ಸಿದ್ದರಾಮಯ್ಯ ಕುಟುಂಬ ಬೇನಾಮಿ ಆಸ್ತಿ ಹೊಂದಿರುವ ಆರೋಪ: ದಾಖಲೆ ಬಿಡುಗಡೆ ಮಾಡಿದ ಸ್ನೇಹಮಯಿ ಕೃಷ್ಣ

ಸ್ನೇಹಮಯಿ ಕೃಷ್ಣ ಅವರು ಮೈಸೂರಿನಲ್ಲಿ ಸಿದ್ದರಾಮಯ್ಯ ಅವರ ಕುಟುಂಬದ ಬೇನಾಮಿ ಭೂಮಿ ಖರೀದಿಗೆ ಸಂಬಂಧಿಸಿದ ಹೊಸ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. 2006ರ ಅನ್ಯಕ್ರಾಂತ ಆದೇಶದ ನಂತರವೂ ಪಹಣಿಯಲ್ಲಿ ಮಾಲೀಕರ ಹೆಸರು ಇರುವುದು ಅನುಮಾನಕ್ಕೆ ಕಾರಣವಾಗಿದೆ. ಭೂಮಿ ದಾನ ಮತ್ತು ಮಾರಾಟದಲ್ಲಿನ ಅಸಂಗತತೆಗಳನ್ನು ಅವರು ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂದು ಅವರು ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಕುಟುಂಬ ಬೇನಾಮಿ ಆಸ್ತಿ ಹೊಂದಿರುವ ಆರೋಪ: ದಾಖಲೆ ಬಿಡುಗಡೆ ಮಾಡಿದ ಸ್ನೇಹಮಯಿ ಕೃಷ್ಣ
ಸಿದ್ದಾರಮಯ್ಯ, ಸ್ನಹಮಯಿ ಕೃಷ್ಣ
Follow us
ರಾಮ್​, ಮೈಸೂರು
| Updated By: ವಿವೇಕ ಬಿರಾದಾರ

Updated on: Feb 04, 2025 | 9:45 AM

ಮೈಸೂರು, ಫೆಬ್ರವರಿ 04: ಬೇನಾಮಿ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಕುಟುಂಬಸ್ಥರು ಜಮೀನು ಖರೀದಿ ಮಾಡಿದ್ದಾರೆ ಆರೋಪ ಮಾಡಿರುವ ದೂರುದಾರ ಸ್ನೇಹಮಯಿ‌ ಕೃಷ್ಣ (Snehamayi Krishna) ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿ, ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಭೂಪರಿವರ್ತನೆ ಆದೇಶದ ಬಳಿಕ ಗೇಣಿ ಮತ್ತು ಪಹಣಿ (RTC) ಯಲ್ಲಿ ಮಾಲೀಕರ ಹೆಸರು ಬರುವಂತಿಲ್ಲ. ಬದಲಿಗೆ, ಎಮ್​.ಎ.ಖರಾಬು ಅಥವಾ ಅನ್ಯಕ್ರಾಂತ (ಭೂ ಪರಿವರ್ತನೆ) ಎಂದು ಉಲ್ಲೇಖಿಸಬೇಕು.

ಆದರೆ 2006 ಅನ್ಯಕ್ರಾಂತ ಆದೇಶವಾಗಿದ್ದರೂ ಮಾಲೀಕರ ಹೆಸರು ಪಹಣಿಯಲ್ಲಿ ಉಲ್ಲೇಖಿಸಲಾಗಿದೆ. ಈಗಲೂ ಕೃಷಿ ಭೂಮಿ ಎಂದು ಮಲ್ಲಿಕಾರ್ಜುನ ಸ್ವಾಮಿ ಹೆಸರು ಪಹಣಿಯಲ್ಲಿದೆ. ಕೃಷಿಭೂಮಿ ಎಂದು ದಾಖಲೆಗಳನ್ನು ನೋಂದಣಿ ಮಾಡಲಾಗಿದೆ. 2009-10ರಲ್ಲಿ ಭೂಸ್ವಾಧೀನದಿಂದ ಕೈಬಿಡಲಾಗಿದೆ ಎಂಬ ಉಲ್ಲೇಖವಿದೆ.

