AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಬಾರಿ ಋತುಮತಿಯಾದ ಬಾಲಕಿಯರೇ ಟಾರ್ಗೆಟ್‌, 20 ಲಕ್ಷಕ್ಕೆ ಬಾಲಕಿ ಪೂರೈಸುವ ಜಾಲ ಪತ್ತೆ

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ ಎಂಬ ಮಾತಿದೆ. ಆದ್ರೆ ಈ ಮಾತಿಗೆ ವಿರೋಧ ಎಂಬಂತ ಘಟನೆಯೊಂದು ನಡೆದು ಹೋಗಿದೆ. ನಾರಿಯರನ್ನ ಪೂಜಿಸೊ ದೇಶದಲ್ಲಿ ಅತಿ ಸ್ತ್ರೀ ಕುಲಕ್ಕೆ ಅಪಮಾನ ಆಗಿದೆ. ಮೈ ನೆರೆತ ಬಾಲಕಿ ಜೊತೆ ಮೊದಲ ಬಾರಿಗೆ ಲೈಂಗಿಕ ಕ್ರಿಯೆ ನಡೆಸಲು ಬರೋಬ್ಬರಿ 20 ಲಕ್ಷ ರುಪಾಯಿಗೆ ಡಿಮ್ಯಾಂಡ್ ಇಟ್ಟ ಗ್ಯಾಂಗ್ ಪೊಲೀಸ್ ಬಲೆಗೆ ಬಿದ್ದಿದೆ. ಋತುಮತಿಯಾದ ಬಾಲಕಿಯರೇ ಏಕೆ ಟಾರ್ಗೆಟ್? ಪೊಲೀಸರಿ ಈ ಜಾಲ ಭೇದಿಸಿದ್ಹೇಗೆ?

ಮೊದಲ ಬಾರಿ ಋತುಮತಿಯಾದ ಬಾಲಕಿಯರೇ ಟಾರ್ಗೆಟ್‌, 20 ಲಕ್ಷಕ್ಕೆ ಬಾಲಕಿ ಪೂರೈಸುವ ಜಾಲ ಪತ್ತೆ
Tulasi Kumar And Shobha
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ|

Updated on: Sep 29, 2025 | 7:49 PM

Share

ಮೈಸೂರು, (ಸೆಪ್ಟೆಂಬರ್ 29):  ಆಗತಾನೇ ಋತುಮತಿಯಾದ ಬಾಲಕಿಯರನ್ನು ಲೈಂಗಿಕ ಕೃತ್ಯಗಳಿಗೆ ಪೂರೈಸುತ್ತಿದ್ದ ಜಾಲವನ್ನು ಮೈಸೂರು ಪೊಲೀಸರು (Mysuru Police) ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಮ್ಮ ಸಮಾಜದಲ್ಲಿ ಋತುಮತಿಯಾದ ಬಾಲಕಿಯರ ಜೊತೆ ಮೊದಲ ಲೈಂಗಿಕ ಸಂಪರ್ಕ ನಡೆಸಿದ್ರೆ ಮಾನಸಿಕ ಕಾಯಿಲೆಗಳು, ಲೈಂಗಿಕ ಕಾಯಿಲೆಗಳು ದೂರ ಆಗುತ್ತವೆ ಎಂಬ ಮೂಢನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿ  ಋತುಮತಿಯಾದ ಬಾಲಕಿಯರನ್ನು ಲೈಂಗಿಕ ಕೃತ್ಯಕ್ಕೆ ಪೂರೈಸುತ್ತಿದ್ದ ಓರ್ವ ಮಹಿಳೆ ಹಾಗೂ ಓರ್ವ ಪುರುಷನನ್ನು ಮೈಸೂರಿನ ವಿಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ, ಈ ಜಾಲವನ್ನು ಪತ್ತೆ ಮಾಡಿದ್ದೆ ಒಡನಾಡಿ ಸಂಸ್ಥೆ.

ಋತುಮತಿಯಾದ ಬಾಲಕಿಯರೇ ಟಾರ್ಗೆಟ್ ಏಕೆ?

ಮೊದಲ ಬಾರಿ ರುತುಮತಿಯಾದಾಕೆ ಜೊತೆ ಲೈಂಗಿಕ ಕ್ರಿಯೆ ನಡೆಸಿದರೆ ಮಾನಸಿಕ ಖಿನ್ನತೆ ದೂರವಾಗಲಿದೆ ಎಂಬ ಮೂಢ ನಂಬಿಕೆ ಇದೆ. ಹಾಗಾಗಿ ಕೋಟಿ ಕುಳ ಹಾಗೂ ಲೈಂಗಿಕವಾಗಿ ಅತೀವ ಆಸಕ್ತಿ ಹೊಂದಿರುವವರನ್ನ ಬೆಂಗಳೂರು ಮೂಲದ ತುಳಸಿಕುಮಾರ್ ಹಾಗೂ ಶೋಭ ಗಾಳ ಹಾಕುತ್ತಿದ್ದರು. 12 ರಿಂದ ವರ್ಷದ ಓರ್ವ ಅಪ್ರಾಪ್ತೆಗೆ ಗಾಳ ಹಾಕಿದ ಕಿರಾತಕರು ಲಕ್ಷಾಂತರ ಮೌಲ್ಯದ ಐಫೋನ್ ಉಡುಗೊರೆಯಾಗಿ ನೀಡಿದ್ದರು. ಅಲ್ಲದೇ ಬ್ರಾಂಡೆಡ್ ಬಟ್ಟೆಗಳಂದಿಗೆ ಐಷಾರಾಮಿ ಬದುಕಿನ ಆಸೆ ತೋರಿಸಿ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಸಾಲದಕ್ಕೆ ಆಕೆ ಖಾಸಗಿ ವಿಡಿಯೋವನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ಗಿರಾಕಿಗಳಿಗೆ ತೋರಿಸುತ್ತಿದ್ದರು.

