ಬಿ. ಬೈ ವಿಜಯೇಂದ್ರ ಅಭಿಮಾನಿಗಳ ವಿರುದ್ಧ ಆಕ್ರೋಶಗೊಂಡ ವಿ ಸೋಮಣ್ಣ; ಅಪ್ಪನನ್ನು ಹಾಡಿ ಹೊಗಳಿದ ಬಿ ವೈ ವಿಜಯೇಂದ್ರ
ಯಾರಾದರೂ ಸಿಎಂ, ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಮನೆಗೆ ಹೋಗಿ ದಬಾಕಿಕೊಂಡು ಮಲಗುತ್ತಾರೆ. ಯಡಿಯೂರಪ್ಪ ಅವರ ಆ ರೀತಿ ಅಲ್ಲ. ರಾಜೀನಾಮೆ ಕೊಟ್ಟ ಮರು ಕ್ಷಣದಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎಂದು ಬಿ. ಬೈ ವಿಜಯೇಂದ್ರ ಅಪ್ಪ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದಾರೆ.
ಮೈಸೂರು: ಯಾರಾದರೂ ಸಿಎಂ, ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಮನೆಗೆ ಹೋಗಿ ದಬಾಕಿಕೊಂಡು ಮಲಗುತ್ತಾರೆ. ಯಡಿಯೂರಪ್ಪ ಅವರ ಆ ರೀತಿ ಅಲ್ಲ. ರಾಜೀನಾಮೆ ಕೊಟ್ಟ ಮರು ಕ್ಷಣದಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ಶಾಸಕರು, ಮಂತ್ರಿ, ಸಂಸದ ಅಂತಾ ಇರುತ್ತಾರೆ. ಅವರೆಲ್ಲಾ ಅಧಿಕಾರದಲ್ಲಿ ಇರುವವರೆಗೂ ನಾಯಕರಾಗಿರುತ್ತಾರೆ ಎಂದು ಬಿ. ಬೈ ವಿಜಯೇಂದ್ರ (B Y Vijayedndra) ಅಪ್ಪ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ (B S Ydiyurappa) ಅವರನ್ನು ಹಾಡಿ ಹೊಗಳಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ ಮೈಸೂರಿನ (Mysore) ದಕ್ಷಿಣ ಪಧವಿದರ ಕೇತ್ರದ ಬಿಜೆಪಿ ಅಭ್ಯರ್ಥಿ ವೈ. ವಿ ರವಿಶಂಕರ ಅವರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಯಡಿಯೂರಪ್ಪ ಅವರಿಗರ ಯಾವುದೇ ಅಧಿಕಾರ ಇರದಿದ್ದರು ಜನ ಅವರ ಜೊತೆಯಲ್ಲಿ ಇದ್ದಾರೆ.ಯಡಿಯೂರಪ್ಪ ಅವರೊಬ್ಬರೆ ನಿಜವಾದ ಜನನಾಯಕ. ಅಧಿಕಾರಕ್ಕಾಗಿ ಜೋತು ಬೀಳದೆ ಯಡಿಯೂರಪ್ಪ ಕೆಲಸ ಮಾಡಿದ್ದಾರೆ. ಇಷ್ಟು ಜನ ರಾಜ್ಯದ ಸಿಎಂಗಳಾದರೂ ಬಡವರ ಮನೆಗೆ ಬೆಳಕು ತಂದವರು ಯಡಿಯೂರಪ್ಪ ಅವರು ಮಾತ್ರ. ಯಡಿಯೂರಪ್ಪ ಅವರು ಸಿಎಂ ಆಗಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಬೇರೆ ಯಾವ ಸಿಎಂಗಳು ಮಾಡಿಲ್ಲ. ಜನ ನಾಯಕ ಎಂದು ಎನ್ನಿಸಿಕೊಂಡ ಏಕೈಕ ನಾಯಕ ಯಡಿಯೂರಪ್ಪ ಎಂದು ಹೇಳಿದ್ದಾರೆ.
ಇದನ್ನು ಓದಿ: ಬಿಜೆಪಿಯಿಂದ ಚಡ್ಡಿ ಅಭಿಯಾನ; ಚಡ್ಡಿ ಹಿಡಿದು ಸಿದ್ದರಾಮಯ್ಯ ಮನೆ ಕಡೆಗೆ ಬಂದ MLC ಛಲವಾದಿ ನಾರಾಯಣಸ್ವಾಮಿ
ಇದೆ ವೇಳೆ ಸಚಿವ ವಿ ಸೋಮಣ್ಣ ಮಾತನಾಡಿ ಬಿ.ವೈ.ವಿಜಯೇಂದ್ರಗೆ ಅದೃಷ್ಟವಿದ್ದರೆ ಉನ್ನತ ಸ್ಥಾನಕ್ಕೆ ಹೋಗುತ್ತಾನೆ. ಸುಮ್ಮನೆ ಬಿ.ವೈ.ವಿಜಯೇಂದ್ರನನ್ನು ರೈಲು ಹತ್ತಿಸಿ ಹಾಳುಮಾಡಬೇಡಿ. ವಿಜಯೇಂದ್ರನ ಮುಂದೆ ಯಾರನ್ನೂ ಚಿಕ್ಕವರನ್ನಾಗಿ ಮಾಡಬೇಡಿ. ಬಿಎಸ್ವೈ ಪುತ್ರ ವಿಜಯೇಂದ್ರನನ್ನು ಹರಕೆಯ ಕುಡಿ ಮಾಡಬೇಡಿ ಎಂದು ವಸತಿ ಇಲಾಖೆ ಸಚಿವ ವಿ.ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.