ಆದರೆ, ಅಂತಿಮ ಅಧಿಸೂಚನೆ ಹೊರಡಿಸಿದ 13 ವರ್ಷಗಳ ನಂತರ ಕೈಬಿಡಲಾಗಿದೆ. ಇದು ಹೇಗೆ ಸಾಧ್ಯವಾಗುತ್ತದೆ? ದೂರುದಾರ ಸ್ನೇಹಮಯಿ‌ ಕೃಷ್ಣ ಸಾಮಾಜಿಕ ಜಾಲತಾಣದ ಮೂಲಕ ಪ್ರಶ್ನಿಸಿದ್ದಾರೆ.

ಏನಿದು ಬೇನಾಮಿ ಪ್ರಕರಣ

ಮೈಸೂರು ತಾಲೂಕು ಆಲನಹಳ್ಳಿ ಗ್ರಾಮದ ಸರ್ವೆ ನಂ 113/4ರಲ್ಲಿ 1 ಎಕರೆ ಭೂಮಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 1983ರ ಡಿಸೆಂಬರ್ 15 ರಂದು ಆಲನಹಳ್ಳಿಯ ಹನುಮೇಗೌಡ, ಹನುಮಯ್ಯ, ಕರಿಯಪ್ಪ ಹಾಗೂ ಕೆಂಪಮ್ಮ ಎಂಬುವರಿಂದ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಭೂಮಿ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: ಸುಗ್ರೀವಾಜ್ಞೆ ಹೊಸ್ತಿಲಲ್ಲೇ ಸಿದ್ದರಾಮಯ್ಯ ಸರ್ಕಾರಕ್ಕೆ ಸೆಡ್ಡು ಹೊಡೆದ ಮೈಕ್ರೋಫೈನಾನ್ಸ್ ಕಂಪನಿಗಳು

1996ರಲ್ಲಿ ಅಂತಿಮ ಅಧಿಸೂಚನೆ‌ ಆಗಿರುವ ಭೂಮಿಯನ್ನು ಮಲ್ಲಿಕಾರ್ಜುನ ಸ್ವಾಮಿ ಡಿನೋಟಿಫೈ ಮಾಡಿಸಿದ್ದು, 2006ರಲ್ಲಿ ಮಲ್ಲಿಕಾರ್ಜುನ್​ ಸ್ವಾಮಿಯಿಂದ ಕೃಷಿ ಭೂಮಿಯನ್ನು ಅನ್ಯಕ್ರಾಂತ ಮಾಡಿಸಿ ಆದೇಶ ಹೊರಡಿಸಲಾಗಿದೆ.

