪಿ ಮಹಿಳೆ ಶಕುಂತಲಾ ಒಪ್ಪಿಕೊಂಡಿದ್ದಾರೆ. ಮೃತ  ಸುಲೋಚನ ಸುಮಾರು ಎರಡುವರೆ ಲಕ್ಷ ರೂ ಸಾಲ ನೀಡಿದ್ದು, ಮಾ.5 ರಂದು ಕೊಟ್ಟ ಸಾಲ ಕೇಳಲು ಮನೆಗೆ ಹೋಗಿದ್ದರು.

ಇದನ್ನೂ ಓದಿ
ಬಿಜೆಪಿ ಮುಖಂಡನ ವಿಡಿಯೋ: 20 ಲಕ್ಷಕ್ಕೆ ಡಿಮ್ಯಾಂಡ್‌, ಮಾಯಾಂಗನೆ ಲಾಕ್
ಉಡುಪಿ: ಗರುಡ ಗ್ಯಾಂಗಿನ ಇಸಾಕ್​ಗೆ ಗುಂಡೇಟು ಕೊಟ್ಟು ಹಿಡಿದ ಪೊಲೀಸ್ರು
ಬಾಗಲಕೋಟೆ: ಕುರಿ ಕಳ್ಳತನ ಮಾಡಲು ಬಂದು ಕುರಿಗಾಯಿಯನ್ನೇ ಕೊಂದರು
ಕರ್ನಾಟಕದಲ್ಲಿ ಮತ್ತೊಂದು ಹೀನ ಕೃತ್ಯ: ಮಗಳನ್ನೇ ಗರ್ಭಿಣಿ ಮಾಡಿದ ನೀಚ ತಂದೆ

ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ನಂತರ ಶಕುಂತಲಾ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಸುಲೋಚನಾರನ್ನು ಕೊಲೆ ಮಾಡಿದ ಶಕುಂತಲಾ ಕತ್ತಿನಲ್ಲಿದ್ದ ಮಾಂಗಲ್ಯಸರ ಹಾಗೂ ಬಳೆಯನ್ನ ಗಿರಿವಿ ಇಟ್ಟಿದ್ದಾರೆ. ಬಳಿಕ ಒಂದುವರೆ ಲಕ್ಷ ರೂ ಹಣವನ್ನ ಅದೇ ರಾತ್ರಿಯೇ ಎಲ್ಲರಿಗೂ ಸಾಲ ತೀರಿಸಿದ್ದಾರೆ.

ಇದನ್ನೂ ಓದಿ: ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದ ಬಿಜೆಪಿ ಮುಖಂಡ: ಬೆತ್ತಲೆ ವಿಡಿಯೋ..20 ಲಕ್ಷಕ್ಕೆ ಡಿಮ್ಯಾಂಡ್‌.. ಮಾಯಾಂಗನೆ ಲಾಕ್

ಘಟನೆ ನಡೆದು ಇಷ್ಟೆಲ್ಲ ಆದ ಬಳಿ ಶಕುಂತಲಾ ಕುಟುಂಬಸ್ಥರಿಗೆ ಕುಸಿದು ಬಿದಿದ್ದಾರೆಂದು ಮಾಹಿತಿ ನೀಡಿದ್ದಾರೆ. ಮಗ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಆರೋಪಿ ಶಕುಂತಲಾರನ್ನು ಮೈಸೂರು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Loading...
Unable to load recommendations.
Follow Us