ಘೋಷಣೆ ಕೂಗಿ ವಿಜಯೇಂದ್ರನನ್ನು ಹರಕೆಯ ಕುಡಿ ಮಾಡಬೇಡಿ. ನಾನು ಐದಾರು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಗೌರವ ಕೊಡುವುದನ್ನು ಕಲಿಯಿರಿ. 40 ವರ್ಷ ರಾಜಕೀಯ ಮಾಡಿದ್ದೇನೆ, ಎಲ್ಲಾ ಆಟಗಳನ್ನ ನೋಡಿದ್ದೇನೆ. ಸ್ವಲ್ಪ ಸುಮ್ಮತೆ ಕುಳಿತುಕೊಳ್ಳಿ. ಈ ವೇಳೆ ವೇದಿಕೆ ಮೇಲೆ ವಿಜಯೇಂದ್ರಗೆ ಹೂಗುಚ್ಛ ನೀಡಿಲು ಅಭಿಮಾನಿ ಬಂದಿದ್ದನು. ಆಗ ಮೊದಲು ಶಿಸ್ತು ಕಲಿತುಕೊಳ್ಳಿ ಎಂದು ಬಿ. ವೈ ವಿಜಯೇಂದ್ರ ಅಭಿಮಾನಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಅಭಿಮಾನಿಗಳು ಸಚಿವ ಸೋಮಣ್ಣ ಮಾತಿಗೆ ಆಕ್ರೋಶ ಹೊರ ಹಾಕಿದ್ದಾರೆ. ಆಗ ಬಿ.ವೈ.ವಿಜಯೇಂದ್ರ ಖುದ್ದು ಅಭಿಮಾನಿಗಳನ್ನು ಸಮಾಧಾನಮಾಡಿದ್ದಾರೆ.
ಇದನ್ನು ಓದಿ: ಬೆಂಗಳೂರು ಮೆಟ್ರೋ ರೈಲಿನಲ್ಲಿ ಸೈಕಲ್ ಕೊಂಡೊಯ್ಯಲು ಅವಕಾಶ
ಬೆಂಗಳೂರಲ್ಲಿ ಸ್ವತಂತ್ರವಾಗಿ ಗೆದ್ದಿದ್ದೇನೆ, ಇದನ್ನು ಅರ್ಥಮಾಡಿಕೊಳ್ಳಿ. ಕೆಂಪೇಗೌಡರ ಊರಿನಲ್ಲಿ ಈ ಸೋಮಣ್ಣ 5 ಬಾರಿ ಶಾಸಕನಾಗಿದ್ದಾನೆ. ನನ್ನ ದುಡಿಮೆ ಬಹಳ ದೊಡ್ಡದಿದೆ, ಇದನ್ನು ಅರ್ಥ ಮಾಡಿಕೊಳ್ಳಿ. ಯಡಿಯೂರಪ್ಪರನ್ನು ಯಾರೆಲ್ಲಾ ಹೇಗೆ ನಡೆಸಿಕೊಂಡರೆಂದು ಗೊತ್ತಿದೆ. ವಿಜಯೇಂದ್ರ ಎಂಎಲ್ಸಿ ಆಗಬೇಕೆಂದು ಮೊದಲು ಹೇಳಿದ್ದು ನಾನು. ಬೇರೆಯವರ ಬಗ್ಗೆ ಮಾತಾಡುವಾಗ ಯೋಚನೆ ಮಾಡಿ ಮಾತನಾಡಿ. ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ 41 ವರ್ಷ, ನನಗೆ 71 ವರ್ಷ. ವಿಜಯೇಂದ್ರಗೂ ನನಗೂ ಯಾಕೆ ಪೈಪೋಟಿ ತರುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
ಈ ಸಮಾಜಕ್ಕೆ ನನ್ನದೇ ಆದ ಕೊಡುಗೆ ಇದೆ, ಸೋಮಣ್ಣನ ಶಕ್ತಿಯಿದೆ. ವಿಜಯೇಂದ್ರ ವರುಣಾ ಕ್ಷೇತ್ರ ಅಥವಾ ಹನೂರು ಕ್ಷೇತ್ರದಲ್ಲಿ ಸ್ಪರ್ಧಿಸಲಿ. ಹೈಕಮಾಂಡ್ ಹೇಳಿದಂತೆ ಬಿ.ವೈ.ವಿಜಯೇಂದ್ರ ಸ್ಪರ್ಧೆ ನಡೆಯುತ್ತದೆ. ನನ್ನ ಕ್ಷೇತ್ರದ ಜನ ನನ್ನನ್ನ ತಲೆ ಮೇಲೆ ಹೊತ್ಕೊಂಡು ಮೆರೆಯುತ್ತಿದ್ದಾರೆ. ನನಗೆ ನನ್ನದೇ ಆದಂತಹ ಕ್ಷೇತ್ರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ಮಾತನಾಡಿ ಮೋದಿ ಕೇಳಿದ್ದೆಲ್ಲಾ ಕೊಡುವ ಕಾಮಧೇನು. ಇಂತಹ ಮೋದಿ ಅವರು ಮೈಸೂರಿಗೆ ಬರುವಾಗ ಅವರನ್ನು ಪರಿಷತ್ ಚುನಾವಣೆಯ ಗೆಲುವಿನೊಂದಿಗೆ ಸ್ವಾಗತಿಸೋಣಾ. ವಿಜಯೇಂದ್ರ – ಸೋಮಣ್ಣ ಅವರು ಜೋಡೆತ್ತುಗಳಾಗಿ ದುಡಿದರೆ ಮೈಸೂರು ಭಾಗದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ದಿಗ್ವಿಜಯ ಖಚಿತ ಎಂದು ಹೇಳಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:55 pm, Tue, 7 June 22