ಅದೇ ಭೂಮಿಯನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ 2010 ಅಕ್ಟೋಬರ್ 20ರಲ್ಲಿ ಮಲ್ಲಿಕಾರ್ಜುನ್​ ಸ್ವಾಮಿ ದಾನ ಮಾಡಿದ್ದಾರೆ. ಪಾರ್ವತಿ ಕೂಡ 2010ರ ನವೆಂಬರ್ 11ರಂದು ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯಗೆ ದಾನ ಮಾಡಿದ್ದಾರೆ. ತಮ್ಮ ಹೆಸರಿಗೆ ಭೂಮಿ ಬಂದ ಒಂದೇ ತಿಂಗಳಲ್ಲಿ ದಾನ ಮಾಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ತಮಗೆ ಬಂದ ಭೂಮಿಯನ್ನ 2011ರ ಮಾರ್ಚ್ 23 ರಂದು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಒಂದು ಕಪ್ಪು ಚುಕ್ಕೆ ಇಲ್ಲದೇ ರಾಜಕಾರಣಿ ಎನ್ನುತ್ತಿದ್ದ ಸಿದ್ದರಾಮಯ್ಯಗೆ ಮುಡಾ ಹಗರಣ ಕಂಟಕವಾಗಿದೆ. ಈ ಪ್ರಕರಣ ತನಿಖೆ ಹಂತದಲ್ಲಿರುವಾಗೇ ಇದೀಗ ಬೇನಾಮಿ ಆಸ್ತಿ ಆರೋಪ ಕೇಳಿಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೌಡಿಶೀಟರ್ ಬಾಗಪ್ಪ ಹರಿಜನ್ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅರೋಪಿಯಾಗಿದ್ದ
ರೌಡಿಶೀಟರ್ ಬಾಗಪ್ಪ ಹರಿಜನ್ ಹತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅರೋಪಿಯಾಗಿದ್ದ
ಎಐ ಆ್ಯಪ್​ಗಳ ಲೋಪ ಎತ್ತಿತೋರಿಸಿದ ಮೋದಿ
ಎಐ ಆ್ಯಪ್​ಗಳ ಲೋಪ ಎತ್ತಿತೋರಿಸಿದ ಮೋದಿ
ತನ್ನ ಸಹೋದರ ರವಿ ಹತ್ಯೆಯ ಸೇಡನ್ನು ಪ್ರಕಾಶ್ @ಪಿಂಟೂ ತೀರಿಸಿಕೊಂಡನೇ?
ತನ್ನ ಸಹೋದರ ರವಿ ಹತ್ಯೆಯ ಸೇಡನ್ನು ಪ್ರಕಾಶ್ @ಪಿಂಟೂ ತೀರಿಸಿಕೊಂಡನೇ?
ಕುಂಭಮೇಳದಲ್ಲಿ ಭಾಗಿಯಾಗುವ ಅಗತ್ಯವಿಲ್ಲ ಅಂದಿದ್ಯಾಕೆ ಶಿವಕುಮಾರ್?
ಕುಂಭಮೇಳದಲ್ಲಿ ಭಾಗಿಯಾಗುವ ಅಗತ್ಯವಿಲ್ಲ ಅಂದಿದ್ಯಾಕೆ ಶಿವಕುಮಾರ್?
‘ಮಜಾ ಟಾಕೀಸ್​’ನಲ್ಲಿ ಪ್ರೇಮಿಗಳು; ಈ ಬಾರಿ ಮತ್ತಷ್ಟು ಮನರಂಜನೆ ಪಕ್ಕಾ 
‘ಮಜಾ ಟಾಕೀಸ್​’ನಲ್ಲಿ ಪ್ರೇಮಿಗಳು; ಈ ಬಾರಿ ಮತ್ತಷ್ಟು ಮನರಂಜನೆ ಪಕ್ಕಾ 
Video: ಮಾರ್ಸಿಲ್ಲೆಗೆ ಬಂದಿಳಿದ ಪ್ರಧಾನಿ ಮೋದಿ, ಸಾವರ್ಕರ್​ಗೆ ಗೌರವ
Video: ಮಾರ್ಸಿಲ್ಲೆಗೆ ಬಂದಿಳಿದ ಪ್ರಧಾನಿ ಮೋದಿ, ಸಾವರ್ಕರ್​ಗೆ ಗೌರವ
ಕಂಬ್ಯಾಕ್ ಬಗ್ಗೆ ಬಿಗ್ ಅಪ್​​ಡೇಟ್ ಕೊಟ್ಟ ನಟಿ ರಮ್ಯಾ
ಕಂಬ್ಯಾಕ್ ಬಗ್ಗೆ ಬಿಗ್ ಅಪ್​​ಡೇಟ್ ಕೊಟ್ಟ ನಟಿ ರಮ್ಯಾ
ಅವರು ಯಾವ ಗ್ರಹದಲ್ಲಿ ವಾಸಿಸುತ್ತಿದ್ದಾರೋ ಗೊತ್ತಿಲ್ಲ: ಪ್ರಿಯಾಂಕಾ ಗಾಂಧಿ
ಅವರು ಯಾವ ಗ್ರಹದಲ್ಲಿ ವಾಸಿಸುತ್ತಿದ್ದಾರೋ ಗೊತ್ತಿಲ್ಲ: ಪ್ರಿಯಾಂಕಾ ಗಾಂಧಿ
Video: ಹುಟ್ಟುಹಬ್ಬದಂದು ಐಫೋನ್​ನಿಂದ ಕೇಕ್​ ಕತ್ತರಿಸಿದ ಏಕನಾಥ್ ಶಿಂಧೆ
Video: ಹುಟ್ಟುಹಬ್ಬದಂದು ಐಫೋನ್​ನಿಂದ ಕೇಕ್​ ಕತ್ತರಿಸಿದ ಏಕನಾಥ್ ಶಿಂಧೆ
ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡಬಾರದು ಯಾಕೆ? ವಿಡಿಯೋ ನೋಡಿ
ಸ್ತ್ರೀಯರು ಸಾಷ್ಟಾಂಗ ನಮಸ್ಕಾರ ಮಾಡಬಾರದು ಯಾಕೆ? ವಿಡಿಯೋ ನೋಡಿ