ಇದನ್ನೂ ಓದಿ: 13 ವರ್ಷದ ಹುಡುಗಿ ಬೇಕಂದ್ರೆ 20 ಲಕ್ಷ ರೂ.​: ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದವರು ಅರೆಸ್ಟ್

ಜಾಲವನ್ನ ಪತ್ತೆ ಮಾಡಿದ ಒಡನಾಡಿ ಸಂಸ್ಥೆ

ಇಂತದೊಂದು ದಂಧೆ ನಡೆಯುತ್ತಿದೆ ಎಂಬ ಖಚಿತ ಮೈಸೂರು ಮೂಲದ ಒಡನಾಡಿ ಸಂಸ್ಥೆಗೆ ಮಾಹಿತಿ ಸಿಕ್ಕಿತ್ತು. ಪ್ರಕರಣ ಗಂಭೀರತೆ ಅರೆತ ಸಂಸ್ಥೆ ಪಕ್ಕಾ ಪ್ಲಾನ್ ಮಾಡಿ ಮಾಹಿತಿ ಕಲೆ ಹಾಕಿದ್ದು, ಕೊನೆಗೆ ಗ್ರಾಹಕರ ಸೋಗಿನಲ್ಲಿ ಆರೋಪಿಗಳನ್ನ ಸಂಪರ್ಕಿಸಿ ಖಚಿತಪಡಿಸಿಕೊಂಡಿದೆ. ಇದು ನಿಜ ಎಂದು ಖಾತ್ರಿಯಾದ ಬಳಿಕ ಒಡನಾಡಿ ಸಂಸ್ಥೆ ಪೊಲೀಸರಿಗೆ ಮಾಹಿತಿ ನೀಡಿದೆ. ಇದರ ಮಾಹಿತಿ ಆಧರಿಸಿ ಮೈಸೂರಿನ ವಿಜಯನಗರ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಸ್ಟರ್ ಪ್ಲಾನ್ ಮಾಡಿ ಇಬ್ಬರು ಕಿರಾತಕರನ್ನ ಬಂಧಿಸಿದ್ದು, ಓರ್ವ ಅಪ್ರಾಪ್ತೆಯನ್ನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಕಿಯನ್ನು ವೇಶ್ಯಾವಾಟಿಕೆಗೆ ಇಳಿಸುವ ಪ್ರಯತ್ನವನ್ನು ಆರೋಪಿಗಳು ಮಾಡಿದ್ದರು. ಬಾಲಕಿಯನ್ನು ಬಳಸಿಕೊಂಡು ಹಣ ಮಾಡಲು ಮುಂದಾಗಿದ್ದರು. 20 ಲಕ್ಷ ರೂಪಾಯಿಗೆ ಬಾಲಕಿಯನ್ನು ಏನ್ ಬೇಕಾದರೂ ಮಾಡಿಕೊಳ್ಳಿ ಎಂದು ಆರೋಪಿಗಳು ಹೇಳಿದ್ದರು. ಈಗ ನಾವೇ ಕಣ್ಣಾರೆ ಕಂಡು ಬಾಲಕಿಯನ್ನು ರಕ್ಷಣೆ ಮಾಡಿದ್ದೇವೆ. ಇದರ ಹಿಂದೆ ದೊಡ್ಡ ಜಾಲ ಇದೆ ಎಂದು ಅನ್ನಿಸುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಇವೆಲ್ಲವೂ ಆಗುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹಾಗೂ ಪರಶು ಹೇಳಿದ್ದಾರೆ.

ಅದೇನೆ ಹೇಳಿ ಅಪ್ರಾಪ್ತೆಗೆ ಮಂಕು ಬೂದಿ ಎರಚಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ವೇಶ್ಯಾವಾಟಿಕೆ ದಂಧೆಗೆ ಹಾಕಲು ಮಾಡಿದ್ದ ಪ್ಲಾನ್ ಫ್ಲಾಪ್ ಆಗಿದ್ದು, ಮಾಡಿದ ತಪ್ಪಿಗೆ ಈಗ ಇಬ್ಬರು ಕಿರಾತಕರು ಜೈಲು ಸೇರಿದ್ದಾರೆ. ಹೀಗಾಗಿ ದುಬಾರಿ ಗಿಫ್ಟ್ ಐಷಾರಾಮಿ ಜೀವನದ ಆಸೆಗೆ ಬೀಳುವ ಅಪ್ರಾಪ್ತ ಬಾಲೆಯರು ಎಚ್ಚರದಿಂದ ಇರಬೇಕು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